ಲುಫ್ಥಾನ್ಸ
ಡ್ಯೂಷೆ ಲುಫ್ಥಾನ್ಸ AG (FWB: LHA) (German pronunciation: [ˈdɔʏt͡ʃə ˈlʊfthanza]) ಎಂಬುದು, ಒಟ್ಟಾರೆ ಸಾಗಣೆ ಮಾಡಿದ ಪ್ರಯಾಣಿಕರ ಸಂಖ್ಯೆಯ ಪರಿಭಾಷೆಯಲ್ಲಿ ಹೇಳುವುದಾದರೆ ಯುರೋಪ್‌ನಲ್ಲಿನ ಅತಿದೊಡ್ಡ ವಿಮಾನಯಾನ ಸಂಸ್ಥೆಯಾಗಿದೆ, ಮತ್ತು ಜರ್ಮನಿಯ ಅಗ್ರಗಣ್ಯ ವಿಮಾನವಾಹಕವಾಗಿದೆ. ಲುಫ್ತ್ ("ಗಾಳಿ" ಎಂಬುದಕ್ಕಾಗಿರುವ ಜರ್ಮನ್ ಪದ), ಮತ್ತು ಹಾನ್ಸಾ (ಹಾನ್ಸಿಯಾಟಿಕ್ ಲೀಗ್ ಎಂಬ ಮಧ್ಯಯುಗದ ಪ್ರಬಲವಾದ ವ್ಯಾಪಾರೀ ಸಮೂಹದ ಹೆಸರು) ಎಂಬ ಎರಡು ಪದಗಳಿಂದ ಕಂಪನಿಯ ಹೆಸರು ಜನ್ಯವಾಗಿದೆ.
| ||||
ಸ್ಥಾಪನೆ | 1926 (as Deutsche Luft Hansa Aktiengesellschaft), refounded 1954 | |||
---|---|---|---|---|
Hubs | ||||
Focus cities | ||||
Frequent-flyer program | Miles & More | |||
Airport lounge | HON / Senator Lounge | |||
Alliance | Star Alliance | |||
Subsidiaries | Airlines:
Shares: Other: | |||
Fleet size | 274 (+ 73 orders) excl.subsidiaries
746 (+ 156 orders) inc.subsidiaries excl.shares | |||
Destinations | 202 | |||
Company slogan | "There's no better way to fly" | |||
Headquarters | Lufthansa Aviation Center Airportring, Frankfurt am Main, North Rhine-Westphalia, Germany[೨] | |||
Key people | Jürgen Weber (Head of Supervisory Board and former CEO), Wolfgang Mayrhuber(CEO), Stefan Lauer (Aviation Services and Human Resources), Stephan Gemkow (CFO) | |||
Revenue | €24.9 billion
(US$33.9 billion) | |||
Website | www.lufthansa.com |
ಸಾಗಿಸಲ್ಪಟ್ಟ ಒಟ್ಟಾರೆ ಪ್ರಯಾಣಿಕರ ಸಂಖ್ಯೆಯ ಪರಿಭಾಷೆಯಲ್ಲಿ ಹೇಳುವುದಾದರೆ, ಈ ವಿಮಾನಯಾನ ಸಂಸ್ಥೆಯು ವಿಶ್ವದ ಐದನೇ-ಅತಿದೊಡ್ಡ ವಿಮಾನಯಾನ ಸಂಸ್ಥೆಯಾಗಿದ್ದು, 18 ಸ್ವದೇಶಿ ಗಮ್ಯಸ್ಥಾನಗಳು ಹಾಗೂ ಆಫ್ರಿಕಾ, ಅಮೆರಿಕಾ ಖಂಡಗಳು, ಏಷ್ಯಾ ಹಾಗೂ ಯುರೋಪ್ ಖಂಡಗಳಾದ್ಯಂತದ 183 ಅಂತರರಾಷ್ಟ್ರೀಯ ಗಮ್ಯಸ್ಥಾನಗಳಿಗೆ ಅದು ತನ್ನ ಸೇವೆಗಳನ್ನು ನಿರ್ವಹಿಸುತ್ತಿದೆ. ತನ್ನ ಪಾಲುದಾರರ ಜೊತೆಗೂಡಿ ಸುಮಾರು 410 ಗಮ್ಯಸ್ಥಾನಗಳಿಗೆ ಲುಫ್ಥಾನ್ಸ ಸೇವೆಯನ್ನು ಒದಗಿಸುತ್ತಿದೆ.[೩] ಕಂಪನಿಯನ್ನು ಅದರ ಅಂಗಸಂಸ್ಥೆಗಳೊಂದಿಗೆ ಸಂಯೋಜಿಸಿ ಲೆಕ್ಕಹಾಕಿ ನೋಡಿದಾಗ, ಅದು 722ಕ್ಕೂ ಹೆಚ್ಚಿನ ವಿಮಾನಗಳನ್ನು[೪] ಹೊಂದುವುದರೊಂದಿಗೆ ವಿಶ್ವದಲ್ಲಿನ ಮೂರನೇ-ಅತಿದೊಡ್ಡ ಪ್ರಯಾಣಿಕ ವಿಮಾನಶ್ರೇಣಿಯನ್ನು ಒಳಗೊಂಡಿರುವುದು ಕಂಡುಬರುತ್ತದೆ.
