ಲೆಹ್ಮನ್ ಬ್ರದರ್ಸ್ ನ ದಿವಾಳಿತನ
ಲೆಹ್ಮನ್ ಬ್ರದರ್ಸ್ ಚಾಪ್ಟರ್ 11ರ ಅಧ್ಯಾಯದ ನಿಯಮದಡಿ ದಿವಾಳಿತನದ ವಿರುದ್ದ ರಕ್ಷಣೆಗೆ ಸೆಪ್ಟೆಂಬರ್ 15, 2008 ರಲ್ಲಿ ವಿವರ ಮನವಿ ದಾಖಲಿಸಿತು.(ಯುನೈಟೆಡ್ ಸ್ಟೇಟ್ಸ್ ನ ಬ್ಯಾಂಕ್ರಪ್ಟಸಿ ಕೋಡ್ ನಡಿ ಮರುಸಂಘಟಿತವಾಗಲು ಕೋರಿಕೆ ಸಲ್ಲಿಕೆ) ಈ ಲೆಹ್ಮನ್ ಬ್ರದರ್ಸ್ ನ ಬ್ರಾಂಕ್ರಪ್ಟಿಸಿ ದಿವಾಳಿತನದ ಪ್ರಕರಣವು U.S.ನ ಇತಿಹಾಸದಲ್ಲೇ ಅತಿ ದೊಡ್ಡ ಪ್ರಮಾಣದ ಕೋರಿಕೆಯಾಗಿದೆ.ಲೆಹ್ಮನ್ ಒಟ್ಟು ಸುಮಾರು $600 ಶತಕೋಟಿ ಮೌಲ್ಯದ ಆಸ್ತಿಗಳನ್ನು ಹೊಂದಿದೆ.[೧]
ಹಿನ್ನೆಲೆ
ಬದಲಾಯಿಸಿಆಸ್ತಿ-ಪಾಸ್ತಿ ಗಳ ಅಡಮಾನ ಮಾರುಕಟ್ಟೆಗೆ ಒಡ್ಡಿಕೊಳ್ಳುವಿಕೆ
ಬದಲಾಯಿಸಿಲೆಹ್ಮನ್ ಅವರು ತಮ್ಮ 2008ರ ದಿವಾಳಿತನದ ಸಂದರ್ಭದಲ್ಲಿನ ಕೊರತೆ ಭರ್ತಿಗಾಗಿ ನಿಧಿ ಸಂಗ್ರಹಿಸುವ ನಿಟ್ಟಿನಲ್ಲಿ ಒತ್ತೆ ಇಟ್ಟುಕೊಳ್ಳುವ ಅಥವಾ ಅದಕ್ಕೆ ಪೂರಕ ಚಲನಶೀಲತೆ ತುಂಬುವ ಉದ್ದೇಶದಿಂದ ಸಾಧನವೆನಿಸಿದ ಈ ವಹಿವಾಟಿನಲ್ಲಿ ತೊಡಗಿತು. ಈ ನಿಧಿಯ ಬಹುಮುಖ್ಯ ಭಾಗವನ್ನು ಅದು ಗೃಹನಿರ್ಮಾಣ-ಸಂಭಂಧಿ ವಹಿವಾಟಿಗಾಗಿ ಬಳಸಲು ನಿರ್ಧರಿಸಿತು.ಆದರೆ ಮಾರುಕಟ್ಟೆಯಲ್ಲಿ ಈ ವ್ಯವಹಾರದ ತೀವ್ರ ಇಳಿಮುಖ ಪ್ರವೃತ್ತಿಯು ಅದಕ್ಕೆ ಮಾರಕವಾಗಿ ಪರಿಣಮಿಸಿತು. ಆದರೆ ಈ ವ್ಯವಹಾರದ ಅದರ ಅನುಪಾತದ ಪ್ರಮಾಣವು ಅಪಾಯಕಾರಿ ಹೆಜ್ಜೆಯಾಗಿ ಪರಿಣಮಿಸಿತು.ಅದರ ಅಳತೆ ಪ್ರಮಾಣಗಳು ಆಸ್ತಿ ಮಾಲಿಕರ ಈಕ್ವಿಟಿಯ ಪ್ರಮಾಣಕ್ಕೆ ಸರಿದೂಗುವಂತಹವು ಆಗಿರಲಿಲ್ಲ.ಗರಿಷ್ಟ ಅದರ ಅನುಪಾತ ದರವು 2003 ರಲ್ಲಿದ್ದದ್ದು 24:1 ಆದರೆ ಅದು 2007 ರ ಹೊತ್ತಿಗೆ 31:1 ಕ್ಕೆ ಏರಿಕೆಯಾಯಿತು.[೨] ಮಾರುಕಟ್ಟೆಯ ಸುಗ್ಗಿ ಕಾಲದಲ್ಲಿ ಅದು ಅತ್ಯಧಿಕ ಲಾಭ ಮಾಡಿಕೊಂಡಿತ್ತು.ಆದರೆ ಆಸ್ತಿ ವಹಿವಾಟಿನಲ್ಲಿನ ಕೇವಲ 3-4% ರ ಇಳಿಕೆ ಅದರ ಈಕ್ವಿಟಿ ಅಥವಾ ಶೇರುಗಳ ಮುಖಬೆಲೆಯನ್ನು ಪಾತಾಳಕ್ಕಿಳಿಸಿತು.[೩] ಬಂಡವಾಳ ಹೂಡಿಕೆ ಬ್ಯಾಂಕುಗಳಾದ ಲೆಹ್ಮನ್ ನಂತಹುಗಳಿಗೆ ಠೇವಣಿ ಬ್ಯಾಂಕುಗಳಿಗೆ ಅಪಾಯಕಾರಿ ಹೆಜ್ಜೆ ತೆಗೆದುಕೊಳ್ಳುವಲ್ಲಿ ಇರುವ ನಿಯಂತ್ರಣ-ಕಟ್ಟಳೆಗಳು ಇಲ್ಲಿರುವುದಿಲ್ಲ.[೪]
ಲೆಹ್ಮನ್ ಆಗಷ್ಟ್ 2007 ರಲ್ಲಿ ತನ್ನ ಹಣಕಾಸು ಸಾಲದ ಉಪವಿಭಾಗ BNC ಮಾರ್ಟಗೇಜ್ ನ್ನು ಮುಚ್ಚಿತು.ಈ ಮೂಲಕ ಅದರ 23 ಸ್ಥಾನಿಕ ಕೇಂದ್ರಗಳಲ್ಲಿದ್ದ 1,200 ಸೇವಾ ನೆಲೆಗಳನ್ನು ತೆಗೆದು ಹಾಕಲಾಯಿತು.ತೆರಿಗೆ ನಂತರ ಅದು $27 ದಶಲಕ್ಷ ಮೊತ್ತವನ್ನು ಪಡೆದುಕೊಂಡು, ತನ್ನ ಕಂಪನಿಯ ಯಶಸ್ವಿಯ ಸದಾಶಯದ ಅಂದರೆ ಗುಡ್ ವಿಲ್ ನಲ್ಲಿ $27 ದಶಲಕ್ಷದಷ್ಟು ಕಡಿಮೆ ಮಾಡಿಕೊಂಡಿತು. ವಹಿವಾಟು ಕಂಪನಿ ಹೇಳುವ ಪ್ರಕಾರ ಮಾರ್ಟ್ ಗೇಜ್ ಅಥವಾ ಅಡಮಾನ ಮಾರುಕಟ್ಟೆಯ ದರದಲ್ಲಿನ ಕಳಪೆ ಪರಿಸ್ಥಿತಿಯಿಂದಾಗಿ ತನ್ನ "ಈ ಸಬ್ ಪ್ರೈಮ್ ಜಾಗೆಗಳನ್ನು ಮುಚ್ಚಬೇಕಾಯಿತಲ್ಲದೇ ಸಂಪನ್ಮೂಲ ಮತ್ತು ಕಾರ್ಯಕ್ಷಮತೆಯಲ್ಲಿನ ಇಳಿಕೆಯಿಂದ ಈ ಕ್ರಮ ಅನಿವಾರ್ಯವಾಯಿತು." [೫]
ಲೆಹ್ಮನ್ ನ ಅಂತಿಮ ಮಾಸಗಳು
ಬದಲಾಯಿಸಿಲೆಹ್ಮನ್ 2008 ರ ಸುಮಾರಿಗೆ ನಿರಂತರ ಆಸ್ತಿ ವಹಿವಾಟಿನಲ್ಲಿನ ಅಡಮಾನ ಹಣಕಾಸು ಸಂಭಂಧಿಸಿದ ಸಬ್ ಪ್ರೈಮ್ ಮಾರ್ಟ್ ಗೇಜ್ ಬಿಕ್ಕಟ್ಟಿನಿಂದಾಗಿ ಅದು ಊಹಾತೀತ ನಷ್ಟ ಅನುಭವಿಸುವಂತಾಯಿತು. ಲೆಹ್ಮನ್ ತನ್ನ ಬಹುಭಾಗವನ್ನು ಸಬ್ ಪ್ರೈಮ್ ಮತ್ತು ಇನ್ನುಳಿದ ಕಡಿಮೆ ದರದ ಅಡಮಾನ ವರಮಾನ ಭಾಗಗಳಲ್ಲಿ ಸೆಕ್ಯುರಟಿಯ ನಂಬಿ ಬಂಡವಾಳ ಹೂಡಿದ್ದೇ ನಷ್ಟಕ್ಕೆ ಕಾರಣವಾಯಿತೆಂಬುದು ಸ್ಪಷ್ಟವಾಗಿ ಗೋಚರಿಸಿತು. ಇದನ್ನು ಮಾಡಲು ಕಾರಣವೆಂದರೆ ಲೆಹ್ಮನ್ ಕಡಿಮೆ ದರದ ಬಾಂಡ್ ಗಳನ್ನು ಮಾರಾಟ ಮಾಡಲು ಅಥವಾ ಅವುಗಳನ್ನು ಸಮರ್ಪಕವಾಗಿ ನಿರ್ವಹಿಸಲು ಸಮರ್ಥವಾಗಿರಲಿಲ್ಲ. ಹೀಗೆ ಆ ಸಮಯದ ಎಲ್ಲಾ ವಹಿವಾಟುಗಳಲ್ಲಿ ಕಡಿಮೆ-ದರದ ಅಡಮಾನ-ಹಿನ್ನಲೆಯ ಈ ಸೆಕ್ಯುರಿಟೀಸ್ ಗಳಲ್ಲಿ 2008 ರ ಅವಧಿಯಾದ್ಯಂತ ನಿರಂತರ ನಷ್ಟ ಅನುಭವಿಸಬೇಕಾಯಿತು. ಎರಡನೆಯ ಹಣಕಾಸು ವರ್ಷದ ತ್ರೈಮಾಸಿಕ ಅವಧಿಯಲ್ಲಿ ಲೆಹ್ಮನ್ $2.8 ಶತಕೋಟಿ ನಷ್ಟ ತೋರಿಸಿತು.ಹೀಗಾಗಿ $6 ಶತಕೋಟಿ ಮೌಲ್ಯದ ಆಸ್ತಿಗಳನ್ನು ಮಾರುವುದು ಅನಿವಾರ್ಯವಾಯಿತು.[೬] ಲೆಹ್ಮನ್ 2008 ರ ಅರ್ಧವಾರ್ಷಿಕ ಅವಧಿಯಲ್ಲಿ 73% ರಷ್ಟು ತನ್ನ ದಾಸ್ತಾನನ್ನು ಕಳೆದುಕೊಂಡಿತು.ಸಾಲದ ಮಾರುಕಟ್ಟೆಯಲ್ಲಿನ ಸತತ ಬಿಗುವಿನ ಸ್ಥಿತಿಯಿಂದಾಗಿ ಹಾನಿಗೊಳಗಾಗಬೇಕಾಯಿತು.[೬] ಲೆಹ್ಮನ್ ಆಗಷ್ಟ 2008 ರಲ್ಲಿ ತನ್ನ ಸುಮಾರು 6% ರಷ್ಟು ಅಂದರೆ 1,500 ಕಾರ್ಮಿಕ ಪಡೆಯನ್ನು ವಿಮುಕ್ತಿಗೊಳಿಸಲು ಉದ್ದೇಶಿಸಿತೆಂದು ವರದಿ ಮಾಡಲಾಗಿತ್ತು.ಸೆಪ್ಟೆಂಬರ್ ತಿಂಗಳಲ್ಲಿ ಅದರ ಮೂರನೆಯ ತ್ರೈಮಾಸಿಕ ಹಣಕಾಸು ಅವಧಿಯಲ್ಲಿ ಇದನ್ನು ಮಾಡಲು ನಿರ್ಧರಿಸಿತ್ತು.[೬]
