Luffa acutangula
Scientific classification e
Unrecognized taxon (fix): Luffa
ಪ್ರಜಾತಿ:
L. acutangula
Binomial name
Luffa acutangula
Synonyms[]
  • Cucumis acutangulus L.
  • Cucumis lineatus Bosc
  • Cucumis megacarpus G.Don
  • Cucumis operculatus Roxb. ex Wight & Arn.
  • Cucurbita acutangula (L.) Blume
  • Luffa amara Roxb.
  • Luffa drastica Mart.
  • Luffa fluminensis Roem.
  • Luffa foetida Cav.
  • Luffa forskalii Schweinf. ex Harms
  • Luffa gosa Ham.
  • Momordica tubiflora Wall.

ಹೀರೆಯನ್ನು ವಾಣಿಜ್ಯಿಕವಾಗಿ ತರಕಾರಿಯಾಗಿ ಅದರ ಬಲಿಯದ ಹಣ್ಣುಗಳಿಗಾಗಿ ಬೆಳೆಯಲಾಗುತ್ತದೆ. ಲ್ಯುಫಾ ಅಕ್ಯುಟಾಂಗುಲ ಎಂಬ ಪ್ರಭೇದದ ಈ ಬಳ್ಳಿಯು ಕುಕರ್‌ಬಿಟೇಸಿ ಕುಟುಂಬಕ್ಕೆ ಸೇರುತ್ತದೆ. ಇದರ ಹಣ್ಣು ಸ್ವಲ್ಪಮಟ್ಟಿಗೆ ಏಣುಗೆರೆಗಳಿರುವ ಸೌತೆಕಾಯಿ ಅಥವಾ ಜ಼ುಕೀನಿಯನ್ನು ಹೋಲುತ್ತದೆ.

ಇತರ ಭಾಷೆಗಳಲ್ಲಿ

ಬದಲಾಯಿಸಿ

ಇದನ್ನು ಆಂಗ್ಲಭಾಷೆಯಲ್ಲಿ ರಿಬ್ಬರ್‌ಗಾರ್ಡ್, ವೆಜಿಟೇಬಲ್‌ಸ್ಪಾಂಜ್, ಹಿಂದಿಯಲ್ಲಿ ಕಾಲಿ ಟೊರೈ, ಜಿಂಗಾ ಮತ್ತು ಕನ್ನಡದಲ್ಲಿ ಹೀರೆಕಾಯಿ ಎಂದು ಕರೆಯುತ್ತಾರೆ.

ಉಷ್ಣವಲಯದಲ್ಲಿ ಬೆಳೆಯುವ ಈ ಸಸ್ಯ ನೆಲದ ಮೇಲೆ ಬೆಳೆಯುವ ವಾರ್ಷಿಕ ಬಳ್ಳಿ. ಏಷ್ಯದ ವಿವಿಧ ದೇಶಗಳಲ್ಲಿ ಬೆಳೆಯುತ್ತದೆ. ಭಾರತದ ಎಲ್ಲ ಭಾಗಗಳಲ್ಲಿ ಬೆಳೆಯುತ್ತಾರೆ.

ಉಪಯೋಗಗಳು

ಬದಲಾಯಿಸಿ

ಬಲಿತ ಹಣ್ಣುಗಳನ್ನು ನೈಸರ್ಗಿಕ ಸ್ವಚ್ಛಗೊಳಿಸುವ ಸ್ಪಂಜುಗಳಾಗಿ ಬಳಸಲಾಗುತ್ತದೆ.

ಹೀರೆಕಾಯಿ ತರಕಾರಿಯ ರೂಪದಲ್ಲಿ ಅಡುಗೆಗೆ ಉಪಯೋಗವಾಗುತ್ತದೆ.[] ಒಣಗಿದ ಹಣ್ಣುಗಳಿಂದ ಪಡೆಯುವ ತಂತುಮಯ ಪದಾರ್ಥವು ಕಾರ್ಖಾನೆಗಳಲ್ಲಿ ಸೋಸುವ ಅರಿವೆಯಾಗಿ ಮತ್ತು ಸ್ನಾನದ ಸ್ಪಂಜಿನ ಬದಲಾಗಿ ಉಪಯುಕ್ತವಾಗುತ್ತದೆ.

ಹಿರೇಕಾಯಿಯಿಂದ ಆರೋಗ್ಯ ಪ್ರಯೋಜನಗಳು

ಬದಲಾಯಿಸಿ

ಕಣ್ಣಿನ ದೃಷ್ಟಿ ವೃದ್ಧಿಯಾಗುತ್ತದೆ

ಬದಲಾಯಿಸಿ
  • ಹೀರೆಕಾಯಿಯಲ್ಲಿ ವಿಟಮಿನ್ ' ಎ ' ಅಂಶ ಗಣನೀಯ ಪ್ರಮಾಣದಲ್ಲಿ ಹೇರಳವಾಗಿದ್ದು, ಕಣ್ಣಿನ ದೃಷ್ಟಿಗೆ ತುಂಬಾ ಸಹಕಾರಿಯಾಗಿ ಇದೆಯೆಂದು ಸ್ವತಃ ಕಣ್ಣಿನ ತಜ್ಞರೇ ಹೇಳುತ್ತಾರೆ.