ಕಲೋನ್‌ನ ಡ್ಯೂಟ್ಜ್ ಎಂಬಲ್ಲಿ ಲುಫ್ಥಾನ್ಸದ ನೋಂದಾಯಿತ ಕಚೇರಿ ಹಾಗೂ ಸಂಸ್ಥೆಯ ಕೇಂದ್ರಕಾರ್ಯಾಲಯವಿದ್ದರೆ, ಇದರ ಮುಖ್ಯ ಕಾರ್ಯಾಚರಣೆಗಳ ನೆಲೆ (ಲುಫ್ಥಾನ್ಸ ಏವಿಯೇಷನ್ ಸೆಂಟರ್ [LAC]) ಹಾಗೂ ಪ್ರಧಾನ ಸಂಚಾರಿ ಕೇಂದ್ರವು ಫ್ರಾಂಕ್‌ಫರ್ಟ್ ಆಮ್ ಮೇನ್‌ನಲ್ಲಿನ ಫ್ರಾಂಕ್‌ಫರ್ಟ್ ವಿಮಾನ ನಿಲ್ದಾಣದಲ್ಲಿ ನೆಲೆಗೊಂಡಿದೆ ಹಾಗೂ ಒಂದು ಎರಡನೇ ಕೇಂದ್ರವು ಮ್ಯುನಿಕ್ ವಿಮಾನ ನಿಲ್ದಾಣದಲ್ಲಿ ನೆಲೆಗೊಂಡಿದೆ.[೩][೫][೬][೭] ಲುಫ್ಥಾನ್ಸದ ಬಹುಪಾಲು ವಿಮಾನ ಚಾಲಕರು, ನೆಲ ಸಿಬ್ಬಂದಿ, ಹಾಗೂ ವಿಮಾನದ ಪರಿಚಾರಕರು ಫ್ರಾಂಕ್‌ಫರ್ಟ್‌ನಲ್ಲಿ ನೆಲೆಗೊಂಡಿದ್ದಾರೆ.[೮]
ಲುಫ್ಥಾನ್ಸವು ವಿಶ್ವದ ಅತಿದೊಡ್ಡ ವಿಮಾನಯಾನ ಸಂಸ್ಥೆ ಒಕ್ಕೂಟವಾದ ಸ್ಟಾರ್ ಅಲಯೆನ್ಸ್‌ನ ಓರ್ವ ಸಂಸ್ಥಾಪಕ ಸದಸ್ಯನಾಗಿದೆ. ಥಾಯ್ ಏರ್‌ವೇಸ್, ಯುನೈಟೆಡ್ ಏರ್‌ಲೈನ್ಸ್, ಏರ್ ಕೆನಡಾ ಹಾಗೂ ಸ್ಕ್ಯಾಂಡಿನೇವಿಯನ್ ಏರ್‌ಲೈನ್ಸ್ ಸಿಸ್ಟಮ್ ಇವೇ ಮೊದಲಾದ ವಿಮಾನಯಾನ ಸಂಸ್ಥೆಗಳನ್ನು ಒಡಗೂಡಿಕೊಂಡು 1997ರಲ್ಲಿ ಸ್ಟಾರ್ ಅಲಯೆನ್ಸ್ ಒಕ್ಕೂಟವು ರೂಪುಗೊಂಡಿತು. 500ಕ್ಕಿಂತಲೂ ಹೆಚ್ಚಿನ ವಿಮಾನಗಳನ್ನು ಲುಫ್ಥಾನ್ಸ ಗ್ರೂಪ್ ನಿರ್ವಹಿಸುತ್ತದೆ ಮತ್ತು 146 ರಾಷ್ಟ್ರೀಯತೆಗಳಿಗೆ ಸೇರಿದ (2007ರ ಡಿಸೆಂಬರ್ 31ರವೇಳೆಗೆ ಇದ್ದಂತೆ) ವಿಶ್ವಾದ್ಯಂತದ 105,261 ಜನರನ್ನು ಇದು ಸೇವೆಗೆ ನೇಮಿಸಿಕೊಂಡಿದೆ. 2008ರಲ್ಲಿ, ಲುಫ್ಥಾನ್ಸ ವಿಮಾನಗಳಲ್ಲಿ 70.5 ದಶಲಕ್ಷ ಪ್ರಯಾಣಿಕರು ಪಯಣಿಸಿದರು (ಇದರಲ್ಲಿ ಜರ್ಮನ್‌ವಿಂಗ್ಸ್, BMI, AUA, ಬ್ರಸೆಲ್ಸ್ ಏರ್‌ಲೈನ್ಸ್‌ಗಳಲ್ಲಿ ಪಯಣಿಸಿದವರ ವಿವರ ಸೇರಿಲ್ಲ).
