ಲೇಡಿ ಮಾರ್ಗರೇಟ್ ಡೊಗ್ಲಾಸ್
ಈ ಲೇಖನವನ್ನು ಪರಿಷ್ಕರಣೆಗೆ ಹಾಕಲಾಗಿದೆ. ಲೇಖನವನ್ನು ವಿಕಿ ಲೇಖನಗಳಂತೆ ಶುದ್ಧೀಕರಿಸಿದ ನಂತರ ಈ ಸಂದೇಶವನ್ನು ತೆಗೆದುಹಾಕಿ. ಈ ಲೇಖನವನ್ನು ಈ ಕಾರಣಗಳಿಂದಾಗಿ ನಕಲು ಸಂಪಾದನೆಗೆ ಒಳಪಡಿಸಬೇಕಿದೆ {{{ವ್ಯಾಕರಣ, ಶೈಲಿ, ಒಗ್ಗಟ್ಟು, ಸಂಯೋಜನೆ ಧ್ವನಿ ಅಥವಾ ಕಾಗುಣಿತ}}}. |
ಲೇಡಿ ಮಾರ್ಗರೇಟ್ ಡೊಗ್ಲಾಸ್ ಜೂಲೈ ೪, ೧೯೦೬ ರಂದು ಇಂಗ್ಲೆಂಡ್ನ, ಲಂಡನ್ನಲ್ಲಿ ಮೇಫೇರ್ ಎಂಬ ವೆಸ್ಟ್ಮಿನಿಸ್ಟರ್ ನಗರದಲ್ಲಿನ ಜಿಲ್ಲೆಯಲ್ಲಿ ಅಲೆಕ್ಸಾಂಡ್ರಾ ಮಾರ್ಗರೇಟ್ ಎಲಿಜಬೆತ್ ಸ್ಪೆನ್ಸರಾಗಿ ಹುಟ್ಟಿದ್ದಳು. ಲೇಡಿ ಮಾರ್ಗರೇಟ್ ಡೊಗ್ಲಾಸ್ - ಹೋಮ್ ಆಂಗ್ಲ ಗಾಯಕಿ, ಬರಹಗಾರ್ತಿ ಹಾಗು ಕಲೆ ಪ್ರವರ್ತಕಿಯಾಗಿದ್ದಳು. ಅವಳು ಬರ್ನ್ಹಾಮ್ ಮಾರುಕಟ್ಟೆಯ ಉತ್ಸವವನ್ನು ಸ್ತಾಪಿಸಿದಳು ಹಾಗು ಅಲ್ಲಿ ನಿರ್ದೇಶಕಳಾಗಿ ಎರಡು ದಶಕಗಳ ಕಾಲ ಸೇವೆ ಸಲ್ಲಿಸಿದಳು.
ಆರಂಭಿಕ ವರ್ಷಗಳು
ಬದಲಾಯಿಸಿಲೇಡಿ ಮಾರ್ಗರೇಟ್, ಶ್ರೀಮಂತಿಕ ಸ್ಪೆನ್ಸರ್ ಕುಟುಂಬದಲ್ಲಿ ೧೯೦೬ ರಂದು ಲಂಡನ್ನಲ್ಲಿ ಹಿಟ್ಟಿದ್ದಳು. ಅವಳು ಆರನೆ ಮತ್ತು ಕಿರಿಯ ಮಗಳಾಗಿ ಚಾರ್ಲ್ಸ್ ಸ್ಪೆನ್ಸರ್, ೬ನೇ ಅರ್ಲ್ ಸ್ಪೆನ್ಸರ್ ಹಾಗು ಮಾರ್ಗರೇಟ್ ಬಾರ್ಯಿಂಗ್ ಸ್ಪೆನ್ಸರ್ ಗೆ ಹುಟ್ಟಿದಳು, ಯಾರು ಲೇಡಿ ಡಯಾನಾಳ ದೊಡ್ಡ ಅಜ್ಜ ಅಜ್ಜಿಯರು ಸಹ ಆಗಿದ್ದರು. ಮಾರ್ಗರೇಟ್ ಬಾರ್ಯಿಂಗ್ ಸ್ಪೆನ್ಸರ್, ಬ್ಯಾಂಕರಾಗಿದ್ದ ಫಸ್ಟ್ ಲಾರ್ಡ್ ರೆವೆಲ್ಸ್ಟೋಕ್ನ ಮಗಳಾಗಿದ್ದರು.