ಆಗಷ್ಟ್ 22, 2008 ರಲ್ಲಿ ಲೆಹ್ಮನ್ ನಲ್ಲಿನ ಶೇರುಗಳು 5% ಕ್ಕೆ ಬಂದು ತಲುಪಿದವು.(ಆ ವಾರದಲ್ಲಿ ಶೇರು ನಿಯಂತ್ರಣ ಮಾರುಕಟ್ಟೆ ಪಟ್ಟಿಯಲ್ಲಿ ಅದು 16% ರಷ್ಟಾಗಿತ್ತು.)ಆಗ ಸರ್ಕಾರ ನಿಯಂತ್ರಣದ ಕೊರಿಯಾ ಡೆವೆಲಪ್ಮೆಂಟ್ ಬ್ಯಾಂಕ್ ಲೆಹ್ಮನ್ ನನ್ನು ಖರೀದಿಸುವ ಸುದ್ದಿ ಹರಡಿತ್ತು.[೭] ಆದರೆ ಈ ಏರಿಕೆ ಬಹುದಿನ ಇರಲಿಲ್ಲ,ಯಾಕೆಂದರೆ ಕೊರಿಯಾ ಡೆವೆಲಪ್ಮೆಂಟ್ ಬ್ಯಾಂಕ್ "ನಿಯಮಗಳನ್ನು ಅನುಸರಿಸುವಲ್ಲಿ ತೊಂದರೆ ಅನುಭವಿಸುತ್ತದೆಯಲ್ಲದೇ ಈ ವಹಿವಾಟಿಗೆ ಪಾಲುದಾರರನ್ನು ಆಕರ್ಷಿಸಲು ಅದು ವಿಫಲವಾಗಿತ್ತೆಂದು ಸುದ್ದಿ ಹರಡಿತು."[೮] ಆಗ ಸೆಪ್ಟೆಂಬರ್ 9,2008 ರಲ್ಲಿ ಈ ಪ್ರಕರಣವು ಏರಿಕೆಯ ಸುದ್ದಿಯಿಂದಾಗಿ 45% ರಿಂದ $7.79 ಗೆ ನೆಗೆಯಿತು.ದಕ್ಷಿಣ ಕೊರಿಯಾದ ಸಂಸ್ಥೆಯು ತನ್ನ ವಹಿವಾಟುಗಳ ಮಾತುಕತೆಗಳನ್ನು ತಡೆಹಿಡಿಯಿತೆಂಬ ಮಾತುಗಳೂ ಆಗ ಕೇಳಿ ಬಂದವು.[೯]
ಲೆಹ್ಮನ್ ನ ದಾಸ್ತಾನಿನ ಮೌಲ್ಯಗಳಲ್ಲಿ ಅರ್ಧದಷ್ಟು ಕಳೆದು ಹಾನಿಗೊಳಗಾಯಿತೆಂಬ ವಿಷಯವು ಬಂಡವಾಳ ಹೂಡಿಕೆದಾರರಲ್ಲಿನ ನಂಬಿಕೆಯನ್ನು ಅಳಸಿ ಹಾಕಿತು.ಅದರಿಂದಾಗೆ ಅದರ ಮೌಲ್ಯವು ಸೆಪ್ಟೆಂಬರ್ 9,2008 ರಲ್ಲಿ S&P 500ರಷ್ಟು 3.4% ಕ್ಕೆ ಬಂದು ನಿಂತಿತು. ಪ್ರಖ್ಯಾತ ಸಂಸ್ಥೆ ಡೌ ಜೊನ್ಸ್ ಅದೇ ದಿನ ಸುಮಾರು 300 ಅಂಶಗಳನ್ನು ಕಳೆದುಕೊಂಡಿತು.ಬ್ಯಾಂಕ್ ನ ಭದ್ರತೆ ವಿಷಯದಲ್ಲಿನ ಅನುಮಾನದಿಂದ ನೋಡಿದ್ದೇ ಇದಕ್ಕೆ ಕಾರಣವಾಯಿತು.[೧೦] ಆದರೆ U.S ಸರ್ಕಾರವು ಲೆಹ್ಮನ್ ಅನುಭವಿಸುತ್ತಿದ್ದ ಹಣಕಾಸು ಬಿಕ್ಕಟ್ಟನ್ನು ನಿವಾರಿಸುವ,ಅಥವಾ ನೆರವಿಗೆ ಬರುವ ಯಾವುದೇ ಯೋಜನೆಯನ್ನು ಘೋಷಿಸಲಿಲ್ಲ.[೧೧]
ಲೆಹ್ಮನ್ ಸೆಪ್ಟೆಂಬರ್ 10,2008 ರಲ್ಲಿ $3.9 ಶತಕೋಟಿ ನಷ್ಟ ಅನುಭವಿಸಿತು.ತನ್ನ ಬಂಡವಾಳ ಹೂಡಿಕೆಯ-ಆಡಳಿತ ನಿರ್ವಹಣಾ ವಹಿವಾಟಾದ ನ್ಯುಬರ್ಗರ್ ಬರ್ಮನ್ ಒಳಗೊಂಡಂತೆ ಹಲವನ್ನು ಪರಭಾರೆ-ಮಾರಾಟ ಮಾಡುವ ಉದ್ದೇಶ ಹೊಂದಿತ್ತು.[೧೨][೧೩] ಅದೇ ದಿನ ಅದರ ಶೇರು ಭದ್ರತಾ ವಹಿವಾಟು 7%ಕ್ಕೆ ಜಾರಿಹೋಗಿ ಅದರ ಪ್ರಮಾಣ ಇಳಿಕೆಯಾಯ್ತು.[೧೩][೧೪]
ಸೆಪ್ಟೆಂಬರ್ 13,2008 ರಲ್ಲಿ ಟಿಮೊತಿ ಎಫ್.ಗೆತ್ನರ್ ಅವರು ಈ ಹಿಂದೆ ಫೆಡ್ರಲ್ ರಿಜರ್ವ ಬ್ಯಾಂಕ್ ಆಫ್ ನ್ಯುಯಾರ್ಕ್ ನ ಅಧ್ಯಕ್ಷರಾಗಿದ್ದರು.ಅವರು ಲೆಹ್ಮನ್ ನ ಭವಿಷ್ಯ ಮತ್ತು ಆಸ್ತಿಗಳ ವಹಿವಾಟು-ಮಾರಾಟದ ವಿಷಯ ಕುರಿತು ಚರ್ಚಿಸಲು ಸಭೆಯೊಂದನ್ನು ಕರೆದರು.[೧೫] ಆಗ ಲೆಹ್ಮನ್ ತಾನು ಬ್ಯಾಂಕ್ ಆಫ್ ಅಮೆರಿಕಾ ಮತ್ತು ಬಾರ್ಕ್ಲೇಸ್ ನೊಂದಿಗೆ ತನ್ನ ಕಂಪನಿಯ ಮಾರಾಟ ಕುರಿತ ಮಾತುಕತೆ ನಡೆಯುತ್ತಿದೆ ಎಂದು ಹೇಳಿತು.[೧೫] ದಿ ನ್ಯುಯಾರ್ಕ್ ಟೈಮ್ಸ್ ಸೆಪ್ಟೆಂಬರ್ 14 2008ರ ತನ್ನ ವರದಿಯಲ್ಲಿ, ಬಾರ್ಕ್ಲೆಯ್ ಈಗಾಗಲೇ ಲೆಹ್ಮನ್ ನ ಸಂಪೂರ್ಣ ಅಥವಾ ಭಾಗಶಃ ಖರೀದಿಯ ಹರಾಜು ಪ್ರಕ್ರಿಯೆಯನ್ನು ಪೂರ್ಣಗೊಳಿಸಿದೆ ಎಂದು ಹೇಳಿತು.[೧೬] ಆದರೆ ಈ ವಹಿವಾಟನ್ನು ಬ್ಯಾಂಕ್ ಆಫ್ ಇಂಗ್ಲೆಂಡ್ ಮತ್ತು UK ದ ಫೈನಾನ್ಸಿಯಲ್ ಸರ್ವಿಸ್ ಆಥಾರಟಿಗಳು (ಹಣಕಾಸಿನ ಸೇವಾ ಪ್ರಾಧಿಕಾರ)ತಮ್ಮ ವಿರೋಧ ವ್ಯಕ್ತಪಡಿಸಿದವು.[೧೭] ಪ್ರಮುಖ ವಾಲ್ ಸ್ಟ್ರೀಟ್ ಬ್ಯಾಂಕ್ ಗಳು ಅಂದು ಸಂಜೆ ಹೊತ್ತಲ್ಲಿ ಈ ವೇಗದ ವಿಫಲತೆ ತಡೆಯಲು ಸಭೆ ಸೇರಿದವು.[೧೬] ಬ್ಯಾಂಕ್ ಆಫ್ ಅಮೆರಿಕಾದ ಪಾತ್ರ ಇದರಲ್ಲಿ ಕೊನೆಗೊಂಡಿತೆಂದು ಹೇಳಬಹುದು,ಯಾಕೆಂದರೆ ಫೆಡ್ರಲ್ ನಿಯಮದ ನಿಯಂತ್ರಣಗಳು ಅದು ಸರಕಾರಕ್ಕೆ ಲೆಹ್ಮನ್ ಉಳಿಸಲು ಮಾಡುವ ವಿನಂತಿಗಳು,ಸರಕಾರಕ್ಕೆ ತಲುಪದೇ ವಿಫಲಗೊಂಡವೆಂದೇ ಹೇಳಬಹುದು.[೧೬]
ದಿವಾಳಿತನದ ದಾಖಲಿಸುವಿಕೆ
ಬದಲಾಯಿಸಿಲೆಹ್ಮನ್ ಬ್ರದರ್ಸ್ ಚಾಪ್ಟರ್ 11 ರಡಿ ಬ್ಯಾಂಕ್ರಪ್ಟಸಿ ಪ್ರೊಟೆಕ್ಷನ್ ನಿಯಮದನುಸಾರ ಸೆಪ್ಟೆಂಬರ್ 15,2008 ರಲ್ಲಿ ವಿವರ ದಾಖಲಿಸಿತು. ಇದಕ್ಕಾಗಿ ಬ್ಲೂಮ್ ಬರ್ಗ್ ವರದಿಗಳು U.S.ನ ನ್ಯುಯಾರ್ಕ್ ನಲ್ಲಿನ ದಕ್ಷಿಣ ಜಿಲ್ಲೆ(ಮ್ಯಾನ್ ಹ್ಯಾಟನ್ )ನಲ್ಲಿ ಬ್ಯಾಂಕ್ರಪ್ಟಸಿ ಕೋರ್ಟ್ ಗೆ ಸೆಪ್ಟೆಂಬರ್ 16 ರಂದು ತಮ್ಮ ವಿವರ ಸಲ್ಲಿಸಿದರು.ಈ ವೇಳೆಯಲ್ಲಿ ಲೆಹ್ಮನ್ ಬ್ರದರ್ಸ್ ಗೆ ಜೆ.ಪಿ.ಮೊರ್ಗಾನ್ ರವರು "ಫೆಡ್ರಲ್ ಕಾಯ್ದಿಟ್ಟ ನಿಧಿಯ-ಹಿನ್ನಲೆಯಾಗಿ ಮುಂಗಡಗಳ"ನ್ನು ಒದಗಿಸಿದ್ದರು. ಜೆಪಿ ಮೊರ್ಗಾನ್ ಚೇಸ್ ನ $87 ಶತಕೋಟಿ ನಗದು ಮುಂಗಡಗಳು ನ್ಯುಯಾರ್ಕ್ ನ ಫೆಡರಲ್ ರಿಜರ್ವ ಬ್ಯಾಂಕ್ ನಿಂದ ಮರು ಸಂದಾಯ ಮಾಡಲ್ಪಟ್ಟವು. ನಂತರ ಸೆಪ್ಟೆಂಬರ್ 16 ರಂದು $51 ಶತಕೋಟಿ ಒದಗಿಸಲಾಯಿತು.[೧೮]
ವಿಯೋಜನಾ ಹಂಚಿಕೆಯ ಪ್ರಕ್ರಿಯೆ