ಇತಿಹಾಸ
ಬದಲಾಯಿಸಿಈ sectionಪರಿಶೀಲನೆಗಾಗಿ ಹೆಚ್ಚಿನ ಉಲ್ಲೇಖಗಳ ಅಗತ್ಯವಿದೆ. (August 2009) |
1920ರ ದಶಕದಿಂದ 1930ರ ದಶಕದವರೆಗೆ: ಆರಂಭಿಕ ವರ್ಷಗಳು
ಬದಲಾಯಿಸಿ"ಡ್ಯೂಷೆ ಏರೋ ಲಾಯ್ಡ್" (DAL) ಹಾಗೂ "ಜಂಕರ್ಸ್ ಲುಫ್ತ್‌ವೆರ್ಕರ್" ಕಂಪನಿಗಳ ನಡುವಿನ ಒಂದು ವಿಲೀನವನ್ನು ಅನುಸರಿಸಿ, 1926ರ ಜನವರಿ 6ರಂದು ಬರ್ಲಿನ್‌ನಲ್ಲಿ ಕಂಪನಿಯು ಸಂಸ್ಥಾಪಿಸಲ್ಪಟ್ಟಿತು.[೯] ಡ್ಯೂಷೆ ಲುಫ್ತ್ ಹಾನ್ಸಾ ಆಕ್ಟೀಂಜೆಸೆಲ್‌ಷಾಫ್ಟ್ ಎಂಬುದು ಕಂಪನಿಯ ಮೂಲ ಹೆಸರಾಗಿತ್ತು. ಒಂದು ಪದವಾಗಿ ಲುಫ್ಥಾನ್ಸ ಎಂಬ ಹೆಸರನ್ನು 1933ರಿಂದ ಬಳಸಿಕೊಂಡು ಬರಲಾಗಿದೆ. 1927ರ ಡಿಸೆಂಬರ್ 9ರಂದು, ಜರ್ಮನ್ ಸರ್ಕಾರದ ಪರವಾಗಿ ಡ್ಯೂಷೆ ಲುಫ್ತ್ ಹಾನ್ಸಾ ಕಂಪನಿಯು ಸ್ಪ್ಯಾನಿಷ್ ಸರ್ಕಾರದೊಂದಿಗೆ ಒಪ್ಪಂದವೊಂದನ್ನು ಮಾಡಿಕೊಂಡಿತು; ಎರಡೂ ದೇಶಗಳ ನಡುವೆ ಒಂದು ವಾಯುಯಾನ ಸೇವೆಯನ್ನು ಪ್ರಾರಂಭಿಸುವುದು ಈ ಒಪ್ಪಂದದ ತಿರುಳಾಗಿತ್ತು. ಅಂತಿಮವಾಗಿ ಇಬೆರಿಯಾ ಎಂದು ಕರೆಸಿಕೊಂಡ ವಿಮಾನಯಾನ ಸಂಸ್ಥೆಯೊಂದನ್ನು ಸ್ಥಾಪಿಸುವುದಕ್ಕಾಗಿ ಒಂದು ಬಂಡವಾಳ ಹೂಡಿಕೆ ಮಾಡುವುದೂ ಸಹ ಇದರಲ್ಲಿ ಸೇರಿತ್ತು.
IIನೇ ಜಾಗತಿಕ ಸಮರಕ್ಕೆ ಮುಂಚಿನ ವರ್ಷಗಳಲ್ಲಿ, ಬಹುಪಾಲು ಡಾರ್ನಿಯರ್, ಜಂಕರ್ಸ್, ಹೆಂಕೆಲ್, ಫಾಕೆ-ವುಲ್ಫ್ ವಿಮಾನಗಳು ಹಾಗೂ ಜರ್ಮನ್-ವಿನ್ಯಾಸದ ಇತರ ವಿಮಾನಗಳ ಒಂದು ಶ್ರೇಣಿಯನ್ನು ಬಳಸಿಕೊಂಡು ದೂರ ಪ್ರಾಚ್ಯ ಹಾಗೂ ಉತ್ತರ ಅಟ್ಲಾಂಟಿಕ್ ಮತ್ತು ದಕ್ಷಿಣ ಅಟ್ಲಾಂಟಿಕ್ ಆದ್ಯಂತದ ಪ್ರದೇಶಗಳಿಗೆ ಕಂಪನಿಯು ಮಾರ್ಗಗಳನ್ನು ಪ್ರವರ್ತನಗೊಳಿಸಿತ್ತು. ದಕ್ಷಿಣ ಅಮೆರಿಕಾದ ಕೆಲವೊಂದು ವಿಮಾನಯಾನ ಸಂಸ್ಥೆಗಳ ಸ್ಥಾಪನೆಯಲ್ಲೂ ಇದು ಸಕ್ರಿಯವಾಗಿ ತೊಡಗಿಸಿಕೊಂಡಿತ್ತು; ನಿರ್ದಿಷ್ಟವಾಗಿ ಹೇಳುವುದಾದರೆ, ಕಾಂಡಾರ್ ಸಿಂಡಿಕೇಟ್ ಎಂಬ ತನ್ನ ಅಂಗಸಂಸ್ಥೆಯು ಮೂಲಕ ಕಂಪನಿಯು ಈ ಚಟುವಟಿಕೆಯಲ್ಲಿ ಹೆಚ್ಚು ತೊಡಗಿಸಿಕೊಂಡಿತ್ತು. 1939ರಲ್ಲಿ ಯುದ್ಧವು ಏಕಾಏಕಿ ಆರಂಭಗೊಂಡ ನಂತರ, ತಟಸ್ಥ ದೇಶಗಳಿಗೆ ವಾಯುಯಾನ ಸೇವೆಯನ್ನು ನಿರ್ವಹಿಸುವಲ್ಲಿ ಲುಫ್ಥಾನ್ಸ ಮಾತ್ರ ಸಮರ್ಥವಾಗಿತ್ತು. ಯುದ್ಧಕ್ಕೆ ಮುಂಚಿತವಾಗಿ, ಇಟಲಿಯ ಖಂಡಾಂತರದ ವಿಮಾನಯಾನ ಸಂಸ್ಥೆಯ (ಲಿನೀ ಏರೀ ಟ್ರಾನ್ಸ್‌ಕಾಂಟಿನೆಂಟಾಲಿ ಇಟಾಲಿಯಾನೆ , ಅಥವಾ LATI) ಜೊತೆಯಲ್ಲಿ ಕಂಪನಿಯು ದಕ್ಷಿಣ ಅಮೆರಿಕಾದಲ್ಲಿ ಹುರುಪಿನಿಂದ ಸ್ಪರ್ಧಿಸಿತು.[೧೦] ಆದಾಗ್ಯೂ, 1945ರಲ್ಲಿ ಜರ್ಮನಿಯು ಸೋಲುಂಡಿದ್ದನ್ನು ಅನುಸರಿಸಿ ಲುಫ್ಥಾನ್ಸ ತನ್ನೆಲ್ಲಾ ಸೇವೆಯನ್ನೂ ರದ್ದುಮಾಡಿತು.
1950ರ ದಶಕ: ಯುದ್ಧಾನಂತರದ ಸುಧಾರಣೆ
ಬದಲಾಯಿಸಿ1953ರ ಜನವರಿ 6ರಂದು ಆಕ್ಟೀಂಜೆಸೆಲ್‌ಷಾಫ್ಟ್ ಫೂರ್ ಲುಫ್ತ್‌ವೆರ್ಕರ್ಸ್‌ಬೆಡಾರ್ಫ್ (ಲುಫ್ತಾಗ್) ಎಂಬ ಹೆಸರಿನಲ್ಲಿ ಲುಫ್ಥಾನ್ಸ ಮರುಸೃಷ್ಟಿಸಲ್ಪಟ್ಟಿತು ಮತ್ತು 1954ರ ಆಗಸ್ಟ್ 6ರಂದು ಇದಕ್ಕೆ ಡ್ಯೂಷೆ ಲುಫ್ಥಾನ್ಸ ಆಕ್ಟೀಂಜೆಸೆಲ್‌ಷಾಫ್ಟ್ ಎಂಬುದಾಗಿ ಮರುನಾಮಕರಣ ಮಾಡಲಾಯಿತು. 