-
ರಾಯಲ್ ಕಾಲೇಜ್ ಆಫ್ ಮ್ಯೂಸಿಕ್, ಲಂಡನ್
ರಾಣಿ ಅಲೆಕ್ಸಾಂಡ್ರ ಅವಳ ಪೋಷಕಿಯಾಗಿದ್ದಳು. ಲೇಡಿ ಮಾರ್ಗರೇಟ್ ಆಲ್ಥಾರ್ಪ್ ಮತ್ತು ಸ್ಪೆನ್ಸರ್ ಹೌಸ್ನಲ್ಲಿ ಬಾಲ್ಯವನ್ನು ಕಳೆದಳು. ತನ್ನ ಒಡಹುಟ್ಟಿದವರು ಐದು ಜನ. ಅವರು ಲೇಡಿ ಅಡಿಲೇಡ್ ಮಾರ್ಗರೇಟ್ ಡೆಲಿಯಾ ಸ್ಪೆನ್ಸರ್ (೧೮೮೯-೧೯೮೧), ಆಲ್ಬರ್ಟ್ ಎಡ್ವರ್ಡ್ ಜಾನ್ ಸ್ಪೆನ್ಸರ್ (೧೮೯೨-೧೯೭೫), ಗೌರವ. ಸೆಸಿಲ್ ಎಡ್ವರ್ಡ್ ರಾಬರ್ಟ್ ಸ್ಪೆನ್ಸರ್ ಆರ್‍ಎನ್ ಡಿಎಸ್‍ಸಿ ಕ್ರೊಯೆಕ್ಸ್ ಡಿ ಗುರೆರ್ (೧೮೯೪-೧೯೨೮), ಲೇಡಿ ಲ್ಯಾವಿನ್ಯಾ ಎಮಿಲಿ ಸ್ಪೆನ್ಸರ್ (೧೮೯೯-೧೯೫೫) ಮತ್ತು ನಾಯಕ ಗೌರವ. ಜಾರ್ಜ್ ಚಾರ್ಲ್ಸ್ ಸ್ಪೆನ್ಸರ್. ಲೇಡಿ ಮಾರ್ಗರೇಟ್ ಗೋವರ್ನೆಸ್ನ ಸಹಾಯದಿಂದ ಮನೆಯಲ್ಲೆ ವಿಧ್ಯಾವಂತೆಯಾದಳು. ಜೊತೆಗೆ ಅವಳು ಬಾಲಕಿಯರಿಗಂತಿರುವ ನಾರ್ಧಾಂಪ್ಟನ್ ಸೆಕೆಂಡರಿ ಶಾಲೆಯ ಘಟನೆಗಳಲ್ಲಿ ಭಾಗವಹಿಸುತ್ತ ಅಲ್ಲಿ ಸ್ವಲ್ಪ ಸಮಯ ಕಳೆದಳು. ಅವಳನ್ನು ಆಲ್ಬರ್ಟ್ ಹಾಲ್ನಲ್ಲಿ ನಡೆಯುತಿದ್ದ ಸಂಗೇತ ಕಚೇರಿಗಳಿಗೆ ಪ್ರತಿ ದಿನ ಕರೆದೊಯ್ಯಲಾಗುತಿತ್ತು. ಆ ಪ್ರವಾಸದಿಂದ ಅವಳು ಸಂಗೀತದಲ್ಲಿ ಆಸಕ್ತಿಯನ್ನು ಬೆಳೆಸಿಕೊಂಡಳು, ಅವಳ ತನ್ನ ಈ ಅತ್ಯುತ್ತಮ ಪ್ರತಿಭೆಯೂ ಪಿಟೀಲುವಾದಕಿಯರಾದ ತಾಯಿ ಹಾಗು ಅಜ್ಜಿಯರಿಂದ ಆನುವಂಶಿಕವಾಗಿ ಪಡೆದಿದ್ದಳೆಂದು ಎಲ್ಲರಿಗು ಬೇಗನೆ ಸ್ಪಷ್ಟವಾಯಿತು. ೯೦ನೇ ವಯಸ್ಸಿನಲ್ಲು ಲೇಡಿ ಮಾರ್ಗರೇಟ್ ಪಿಯಾನೋ ಮೇಲೆ ಶೋಸ್ತಕೋವಿಚ್ ನುಡಿಯುತಿದ್ದುದನ್ನು