ಬದಲಾಯಿಸಿಸೆಪ್ಟೆಂಬರ್ 20,2008 ರಲ್ಲಿ ಲೆಹ್ಮನ್ ಬ್ರದರ್ಸ್ ನ ಹೊಲ್ಡಿಂಗ್ಸ್ ನ ದಳ್ಳಾಳಿ ವಿಭಾಗವನ್ನು ವಿಯೋಜಿಸಿ ಅದರ ಮಾರಾಟಕ್ಕೆ ಉದ್ದೇಶಿಸಲಾಯಿತು.ಇದನ್ನೂ ಕೂಡಾ ಬ್ಯಾಂಕ್ರಪ್ಟಸಿ ಕೋರ್ಟ್ ಮುಂದೆ ತರಲಾಯಿತು.ಒಟ್ಟು $1.35 ಶತಕೋಟಿ ಮೌಲ್ಯದ (£700 ದಶಲಕ್ಷ)ಯನ್ನು ಬಾರಕ್ಲೆಸ್ ನ ಲೆಹ್ಮನ್ ಬ್ರದರ್ಸ್ ನಲ್ಲಿದ್ದ ಪ್ರಮುಖ ವಹಿವಾಟಿನ ಯೋಜನೆಗಾಗಿ ಮೀಸಲಿಡಲಾಯಿತು.(ಪ್ರಮುಖವಾಗಿ $960ದಶಲಕ್ಷವನ್ನು ಗಗನಚುಂಬಿ ಕಟ್ಟಡ ವಾಗಿದ್ದ ಮಿಡ್ ಟೌನ್ ಮ್ಯಾನ್ ಹ್ಯಾಟನ್ ನ ಕಚೇರಿಗಾಗಿ ವಿಯೋಜನೆ ಮಾಡಲು ಸಮ್ಮತಿಸಲಾಯಿತು. ಮ್ಯಾನ್ ಹ್ಯಾಟನ್ ಕೋರ್ಟ್ ನ ಬ್ಯಾಂಕ್ರಪ್ಟಸಿ ನ್ಯಾಯಮೂರ್ತಿ ಜೇಮ್ಸ್ ಪೆಕ್ ಸುಮಾರು 7 ಗಂಟೆಗಳ ಕಾಲ ಇದರ ಮೇಲಿನ ವಾದ-ವಿವಾದಗಳ ಆಲಿಸಿ."ನಾನು ಈ ವ್ಯಾಪಾರದ ವಹಿವಾಟಿನ ಅಂಶವನ್ನು ಪರಿಗಣಿಸಿದ್ದೇನೆ,ಅಲ್ಲದೇ ಇದೊಂದೇ ಅಂಶ ತೀರ್ಪಿಗಾಗಿ ಲಭ್ಯವಿದೆ."ಎಂದು ತಮ್ಮ ನಿರ್ಧಾರ ಪ್ರಕಟಿಸಿದರು. ಲೆಹ್ಮನ್ ಬ್ರದರ್ಸ್ ಇಲ್ಲಿ ಬಲಿಪಶುವಾಗಬೇಕಾಯಿತು,ಕ್ರೆಡಿಟ್ ಮಾರುಕಟ್ಟೆಗಳ ಸುನಾಮಿಗೆ ಸಿಲುಕಿ ಅದು ತನ್ನ ಭಾಗವನ್ನು ತ್ಯಾಗ ಮಾಡಬೇಕಾದ ಪ್ರಸಂಗ ಎದುರಾಯಿತು. ಇದೊಂದು ತುಂಬಾ ಮನಮುಟ್ಟುವ ದಿವಾಳಿತನದ ಮಹತ್ವದ ವಾದ-ವಿವಾದದ ಪ್ರಸಂಗವಾಗಿತ್ತೆಂದು ತಾನು ತಿಳಿದಿದ್ದೇನೆ,ಎಂದು ನ್ಯಾಯಮೂರ್ತಿಗಳು ಉದ್ಘರಿಸಿದರು. ಈ ಪ್ರಕರಣವು ಮುಂದಿನವುಗಳಿಗೆ ಮಾದರಿ ಉದಾಹರಣೆಯಾಗಬಾರದು. ಇಂತಹದೇ ತುರ್ತು ಸ್ಥಿತಿಯನ್ನು ಭವಿಷ್ಯದಲ್ಲಿ ಊಹಿಸಲಿಕ್ಕೂ ಆಗದು."[೧೯]
ಲುಕ್ ಡೆಸ್ಪಿನ್ಸ್ ನ ಕ್ರೆಡಿಟರ್ಸ್ ಸಮಿತಿಯ ಅಭಿಪ್ರಾಯದಂತೆ:"ಯಾವುದೇ ಪರ್ಯಾವಿಲ್ಲ ಎನ್ನುವುದೊಂದೇ ಕಾರಣವನ್ನು ಪರಿಗಣಿಸಿ ತಾವು ಆಕ್ಷೇಪಣೆ ಮಾಡುತ್ತಿಲ್ಲ;ಎಂದಾಗಿತ್ತು. ನಾವು ಈ ವಹಿವಾಟನ್ನು ಬೆಂಬಲಿಸಲಾಗದು,ಯಾಕೆಂದರೆ ಇದರ ವಿಮರ್ಶೆ ಮಾಡಲು ನಮಗೆ ವೇಳೆಯಿಲ್ಲ."[ಸೂಕ್ತ ಉಲ್ಲೇಖನ ಬೇಕು] ಪರಿಷ್ಕೃತ ಒಪ್ಪಂದದಲ್ಲಿನ ತಿದ್ದುಪಡಿ ಮೂಲಕ ಬಾರ್ಕ್ಲೆಯ್ಸ್ ಒಟ್ಟು $ 47.4 ಶತಕೋಟಿ ಮೌಲ್ಯದ ಸೆಕ್ಯುರಿಟೀಸ್ ಗಳನ್ನು ತನ್ನ ಸುಪರ್ದಿಗೆ ಪಡೆಯಿತು.ಅದರಂತೆ $ 45.5 ಶತಕೋಟಿಯಷ್ಟು ವ್ಯಾಪಾರಿ ವಹಿವಾಟಿನ ಜವಾಬ್ದಾರಿಯನ್ನೂ ಹೊಂದಿತು. ಲೆಹ್ಮನ್ ಗಳ ಅಧಿಕಾರ ವಹಿಸಿದ ವೆಲ್ ಗೊಟ್ಶಲ್ ಅಂಡ್ ಮಾಂಗೆಸ್ ನ ಆಟೊರ್ನಿ ಹಾರ್ವೆಯ್ ಆರ್ ಮಿಲ್ಲರ್ ಹೇಳುವಂತೆ "ರಿಯಲ್ ಎಸ್ಟೇಟ್ ವಿಭಾಗದ ಖರೀದಿ ಮೌಲ್ಯವು $ 1.29 ಶತಕೋಟಿಯಾಗಿದ್ದರೆ ಇದರಲ್ಲಿ ಲೆಹ್ಮನ್ ನ ನ್ಯುಯಾರ್ಕ್ ಪ್ರಧಾನ ಕಚೇರಿಯ $960 ಶತಕೋಟಿ ಮೊತ್ತವನ್ನೊಳಗೊಂಡಿದೆ.ಅದಲ್ಲದೇ ನಿವ್ ಜರ್ಸಿಯ ಎರಡು ಡಾಟಾ ಸೆಂಟರಿಗಾಗಿ $ 330 ಶತಕೋಟಿ ಎಂದು ನಿಗದಿಯಾಗಿದೆ. ಲೆಹ್ಮನ್ ನ ಮೂಲ ಅಂದಾಜು ಅದರ ಪ್ರಧಾನ ಕೇಂದ್ರ ಕಚೇರಿ ಪ್ರಕಾರ $ 1.02 ಶತಕೋಟಿ ಆಗಿತ್ತು.ಆದರೆ CB ರಿಚರ್ಡ್ ಎಲ್ಲೆಸ್ ನ ಆ ವಾರದ ಅಂದಾಜು $900 ದಶಲಕ್ಷಾಗಿತ್ತು.[ಸೂಕ್ತ ಉಲ್ಲೇಖನ ಬೇಕು] ಮುಂದೆ ಬಾರ್ಕ್ಲೆಯ್ಸ್ ಲೆಹ್ಮನ್ ನ ಈಗಲ್ ಎನರ್ಜಿ ಘಟಕವನ್ನು ಸ್ವಾಧೀನಪಡಿಸಿಕೊಳ್ಳಲಿಲ್ಲ.ಆದರೆ ಲೆಹ್ಮನ್ ಬ್ರದರ್ಸ್ ಕೆನಡಾ ಇಂಕಾ,ಲೆಹ್ಮನ್ ಬ್ರದರ್ಸ್ ಸುದಾಮೆರಿಕಾ,ಲೆಹ್ಮನ್ ಬ್ರದರ್ಸ್ ಉರುಗ್ವೆ ಮತ್ತು ಅದರ ಖಾಸಗಿ ಬಂಡವಾಳ ಹೂಡಿಕೆ ಮ್ಯಾನೇಜ್ ಮೆಂಟ್ ಬಿಜೆನೆಸ್ ನ್ನು ಅದರ ಅಧಿಕ ಉತ್ತಮ ಫಲಿತಾಂಶಗಳಿಗಾಗಿ ಪಡೆಯಲು ಸಿದ್ದವಾಯಿತು. ಅಂತಿಮವಾಗಿ ಲೆಹ್ಮನ್ ಸೆಕ್ಯುರಿಟೀಸ್ ನಲ್ಲಿರುವ ಲೆಹ್ಮನ್ ಬ್ರದರ್ಸ್ ಇಂಕಾದಲ್ಲಿರುವ ಆಸ್ತಿಯ $20 ಶತಕೋಟಿಯನ್ನು ಬಾರ್ಕ್ಲೆಯ್ಸ್ ಗೆ ವರ್ಗಾಯಿಸಲಿಲ್ಲ.[೨೦] ಬಾರ್ಕ್ಲೆಯ್ಸ್ ಒಟ್ಟು $ 2.5 ಶತಕೋಟಿಯಷ್ಟನ್ನು ಬೇರ್ಪಡುವುದಕ್ಕಾಗಿ ವಿಶೇಷ ರೀತಿಯಲ್ಲಿ ಸಾಲದ ಹೊರೆಯನ್ನು ಹೊತ್ತಿತು.ಕೆಲವು ಲೆಹ್ಮನ್ ನೌಕರರನ್ನು 90 ದಿನಗಳ ಮೇಲೆ ಇಟ್ಟುಕೊಳ್ಳುವ ಬಗ್ಗೆ ತನ್ನ ಇಚ್ಚೆಯನ್ನು ವ್ಯಕ್ತಪಡಿಸಲಿಲ್ಲ.[೨೧][೨೨]
ನೊಮುರಾ ಹೊಲ್ಡಿಂಗ್ಸ್,ಇಂಕಾ.ಲೆಹ್ಮನ್ ಬ್ರದರ್ಸ್ ನ ಉಪಶಾಖೆಗಳನ್ನು ತೆಗೆದುಕೊಳ್ಳಲು ಒಪ್ಪಿರುವುದಾಗೆ ಸೆಪ್ಟೆಂಬರ್ 22,2008 ರಲ್ಲಿ ಘೋಷಿಸಿತು.ಲೆಹ್ಮನ್ ಬ್ರದರ್ಸ್ ನ ಫ್ರ್ಯಾಂಚೈಸ್ ಗಳಾದ ಏಶಿಯಾ ಪ್ಯಾಸಿಫಿಕ್ ಪ್ರದೇಶ ಮತ್ತು ಅದರಲ್ಲಿನ ಜಪಾನ್,ಹಾಂಗ್ ಕಾಂಗ್ ಮತ್ತು ಆಸ್ಟ್ರೇಲಿಯಾಗಳಲ್ಲಿನ ವಹಿವಾಟು ಪಡೆದುಕೊಂಡಿತು.[೨೩] ಮರುದಿನವೇ ನೊಮುರಾವು ಲೆಹ್ಮನ್ ಬ್ರದರ್ಸ್ ನ ಯುರೊಪ್ ಮತ್ತು ಮಧ್ಯ ಪೂರ್ವದ ಪ್ರದೇಶದಲ್ಲಿನ ಇನ್ವೆಸ್ಟ್ ಮೆಂಟ್ ಬ್ಯಾಂಕಿಂಗ್ ಅಮ್ತ್ತು ಈಕ್ವಿಟಿ ವಹಿವಾಟುಗಳನ್ನು ತೆಗೆದುಕೊಳ್ಳಲು ಉದ್ದೇಶಿಸಲಾಗಿದೆ ಎಂದು ಪ್ರಕಟಿಸಿತು. ಕೆಲವು ವಾರಗಳ ತರುವಾಯ ಈ ವಹಿವಾಟಿನ ಎಲ್ಲಾ ಕರಾರುಗಳನ್ನು ಒಪ್ಪಿ,ಇದು ಸೋಮವಾರ,13 ಅಕ್ಟೋಬರ್ ನಂದು ಕಾನೂನುಬದ್ದವಾಗಿ ಜಾರಿಯಾಯಿತು.[೨೪] ಸುಮಾರು 2007 ರಲ್ಲಿ US ನಲ್ಲಿ ಆಸ್ತಿತ್ವವಿಲ್ಲದ ಲೆಹ್ಮನ್ ಬ್ರದರ್ಸ್ ನ ಅಂಗಸಂಸ್ಥೆಗಳು ಜಾಗತಿಕವಾಗಿ 50% ಆದಾಯ ತರುವಲ್ಲಿ ಸಮರ್ಥವಾಗಿದ್ದವು.[೨೫]
ದಿವಾಳಿತನ ದಾಖಲಾದ ನಂತರದ ಪರಿಣಾಮ
ಬದಲಾಯಿಸಿಡೊವ್ ಜೊನ್ಸ್ ಅತ್ಯಂತ ಕಡಿಮೆ ಅಂಚಿನಲ್ಲೇ 500 ಅಂಶಗಳಲ್ಲಿ (−4.4%)ಸೆಪ್ಟೆಂಬರ್ 15,2008 ರಲ್ಲಿ ಮುಚ್ಚಿ ಹಾಕಿತು.ಅದು ಒಂದೇ ದಿನದಲ್ಲಾದ ಅತಿ ದೊಡ್ಡ ಅವಧಿಯ ವ್ಯತ್ಯಾಸ ಎನಿಸಿತು.ಆ ದಿನಗಳ ತರುವಾಯದ ಶೇರು ಪೇಟೆಯಲ್ಲಿನ ವ್ಯತ್ಯಾಸವು ತೀವ್ರಗತಿಯಲ್ಲಿ ಇಳಿಕೆಯಾಯಿತು.ಅದಕ್ಕೆ ಸೆಪ್ಟೆಂಬರ್ 11,2001 ರ ದಾಳಿಯೂ ಕಾರಣವಾಯಿತು.[೨೬] (ಇದೇ ರೀತಿಯಾದ ಇಳಿಮುಖತೆಯು ಬರಬರುತ್ತಾ ಇನ್ನೂ ಕೆಳಕ್ಕಿಳಿಯಿತು.ಸೆಪ್ಟೆಂಬರ್ 29,2008 ರಲ್ಲಿ ಅದು −7.0% ಕ್ಕೇರಿತ್ತು.)
