ಜ಼ುಕೀನಿ ಉದ್ದದಲ್ಲಿ ಸುಮಾರು ಒಂದು ಮೀಟರ್ ಮುಟ್ಟಬಲ್ಲ, ಆದರೆ ಸಾಮಾನ್ಯವಾಗಿ ಆ ಗಾತ್ರದ ಅರ್ಧದಷ್ಟು ಅಥವಾ ಕಡಿಮೆಯಿದ್ದಾಗ ಕೊಯ್ಲು ಮಾಡಲಾದ ಒಂದು ಬೇಸಿಗೆ ಸ್ಕ್ವಾಷ್. ಇತರ ಕೆಲವು ಸ್ಕ್ವಾಷ್‍ಗಳು ಮತ್ತು ಕುಂಬಳಕಾಯಿಗಳ ಜೊತೆಗೆ, ಇದು ಕ್ಯೂಕರ್ಬಿಟಾ ಪೀಪೊ ಪ್ರಜಾತಿಗೆ ಸೇರಿದೆ. ಜ಼ುಕೀನಿ ಗಾಢ ಅಥವಾ ತಿಳಿ ಹಸಿರು ಇರಬಹುದು.[]

ಜ಼ುಕೀನಿ
Striped and uniform-colored zucchini
ಕುಲಕುಕುರ್ ಬೀಟ
ಪ್ರಭೇದCucurbita pepo
ಮೂಲ19th-century northern Italy

ಆರೋಗ್ಯ ಉಪಯೋಗಗಳು

ಬದಲಾಯಿಸಿ

ಬೇಸಿಗೆಯಲ್ಲಿ ಜ಼ುಕೀನಿಯ ಉಪಯೋಗ

ಬದಲಾಯಿಸಿ
  • ನೋಡಲು ಸೌತೆಕಾಯಿಯನ್ನು ಹೋಲುವ ಜ಼ುಕೀನಿ ಸಂಪೂರ್ಣವಾಗಿ ನೀರಿನಿಂದ ಕೂಡಿದೆ (ಅದರ ತೂಕದ ಶೇಕಡ 94) ಇದು ಬೇಸಿಗೆಯಲ್ಲಿ ಸೇವಿಸಬೇಕಾದ ಪರಿಪೂರ್ಣ ಆಹಾರವಾಗಿದೆ. ವಿಟಮಿನ್ ಸಿ ಸಮೃದ್ಧವಾಗಿ ಹೊಂದಿರುವ ಇದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಚರ್ಮ ಮತ್ತು ಕಣ್ಣಿನ ಆರೈಕೆಗೂ ಸಹಕಾರಿಯಾಗಿದೆ. ಇದು ಉರಿಯೂತದ ಗುಣವನ್ನು ಹೊಂದಿದೆ ಮತ್ತು ಪೊಟ್ಯಾಶಿಯಂ ಅಧಿಕವಾಗಿರುವುದರಿಂದ ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಆಲಿವ್ ಎಣ್ಣೆಯಲ್ಲಿ ತಯಾರಿಸಿದ ಸ್ಪೈರಲ್ ನೂಡಲ್ಸ್ ಆಕಾರದ ಜ಼ುಕೀನಿ ಸಂಜೆ ಸ್ನಾಕ್ಸ್’ಗೆ ಚೆನ್ನಾಗಿರುತ್ತದೆ.
  • ಫ್ರೈ ಮಾಡಿದ ತರಕಾರಿ ಅಥವಾ ಸಲಾಡ್ ಅಥವಾ ಗ್ರಿಲ್ ಫಿಶ್ ಅಥವಾ ಚಿಕನ್ ನೊಂದಿಗೆ ಸೈಡ್ ಡಿಶ್‌ ಆಗಿ ಮಧ್ಯಾಹ್ನ ಅಥವಾ ರಾತ್ರಿ ಸೇವಿಸಬಹುದು. ಜ಼ುಕೀನಿಯನ್ನು ಸ್ಮೂದಿಯಾಗಿ ತಯಾರಿಸಬಹುದು ಮತ್ತು ಉಪಾಹಾರಕ್ಕಾಗಿ ಸೇವಿಬಹುದು. ಇಲ್ಲವಾದಲ್ಲಿ ಕೆನೆರಹಿತ ಕಾಟೇಜ್ ಚೀಸ್ ನೊಂದಿಗೆ ಬಿಸಿಲಿನ ಒಣಗಿದ ಟೊಮೆಟೊಗಳೊಂದಿಗೆ ಜ಼ುಕೀನಿಯನ್ನು ಮಧ್ಯಾಹ್ನ ಸೇವಿಸಬಹುದು.[]

ಉಲ್ಲೇಖಗಳು

ಬದಲಾಯಿಸಿ
  1. "12 Health and Nutrition Benefits of Zucchini". Healthline (in ಇಂಗ್ಲಿಷ್). 19 February 2019. Retrieved 31 August 2024.
  2. "ಬೇಸಿಗೆ ಕಾಲದಲ್ಲಿ ನೀವು ಸೇವಿಸಬೇಕಾದ ಆರೋಗ್ಯಕರ ಆಹಾರ ಮತ್ತು ಪಾನೀಯಗಳು". Vijay Karnataka. Retrieved 31 August 2024.


"https://kn.wikipedia.org/w/index.php?title=ಜ಼ುಕೀನಿ&oldid=1250592" ಇಂದ ಪಡೆಯಲ್ಪಟ್ಟಿದೆ