ಕೇಳಬಹುದಾಗಿತ್ತು. ೧೯೨೨ ರಲ್ಲಿ ಅವಳ ತಂದೆಯ ಮರಣದ ನಂತರ ಲೇಡಿ ಮಾರ್ಗರೇಟ್, ಫ್ರಂಚ್ ಹಾಗು ಸಂಗೀತವನ್ನು ಪ್ಯಾರಿಸ್‍ನಲ್ಲಿ ಅಧ್ಯಯನ ಮಾಡಿದಳು. ಅವಳು ಆ ನಂತರ ಪ್ರಿನ್ಸೆಸ್ ಆಲಿಸ್, ಕೌಂಟೆಸ್ ಆಫ್ ಅಥ್ಲೋನ್‍ಗೆ ಲೇಡಿ-ಇನ್-ವೈಟಿಂಗ್ ಆಗಿ ದಕ್ಷಿಣ ಆಫ್ರಿಕಾದಲ್ಲಿ ಇದ್ದಳು, ವಿಯನ್ನಾದಲ್ಲಿ ತನ್ನ ಸಂಗೀತ ಅಧ್ಯಯನವನ್ನು ಪುನರಾರಂಭಿಸುವ ವರೆಗು. ಪ್ರಿನ್ಸೆಸ್ ಆಲಿಸ್, ಕೌಂಟೆಸ್ ಆಫ್ ಅಥ್ಲೋನ್ನ, ಬ್ರಿಟಿಷ್ ರಾಯಲ್ ಕುಟುಂಬದ ಸದಸ್ಯಳಾಗಿದ್ದಳು.ಅವಳು ಬ್ರಿಟಿಷ್ ರಾಯಲ್ ಕುಟುಂಬದಲ್ಲಿ ದೀರ್ಘಕಾಲ ಬದುಕಿದ ರಾಜಕುಮಾರಿಯಾಗಿದ್ದಳು. ರಾಣಿ ವಿಕ್ಟೋರಿಯಾಳ ಕೊನೆಯ ವರೆಗು ಬದುಕುಳಿದ ಮೊಮ್ಮಗಳೂ ಸಹ ಆಗಿದ್ದಳು. ಲೇಡಿ ಮಾರ್ಗರೇಟ್ ರಾಯಲ್ ಕಾಲೇಜ್ ಆಫ್ ಮ್ಯೂಸಿಕ್‍ನಲ್ಲಿ ವಿಲಿಯಮ್ಸ್ ಸಹೋದರರ ಜೊತೆ ಅಧ್ಯಯನ ಮಾಡಿದಳು, ಎಲ್ಲಿ ಅವಳ ಇಬ್ಬರು ಸಹೋದರಿಯರು ಡೆಲಿಯಾ ಪೇಲ್ ಮತ್ತು ಲಾವಿಯಾನಾ ಅನಾಲಿ, ವಿಧ್ಯಾರ್ಥಿಗಳಾಗಿದ್ದತು. ಅಲ್ಲೇ ನಂತರ ಟ್ರಸ್ಟಿಯಾಗಿದ್ದಳು. ರಾಯಲ್ ಕಾಲೇಜ್ ಆಫ್ ಮ್ಯೂಸಿಕ್‍ಅನ್ನು ೧೮೮೨ರಲ್ಲಿ ರಾಯಲ್ ಚಾರ್ಟರ್ ಸ್ಥಾಪಿಸಿದ್ದು, ಒಂದು ಕನ್ಸರ್ವೇಟೈರ್ ಆಗಿದೆ. ಇದು ಯುಕೆ, ಲಂಡನಿನ, ದಕ್ಷಿಣ ಕೆನ್ಸಿಂಗ್ಟನ್‍ನಲ್ಲಿ ಇದೆ.[೧]<gallery>
ವೃತ್ತಿ