1953ರಲ್ಲಿ ಹುಟ್ಟಿಕೊಂಡ "ಹೊಸ" ಲುಫ್ಥಾನ್ಸ, 1926ರಲ್ಲಿ ಸಂಸ್ಥಾಪಿಸಲ್ಪಟ್ಟ ಮತ್ತು IIನೇ ಜಾಗತಿಕ ಸಮರಕ್ಕೆ ಮುಂಚಿತವಾಗಿ ಹಾಗೂ ಅದರ ಅವಧಿಯಲ್ಲಿ ಅಸ್ತಿತ್ವದಲ್ಲಿದ್ದ ಲುಫ್ಥಾನ್ಸದ ತರುವಾಯದ ಕಾನೂನುಬದ್ಧ ಸಂಸ್ಥೆಯಲ್ಲ. 1955ರ ಏಪ್ರಿಲ್ 1ರಂದು, ಕಾನ್ವೇರ್ 340 ವಿಮಾನವನ್ನು ಬಳಸಿಕೊಂಡು ಜರ್ಮನಿಯೊಳಗಿನ ನಿಗದಿತ ಸೇವೆಯನ್ನು ಲುಫ್ಥಾನ್ಸ ಪುನರಾರಂಭಿಸಿತು. ಯುರೋಪ್‌ನಲ್ಲಿನ ತಾಣಗಳಿಗೆ ಹಾರಾಟಗಳನ್ನು ನಡೆಸುವ ಮೂಲಕ, 1955ರ ಮೇ 15ರಂದು ಅಂತರರಾಷ್ಟ್ರೀಯ ಕಾರ್ಯಾಚರಣೆಗಳು ಪ್ರಾರಂಭಗೊಂಡವು; ಇದಾದ ನಂತರ ಲಾಕ್‌ಹೀಡ್ ಸೂಪರ್ ಕಾನ್ಸ್ಟಲೇಷನ್ ವಿಮಾನಗಳನ್ನು ಬಳಸಿಕೊಂಡು ಜೂನ್ 8ರಂದು ನ್ಯೂಯಾರ್ಕ್‌ಗೆ ಸೇವೆಯನ್ನು ಪ್ರಾರಂಭಿಸಲಾಯಿತು. 1956ರ ಆಗಸ್ಟ್‌ನಲ್ಲಿ ದಕ್ಷಿಣ ಅಟ್ಲಾಂಟಿಕ್ ಮಾರ್ಗಗಳು ಪುನರಾರಂಭಿಸಲ್ಪಟ್ಟವು.
ಲುಫ್ಥಾನ್ಸ ಹೆಸರನ್ನು ಬಳಸಿಕೊಂಡು ತನ್ನದೇ ಆದ ವಿಮಾನಯಾನ ಸಂಸ್ಥೆಯನ್ನು ಸ್ಥಾಪಿಸಲು ಪೂರ್ವ ಜರ್ಮನಿಯು 1950ರ ದಶಕದಲ್ಲಿ ಪ್ರಯತ್ನಿಸಿತು; ಆದರೆ ಅಷ್ಟು ಹೊತ್ತಿಗಾಗಲೇ ಪಶ್ಚಿಮ ಜರ್ಮನಿಯಲ್ಲಿ ಈ ಹೆಸರಿನ ವಿಮಾನಯಾನ ಸಂಸ್ಥೆಯು ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿದ್ದರಿಂದ, ಪೂರ್ವ ಜರ್ಮನಿಯ ಈ ಪ್ರಯತ್ನವು ಪಶ್ಚಿಮ ಜರ್ಮನಿಯೊಂದಿಗಿನ ಒಂದು ವಿವಾದದ ಸೃಷ್ಟಿಗೆ ಕಾರಣವಾಯಿತು. ಪೂರ್ವ ಜರ್ಮನಿಯ ತನ್ನ ರಾಷ್ಟ್ರೀಯ ವಿಮಾನಯಾನ ಸಂಸ್ಥೆಗೆ ಇಂಟರ್‌ಫ್ಲಗ್ ಎಂದು ಮರುನಾಮಕರಣ ಮಾಡಿತು, ಇದು 1991ರಲ್ಲಿ ತನ್ನ ಕಾರ್ಯಾಚರಣೆಗಳನ್ನು ನಿಲ್ಲಿಸಿತು. GDR ಆಳ್ವಿಕೆಯು ಮುಕ್ತಾಯವಾಗುವವರೆಗೂ ಪಶ್ಚಿಮ ಬರ್ಲಿನ್ ವ್ಯಾಪ್ತಿಯೊಳಗೆ ಹಾರಾಟವನ್ನು ನಡೆಸದಂತೆ ಲುಫ್ಥಾನ್ಸದ ಮೇಲೆ ನಿಷೇಧವನ್ನು ಹೇರಲಾಗಿತ್ತು.