ಲೆಹ್ಮನ್ ನ ದಿವಾಳಿತನವು ವಾಣಿಜ್ಯ ವಲಯದ ರಿಯಲ್ ಎಸ್ಟೇಟ್ ವಹಿವಾಟಿನಲ್ಲಿ ಸವಕಳಿ ಪರಿಣಾಮವನ್ನುಂಟು ಮಾಡಿತು. ಲೆಹ್ಮನ್ ನ $4.3 ಶತಕೋಟಿಯಷ್ಟು ಅಡಮಾನದ ಸೆಕ್ಯುರಿಟೀಸ್ ಮಾರಾಟವು ವಾಣಿಜ್ಯ ಅಡಮಾನ-ಹಿನ್ನಲೆಯ ಸೆಕ್ಯುರಿಟೀಸ್(CMBS)ವಲಯದಲ್ಲಿ ಸಂಚಲನ ಮೂಡಿಸಿತಲ್ಲದೇ ಮಾರುಕಟ್ಟೆಯಲ್ಲಿ ಇದು ಇಳಿಕೆ ಕಂಡಿತು. ವಾಣಿಜ್ಯ ಆಸ್ತಿ ವಹಿವಾಟಿನಲ್ಲಿನ ಹೆಚ್ಚುವರಿ ಸೆಕ್ಯುರಿಟೀಸ್ ಮಾರಾಟಕ್ಕೆ ಒತ್ತಡವನ್ನು ಲೆಹ್ಮನ್ ಎದುರಿಸಿತು.ಯಾಕೆಂದರೆ ಲೆಹ್ಮನ್ ಈಗಾಗಲೇ ತನ್ನ ಆಸ್ತಿಗಳನ್ನು ಮಾರಾಟ ಮಾಡುವ ಹಾದಿಯಲ್ಲಿತ್ತು. ಅಪಾರ್ಟ್ ಮೆಂಟ್-ಕಟ್ಟಡಗಳ ವಲಯದಲ್ಲಿನ ಬಂಡವಾಳ ಹೂಡಿಕೆದಾರರು ಸಹ ಮಾರಾಟದ ಒತ್ತಡವನ್ನು ಅನುಭವಿಸಿದರು.ಯಾಕೆಂದರೆ ಲೆಹ್ಮನ್ ಅದರ ಸಾಲದ ಹೊಣೆಗಾರಿಕೆಗಳು ಶೇರು-ಈಕ್ವಿಟಿ ಸುಮಾರು $22 ಶತಕೋಟಿಯನ್ನು ಅದರ ಆರ್ಕ್ ಸ್ಟೊನ್ ಇದು ಯುನೈಟೆಡ್ ಸ್ಟೇಟ್ಸ್ ನಲ್ಲಿನ ಮೂರನೆಯ ದೊಡ್ಡ ರಿಯಲ್ ಎಸ್ಟೇಟ್ ಇನ್ವೆಸ್ಟ್ ಮೆಂಟ್ ಟ್ರಸ್ಟ್ (REIT)ಸಂಸ್ಥೆಯಲ್ಲಿ ಅಡಮಾನವಾಗಿಸಿತ್ತು. ಯುನೈಟೆಡ್ ಸ್ಟೇಟ್ಸ್ ನಲ್ಲಿನ ಪಮುಖ ಮೆಟ್ರೊ ಪ್ರದೇಶದಲ್ಲಿನ ಗೃಹವಸತಿಗಳ ಅಪಾರ್ಟ್ ಮೆಂಟ್ ಕಟ್ಟಡಗಳ ಒಡೆತನ ಮತ್ತು ಆಡಳಿತದ ಅಗ್ರ ವಹಿವಾಟನ್ನು ಆರ್ಕ್ ಸ್ಟೊನ್ ತನ್ನ ಕಾರ್ಯವನ್ನಾಗಿಸಿತ್ತು. ಆದರೆ UBSನಲ್ಲಿ ರಿಯಲ್ ಎಸ್ಟೇಟ್ ವಿಶ್ಲೇಷಕ ಜೆಫ್ರಿ ಸ್ಪೆಕ್ಟರ್ ಹೇಳುವಂತೆ "ಮಾರುಕಟ್ಟೆಯಲ್ಲಿ ಅಪಾರ್ಟ್ ಮೆಂಟ್ಸ್ ಗಳ ಬಗ್ಗೆ ಸ್ಪರ್ಧಿಸಬೇಕಾದರೆ ಆರ್ಕ್ ಸ್ಟೊನ್ ನ ಮಾರಾಟ ಬೆಲೆಗಳಲ್ಲದೇ ಅದು ಲೆಹ್ಮನ್ ನ ಮಾರಾಟದ ಭರಾಟೆಯಲ್ಲಿ ಉಳಿದವುಗಳ ಧ್ವನಿ ಕೇಳಿಸುತ್ತಿಲ್ಲ,ಎಂದಿದ್ದಾರೆ.ಇವುಗಳ ಮಾರಾಟದ ಸುಗ್ಗಿಯಲ್ಲಿ ನಿಜವಾದ ಖರೀದಿದಾರರಿಗೆ ಮುಂದೆ ಸಾಗದೆ ಪ್ರಶ್ನೆಯ ತೊಡಕು ಉಂಟಾಗಿದೆ" ಎಂಬುದು ಹಲವರ ವಾದ.[೨೭]
ಹಲವಾರು ಹಣ ನಿಧಿಗಳು ಮತ್ತು ಸಾಂಸ್ಥಿಕ ನಗದು ನಿಧಿಗಳು ಲೆಹ್ಮನ್ ನೊಂದಿಗೆ ತೆರೆದುಕೊಳ್ಳುವ ಇದನ್ನು ದಿ ಬ್ಯಾಂಕ್ ಆಫ್ ನ್ಯುಯಾರ್ಕ್ ಮೆಲ್ಲನ್ ಮತ್ತು ಪ್ರಾಥಮಿಕ ರಿಜರ್ವ್ ಫಂಡ್ ,ಹಣಕಾಸು ಮಾರುಕಟ್ಟೆ ನಿಧಿ,ಇವುಗಳೆಲ್ಲ ಪ್ರತಿ ಶೇರಿಗೆ $1 ಗಿಂತ ಕೆಳಕ್ಕಿಳಿಯಲು ಆರಂಭಿಸಿದವು.ಇದನ್ನೇ ಬ್ರೆಕಿಂಗ್ ದಿ ಬಕ್ ಹಣದ ವಿಚ್ಛೇದಕ ಎಂದೂ ಕರೆಯಲಾಯಿತು.ಇದಕ್ಕೆ ಲೆಹ್ಮನ್ ನಲ್ಲಿನ ಅವುಗಳ ಹೊಲ್ಡಿಂಗ್ ಕಾರಣವಾಯಿತು. ಒಂದು ಹಂತದಲ್ಲಿ ಲೆಹ್ಮನ್ ನ ಆಸ್ತಿಗಳನ್ನು ಪ್ರತ್ಯೇಕ ರಚನೆಯಲ್ಲಿ ದೂರ ಇಡಲಾಯಿತೆಂದು ದಿ ಬ್ಯಾಂಕ್ ಆಫ್ ನ್ಯುಯಾರ್ಕ್ ಮೆಲ್ಲನ್ ಹೇಳಿಕೆಯೊಂದರಲ್ಲಿ ತಿಳಿಸಿತು. ಅದು ಹೇಳುವ ಪ್ರಕಾರ ಅದರ ನಿಧಿಯಿಂದ ಒಟ್ಟು ಆಸ್ತಿಗಳು 1.13% ರಷ್ಟಿವೆ. ಆದರೆ ಪ್ರೈಮರಿ ರಿಜರ್ವ್ ಫಂಡ್ ನಲ್ಲಿನ ಇಳಿಕೆಯು ಮೊದಲ ಬಾರಿಗೆ 1994 ರಲ್ಲಿ ಕಂಡು ಬಂದಿತು.ಆಗ ಹಣಕಾಸು ಮಾರುಕಟ್ಟೆಯಲ್ಲಿ ಪ್ರತಿ ಶೇರು ಬೆಲೆಯು $1 ಕ್ಕಿಂತ ಕೆಳಕ್ಕಿಳಿಯಿತು.
ಕೆನಡಾದ ಗ್ರೇಟ್-ವೆಸ್ಟ್ ಲೈಫ್ಕೊ ದ ಘಟಕವಾದ ಪುಟ್ನಮ್ ಇನ್ವೆಸ್ಟ್ ಮೆಂಟ್ಸ್ ತನ್ನ $12.3 ಶತಕೋಟಿಯ ಹಣಕಾಸು ನಿಧಿಯನ್ನು ಮುಚ್ಚಿಹಾಕಿತು."ಯಾಕೆಂದರೆ ಅದು ವಿಮೋಚನಾ ಕ್ರಮದಡಿ ಹಲವು ತೊಂದರೆಗಳನ್ನು ಅನುಭವಿಸಿತು.ಈ ಒತ್ತಡ"ದಿಂದಾಗಿ ಅದು ಸೆಪ್ಟೆಂಬರ್ 17,2008 ರಲ್ಲಿ ಈ ನಿರ್ಧಾರಕ್ಕೆ ಬಂತು. ಎವರ್ ಗ್ರೀನ್ ಇನ್ವೆಸ್ಟ್ ಮೆಂಟ್ಸ್ ಹೇಳುವ ಪ್ರಕಾರ ಅದರ ಪೋಷಕ ಕಂಪನಿ ವಾಚೊವಾ ಕಾರ್ಪೊರೇಶನ್ ತನ್ನ ಮೂರು "ಬೆಂಬಲ"ದ ಎವರ್ ಗ್ರೀನ್ ಹಣಕಾಸು-ಮಾರುಕಟ್ಟೆ ನಿಧಿಗಳಲ್ಲಿ ತನ್ನ ಶೇರುಗಳ ಬೆಲೆ ಬಿದ್ದು ಹೋಗದಂತೆ ಅದು ತಡೆಯಲು ಪ್ರಯತ್ನಿಸಿತು.[೨೮] ಈ ಕ್ರಮವು ಲೆಹ್ಮನ್ ನ $494 ದಶಲಕ್ಷ ಆಸ್ತಿಗಳ ರಕ್ಷಿಸಲು ನಿಧಿ ಹೆಚ್ಚಿಸಲಾಯಿತು.ಆದರೆ ಈ ಮೊತ್ತವನ್ನು ವಾಚೊವಿಯಾದ ಸಾಮರ್ಥ್ಯ ತಂದು ಕೊಡುತ್ತದೆಯೇ ಎಂಬ ಹೆದರಿಕೆಯೂ ಇತ್ತು.[೨೯]
ಇಂತಹ ಸುಮಾರು 100 ರಕ್ಷಣೋಪಾಯದ ನಿಧಿಗಳು ಲೆಹ್ಮನ್ ನಲ್ಲಿ ಅವರ ಪ್ರೈಮರ್ ಬ್ರೊಕರ್ ಮೇಲೆ ಅವಲಂಬಿಸಲಾಗಿತ್ತಲ್ಲದೇ ಇದನ್ನು ನೀಡುವ ಕಂಪನಿಗಳ ಮೇಲೆ ಬಹುಪಾಲು ಅವಲಂಬಿತವಾಗಿತ್ತು. ತಮ್ಮದೇ ಆದ ಸ್ವಂತದ ಸಾಲದ ಅವಶ್ಯಕತೆಗಳನ್ನು ಪೂರೈಸಲು ಲೆಹ್ಮನ್ ಬ್ರದರ್ಸ್ ಇಂಟರ್ ನ್ಯಾಶನಲ್ ಮತ್ತೆ ತನ್ನದನ್ನು ಮರು-ಒತ್ತೆ ಇಡುವ [೩೦] ಕ್ರಮ ಕೈಗೊಂಡಿತು.ತಮ್ಮ ರಕ್ಷಣೋಪಾಯದ ನಿಧಿಗಳು ಅದರ ಗ್ರಾಹಕರಿಗೆ ತಮ್ಮ ಪ್ರೈಮ್ ಬ್ರಿಕರೇಜ್ ಗೆ ಅನುಕೂಲ ಮಾಡಲು ಈ ಕ್ರಮ ಅನಿವಾರ್ಯವೂ ಆಯಿತು. ಲೆಹ್ಮನ್ ಬ್ರದರ್ಸ್ ಇಂಟರ್ ನ್ಯಾಶನಲ್ ತನ್ನ ದಿವಾಳಿತನದ ಅರ್ಜಿಯನ್ನು ಚಾಪ್ಟರ್ 11 ರಡಿ ನೀಡುವ ಸಂದರ್ಭದಲ್ಲಿ ಗ್ರಾಹಕರ ಸುಮಾರು 40 ದಶಕೋಟಿ ಡಾಲರ್ ನಷ್ಟು ಆಸ್ತಿ ಹೊಂದಿತ್ತು. ಇದರಲ್ಲಿ, 22 ಶತಕೋಟಿಯನ್ನು ಮರು-ಹೈಪೊಥಿಕೇಶನ್ ಗಾಗಿ ಬಳಸಲಾಯಿತು.[೩೧] ಯಾವಾಗ ಆಡಳಿತಗಾರರು ಲಂಡನ್ ವಹಿವಾಟಿ ಮತ್ತು U.S.ಹೊಲ್ಡಿಂಗ್ಸ್ ಕಂಪನಿಗಳು ದಿವಾಳಿತನದ ಅರ್ಜಿ ಹಾಕಿದಾಗ ಆ ರಕ್ಷಣೋಪಾಯದ ನಿಧಿಗಳು ಲೆಹ್ಮನ್ ನಲ್ಲಿ ಸ್ಥಗಿತವಾದವು. ಇದರಿಂದಾಗಿ ಈ ನಿಧಿಗಳು ಹಂಚಿಕೆಯಾಗಿ ದೊಡ್ಡ ಮಟ್ಟದ ನಗದು ಶೇಖರಣೆ ಮೇಲೆ ಅವಲಂಬಿತವಾಗಿ ಮುಂದಿನ ಪ್ರಗತಿಗೆ ಪೂರಕವಾಗಬೇಕಾಗುತ್ತದೆ.[೩೨] ಇದು ಮತ್ತೆ ಮಾರುಕಟ್ಟೆಯ ಸ್ಥಾನಪಲ್ಲಟತೆ ತೋರಿ,ಒಟ್ಟಾರೆ 737 ದಶಕೋಟಿ ಅಂದಾಜು ಇಳಿಕೆಯ ಅಪಾಯಕಾರಿ ಪರಿಸ್ಥಿತಿಯನ್ನು ತಂದಿತ್ತು,ಸದ್ಯ ಚಾಲ್ತಿಯಲ್ಲಿರುವ ಸೆಕ್ಯುರಿಟಿ ಮಾರುಕಟ್ಟೆಯ ಲೆಂಡಿಂಗ್ ಅಂದರೆ ಸಾಲದ ವಿಭಾಗದಲ್ಲಿ ಇಳಿಮುಖವನ್ನುಂಟು ಮಾಡಿತ್ತು.[೩೩]
ಜಪಾನ್ ನಲ್ಲಿಯೂ ಕೂಡಾ ಬ್ಯಾಂಕ್ ಗಳು ಮತ್ತು ವಿಮಾ ಕಂಪನಿಗಳು ಸೇರಿ 249 ದಶಕೋಟಿ ಯೆನ್ ($2.4 ಶತಕೋಟಿ)ಯಷ್ಟನ್ನು ಲೆಹ್ಮನ್ ನ ಕುಸಿತದಿಂದ ವಹಿವಾಟಿನಲ್ಲಿ ಕೊರತೆ-ಹಾನಿ ತಂದುಕೊಂಡವು. ಮಿಜುಹೊ ಟ್ರಸ್ಟ್ ಅಂಡ್ ಬ್ಯಾಂಕಿಂಗ್ ಕಂ.ತನ್ನ ಲಾಭದ ಅಂದಾಜು ಪ್ರಮಾಣವನ್ನು ಅರ್ಧಕ್ಕಿಳಿಸಿತು.ಸುಮಾರು 11.8 ಶತಕೋಟಿ ಯೆನ್ ನಷ್ಟು ಲೆಹ್ಮನ್ ಗೆ ಸಂಬಂಧಿಸಿದ ಬಾಂಡ್ ಗಳು ಮತ್ತು ಸಾಲಗಳಲ್ಲಿ ಅದು ಕಳೆದುಕೊಂಡಿತು. ಬ್ಯಾಂಕ್ ಆಫ್ ಜಪಾನ್ ನ ಗವರ್ನರ್ ಮಸಾಕಿ ಶಿರಾಕಾವಾ ಪ್ರಕಾರ"ಬಹಳಷ್ಟು ಸಾಲವನ್ನು ಲೆಹ್ಮನ್ ಬ್ರದರ್ಸ್ ಗೆ ನೀಡಿದ್ದು ಜಪಾನಿನ ದೊಡ್ಡ ಬ್ಯಾಂಕುಗಳು,ಅವುಗಳು ತಮ್ಮ ನಷ್ಟವನ್ನು ಲಾಭದ ಮೂಲಕ ಹೊಂದಾಣಿಕೆ ಮಾಡಿಕೊಳ್ಳುವ ಸಾಧ್ಯತೆ ಇದೆ."ಸದ್ಯದ ಬೆಳವಣಿಗೆಗಳು ಜಪಾನಿನ ಬ್ಯಾಂಕಿಂಗ್ ವಲಯಕ್ಕೆ,ಹಣಕಾಸು ಸ್ಥಿತಿಗೆ ಅಂತಹ ಆತಂಕವನ್ನುಂಟು ಮಾಡಿಲ್ಲ."ಎಂದಿದ್ದಾರೆ.[೩೪] ಈ ದಿವಾಳಿತನದ ಕಾರ್ಯಚಟುವಟಿಕೆಗಳ ನಡೆದ ಸಂದರ್ಭದಲ್ಲಿ ದಿ ರಾಯಲ್ ಬ್ಯಾಂಕ್ ಆಫ್ ಸ್ಕಾಟ್ ಲ್ಯಾಂಡ್ ಗ್ರುಪ್ ನ ವಕೀಲರ ಪ್ರಕಾರ ಕಂಪನಿಯು ಸುಮಾರು $1.5 ನಿಂದ $1.ಶತಕೋಟಿ ಮೊತ್ತವನ್ನು ಋಣಭಾರವನ್ನಾಗಿ ಲೆಹ್ಮನ್ ಉಳಿಸಿಕೊಂಡಿದೆ,ಲೆಹ್ಮನ್ ನ ಅಂಗಸಂಸ್ಥೆಗಳಾದ ಮಾರ್ಟಿನ್ ಬೆಯೆನೆಯನ್ ಸ್ಟಾಕ್ ನಂತಹವುಗಳ ವಹಿವಾಟುಗಳ ಹಾನಿಯೇ ಇದಕ್ಕೆ ಕಾರಣವಾಗಿದೆ.[೩೫]