ಬದಲಾಯಿಸಿಅನೇಕ ಸಾಮಾನ್ಯವಾದ ಮಹಿಳೆಯರ ಮಧ್ಯೆ ಹುಟ್ಟಿದ್ದರು, ಸವಲತ್ತ ವರ್ಗದಿಂದ ಬಂದಿದ್ದರೂ, ಅವಳು ಏನು ಮಾಡದೆ ಸುಮ್ಮನೆ ಮನೆಯಲ್ಲಿ ಕುಳಿತುಕೊಂಡು ಇರಲಿಲ್ಲ. ೧೯೪೧ ರಲ್ಲಿ ನ್ಯಾಷನಲ್ ಗ್ಯಾಲರಿಯ ಪ್ರಕಟಣೆ ವಿಭಾಗದಲ್ಲಿ ಕೆನ್ನೆತ್ ಕ್ಲಾರ್ಕ್‍ನ ಜೊತೆ ಕೆಲಸ ಮಾಡಿದಳು. ೧೯೫೦ ರ ಸಮಯದಲ್ಲಿ ಪ್ರಿನ್ಸೆಸ್ ಅಲೆಕ್ಸಾಂಡ್ರಾಗೆ ಲೇಡಿ-ಇನ್-ವೈಟಿಂಗ್‍ಆಗಿ ಕೆಲಸ ಮಾಡಿದಳು. ಪ್ರಿನ್ಸೆಸ್ ಅಲೆಕ್ಸಾಂಡ್ರಾ, ಕಿಂಗ್ ಎಡ್ವರ್ಡ್ VII ನ ಮೊಮ್ಮಗಳು ಹಾಗು ರಾಣಿ ವಿಕ್ಟೋರಿಯಾಳ ದೊಡ್ಡ ಮೊಮ್ಮಗಳು ಆಗಿದ್ದಳು. ಲೇಡಿ ಮಾರ್ಗರೇಟ್ ನಾರ್ಫೋಕ್‍ನ, ಬರ್ನ್ಹ್ಯಾಮ್ ಮಾರುಕಟ್ಟೆಯಲ್ಲಿ ಖರೀದಿಸಿದಳು ಮತ್ತು ಪ್ರಾಚೀನ ವ್ಯವಹಾರಗಳನ್ನು ನಡೆಸಿದಳು. ೧೯೪೭ ರಲ್ಲಿ, ಬರ್ನ್ಹ್ಯಾಮ್ ಮಾರುಕಟ್ಟೆಯ ಉತ್ಸವವನ್ನು ಸ್ಥಾಪಿಸಿದಳು, ಯಾವುದು ಕಛೇರಿಗಳ, ಕಾವ್ಯದ ವಾಚನಗೋಷ್ಠಿಗಳ ಮತ್ತು ನಾಟಕೀಯ ನಿರ್ಮಾಣಗಳ ಸರಣಿಯಾಗಿತ್ತು. ಉತ್ಸವದ ನಿರ್ದೇಶಕಳಾಗಿ ೧೯೯೨ ರವರೆಗೆ ಮುಂದುವರೆಸಿದಳು. ಆಕೆಯ ಆತ್ಮಚರಿತ್ರೆಯಾದ "ಎ ಸ್ಪೆನ್ಸರ್ ಚಯಿಲ್ಢುಡ್", ೧೯೯೪ರಲ್ಲಿ ಪ್ರಕಟಗೊಂಡಿತು. ಎರಡನೇ ಮಹಾಯುದ್ದದ ಸಮಯದಲ್ಲಿ, ಲಂಡನಿನಲ್ಲಿ ಬಾಂಬ್ ದಾಳಿಯ ಮನೆಯಿಂದ ಪುಟ್ಟ ಮಗುವೊಂದನ್ನು ರಕ್ಷಿಸಿದ ಆ ಶೌರ್ಯಕ್ಕೆ, ಅವಳಿಗೆ ಜಾರ್ಜ್ ಪದಕ ಪ್ರಶಸ್ತಿಯೂ ದೊರೆತಿತು. ಎರಡನೇ ಮಹಾಯುದ್ದದ ನಂತರ ಅವಳು ಮತ್ತು ಅವಳ ಮಕ್ಕಳು ಹೆರ್ಟ್ಫೋರ್ಡ್ಶೈರ್ನಲ್ಲಿರುವ ಕೆಬ್ವರ್ತ್ ಎಸ್ಟೇಟ್ನಲ್ಲಿರುವ ಲುಟಿಯೆನ್ಸ್ ಕಾಟೇಜ್‍ನಲ್ಲಿ ವಾಸಿಸುತಿದ್ದಳು, ೧೯೫೩ ರಲ್ಲಿ ಲ್ಂಡನ್ಗೆ ತೆರಳುವ ಮೊದಳು.