1960ರ ದಶಕ: ಜೆಟ್‌ಲೈನರ್ ಪರಿಚಯ
ಬದಲಾಯಿಸಿ1958ರಲ್ಲಿ, ನಾಲ್ಕು ಬೋಯಿಂಗ್ 707 ವಿಮಾನಗಳಿಗಾಗಿ ಲುಫ್ಥಾನ್ಸ ಒಂದು ಬೇಡಿಕೆಯನ್ನು ಸಲ್ಲಿಸಿತು; 1960ರ ಮಾರ್ಚ್‌ನಲ್ಲಿ ಫ್ರಾಂಕ್‌ಫರ್ಟ್‌ನಿಂದ ನ್ಯೂಯಾರ್ಕ್‌ಗೆ ಜೆಟ್ ಸೇವೆಗಳನ್ನು ಪ್ರಾರಂಭಿಸಲು ಇವು ಬಳಸಲ್ಪಟ್ಟವು. 707 ವಿಮಾನಶ್ರೇಣಿಗೆ ಒತ್ತಾಸೆಯಾಗಿ ನಿಲ್ಲಲೆಂದು ಬೋಯಿಂಗ್ 720 ವಿಮಾನಗಳನ್ನು ನಂತರದಲ್ಲಿ ತರಲಾಯಿತು. 1961ರ ಫೆಬ್ರುವರಿಯಲ್ಲಿ, ದೂರ ಪ್ರಾಚ್ಯ ಮಾರ್ಗಗಳು ಬ್ಯಾಂಗ್‌ಕಾಕ್, ಥೈಲೆಂಡ್ ಆಚೆಗೆ ಹಾಂಗ್ ಕಾಂಗ್ ಮತ್ತು ಟೋಕಿಯೋವರೆಗೆ ವಿಸ್ತರಿಸಲ್ಪಟ್ಟವು. ದಕ್ಷಿಣ ಆಫ್ರಿಕಾದ ಲಾಗೋಸ್, ನೈಜೀರಿಯಾ ಹಾಗೂ ಜೊಹಾನ್ಸ್‌ಬರ್ಗ್ ನಗರಗಳನ್ನು 1962ರಲ್ಲಿ ಸೇವೆಯ ವ್ಯಾಪ್ತಿಗೆ ಸೇರ್ಪಡೆ ಮಾಡಿಕೊಳ್ಳಲಾಯಿತು.
1964ರಲ್ಲಿ ಬೋಯಿಂಗ್ 727 ವಿಮಾನಗಳನ್ನು ಲುಫ್ಥಾನ್ಸವು ಸೇವೆಗೆ ಪರಿಚಯಿಸಿತು ಮತ್ತು ಅದೇ ವರ್ಷದ ಮೇ ತಿಂಗಳಲ್ಲಿ ಫ್ರಾಂಕ್‌ಫರ್ಟ್‌ನಿಂದ ಟೋಕಿಯೋವರೆಗಿನ ಧ್ರುವೀಯ ಮಾರ್ಗದಲ್ಲಿ ಅವು ಹಾರಾಟವನ್ನು ಪ್ರಾರಂಭಿಸಿದವು. 1965ರ ಫೆಬ್ರುವರಿಯಲ್ಲಿ, ಮಧ್ಯಮ-ಪ್ರಯಾಣ ದೂರದ ಇಪ್ಪತ್ತೊಂದು ಬೋಯಿಂಗ್ 737 ಜೆಟ್ ವಿಮಾನಗಳಿಗಾಗಿ ಕಂಪನಿಯು ಬೇಡಿಕೆಯೊಂದನ್ನು ಸಲ್ಲಿಸಿತು; ಈ ವಿಮಾನಗಳನ್ನು 1968ರಲ್ಲಿ ಸೇವೆಗೆ ತೊಡಗಿಸಲಾಯಿತು.
ಲುಫ್ಥಾನ್ಸ ಕಂಪನಿಯು ಬೋಯಿಂಗ್ 737 ವಿಮಾನದ ಮೊದಲ ಗ್ರಾಹಕ ಮಾತ್ರವೇ ಅಲ್ಲ, ಈ ಮಾದರಿಯ ವಿಮಾನಗಳನ್ನು ಅತಿದೊಡ್ಡ ಸಂಖ್ಯೆಯಲ್ಲಿ ಖರೀದಿಸಿದ ಗ್ರಾಹಕ ಎಂದೂ ಹೆಸರಾಯಿತು. ಅಷ್ಟೇ ಅಲ್ಲ, ಹೊಸ 737-100 ವಿಮಾನ ಮಾದರಿಗಳ ಕೇವಲ ನಾಲ್ಕು ಖರೀದಿದಾರರ ಪೈಕಿ ಒಂದು ಎಂಬ ಕೀರ್ತಿಯನ್ನೂ ಲುಫ್ಥಾನ್ಸ ಪಡೆಯಿತು (ನಾಸಾ, ಮಲೇಷಿಯಾ-ಸಿಂಗಾಪುರ್ ಏರ್‌ಲೈನ್ಸ್ ಹಾಗೂ ಏವಿಯಾಂಕಾ ಇವು ಉಳಿದ ಮೂರು ಖರೀದಿದಾರರಾಗಿದ್ದವು; ತಾಂತ್ರಿಕವಾಗಿ ಹೇಳುವುದಾದರೆ, NASA ವಿಮಾನದ ಶರೀರವನ್ನು ಮೊದಲು ನಿರ್ಮಿಸಲಾಯಿತಾದರೂ, ಅದನ್ನು ಕೊನೆಗೆ ವಿತರಿಸಲಾಯಿತು ಮತ್ತು ಇದನ್ನು ಲುಫ್ಥಾನ್ಸಗೆ ವಿತರಿಸಲು ಮೂಲತಃ ಆಶಿಸಲಾಗಿತ್ತು). ಹಾಗೆ ಮಾಡುವ ಮೂಲಕ, ಒಂದು ಬೋಯಿಂಗ್ ವಾಣಿಜ್ಯ ವಿಮಾನಕ್ಕೆ ಸಂಬಂಧಿಸಿದಂತೆ ಲುಫ್ಥಾನ್ಸವು ವಿದೇಶಿ ಉಪಕ್ರಮದ ಮೊದಲ ಗ್ರಾಹಕ ಎನಿಸಿಕೊಂಡಿತು.