ಇದೇ ಸಂದರ್ಭದಲ್ಲಿ ಫ್ರೆಡ್ಡಿ ಮ್ಯಾಕ್ ಫೈನಾನ್ಸಿಯರ್ ಗೆ ಲೆಹ್ಮನ್ ಮಾಧ್ಯಮವಾಗಿ ಭದ್ರತಾ ಠೇವಣಿ ಇಲ್ಲದೇ ಸೆಕ್ಯುರಿಟೀಸ್ ಗಳನ್ನು ಸಾಲವಾಗಿ ನೀಡಿದ್ದು ಅದು ಸೆಪ್ಟೆಂಬರ್ 15,2008 ರಲ್ಲಿ ನೀಡುವ ಅವಧಿಯನ್ನು ಪೂರ್ಣಗೊಳಿಸಿದೆ. ಫ್ರೆಡ್ಡಿ ಹೇಳುವ ಪ್ರಕಾರ ಅದು $1.2 ಶತಕೋಟಿಯ ಅಸಲು ಮೊತ್ತ ಮತ್ತು ಅದರ ಬಡ್ಡಿಯನ್ನು ಪಡೆದಿಲ್ಲ.ಇದರೊಂದಿಗೆ ಲೆಹ್ಮನ್ ನ ಪರವಾಗಿ $400 ದಶಲಕ್ಷದಷ್ಟು ಗೃಹಸಾಲಗಳನ್ನೂ ನೀಡಿದೆ,ಇದರ ಜೊತೆಯಲ್ಲಿಯೇ ಕೆಲವು ಸಾಲದ ಮರುಖರೀದಿಯನ್ನೂ ಅದು ತನ್ನೊಂದಿಗೆ ತೆಗೆದುಕೊಂಡಿತು. ಫ್ರೆಡ್ಡಿ ಹೇಳುವ ಪ್ರಕಾರ "ಈ ವಹಿವಾಟುಗಳಿಗೆ ಸಂಭಂಧಿಸಿದ ನಷ್ಟ ಮತ್ತು ಅದರ ಅಪಾಯವನ್ನು ಎಷ್ಟರಮಟ್ಟಿಗೆ ಸಹಿಸಿಕೊಳ್ಳುವುದೆಂಬ ವಿಷಯ ಅದಕ್ಕೇ ಗೊತ್ತಿಲ್ಲ".ಅದಲ್ಲದೇ "ನಿಜವಾದ ನಷ್ಟಗಳು ಅಂದಾಜಿಸಿದಕ್ಕಿಂತ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಅದು ಎಚ್ಚರಿಸಿದೆ." ಈಗಲೂ ಕೂಡಾ ಫ್ರೆಡ್ಡಿ ಲೆಹ್ಮನ್ ನೊಂದಿಗಿನ ಇತರ ವ್ಯವಹಾರಗಳ ಸಂಭಂಧಗಳನ್ನು ಮರುಪರಿಶೀಲಿಸಿ ಲೆಕ್ಕ ಹಾಕುತ್ತಿದೆ.ಇನ್ನುಳಿದ ವಹಿವಾಟುಗಳ ಬಗ್ಗೆ ನಿಗಾ ವಹಿಸುತ್ತಿದೆ.[೩೬]
ಕನ್ ಸ್ಟೆಲ್ಲೇಶನ್ ಎನರ್ಜಿ ಕೂಡಾ ಲೆಹ್ಮನ್ ನೊಂದಿಗಿನ ವ್ಯವಹಾರದಿಂದಾಗಿ ತನ್ನ ಶೇರುಗಳ ವಹಿವಾಟಿನಿಂದ ಬೆಲೆ ಕಳೆದುಕೊಂಡಿತು.ಅದರ ದಾಸ್ತಾನು ಮಟ್ಟ 56% ಕ್ಕಿಳಿಯಿತು.ಅದರ ವಹಿವಾಟು ಕಡಿಮೆ ಮಟ್ಟದಲ್ಲಿ ಅಂದರೆ $67.87 ದರದೊಂದಿಗೆ ಆರಂಭವಾಗಿತ್ತು. ದೊಡ್ಡ ಪ್ರಮಾಣದ ಶೇರುಗಳಲ್ಲಿನ ಕುಸಿತವು ನ್ಯುಯಾರ್ಕ್ ಸ್ಟಾಕ್ ಎಕ್ಸ್ಚೇಂಜ್ ನ ಖಾತ್ರಿ ವ್ಯವಹಾರಕ್ಕೆ ಸ್ಥಬ್ದತೆ ತಂದಿತು. ಅದರ ಮರುದಿನ ಸ್ಟಾಕ್ ನ ಶೇರು ವಹಿವಾಟು ಅತ್ಯಂತ ಕಡಿಮೆ ಅಂದರೆ $13 ಕ್ಕೆ ಸರಿಯಿತು.ಖಾತ್ರಿಪಡಿಸುವಿಕೆ ವ್ಯವಹಾರವು ಇದಕ್ಕೆ ಮೊರ್ಗಮ್ ಸ್ಟಾಂಡ್ಲಿ ಮತ್ತುUBSಗಳ ಸಲಹೆಯನ್ನು ಎರವಲಾಗಿ ಪಡೆದು ಪರಿಸ್ಥಿತಿಯ ಬಗ್ಗೆ ವಿಚಾರ-ವಿಮರ್ಶೆ ನಡೆಸಲಾಯಿತು.ಇದಕ್ಕಾಗಿ "ವಿಧಿಬದ್ದವಾದ ಪರ್ಯಾಯಗಳನ್ನು"ಸೂಚಿಸುವ ಮೂಲಕ ಖರೀದಿಯ ವಹಿವಾಟನ್ನು ನಿಲ್ಲಿಸಲೂ ನಿರ್ಧರಿಸಲಾಯಿತು. ವದಂತಿಗಳ ಸಲಹೆ ಪ್ರಕಾರ ಫ್ರೆಂಚ್ ಪಾವರ್ ಕಂಪನಿಯು ಎಲೆಕ್ಟ್ರಾಸಿಟೆ ಡೆ ಫ್ರಾನ್ಸ್ ಕಂಪನಿಯನ್ನು ಖರೀದಿ ಮಾಡುವುದು ಅಥವಾ ತನ್ನ ಶೇರು ದಾಸ್ತಾನನ್ನು ಹೆಚ್ಚಿಸಲು ಮುಂದಾಗುವುದು ಇದರ ಸಲಹೆಯಾಗಿತ್ತು.ಖರೀದಿಯ ಪ್ರಕ್ರಿಯೆಗಾಗಿ ಒಪ್ಪಂದವನ್ನು ಭಾಗಶಃ ಮಿಡ್ ಅಮೆರಿಕನ್ ಎನರ್ಜಿ,ಇದು ಬೆರ್ಕಶೆಯರ್ ಹಾಥ್ ವೆ ದ ಭಾಗವಾಗಿತ್ತು. (ಇದರ ಮುಖ್ಯಸ್ಥ ಬಿಲಿಯಾನರ್ ವಾರೆನ್ ಬಫೆಟ್ ಆಗಿದ್ದಾರೆ.)[೩೭][೩೮][೩೯]
ಫೆಡೆರಲ್ ಅಗ್ರಿಕಲ್ಚರಲ್ ಮಾರ್ಟಗೇಜ್ ಕಾರ್ಪೊರೇಶನ್ ಅಥವಾ ಫಾರ್ಮರ್ ಮ್ಯಾಕ್ ಕಂಪನಿಯು ಈ ಲೆಹ್ಮನ್ ನ ದಿವಾಳಿತನದಿಂದ ಅದು ಸುಮಾರು $48 ದಶಲಕ್ಷ ಲೆಹ್ಮನ್ ನ ಹೆಸರಿನ ಸಾಲವನ್ನು ಒತ್ತಾಯದ ಮನ್ನಾಕ್ಕೆ ಗುರಿಯಾಗಬೇಕಾಯಿತು. ಫಾರ್ಮೆರ್ ಮ್ಯಾಕ್ ಹೇಳುವಂತೆ ಅದು ತನ್ನ ಕನಿಷ್ಟ ಬಂಡವಾಳದ ಅಗತ್ಯಗಳೊಂದಿಗೆ ಸೆಪ್ಟೆಂಬರ್ ಅಂತ್ಯದೊಳಗೆ ರಾಜಿ ಮಾಡಿಕೊಳ್ಳದ ಪರಿಸ್ಥಿತಿ ಎದುರಿಸಬಹುದು.[೪೦]
ಹಾಂಗ್ ಕಾಂಗ್ ನಲ್ಲಿ ಸುಮಾರು 43,700 ಜನರು ನಗರದಲ್ಲಿನ 1}HK$ ಬ್ಯಾಂಕಿನಲ್ಲಿನ $15,7 ದಶಕೋಟಿಯಷ್ಟು ಲೆಹ್ಮನ್ ನ "ಖಾತ್ರಿಪಡಿಸಿದ ಮಿನಿ-ಬಾಂಡ್ಸ್ ಗಳಲ್ಲಿ ತೊಡಗಿಸಿದ್ದಾರೆ.[೪೧][೪೨][೪೩] ಹಲವರು ಹೇಳುವ ಪ್ರಕಾರ ಬ್ಯಾಂಕ್ ಗಳು ಮತ್ತು ದಲ್ಲಾಳಿಗಳು ತಮ್ಮನ್ನು ದಾರಿ ತಪ್ಪಿಸಿ ತಪ್ಪು-ಮಾರಾಟದ ಸಲಹೆಯಂತೆ ಇದು ಕಡಿಮೆ ಅಪಾಯಕಾರಿನ ಎಂದು ನಂಬಿಸಿದ್ದಾರೆ,ಎಂದು ಹೇಳುತ್ತಾರೆ. ಸಾಮಾನ್ಯ ವಾಡಿಕೆಯಂತೆ ಬ್ಯಾಂಕರ್ಸ್ ಹೇಳುವ ಪ್ರಕಾರ ಲೆಹ್ಮನ್ಸ್ ಬ್ರದರ್ಸ ನ ಮಿನಿ-ಬಾಂಡ್ಸ್ ಗಳು ಕಡಿಮೆ ಅಪಾಯಕಾರಿ ಹೂಡಿಕೆಗಳಾಗಿವೆ.ಇದನ್ನು ವಾಲ್ ಮನ್ ಸ್ಟ್ರೀಟ್ ನಲ್ಲಿ ನಂಬಲಾಗಿದ್ದ ಸತ್ಯವಾಗಿತ್ತು. ಲೆಹ್ಮನ್ ಬ್ರದರ್ಸ್ ನ ಕುಸಿತದ ಕೆಲವೇ ತಿಂಗಳುಗಳ ಮುಂಚೆ,ಆಗ ಹೂಡಿಕೆಯ ದರಗಳೂ ಕೂಡಾ ತೃಪ್ತಿಕರವಾಗಿದ್ದವು. ಆದರೆ ಲೆಹ್ಮನ್ ಬ್ರದರ್ಸ್ ನ ತಪ್ಪು ಎಸಗಿದ ವಲಯವೆಂದರೆ ಅದರ ಒಟ್ಟಾರೆ ಸಂಭವನೀಯತೆಯನ್ನು ಅದು ನಿರೀಕ್ಷೆ ಮಾಡದಿರುವುದೇ ಆಗಿದೆ. ನಿಜವಾಗಿಯೂ ಹಲವು ಬ್ಯಾಂಕ್ ಗಳು ಸಾಲಗಳಿಗೆ ಮತ್ತು ಸಾಲದ ಸವಲತ್ತುಗಳಿಗೆ ಪೂರಕವಾಗಿ ಈ ಮಿನಿಬಾಂಡ್ಸ್ ಗಳನ್ನು ಒಪ್ಪಿಕೊಂಡಿದ್ದವು. ಮತ್ತೊಂದು HK$3 ಶತಕೋಟಿ ಯನ್ನು ಇದೇ ಮೂಲದ ಆದಾಯ ಬರುವಲ್ಲಿ ಹೂಡಿಕೆ ಮಾಡಲಾಗಿತ್ತು. ಆಗ ಹಾಂಗ್ ಕಾಂಗ್ ಬ್ಯಾಂಕ್ ತನ್ನ ಪ್ರಸ್ತುತ ಹೂಡಿಕೆಯನ್ನು ಮರಳಿ ಪಡೆಯಲು ಯತ್ನಿಸಿತು.ಇದು ಕೆಲವು ಠೇವಣಿದಾರರಿಗೆ ಭಾಗಶಃ ಆದಾಯ ತರಬಹುದಿತ್ತು.ಹಣ ಹೂಡಿದವರು ವರ್ಷಾಂತ್ಯದಲ್ಲಿ ಸ್ವಲ್ಪ ಲಾಭ ಪಡೆಯಬಹುದೆಂಬ ನಿರೀಕ್ಷೆಯೂ ಇತ್ತು.[೪೪] HK ದ ಮುಖ್ಯ ಕಾರ್ಯನಿರ್ವಾಹಕ ಡೊನಾಲ್ಡ್ ತಾಸಂಗ್ ಅವರು ಸರಕಾರದ ಮರು ಖರೀದಿಗೆ ಸ್ಥಳೀಯ ಬ್ಯಾಂಕುಗಳು ಕೂಡಲೇ ಸ್ಪಂದಿಸುವಂತೆ ಸೂಚನೆ ನೀಡಿದರು.ಈಗಾಗಲೇ ಮಾನಟರಿ ಆಥಾರಿಟಿ ಸುಮಾರು 16,000 ಅಧಿಕ ದೂರುಗಳನ್ನು ಸ್ವೀಕರಿಸಿತ್ತು.[೪೧][೪೩][೪೪] ಅಕ್ಟೋಬರ್ 17 ನಲ್ಲಿ ಹಾಂಗ್ ಕಾಂಗ್ ಅಸೊಶಿಯೇಸಿಶನ್ ಆಫ್ ಬ್ಯಾಂಕ್ಸ್ ಮುಖ್ಯಸ್ಥ ಹೆ ಗೌಂಗೆಬೆ ಯವರು ಈ ಬಾಂಡ್ಸ್ ಗಳನ್ನು ಮರುಖರೀದಿಗೆ ಒಪ್ಪಿದರು.ಸದ್ಯದ ಅದರ ಪದ್ದತಿಗನುಸಾರವಾಗಿ ಮಾರುಕಟ್ಟೆ ಮೌಲ್ಯದ ಅಂದಾಜು ಮಾಡಲಾಗಿತ್ತು.[೪೫] ಈ ಪ್ರಕರಣದಿಂದಾಗಿ ಬ್ಯಾಂಕಿಂಗ್ ಉದ್ಯಮದಲ್ಲಿ ತೀವ್ರತರವಾದ ಪರಿಣಾಮಗಳು ಉಂಟಾದವು.ಆಸ್ತಿ ವಹಿವಾಟಿನ ಆಡಳಿತದ ಹೂಡಿಕೆಗಳು ಮತ್ತು ಹೂಡಿಕೆದಾರರ ದಾರಿತಪ್ಪಿಸುವ ಇಂತಹ ಪ್ರವೃತ್ತಿಗಳಿಗೆ ಎಲ್ಲೆಲ್ಲೂ ಒಟ್ಟಾರೆಯಾಗಿ ನಿರಾಕರಣೆ ದೊರೆಯಲಾರಂಭಿಸಿತು. ಸಾರ್ವಜನಿಕರ ಒತ್ತಡದಿಂದಾಗು ಎಲ್ಲಾ ರಾಜಕೀಯ ವ್ಯಕ್ತಿಗಳು,ಪಕ್ಷಗಳು ಹೂಡಿಕೆದಾರರ ಬೆಂಬಲಿಸಲು ಆರಂಭಿಸಿದರು.ಅಲ್ಲದೇ ಬ್ಯಾಂಕಿಂಗ್ ಉದ್ಯಮದಲ್ಲಿ ನಡೆಯುತ್ತಿದ್ದ ಅಪನಂಬಿಕೆಯ ಅಲೆಯನ್ನು ನಿಲ್ಲಿಸಲಾಗಲಿಲ್ಲ.