ಮುಖ್ಯವಾಗಿ ವಯಸ್ಸಾದವರಲ್ಲಿ ಎದುರಾಗುವ ಕಣ್ಣಿನ ಪೊರೆ ಸಮಸ್ಯೆಯನ್ನು ಹೀರೆಕಾಯಿಯಲ್ಲಿರುವ ಬೀಟಾ - ಕ್ಯಾರೋಟಿನ್ ಎಂಬ ವಿಟಮಿನ್ ' ಎ ' ಅಂಶದ ರೂಪ ಸರಿ ಪಡಿಸುತ್ತದೆ. ಇದರ ಜೊತೆಗೆ ಕಣ್ಣಿನ ಹಲವು ಸಮಸ್ಯೆಗಳನ್ನು ಹೀರೆಕಾಯಿ ಯಲ್ಲಿರುವ ಔಷಧೀಯ ಪರಿಣಾಮಗಳು ಸರಿ ಮಾಡುತ್ತವೆ.

  • ಹೀರೆಕಾಯಿ ಒಂದು ಆಂಟಿ - ಆಕ್ಸಿಡೆಂಟ್ ಕೂಡ ಆಗಿದ್ದು, ಇದರಲ್ಲಿರುವ ಬೀಟಾ - ಕ್ಯಾರೋಟಿನ್ ಅಂಶ ಕಣ್ಣಿನ ನರಗಳನ್ನು ಮತ್ತು ಕಣ್ಣಿಗೆ ಸಂಪರ್ಕ ಮಾಡುವ ರಕ್ತ ನಾಳಗಳನ್ನು ಯಾವುದೇ ವಿಷಕಾರಿ ಅಂಶಗಳಿಂದ ಪ್ರಭಾವಿತ ಆಗದಂತೆ ನೋಡಿಕೊಂಡು ಫ್ರೀ ರಾಡಿಕಲ್ ಗಳ ಹಾನಿಯಿಂದ ಕಣ್ಣುಗಳ ರಕ್ಷಣೆ ಮಾಡುತ್ತವೆ.[]

ಅನೇಮಿಯ ಸಮಸ್ಯೆಗೆ ರಾಮಬಾಣ

ಬದಲಾಯಿಸಿ
  • ಹೀರೆಕಾಯಿಯಲ್ಲಿ ಕಬ್ಬಿಣದ ಅಂಶ ಸಾಕಷ್ಟಿದೆ. ಹಾಗಾಗಿ ನಿಮ್ಮ ಆಹಾರ ಪದ್ಧತಿಯಲ್ಲಿ ನೀವು ಪ್ರತಿ ದಿನ ಸಾಂಬಾರ್ ಅಥವಾ ಸಾಗು ತಯಾರು ಮಾಡುವ ನೆಪದಲ್ಲಿ ಬಳಸಬಹುದು. ನೀವು ಇಡೀ ನಿಮ್ಮ ಕುಟುಂಬದ ಎಲ್ಲಾ ಸದಸ್ಯರ ದೇಹದಲ್ಲಿನ ಕಬ್ಬಿಣದ ಅಂಶದ ಕೊರತೆಯನ್ನು ನೀಗಿಸುತ್ತದೆ.
  • ಅದು ಅಲ್ಲದೆ ಹೀರೆಕಾಯಿಯಲ್ಲಿ ವಿಟಮಿನ್ ' ಬಿ6 ' ಅಂಶ ಹೆಚ್ಚಾಗಿದ್ದು, ಇದು ದೇಹದಲ್ಲಿ ಕಂಡು ಬರುವ ಕೆಂಪು ರಕ್ತ ಕಣಗಳ ಆರೋಗ್ಯವನ್ನು ಕಾಪಾಡುತ್ತದೆ. ಇಡೀ ದೇಹದ ಎಲ್ಲಾ ಅಂಗಾಂಗಗಳಿಗೆ ಸರಿಯಾಗಿ ರಕ್ತ ಸಂಚಾರ ನಿಯಂತ್ರಣ ಮಾಡುವುದರಿಂದ ಹಿಡಿದು ದೇಹದ ಯಾವುದೇ ಬಗೆಯ ನೋವು ಮತ್ತು ಆಯಾಸವನ್ನು ದೂರ ಮಾಡುತ್ತದೆ.[]

ಚಿತ್ರಸಂಪುಟ

ಬದಲಾಯಿಸಿ

ಉಲ್ಲೇಖಗಳು

ಬದಲಾಯಿಸಿ
  1. "The Plant List: A Working List of All Plant Species". Archived from the original on 28 ಮೇ 2019. Retrieved 21 November 2014.
  2. Grubben, G.J.H.; Africa, P.R.o.T. (2004). Vegetables. Backhuys. ISBN 9789057821479.
  3. "ಹೀರೆಕಾಯಿ ಸೇವನೆ ಯಾರಿಗೆಲ್ಲಾ ಒಳ್ಳೆಯದಲ್ಲ". Vijay Karnataka. Retrieved 30 August 2024.
  4. "ಹೀರೆಕಾಯಿಯ ಒಂದರ ಮೇಲೊಂದು ಪ್ರಯೋಜನಗಳು, ಕೇಳಿದ್ರೆ ಅಚ್ಚರಿಪಡುವಿರಿ!". Vijay Karnataka. Retrieved 30 August 2024.
  5. Chakravarty, H. L. (October 1948). "Extrafloral Glands of Cucurbitaceæ". Nature. 162 (4119): 576–577. Bibcode:1948Natur.162..576C. doi:10.1038/162576b0. S2CID 4128826.
 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ಹೀರೆ&oldid=1243071" ಇಂದ ಪಡೆಯಲ್ಪಟ್ಟಿದೆ