ರಿಚರ್ಡ್ ರಾಡ್ನಿ ಬೆನೆಟ್, ಉತ್ಸವದೊಂದಿಗೆ ಅತ್ಯಂತ ನಿಕಟ ಸಂಬಂಧ ಹೊಂದಿರುವ ಸಮಯೋಜಕನಾಗಿದ್ದನು. ಆತ ೧೯೯೪ ರ ೨೧ ನೇ ಉತ್ಸವದಲ್ಲಿ ಮಾರ್ಗರೇಟ್ ಡೌಗ್ಲಾಸ್- ಹೋಮ್ ಗೆ ಒಂದು ಹಾಡಿನ ಅನುಕ್ರಮ , ' ದಿ ಹಿಸ್ಟರಿ ಆಫ್ ದಿ ದನ್ಸಂಟ್ ' ಅನ್ನು ಸಮರ್ಪಿಸಿದನು. ಈ ಹಾಡುಗಳು ಅಂದಿನಿಂದ ಲಂಡನ್ನ , ವಿಗ್ಮೋರ್ ಹಾಲ್ನಲ್ಲಿ ಪ್ರದರ್ಶನವಾಗುತಿತ್ತು, ಯಾವಾಗ ಅಂಕೆಯನ್ನು ಔಪಚಾರಿಕವಾಗಿ ಡೌಗ್ಲಾಸ್-ಹೋಮ್ಗೆ ನೀಡಲಾಗಿತ್ತೊ.
ಪ್ರದರ್ಶಕಿಯಾಗಿ ಡೌಗ್ಲಾಸ್ ನ ಕೊನೆಯ ಸಾರ್ವಜನಿಕ ದಾಖಲೆ, ಆಕೆಯೇ ನುಡಿದ "ಈಸ್ ಮಿಸ್ಬಿಹಾವಿನ್" ಮತ್ತು ಅವಳ ಕುಟುಂಬದ ಮನೆಯಾದ ನಾರ್ಥಾಂಪ್ಟನ್ಸ್ಶೈರ್ನಲ್ಲಿ ಆಲ್ಥಾರ್ಪ್ನಲ್ಲಿ ವಿನ್ನೀಸ್ ಸಲೂನ್ ಸಂಗೀತವನ್ನು, ದೂರದರ್ಶನದ ಸಾಕ್ಷ್ಯಚಿತ್ರಕ್ಕಗಿ ನುಡಿದಳು, ಯಾವುದು ಆಕೆಯ ಆತ್ಮಚರಿತ್ರೆಯ ಪರಿಮಾಣವಾದ 'ಎ ಸ್ಪೆನ್ಸರ್ ಚಯಿಲ್ಢುಡ್' ಗೆ ಪ್ರೇರೇಪಿಸಿತು.[೨]
ವ್ಯಯಕ್ತಿಕ ಜೀವನ
ಬದಲಾಯಿಸಿ೧೯೩೧ ರಲ್ಲಿ, ಲೇಡಿ ಮಾರ್ಗರೇಟ್, ಗೌರವ. ಹೆನ್ರಿ ಮೊಂಟಾಗು ಡೌಗ್ಲಾಸ್-ಹೋಮ್‍ನನ್ನು ಮದುವೆಯಾದಳು, ಯಾರು ಚಾರ್ಲ್ಸ್ ಡೊಗ್ಲಾಸ್-ಹೋಮ್, ಎ ೧೩ನೇ ಆರ್ಲ್ ಆಫ್ ಹೋಮ್‍ನ ಎರಡನೆಯ ಮಗನು. ಸ್ಕಾಟಿಷ್ ಗಡಿಗಳಲ್ಲಿ ದೃಢವಾದ ಬದ್ರವಾದ ಬೇರುಗಳ ಜೊತೆಗಿನ ಪ್ರತಿಭಾವಂತ ಕುಟುಂಬದವ ಹೋಮ್ಸ್ ಆಗಿದ್ದನು. ಅವನ ಹಿರಿಯ ಸಹೋದರನಾದ ಅಲೆಕ್ ೧೯೬೩ ರರಲ್ಲಿ ಪ್ರಧಾನ ಮಂತ್ರಿಯಾಗಿದ್ದರು. ಕಿರಿಯ ಸಹೋದರನಾದ ವಿಲಿಯಂ, 'ದಿ ರಿಲಕ್ಟಂಟ್ ಡೆಬ್ಯುಟಾಂಟೆ', 'ಚಿಲ್ಟರ್ ಹಂಡ್ರೆಡ್ಸ್' ಮತ್ತು 'ಹೆನ್ರಿ', ಸೇರಿದಂತೆ ಅನೇಕ ಯಶಸ್ವಿ ನಾಟಕಗಳನ್ನು ಬರೆದಿದ್ದರು. ಮಧ್ಯದ ಸಹೋದರ, ಒಬ್ಬ ಪ್ರಮುಖ ಪಕ್ಷಿವಿಜ್ಞಾನಿ ಮತ್ತು ಪ್ರಸಾರಕನಾಗಿ, ಬಿಬಿಸಿ ಬರ್ಡ್ಮ್ಯಾನ್ ಎಂದು ವ್ಯಾಪಕವಾಗಿ ಹೆಸರಾಗಿದ್ದನು. ಲೇಡಿ ಮಾರ್ಗರೇಟ್ ಹಾಗು ಹೆನ್ರಿಗೆ ಮೂರು ಮಕ್ಕಳಿದ್ದರು. ಇಬ್ಬರು ಗಂಡು ಮಕ್ಕಳು ಮತ್ತು ಒಂದು ಹೆಣ್ಣು ಮಗಳು. ಆದರೂ ಮದುವೆ ೧೯೪೭ ರಲ್ಲಿ ಇಲ್ಲವಾಯಿತು. ದುಃಖವೇನೆಂದರೆ ಪುತ್ರರಿಬ್ಬರು ಅವಳಿಗೆ ಪೂರ್ವಭಾವಿಯಾಗಿ ಮರಣ ಕೊಡಬೇಕಾಯಿತು. ೧೯೬೮ ರಲ್ಲಿ ಅಪಾರ ಪ್ರತಿಭಾವಂತ ಲೇಖಕ ಮತ್ತು ಪಿಯಾನೋ ವಾದಕನಾದ, ಹಿರಿಯ ಮಗನಾದ ರಾಬಿನ್, ೬೮ನೇ ವಯಸ್ಸಿನಲ್ಲಿ ನಿಧನನಾದ. ೧೯೮೨ ರಲ್ಲಿ ಸಂಪಾದಕನಾಗಿ ಟೈಮ್ಸ್ನಲ್ಲಿದ್ದ, ಕಿರಿಯ ಮಗನಾದ ಚಾರ್ಲ್ಸ್, ೧೯೮೫ರಂದು ಅನಾರೋಗ್ಯದಿಂದ ಮರಣವಾದನು. ಅವರ ಮಗಳು ಫಿಯೋನಾ ಫ್ರೇಸರ್, ಮೊದಲು ಗ್ರಿಗೊರಿ ಮಾರ್ಟಿನ್‍ನನ್ನು ವಿವಾಹವಾದಳು ಮತ್ತು ಎರಡನೆಯ ಬಾರಿ ವ್ಯಪಾರಿ ಬ್ಯಾಂಕರ್, ಸರ್ ಇಯಾನ್ ಜೇಮ್ಸ್ ಫ್ರೇಸರ್ (೧೯೨೩-೨೦೦೩), ಯಾರು ಲಾಜಾರ್ಡ್ನ ಮಾಜಿ ಅಧ್ಯಕ್ಷರಾಗಿದ್ದರು. ಲೇಡಿ ಮಾರ್ಗರೇಟ್, ವೇಲ್ಸ್ ರಾಜಕುಮಾರಿ ಡಯಾನಾಳ ದೊಡ್ಡ ಚಿಕ್ಕಮ್ಮ ಹಾಗು ಕ್ವೀನ್ ಮದರಾದ ಕ್ವೀನ್ ಎಲಿಜಬೆತ್ನ ಆತ್ಮೀಯ ಗೆಳತಿಯೂ ಆಗಿದ್ದಳು. ಅವಳು ೨೬ನೇ ಮೇ ೧೯೯೬ ರಂದು ಇಂಗ್ಲಾಂಡ್ನ ಉತ್ತರ ನಾರ್ಫೋಕ್ ಜಿಲ್ಲೆಯಲ್ಲಿ ಮರಣ ಹೊಂದಿದ್ದಳು.