ಈ ದಿವಾಳಿತನದ ಹಿಂದೆ 2008 ರ ಯುನೈಟೈಡ್ ಸ್ಟೇಟ್ಸ್ ಅಧ್ಯಕ್ಷೀಯ ಚುನಾವಣೆಯ ಪ್ರಭಾವಗಳನ್ನು ಅಲ್ಲಗಳೆಯಲಾಗದು.ಬರಾಕ್ ಒಬಾಮಾ ಅವರು ಜಾನ್ ಮೆಕೆನ್ ಅವರಿಗಿಂತ ನಾಗಾಲೋಟದ ಗಲ್ಲುಪಾ ಚುನಾವಣೆಯಲ್ಲಿ ಮುನ್ನಡೆ ಸಾಧಿಸಿದ್ದಾರೆಂದು ಗೊತ್ತಾದಾಗ ಈ ಬೆಳವಣಿಗೆ ಕಂಡು ಬಂದಿತು.ಇದನ್ನು ನೋಡಿದಾಗ ಇಲ್ಲಿ ಅವರು ಹಿಂದೆ ಬೀಳಲಾರರೆಂಬ ಖಾತ್ರಿಯೂ ಇತ್ತು.[dubious ]
ನ್ಯುಬರ್ಗರ್ ಬೆರ್ಮನ್
ಬದಲಾಯಿಸಿನ್ಯುಬರ್ಗರ್ ಬೆರ್ಮನ್ ಇಂಕಾ ತನ್ನ ಅಂಗಸಂಸ್ಥೆಗಳೊಂದಿಗೆ ಅದು ಪ್ರಾಥಮಿಕವಾಗಿ ನ್ಯುಬರ್ಗರ್ ಬೆರ್ಮನ್ LLC ಆಗಿ ಒಂದು ಇನ್ವೆಸ್ಟ್ ಮೆಂಟ್-ಸಲಹಾಕಾರ ಸಂಸ್ಥೆಯಾಗಿ 939 ರಲ್ಲಿ ಸ್ಥಾಪನೆಯಾಯಿತು.ರಾಯ್ ಆರ್.ನ್ಯುಬರ್ಗರ್ ಮತ್ತು ರಾಬರ್ಟ್ ಬರ್ಮೆನ್ ಅವರು ಹೈ-ನೆಟ್-ವರ್ದ್ ಇಂಡಿಜ್ವಲ್ಸ್ ಅಡಿ ವೈಯಕ್ತಿಕ ಹೂಡಿಕೆಯ ಒಟ್ಟಾರೆ ಖಾತೆಗಳನ್ನು ನೋಡಿಕೊಳ್ಳುತಿತ್ತು. ದಶಕದಲ್ಲಿ ಸಂಸ್ಥೆಯ ಪ್ರಗತಿಯು ಆಸ್ತಿ-ನಿರ್ವಹಣಾ ಆಡಳಿತದಲ್ಲಿ ಒಟ್ಟಾರೆ ತನ್ನ ಪ್ರತಿಬಿಂಬ ತೋರಿಸಿತು. ಅದು ಮೊದಲ ಬಾರಿಗೆ ಯುನೈಟೆಡ್ ಸ್ಟೇಟ್ಸ್ ನಲ್ಲಿ ನೊ-ಲೋಡ್ ಮುಚ್ಯುವಲ್ ಫಂಡ್ ಗಳನ್ನು ಪರಿಚಯಿಸಿತು.ದಿ ಗಾರ್ಡಿಯನ್ ಫಂಡ್ ಅಲ್ಲದೇ ಪಿಂಚಣಿ ಯೋಜನೆಗಳ ಆಸ್ತಿಗಳನ್ನು ನೋಡಿಕೊಳ್ಳಲು ಆರಂಭಿಸಿತು.ಇದರ ಜೊತೆಗೆ ಇನ್ನಿತರ ಸಂಸ್ಥೆಗಳನ್ನು ತನ್ನ ಆಡಳಿತದಡಿ ತರಲು ಯತ್ನಿಸಿತು. ಐತಿಹಾಸಿಕವಾಗಿ ಪರಿಚಿತ ಚಟುವಟಿಕೆಯಾದ ವ್ಯಾಲ್ಯು ಇನ್ವೆಸ್ಟಿಂಗ್ ಸ್ಟೈಲ್,ಅಂದರೆ ಮೌಲ್ಯ ಆಧಾರಿತ ಹೂಡಿಕೆಯ ಸೂತ್ರಗಳನ್ನು ಅಳವಡಿಸಿತು.ಅದು 1990 ರಲ್ಲಿ ತನ್ನ ಅಧಿಕ ಮೌಲ್ಯವರ್ಧನೆಯೊಂದಿಗೆ ಪ್ರಗತಿ ಆಧಾರಿತ ಹೂಡಿಕೆಯನ್ನು ಇಡೀ ಬಂಡವಾಳ ಹೂಡಿಕೆಯ ವಲಯದಲ್ಲಿ ಉತ್ತೇಜಿಸಿತು.ಅದೇ ತೆರನಾಗಿ ಹೊಸ ಹೂಡಿಕೆಯ ವರ್ಗಗಳನ್ನು ರಚಿಸಿತು.ಉದಾಹರಣೆಗಾಗಿ ಅಂತರರಾಷ್ಟ್ರೀಯ ರಿಯಲ್ ಎಸ್ಟೇಟ್ ಇನ್ವೆಸ್ಟ್ ಮೆಂಟ್ ಟ್ರಸ್ಟ್ಸ್ ಮತ್ತು ಅತ್ಯಧಿಕ ಆದಾಯದ ಹೈ ಈಲ್ಡ್ ಇನ್ವೆಸ್ಟ್ ಮೆಂಟ್ಸ್ ಗಳಲ್ಲಿ ಕೂಡಾ ತನ್ನ ಗಮನ ಹರಿಸಿತು. ಇದಕ್ಕೂ ಹೆಚ್ಚೆಂದರೆ ರಾಷ್ಟ್ರೀಯವಾಗಿ ಮತ್ತು ರಾಜ್ಯಗಳ ನಿಯಮಾವಳಿಗಳ ಟ್ರಸ್ಟ್ ಕಂಪನಿಗಳನ್ನು ಹುಟ್ಟು ಹಾಕಿತು.ಹೀಗೆ ಸಂಸ್ಥೆಯು ವಿಶ್ವಾಸ ಮತ್ತು ನಂಬಿಕೆಯ ಸೇವೆಗಳನ್ನು ನೀಡಲು ಆರಂಭಿಸಿತು. ಇಂದು ಈ ಸಂಸ್ಥೆಯು ಗರಿಷ್ಟ $130ಶತಕೋಟಿ ಮೌಲ್ಯದ ಆಸ್ತಿಗಳನ್ನು ತನ್ನ ಆಡಳಿತದಡಿ ಹೊಂದಿದೆ.
ಅಕ್ಟೋಬರ್ 1999 ರಲ್ಲಿ ಕಂಪನಿಯು ಆರಂಭಿಕ ಸಾರ್ವಜನಿಕ ಬಿಡುಗಡೆಯನ್ನು ಮಾಡಿ ನ್ಯುಯಾರ್ಕ್ ಸ್ಟಾಕ್ ಎಕ್ಸ್ಚೇಂಜ್ ನಲ್ಲಿ "NEU"ಎಂಬ ಸಂಕೇತದೊಂದಿಗೆ ತನ್ನ ಶೇರುಗಳಿಗೆ ಮಾರಾಟ ವೇದಿಕೆ ಒದಗಿಸಿತು. ಜುಲೈ 2003 ರಲ್ಲಿ ನಿವೃತ್ತ ನ್ಯುಬರ್ಗರ್ಸ್ ಅವರ 100 ನೆಯ ಹುಟ್ಟುಹಬ್ಬದಂದು ಅದು ತನ್ನ ವಿಲೀನವನ್ನು ಲೆಹ್ಮನ್ ಬ್ರದರ್ಸ್ ಹೊಲ್ಡಿಂಗ್ಸ್ ಇಂಕಾ.ದೊಂದಿಗೆ ಮಾಡಲು ಚರ್ಚೆ ನಡೆಸುತ್ತಿರುವುದಾಗಿ ಹೇಳಿತು.ಈ ಚರ್ಚೆಗಳು ಅಂತಿಮವಾಗಿ ಅಕ್ಟೋಬರ್ 31,2003ರಲ್ಲಿ ಸಂಸ್ಥೆಯನ್ನು ಲೆಹ್ಮನ್ ಅವರು ಅಂದಾಜು $2.63 ದಶಕೋಟಿ ನಗದು ಮತ್ತು ಸೆಕ್ಯುರಿಟೀಸ್ ನೀಡಿ ಖರೀದಿಸಿತು.