1970-1980ರ ದಶಕ: ಅಗಲ-ಶರೀರದ ಯುಗ
ಬದಲಾಯಿಸಿ1970ರ ಏಪ್ರಿಲ್‌ರಂದು ನಡೆದ ಬೋಯಿಂಗ್ 747 ವಿಮಾನದ ಉದ್ಘಾಟನಾ ಹಾರಾಟದೊಂದಿಗೆ, ಲುಫ್ಥಾನ್ಸಗೆ ಸಂಬಂಧಿಸಿದ ಅಗಲ-ಶರೀರದ ವಿಮಾನದ ಯುಗವು ಪ್ರಾರಂಭವಾದಂತಾಯಿತು. 1971ರಲ್ಲಿ ದಕ್ಷಿಣ ಅಮೆರಿಕಾಕ್ಕೆ ಸೇವೆಯನ್ನು ಲುಫ್ಥಾನ್ಸ ಶುರುಮಾಡಿತು. 1979ರಲ್ಲಿ, ಇಪ್ಪತ್ತೈದು ವಿಮಾನಗಳಿಗೆ ಒಂದು ಬೇಡಿಕೆಯನ್ನು ಸಲ್ಲಿಸುವ ಮೂಲಕ, ಮುಂದುವರಿದ ತಂತ್ರಜ್ಞಾನದ ಹೊಸ ಏರ್‌ಬಸ್ A310 ವಿಮಾನಕ್ಕೆ ಸಂಬಂಧಿಸಿದಂತೆ ಲುಫ್ಥಾನ್ಸ ಮತ್ತು ಸ್ವಿಸ್‌ಏರ್ ಕಂಪನಿಗಳು ಉಪಕ್ರಮದ ಗ್ರಾಹಕರೆಂದು ಕರೆಸಿಕೊಂಡವು.
ಹದಿನೈದು ಏರ್‌ಬಸ್ A320 ವಿಮಾನಗಳು ಹಾಗೂ ಏಳು ಏರ್‌ಬಸ್ A300-600 ವಿಮಾನಗಳಿಗಾಗಿ ಒಂದು ಬೇಡಿಕೆಯನ್ನು ಸಲ್ಲಿಸುವ ಮೂಲಕ, 1990ರ ದಶಕಕ್ಕೆ ಸಂಬಂಧಿಸಿದ ಕಂಪನಿಯ ವಿಮಾನಶ್ರೇಣಿ ಆಧುನೀಕರಣದ ಕಾರ್ಯಕ್ರಮವು 1985ರ ಜೂನ್ 29ರಂದು ಪ್ರಾರಂಭವಾಯಿತು. ಕೆಲವೇ ದಿನಗಳ ನಂತರ, ಹತ್ತು ಬೋಯಿಂಗ್ 737-300 ವಿಮಾನಗಳಿಗಾಗಿ ಬೇಡಿಕೆಯನ್ನು ಸಲ್ಲಿಸಲಾಯಿತು. 1987 ಮತ್ತು 1992ರ ನಡುವೆ ಎಲ್ಲಾ ವಿಮಾನಗಳೂ ವಿತರಿಸಲ್ಪಟ್ಟವು. ಏರ್‌ಬಸ್ A321, ಏರ್‌ಬಸ್ A340 ಹಾಗೂ ಬೋಯಿಂಗ್ 747-400 ವಿಮಾನಗಳನ್ನೂ ಸಹ ಲುಫ್ಥಾನ್ಸ ಖರೀದಿಸಿತು.
