ಲೆಫ್ಟಿನಂಟ್ ಜನರಲ್ ಅಪ್ಪಾರಂಡ ಸಿ ಅಯ್ಯಪ್ಪ
ಅಪ್ಪಾರಂಡ ಸಿ ಅಯ್ಯಪ್ಪ (ಎ ಸಿ ಅಯ್ಯಪ್ಪ) ನವರು ೧೯೧೪ರಲ್ಲಿ ಕೊಡಗಿನ ಕೊಡವ ಜನಾಂಗದ ಅಪ್ಪಾರಂಡ ಮನೆತನದಲ್ಲಿ ಜನಿಸಿದರು. ಈ ಮನೆತನದವರು ಲಿಂಗಾಯತ ರಾಜರ ಕಾಲದಿಂದಲೂ ಉಚ್ಚ ಅಧಿಕಾರಿಗಳಾಗಿದ್ದು, ಆ ಕಾಲದಲ್ಲಿಯೇ ಅಲ್ಲದೆ ಆಂಗ್ಲರ ಆಡಳಿತದಲ್ಲೂ ದಿವಾನ ಪದವಿಯಲ್ಲಿದ್ದರು.
ಜನನ ಮತ್ತು ವಿದ್ಯಾಭ್ಯಾಸ
ಬದಲಾಯಿಸಿಶ್ರೀಮಂತ ಕುಟುಂಬದಲ್ಲಿ ಜನಿಸಿದ ಅಯ್ಯಪ್ಪನವರು ಬೆಂಗಳೂರಿನ ಬಿಶಪ್ ಕಾಟನ್ ಶಾಲೆಯ ವಿದ್ಯಾಭ್ಯಾಸ ಮುಗಿಸಿ, ಇಂಗ್ಲೆಂಡಿನ ಲಿಂಕನ್ ಶೈರಿನಲ್ಲಿರುವ ಸ್ಟ್ಯಾನ್‍ಫರ್ಡ್ ಶಾಲೆಯಲ್ಲಿ ಪದವೀಧರರಾಗಿ ಭಾರತಕ್ಕೆ ಮರಳಿದರು.
ಉದ್ಯೋಗ
ಬದಲಾಯಿಸಿಭಾರತೀಯ ಸೈನ್ಯವನ್ನು ಸೇರಿ, ಮೆಂಬರ್ ಆಫ್ ದಿ ಆರ್ಡರ್ ಆಫ್ ದ ಬ್ರಿಟಿಶ್ ಎಂಪೈರ್ (MBE) ಪದವಿಯನ್ನು ಪಡೆದರು.[೧]
ಭಾರತದ ಸೈನ್ಯದ ಕೋರ್ ಆಫ್ ಸಿಗ್ನಲ್ಸ್ (Corps of Signals)ನಲ್ಲಿ ಸೆಪ್ಟೆಂಬರ್ ೧೯೩೫ರಲ್ಲಿ ಅಯ್ಯಪ್ಪನವರು ಸೆಕೆಂಡ್ ಲೆಫ್ಟ್‍ನಂಟ್ ಆಗಿ ಕಮಿಶನ್ ಪಡೆದ ಮೊದಲ ಭಾರತೀಯ ಅಧಿಕಾರಿ. ದ್ವಿತೀಯ ಜಾಗತಿಕ ಯುದ್ಧದಲ್ಲಿ ೧೯೪೨ರಲ್ಲಿ ಜಪಾನೀಯರ ವಿರುದ್ಧದ ಮಲಯನ್ ಕಾರ್ಯಾಚರಣೆಯಲ್ಲಿ ಕ್ಯಾಪ್ಟನ್ ಆಗಿದ್ದರು. ದುರದೃಷ್ಟವಶಾತ್ ಅವರು ಸೆರೆ ಸಿಕ್ಕಿ ೧೯೪೫ರಲ್ಲಿ ಯುದ್ಧ ಕೊನೆಗೊಳ್ಳುವವರೆಗೂ ಯುದ್ಧಖೈದಿಯಾಗಿದ್ದರು. ಭಾರತಕ್ಕೆ ಮರಳಿದ ಬಳಿಕ ವೃತ್ತಿಯಲ್ಲಿ ಉತ್ತಮ ಮುನ್ನಡೆಯನ್ನು ಪಡೆದು,ಭಾರತೀಯ ಸೇನೆಯ ಪ್ರಥಮ ಪ್ರಧಾನ ಸಿಗ್ನಲ್ ಅಧಿಕಾರಿಯಾದರು. ಬಳಿಕ ಲೆಫ್ಟಿನಂಟ್ ಜನರಲ್ ಹುದ್ದೆಗೆ ಬಡ್ತಿ ಹೊಂದಿ, ಮಾಸ್ಟರ್ ಜನರಲ್ ಆಫ್ ಆರ್ಡ್‌ನನ್ಸ್ ಆದರು. ಇದು ಚೀಫ್ ಆಫ್ ಆರ್ಮಿ ಸ್ಟಾಫ್‌ನ ನಾಲ್ಕು ಪ್ರಿನ್ಸಿಪಲ್ ಸ್ಟಾಫ್ ಆಫಿಸರ್‌ಗಳಲ್ಲಿನ ಒಂದು ಹುದ್ದೆ. ಅವರು ಕೋರ್ ಆಫ್ ಸಿಗ್ನಲ್ಸ್‌ನ ಕರ್ನಲ್ ಕಮಾಂಡಂಟ್ ಆದ ಭಾರತೀಯರಲ್ಲಿ ಪ್ರಪ್ರಥಮರು.[೨]
ನಂತರ ಅವರು ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ಸಂಸ್ಥೆಯ ಚೇರ್ಮನ್ ಆಗಿ ನೇಮಕಗೊಂಡು ೧೯೭೨ರಲ್ಲಿ ನಿವೃತ್ತರಾದರು .
ಗೌರವ ಪ್ರಶಸ್ತಿಗಳು
ಬದಲಾಯಿಸಿಬೆಂಗಳೂರಿನ ಬಿ ಇ ಎಲ್ ವೃತ್ತದ ಬಳಿಯ ಉದ್ಯಾನವನಕ್ಕೆ ಜನರಲ್ ಅಯ್ಯಪ್ಪ ಉದ್ಯಾನವನವೆಂದು ಹೆಸರಿಸಲಾಗಿದೆ.[೩]
ಉಲ್ಲೇಖ
ಬದಲಾಯಿಸಿ- ↑ "ಆರ್ಕೈವ್ ನಕಲು". Archived from the original on 2011-08-10. Retrieved 2011-09-18.
- ↑ http://14threunion.blogspot.com/2011/03/corps-of-signals-first-indian-signal.html
- ↑ http://maps.google.co.in/maps?hl=en&biw=1366&bih=541&q=iyappa+park&um=1&ie=UTF-8&sa=N&tab=wl