ನವೆಂಬರ್ 20,2006 ರಲ್ಲಿ ಲೆಹ್ಮನ್ ಪ್ರಕಟಿಸಿದಂತೆ ತನ್ನ ನ್ಯುಬರ್ಗರ್ ಬೆರ್ಮನ್ ಅಂಗಸಂಸ್ಥೆಯು ಎಚ್.ಎ.ಸ್ಕಫ್ ಅಂಡ್ ಕಂಪನಿಯನ್ನು ವಶಪಡಿಸಿಕೊಳ್ಳುತ್ತಿದೆ ಎಂದು ಹೇಳಿತು.ಇದು ಸಿರಿವಂತರ ಠೇವಣಿಗಳ ಮೇಲೆ ಕಣ್ಣಿಟ್ಟ ಹಣಕಾಸು-ನಿರ್ವಹಣಾ ಸಂಸ್ಥೆ. ಅದರ $2.5 ದಶಕೋಟಿ ಮೌಲ್ಯದ ಆಸ್ತಿಗಳು ನ್ಯುಬರ್ಗರ್ಸ್ ನ $50 ದಶಕೋಟಿಗೆ ಸೇರಿ ಹೈ-ನೆಟ್-ವರ್ತ್ ಗ್ರಾಹಕರ ಆಸ್ತಿಗಳು ಅದರ ಸುಪರ್ದಿಗೆ ಬರಲಿವೆ.[೪೬]
ದಿ ವಾಲ್ ಸ್ಟ್ರೀಟ್ ಜರ್ನಲ್ ನ ಸೆಪ್ಟೆಂಬರ್ 15,2008 ರಲ್ಲಿ ಬಂದ ಲೇಖನವೊಂದರಲ್ಲಿ ಲೆಹ್ಮನ್ ಬ್ರದರ್ಸ್ ಹೊಲ್ಡಿಂಗ್ಸ್ ಚಾಪ್ಟರ್ 11 ರಡಿ ದಿವಾಳಿತನದ ರಕ್ಷಣಾ ಪ್ರಕರಣ ದಾಖಲಿಸಿದೆ ಎಂದು ಪ್ರಕಟಿಸಿತು.ಲೆಹ್ಮನ್ ಬ್ರದರ್ಸ್ ನ ಅಧಿಕಾರಿಗಳು ಇದನ್ನು ಬಹಿರಂಗಪಡಿಸಿದ್ದರು.ಅವರು ನ್ಯುಬರ್ಗನ್ ಬೆರ್ಮನ್ ಬಗ್ಗೆ "ನ್ಯುಬರ್ಗರ್ಸ್ ಬೆರ್ಮನ್ ಎಲ್ ಎಲ್ ಸಿ.ಮತ್ತು ಲೆಹ್ಮನ್ ಬ್ರದರ್ಸ್ ನ ಆಸ್ತಿ ವಹಿವಾಟಿನ ಆಡಳಿತ ವಾಡಿಕೆಯಂತೆ ಮುಂದುವರೆಯುತ್ತದೆ ಎಂದು ಹೇಳಿತಲ್ಲದೇ ಪೇರೆಂಟ್ ಕಂಪನಿಯ ಈ ದಿವಾಳಿತನದ ಪ್ರಕರಣ ಯಾವದಕ್ಕೂ ಸಂಭಂಧವಿಲ್ಲ ಎಂದು ಹೇಳಿತು.ಅದರ ಕಾರ್ಯಚಟುವಟಿಗಳು ಸ್ಥಿರವಾಗಿರುತ್ತವೆ ಎಂದಿತು.ಇದಲ್ಲದೇ ನ್ಯುಬರ್ಗರ್ಸ್ ಬೆರ್ಮನ್ ನ ಗ್ರಾಹಕರ ಪೂರ್ಣ ಪ್ರಮಾಣದಲ್ಲಿ ಸಂದಾಯವಾದ ಸೆಕ್ಯುರಿಟೀಸ್ ಗಳನ್ನು ಲೆಹ್ಮನ್ ಆಸ್ತಿಗಳಿಂದ ಬೇರ್ಪಡಿಸಲಾಯಿತು.ಇವುಗಳು ಲೆಹ್ಮನ್ ಬ್ರದರ್ಸ್ ಹೊಲ್ಡಿಂಗ್ ಗೆ ಅದರ ಕ್ರೆಡಿಟರ್ಸ್ ಬೇಡಿಕೆಗಳೂ ಸಹ ಇದಕ್ಕೆ ಸಂಬಂಧಿಸಿದಲ್ಲ ಎಂದು ಘೋಷಿಸಿತು. [೧]
"ಲೆಹ್ಮನ್ ಬ್ರದರ್ಸ್ ನ ಕುಸಿತದ ಕೆಲವೇ ಸಮಯದಲ್ಲಿ ನ್ಯುಬರ್ಗರ್ಸ್ ನಲ್ಲಿದ್ದ ಕಾರ್ಯಕಾರಿ ಹಿರಿಯ ಅಧಿಕಾರಿಗಳು ತಮ್ಮ ಬಹುಕೋಟಿಯ ಆದಾಯಗಳನ್ನು ತ್ಯಜಿಸುತ್ತಿದ್ದಾರೆ."ಜನರಲ್ಲಿ ಉತ್ತಮ ಭಾವನೆ ಮೂಡಿಸುವಲ್ಲಿ ಮತ್ತು ನಂಬಿಕೆ ಬರಿಸುವಲ್ಲಿ ಅವರು ತಮ್ಮ ಜವಾಬ್ದಾರಿ ತೋರುತ್ತಿದ್ದಾರೆ,ಈಗಿನ ಈ ಪ್ರಕರಣಕ್ಕೆ ಪ್ರತ್ಯುತ್ತರವಾಗಿ ಅಲ್ಲಿನ ಉನ್ನತ ಜನರು ನೌಕರರಿಗೆ ಮತ್ತು ಬಂಡವಾಳದಾರರಿಗೆ ಆಶಾದಾಯಕವಾಗಿದ್ದಾರೆಂದು ಎಲ್ಲೆಡೆಯೂ ಇಮೇಲ್ ಸಂದೇಶಗಳನ್ನು ರವಾನಿಸಿದ್ದರು.
ಲೆಹ್ಮನ್ ಬ್ರದರ್ಸ್ ಇನ್ವೆಸ್ಟ್ ಮೆಂಟ್ ಮ್ಯಾನೇಜ್ ಮೆಂಟ್ ನ ನಿರ್ದೇಶಕ ಜಾರ್ಜ್ ಹರ್ಬರ್ಟ್ ವಾಕರ್ IV ಈ ಪ್ರಸ್ತಾವನೆಯನ್ನು ತಳ್ಳಿ ಹಾಕಿದರು.ಬೋನಸ್ ಕಡಿತದ ಕುರಿತಾದ ಪ್ರಸ್ತಾವನೆಯನ್ನು ಸಲಹೆ ಮಾಡಿದ್ದಕ್ಕಾಗಿ ಅವರು ಲೆಹ್ಮನ್ ಬ್ರದರ್ಸ್ ಕಾರ್ಯಕಾರಿ ಸಮಿತಿಗೆ ಕ್ಷಮೆಯಾಚಿಸಬೇಕಿತ್ತೆಂದು ಕೆಲವರ ವಾದ. ಆತ ಬರೆದುದು, "ತಂಡವೇ ನನ್ನನ್ನು ಕ್ಷಮಿಸಿ-ಸು. ನನಗೆ ಗೊತ್ತಿಲ್ಲ; ನ್ಯುಬರ್ಗೆರ್ ಬರ್ಮನ್ ನಲ್ಲಿ ಎಂತಹ ನೀರಿನ ಆಳವಿದೆ ಎಂಬುದರ ಬಗೆಗೆ ಖಾತ್ರಿ ಇಲ್ಲ. ನಾನು ಮಜುಗರಕ್ಕೊಳಗಾಗಿದ್ದೇನೆ ಮತ್ತು ಕ್ಷಮೆಯಾಚಿಸುತ್ತೇನೆ." [೨]
ವಿವಾದಗಳು
ಬದಲಾಯಿಸಿಬಿಕ್ಕಟ್ಟಿನ ಸಂದರ್ಭದಲ್ಲಿ ಕಾರ್ಯನಿರ್ವಹಣಾಧಿಕಾರಿಯ ಸಂಬಳದ ವಿವಾದ
ಬದಲಾಯಿಸಿಲೆಹ್ಮನ್ ಬ್ರದರ್ಸ್ ನ ಮುಖ್ಯಸ್ಥ ರಿಚರ್ಡ್ ಫುಲ್ಡ್ U.S.ಹೌಸ್ ಆಫ್ ರಿಪ್ರೆಂಜೈಂಟಿವ್ಸ್ ಕಮೀಟಿ ಆನ್ ಒವರ್ಸೈಟ್ ಅಂಡ್ ಗವರ್ನ್ ಮೆಂಟ್ ರಿಫಾರ್ಮ್ ಮೂಲಕ ಪ್ರಶ್ನೆಗಳ ಸುರಿಮಳೆಗೆ ಈಡಾದರು. ಪ್ರತಿನಿಧಿ.ಹೆನ್ರಿ ವಾಕ್ಸ್ ಮನ್ (D-CA)ಪ್ರಶ್ನಿಸಿದರು:ನಿಮ್ಮ ಕಂಪನಿ ಈಗ ದಿವಾಳಿಯಾಗಿದೆ.ನಮ್ಮ ಅರ್ಥವಲಯವು ಬಿಕ್ಕಟ್ಟಿನಲ್ಲಿದೆ,ಆದರೆ ನೀವು $480 ದಶಲಕ್ಷವನ್ನು(£276 ದಶಲಕ್ಷ) ನಿರಂತರವಾಗಿ ಪಡೆಯುತ್ತಿದ್ದೀರಿ.(£276 ದಶಲಕ್ಷ) ನಾನೊಂದು ಮೂಲ ಪ್ರಶ್ನೆಯೊಂದನ್ನು ಕೇಳುತ್ತೇನೆ ಇದು ನಿಮಗೆ ಸಮ್ಮತಿಯಾದುದೆ?"[೪೭] ಫುಲ್ಡ್ ಅವರು ಹೇಳುವ ಪ್ರಕಾರ ಕಳೆದ ಎಂಟು ವರ್ಷಗಳಲ್ಲಿ ಅವರು ಒಟ್ಟು $300 ದಶಲಕ್ಷ (£173 ದಶಲಕ್ಷ)ಸಂಬಳ ಮತ್ತು ಬೋನಸ್ ರೂಪದಲ್ಲಿ ಈ ಮೊತ್ತ ಪಡೆದಿದ್ದಾರೆ.[೪೭] ಫುಲ್ಡ್ ಅವರ ಅತ್ಯಧಿಕ ಸಂಬಳದ ಬಗೆಗೆ ಎಷ್ಟೇ ಸಬೂಬು ನೀಡಿದರೂ ಲೆಹ್ಮನ್ ಬ್ರದರ್ಸ್ ದಿವಾಳಿತನದ ಪ್ರಕರಣದ ಕೋರಿಕೆ ದಾಖಲಿಸುವ ಮುಂಚೆ ವಿಪರೀತವಾಗಿ ಅವರ ಸಂಬಳ ಏರಿಕೆ ಮಾಡಲಾಗಿತ್ತು.[೪೮] ಆಗ CNBC ಅಕ್ಟೋಬರ್ 17,2008 ರಲ್ಲಿ ವರದಿ ಮಾಡಿದಂತೆ ಲೆಹ್ಮನ್ ನ ಹಲವಾರು ಅಧಿಕಾರಿಗಳು ರಿಚರ್ಡ್ ಫುಲ್ಡ್ ಒಳಗೊಂಡಂತೆ ಸೆಕ್ಯುರಿಟಿಯ ಮೋಸ ಪ್ರಕರಣದಲ್ಲಿ ನ್ಯಾಯಾಲಯದ ಮುಂದೆ ಹಾಜರಾಗುವಂತೆ ಆದೇಶ ಹೊರಡಿಸಲಾಗಿತ್ತು.[ಸೂಕ್ತ ಉಲ್ಲೇಖನ ಬೇಕು]
ಬೇರೆ ಕಂಪನಿಗಳ ಮೂಲಕ ಲೆಕ್ಕಪತ್ರಗಳಲ್ಲಿ ಕುಶಲತೆಯಿಂದ ದುರುಪಯೋಗ
ಬದಲಾಯಿಸಿನ್ಯುಯಾರ್ಕ್ ಟೈಮ್ಸ್ ನ ಏಪ್ರಿಲ್ 12,2010 ದ ವಿಶೇಷ ವರದಿ ಪ್ರಕಾರ ಲೆಹ್ಮನ್ ತನ್ನ ಕಾರ್ಯಚಟುವಟಿಕೆಗಳಿಗಾಗಿ ಸಣ್ಣ ಕಂಪನಿಯಾದ ಹಡ್ಸನ್ ಕ್ಯಾಸ್ಟಲ್ ನ್ನು ಬಳಸಿಕೊಳ್ಳಲು ಆರಂಭಿಸಿತು.ಲೆಹ್ಮನ್ ನ ಲೆಕ್ಕದಖಾತೆ ಪುಸ್ತಕದಲ್ಲಿನ ಹಲವಾರು ಅಂಕಿಅಂಶಗಳು ಮತ್ತು ಲೆಹ್ಮನ್ ನ ಹಣಕಾಸಿನ ಜವಾಬ್ದಾರಿ ಮತ್ತು ಋಣಭಾದೆಗಳನ್ನು ಅಪರಾತಪರಾ ಮಾಡಲು ಮುಂದಾಯಿತು. ಲೆಹ್ಮನ್ ನ ಓರ್ವ ಕಾರ್ಯನಿರ್ವಹಣಾಧಿಕಾರಿಯು ಹಡ್ಸನ್ ಕ್ಯಾಸ್ಟಲ್ ನ್ನು ಇದೊಂದು ಲೆಹ್ಮನ್ ನ "ಪರ್ಯಾಯ ಧಿಮಾಕು" ಎಂದು ವರ್ಣಿಸಿದ್ದರು. ಕಥೆ ಪ್ರಕಾರ ಲೆಹ್ಮನ್, ಹಡ್ಸನ್ ಕಂಪನಿಯ ಒಂದು ಕಾಲು ಭಾಗದಷ್ಟನ್ನು ಒಡೆತನ ಹೊಂದಿತ್ತು.ಹಡ್ಸನ್ ನ ಆಡಳಿತ ಮಂಡಳಿಯು ಲೆಹ್ಮನ್ ನಿಂದ ನಿಯಂತ್ರಿಸಲ್ಪಡುತಿತ್ತು.ಹಡ್ಸನ್ ನ ಬಹುತೇಕ ಸಿಬ್ಬಂದಿಯು ಈ ಮೊದಲು ಲೆಹ್ಮನ್ ನಲ್ಲಿ ಕಾರ್ಯನಿರ್ವಹಿಸುತಿತ್ತು.[೪೯]
ಇವನ್ನೂ ನೋಡಿ
ಬದಲಾಯಿಸಿ- ವಾಲುಕಾಸ್ ರಿಪೊರ್ಟ್
- ಬಿಯರ್ ಸ್ಟ್ರೀರ್ನ್ಸ್
- ಇಸವಿ 2007-2008ರ ಹಣಕಾಸಿನ ಬಿಕ್ಕಟ್ಟಿನಲ್ಲಿ ಸಿಲುಕಿದ್ದ ಸಂಸ್ಥೆಗಳ ಪಟ್ಟಿ
- ಸಬ್‌ಪ್ರೈಮ್ ಕ್ರೈಸಿಸ್ ಇಂಪ್ಯಾಕ್ಟ್ ಟೈಮ್‌ಲೈನ್
- ಯುನೈಟೆಡ್ ಸ್ಟೇಟ್ಸ್ ಹೌಸಿಂಗ್ ಮಾರ್ಕೆಟ್ ಕರೆಕ್ಷನ್
- ಫೆಡ್ರಲ್ ಟೇಕ್ ಒವರ್ ಆಫ್ ಫ್ಯಾನ್ನೆ ಮೆಯ್ ಅಂಡ್ ಫ್ರೆಡ್ಡಿ ಮ್ಯಾಕ್
- ಎ ಕೊಲೊಸೊಲ್ ಫೈಲ್ಯುವರ್ ಆಫ್ ಕಾಮನ್ ಸೆನ್ಸ್
ಉಲ್ಲೇಖಗಳು
ಬದಲಾಯಿಸಿ- ↑ "Lehman folds with record $613 billion debt". Marketwatch. 2005-09-15. Retrieved 2008-09-15.
- ↑ ಲೆಹ್ಮನ್ 2007 ಆನ್ಯುವಲ್ ರಿಪೊರ್ಟ್-ಸೀ ಐಟೆಮ್ 6 ಆನ್ ಪೇಜ್ 29 ಫಾರ್ ರೇಶಿಯೊಸ್
- ↑ ಬ್ಲ್ಯಾಕ್ ಬರ್ನ್-ದಿ ಸಬ್ ಪ್ರೈಮ್ ಕ್ರೈಸಿಸ್-ನಿವ್-ಲೆಫ್ಟ್ ರಿವೆವ್-ಮಾರ್ಚ್/ಏಪ್ರಿಲ್ 2008
- ↑ NYT-ಏಜೆನ್ಸಿ 04 ರೂಲ್ ಲೆಟ್ ಬ್ಯಾಂಕ್ಸ್ ಪೈಲ್ ಅಪ್ ಮೋರ್ ಡೆಬ್ಟ್-ಅಕ್ಟೋಬರ್, 2008
- ↑ Kulikowski, Laura (2007-08-22). "Lehman Brothers Amputates Mortgage Arm". TheStreet.com. Retrieved 2008-03-18.
- ↑ ೬.೦ ೬.೧ ೬.೨ Jenny Anderson (2008-08-29). "Struggling Lehman Plans to Lay Off 1,500". The New York Times. Retrieved 2008-08-29.
{{cite news}}
: Unknown parameter|coauthors=
ignored (|author=
suggested) (help) - ↑ ನ್ಯುಯಾರ್ಕ್ ಟೈಮ್ಸ್, ವರ್ಲ್ಡ್ ಬಿಜೆನೆಸ್, ಆರ್ಟಿಕಲ್ ಬೈ ಜೆನ್ನಿ ಅಂಡೆರ್ಸನ್ ಅಂಡ್ ಲಂಡನ್ ಥೊಮಸ್, 22 ಆಗಸ್ಟ್ 2008
- ↑ "Financials slip as Korea snags weigh on Lehman and Merrill - MarketWatch". Marketwatch.com. Retrieved 2008-09-14.
- ↑ 5 days ago (5 days ago). "AFP: Lehman Brothers in freefall as hopes fade for new capital". Afp.google.com. Archived from the original on 2009-04-21. Retrieved 2008-09-14.
{{cite web}}
: Check date values in:|date=
(help)CS1 maint: numeric names: authors list (link) - ↑ "Dow plunges nearly 300 points on concern about Lehman". Times-Picayune. 2008-09-09. Retrieved 2008-09-09.
- ↑ Jenny Anderson (2008-09-09). "Wall Street's Fears on Lehman Bros. Batter Markets". The New York Times. Retrieved 2008-09-09.
- ↑ Ben White (2008-09-10). "Lehman Sees $3.9 Billion Loss and Plans to Shed Assets". The New York Times. Retrieved 2008-09-10.
- ↑ ೧೩.೦ ೧೩.೧ Joe Bel Bruno (2008-09-10). "Lehman shares slip on plans to auction off unit, consider sale of company". The Associated Press. Retrieved 2008-09-10.
- ↑ Jenny Anderson (2008-09-11). "As Pressure Builds, Lehman Said to Be Looking for a Buyer". The New York Times. Retrieved 2008-09-11.
{{cite news}}
: Unknown parameter|couthors=
ignored (help) - ↑ ೧೫.೦ ೧೫.೧ Jenny Anderson (2008-09-13). "U.S. Gives Banks Urgent Warning to Solve Crisis". The New York Times. Retrieved 2008-09-13.
{{cite news}}
: Unknown parameter|coauthors=
ignored (|author=
suggested) (help) - ↑ ೧೬.೦ ೧೬.೧ ೧೬.೨ Ben White (2008-09-14). "Lehman Heads Toward Brink as Barclays Ends Talks". The New York Times. Retrieved 2008-09-14.
{{cite news}}
: Unknown parameter|coauthors=
ignored (|author=
suggested) (help) - ↑ ಉಯಿಲ್ ಹಟ್ಟನ್,ದಿ ಆಬ್ಜವರರ್ , 19 ಏಪ್ರಿಲ್ 2009, ಯು ಗಿವ್ ಬ್ಯಾಂಕರ್ಸ್ £1.3 ಟ್ರಿಲಿಯನ್ ಅಂಡ್ ಡು ದೆ ಥ್ಯಾಂಕ್ ಯುವ್? ಡು ದೆ ಹೆಲ್
- ↑ JPMಆರ್ಗನ್ ಗೇವ್ ಲೆಹ್ಮನ್ $138 ಬಿಲಿಯನ್ ಆಫ್ಟರ್ ಬ್ಯಾಂಕ್ರಪ್ಟಸಿ (Update3) ಬೈ ಟಿಫಾನಿ ಕಾರೆ ಅಂಡ್ ಕ್ರಿಸ್ ಸಿಟಿಯಾ
- ↑ news.bbc.co.uk, ಜಜ್ಡ್ ಅಪ್ರೂವ್ಸ್ $1.3bn ಲೆಹ್ಮನ್ ಡೀಲ್
- ↑ reuters.com, ಜಜ್ಡ್ ಅಪ್ರೂವ್ಸ್ ಲೆಹ್ಮನ್, ಬಾರ್ಕ್ಲೆಯ್ಸ್ ಪ್ಯಾಕ್ಟ್
- ↑ ap.google.com, ಜಜ್ಡ್ ಸೇಯ್ಸ್ ಲೆಹ್ಮನ್ ಕ್ಯಾನ್ ಸೆಲ್ ಯುನಿಟ್ಸ್ ಟು ಬಾರ್ಕ್ಲೆಯ್ಸ್
- ↑ "guardian.co.uk, US ಜಜ್ಡ್ ಅಪ್ರೂವ್ಸ್ ಲೆಹ್ಮನ್ಸ್ ಅಸೆಟ್ ಸೇಲ್ ಟು ಬಾರ್ಕ್ಲೆ". Archived from the original on 2008-09-21. Retrieved 2008-09-21.
- ↑ "Nomura to acquire Lehman Brothers' Asia Pacific franchise".
- ↑ "Nomura to close acquisition of Lehman Brothers' Europe and Middle East investment banking and equities businesses on October 13".
- ↑ "Lehman Brothers 2007 Annual Report". Archived from the original on 2008-03-22. Retrieved 2010-11-15.
- ↑ Michael Grynbaum (2008-09-15). "Wall St.'s Turmoil Sends Stocks Reeling". The New York Times. Retrieved 2008-09-15.
- ↑ "After Lehman, Banks Jettison Commercial-Property Debt". The Wall Street Journal. 2008-09-17. Retrieved 2008-09-18.
- ↑ "Bank of New York restructures cash fund on loss". Reuters. 2008-09-18. Retrieved 2008-09-18.
- ↑ "Wachovia tumbles on capital fears". Financial Times. 2008-09-18. Retrieved 2008-09-18.
- ↑ ಕೆನ್ನೆತ್ ಸಿ. ಕೆಟ್ಟೆರಿಂಗ್, ರಿಪ್ಲೆಜ್ ಡಿಕನ್ಸ್ಟ್ರಕ್ಟ್ರೆಡ್ , 61 ಯು.ಪಿಟ್ ಎಲ್. ರೆವ್.45, 51 (1999)(ರಿಹೈಪೊಥಿಕೇಶನ್“[ರೆ]ಫರಸ್ ಟು ಎ ಪ್ಲೆಜ್ ಆಫ್ ದಿ ಡೆಟರ್ಸ್ ಕೊಲ್ಯಾಟರಲ್ ಬೈ ದಿ ಸೆಕ್ಯುರ್ಡ್ ಪಾರ್ಟಿ, ಟು ಸೆಕ್ಯುವರ್ ದಿ ಸೆಕ್ಯುವರ್ಡ್ ಪಾರ್ಟೀಸ್ ಒನ್ ಒಬ್ಲಿಗೇಶನ್ ಟು ಥರ್ಡ್ ಪಾರ್ಟಿ”).
- ↑ ಸ್ಟೀವೆನ್ ಲೆಸ್ಸರ್ಡ್, ಇ.ಯು. ರಿ-ಹೈಪೊಥಿಕೇಶನ್ ಅಂಡ್ ಲೆಹ್ಮನ್ ಬ್ರದರ್ಸ್ ಬ್ರ್ಯಾಂಕ್ರಪ್ಟ್ಸಿ:ಚೇಂಜಿಸ್ ದ್ಯಾಟ್ ಮಸ್ಟ್ ಬಿ ಮೇಡ್ ಟು ದಿ MiFID , ಅಪಿಯರಿಂಗ್ ಇನ್ ಫೊಲ್ಸೊಮ್, ಗೊರ್ಡೊನ್, ಸ್ಪ್ಯಾಂಗೊಲ್, ಇಂಟರ್ ನ್ಯಾಶನಲ್ ಬಿಜಿನೆಸ್ ಟ್ರ್ಯಾಂಜೆಕ್ಷನ್ಸ್, ಪ್ರಾಕ್ಟೀಶ್ನರ್ಸ್ ಟ್ರೀಟೈಜ್,(2010 ಟ್ರೀಟೈಜ್ ಸಪ್ಲಿಮೆಂಟ್)
- ↑ "Hedge funds' growth prospects hit by Lehman's demise". Financial Times. 2008-09-17. Retrieved 2008-09-18.
- ↑ ಮನಮೋಹನ್ ಸಿಂಗ್ & ಜೇಮ್ಸ್ ಐಟೆಕೆನ್,ಡೆಲ್ವರೇಜಿಂಗ್ ಆಫ್ಟರ್ ಲೆಹ್ಮನ್-ಎವಿಡೆನ್ಸ್ ಫ್ರಾಮ್ ರೆಡ್ಯುಸ್ಡ್ ರಿಹೈಪೊಥಿಕೇಶನ್ , IMF ವರ್ಕಿಂಗ್ ಪೇಪರ್ No.09/42, at 7 (2009)
- ↑ "Japan Banks, Insurers Have $2.4 Billion Lehman Risk". Bloomberg. 2008-09-17. Retrieved 2008-09-18.
- ↑ Chasan, Emily (2008-09-17). "RBS sees Lehman claims at $1.5 bln-$1.8 billion: lawyer". Reuters. Retrieved 2008-09-18.
- ↑ Bullock, Nicole (2008-09-19). Financial Times http://www.ft.com/cms/s/0/9bbd2a58-85dd-11dd-a1ac-0000779fd18c.html. Retrieved 2008-09-19.
{{cite news}}
: Missing or empty|title=
(help) - ↑ Desmond, Maurna (2008-09-17). "Lehman Ties Dim Constellation". Forbes. Archived from the original on 2009-06-17. Retrieved 2008-09-19.
- ↑ Thomson, Victoria (2008-09-19). "Power deal delivers new star to Buffett's energy constellation". The Scotsman. Retrieved 2008-09-19.
- ↑ Gaffen, David (2008-09-18). "Buffett Shoots for Falling Constellation". The Wall Street Journal. Retrieved 2008-09-19.
- ↑ Knorr, Bryce (2008-09-23). "Wall Street Mess Trickles Down To The Farm". Farm Futures. Retrieved 2008-09-26.
- ↑ ೪೧.೦ ೪೧.೧ ಸೌತ್ ಚೀನಾ ಮಾರ್ನಿಂಗ್ ಪೊಸ್ಟ್. "SCMP." ಚೀಫ್ ಟಾಕ್ಸ್ ಟಫ್ ಆನ್ ಮಿನಿಬಾಂಡ್ಸ್. ಮರೆಪಡೆದುದು 2008-10-17.
- ↑ ಎಚ್ಕೆಸ್ಟ್ಯಾಂಡರ್ಡ್. "The Standard.com." HKMA ರೆಫೆರ್ಸ್ ಲೆಹ್ಮನ್ ಕೇಸಿಸ್ ಟು ರೆಗ್ಯುಲರ್. ಮರೆಪಡೆದುದು 2008-10-17.
- ↑ ೪೩.೦ ೪೩.೧ Hkdf. "Hkdf Archived 2013-01-12 at Archive.is." (ಪ್ರೊಪೊಜಲ್ ಫಾರ್ ರೆಜುಲುಶನ್ ಆಫ್ ಮಿನಿ-ಬಾಂಡ್,ಇಸ್ಯು) ಮಿನಿ-ಬಾಂಡ್ ಗಳ ಸಮಸ್ಯೆ ಪ್ರಸ್ತಾವನೆಗೆ ತೀರ್ಮಾನ. ಮರುಪಡೆದುದು 2009-01-23.
- ↑ ೪೪.೦ ೪೪.೧ ಸೌತ್ ಚೀನಾ ಮಾರ್ನಿಂಗ್ ಪೊಸ್ಟ್. "SCMP." ಬ್ಯಾಂಕ್ ಗಳ ಮೂಲಕ ಮಿನಿ-ಬಾಂಡ್ಸ್ ಗಳ ಮರುಖರೀದಿ ಬಗ್ಗೆ CE ಯು ವಿವರಕ್ಕಾಗಿ ಇನ್ನೂ ಎದುರುನೋಡುತ್ತಿದೆ. ಮರುಪಡೆದುದು 2008-10-17.
- ↑ ಎಚ್ಕೆಸ್ಟ್ಯಾಂಡರ್ಡ್ . "The Standard.com." ಲೆಹ್ಮನ್ ನ ಮಿನಿ-ಬಾಂಡ್ಸ್ ಗಳನ್ನು ಬ್ಯಾಂಕುಗಳಿಂದ ಮರು ಖರೀದಿ ಮರುಪಡೆದುದು 2008-10-17.
- ↑ " Archived 2007-10-01 ವೇಬ್ಯಾಕ್ ಮೆಷಿನ್ ನಲ್ಲಿ. ಲೆಹ್ಮನ್,ಎಚ್. ಎ. ಸ್ಕಫ್" ನ್ನು ಸ್ವಾಧೀನಪಡಿಸಿಕೊಳ್ಳಲಿದೆ ರೈಟರ್ಸ್ ಸುದ್ದಿ, ನವೆಂಬರ್ 20, 2006
- ↑ ೪೭.೦ ೪೭.೧ Swaine, Jon (2008-10-07). "Richard Fuld punched in face in Lehman Brothers gym". The Daily Telegraph. London. Archived from the original on 2010-03-15. Retrieved 2010-04-26.
- ↑ "ಆರ್ಕೈವ್ ನಕಲು". Archived from the original on 2011-09-28. Retrieved 2010-11-15.
- ↑ Story, Louise (2010-04-12). "Lehman Channeled Risks Through 'Alter Ego' Firm". The New York Times. Retrieved 2010-05-25.
{{cite news}}
: Unknown parameter|coauthors=
ignored (|author=
suggested) (help)