1988ರಲ್ಲಿ ಲುಫ್ಥಾನ್ಸ ಒಂದು ಹೊಸ ಸಾಂಸ್ಥಿಕ ಗುರುತನ್ನು ಅಳವಡಿಸಿಕೊಂಡಿತು. ವಿಮಾನಶ್ರೇಣಿಗೆ ಒಂದು ಹೊಸ ವಿಶಿಷ್ಟ ವಿನ್ಯಾಸವನ್ನು ಒದಗಿಸಿದ್ದೇ ಅಲ್ಲದೇ, ವಿಮಾನ ಚಾಲಕ ಕೋಣೆಗಳು, ನಗರ ಕಚೇರಿಗಳು ಹಾಗೂ ವಿಮಾನ ನಿಲ್ದಾಣದಲ್ಲಿನ ಕಾಯುವ ಕೋಣೆಗಳನ್ನು ಮರುವಿನ್ಯಾಸಗೊಳಿಸಲಾಯಿತು.[ಸೂಕ್ತ ಉಲ್ಲೇಖನ ಬೇಕು]
1990ರ ದಶಕ-2000ರ ದಶಕ: ಮುಂದಿನ ವಿಸ್ತರಣೆ
ಬದಲಾಯಿಸಿಪುನರೇಕೀಕರಣದ 25 ದಿನಗಳ ನಂತರ 1990ರ ಅಕ್ಟೋಬರ್ 28ರಂದು, ಬರ್ಲಿನ್ ಮತ್ತೊಮ್ಮೆ ಲುಫ್ಥಾನ್ಸದ ಒಂದು ಗಮ್ಯಸ್ಥಾನವಾಯಿತು. 1997ರ ಮೇ 18ರಂದು ಲುಫ್ಥಾನ್ಸ, ಏರ್ ಕೆನಡಾ, ಸ್ಕ್ಯಾಂಡಿನೇವಿಯನ್ ಏರ್‌ಲೈನ್ಸ್, ಥಾಯ್ ಏರ್‌ವೇಸ್ ಹಾಗೂ ಯುನೈಟೆಡ್ ಏರ್‌ಲೈನ್ಸ್ ಒಟ್ಟಾಗಿ ಸೇರಿಕೊಂಡು ವಿಶ್ವದ ಮೊದಲ ಬಹುಪಕ್ಷೀಯ ವಿಮಾನಯಾನ ಸಂಸ್ಥೆ ಒಕ್ಕೂಟವಾದ ಸ್ಟಾರ್ ಅಲಯೆನ್ಸ್‌ನ್ನು ರೂಪಿಸಿದವು.
2000ದಲ್ಲಿ ಏರ್ ಒನ್ ಸಂಸ್ಥೆಯು ಲುಫ್ಥಾನ್ಸದ ಪಾಲುದಾರ ವಿಮಾನಯಾನ ಸಂಸ್ಥೆ ಎನಿಸಿಕೊಂಡಿತು ಮತ್ತು ಏರ್ ಒನ್‌ನ ಹೆಚ್ಚೂಕಮ್ಮಿ ಎಲ್ಲಾ ವಿಮಾನಗಳೂ ಲುಫ್ಥಾನ್ಸದೊಂದಿಗೆ ಸಂಕೇತ-ಹಂಚಿಕೊಂಡಿವೆ. ಸಾಮರ್ಥ್ಯ ಇತಿಮಿತಿಗಳಿಂದಾಗಿ ಸಮಸ್ಯೆಯನ್ನು ಎದರಿಸುತ್ತಿದ್ದ ಫ್ರಾಂಕ್‌ಫರ್ಟ್‌ನಲ್ಲಿನ ತನ್ನ ಮುಖ್ಯಕೇಂದ್ರದ ದಟ್ಟಣೆಯನ್ನು ವಿರಳಗೊಳಿಸುವ ಸಲುವಾಗಿ, 2003ರ ಜೂನ್‌ನಲ್ಲಿ ಲುಫ್ಥಾನ್ಸವು ಮ್ಯುನಿಕ್ನ ಫ್ರಾನ್ಜ್ ಜೋಸೆಫ್ ಸ್ಟ್ರೌಬ್ ವಿಮಾನ ನಿಲ್ದಾಣದಲ್ಲಿ 2ನೇ ಆಗಮನ-ನಿರ್ಗಮನ ನಿಲ್ದಾಣವನ್ನು ಪ್ರಾರಂಭಿಸಿತು. ಇದು ವಿಮಾನಯಾನ ಸಂಸ್ಥೆಯೊಂದರ ಭಾಗಶಃ ಸ್ವಾಮ್ಯತ್ವಕ್ಕೆ ಒಳಗಾಗಿರುವ ಯುರೋಪ್‌ನಲ್ಲಿನ ಮೊದಲ ಆಗಮನ-ನಿರ್ಗಮನ ನಿಲ್ದಾಣಗಳ ಪೈಕಿ ಒಂದಾಗಿದೆ.
2004ರ ಮೇ 17ರಂದು, ವಿಮಾನದಲ್ಲಿನ ಆನ್‌ಲೈನ್ ಸಂಯೋಜಕತೆ ಸೇವೆಗೆ ಬೋಯಿಂಗ್‌ನಿಂದ ಸಂಪರ್ಕ ಒದಗಿಸುವುದಕ್ಕೆ ಸಂಬಂಧಿಸಿದಂತೆ ಲುಫ್ಥಾನ್ಸವು ಉಪಕ್ರಮದ ಗ್ರಾಹಕ ಎನಿಸಿಕೊಂಡಿತು.
2005ರ ಮಾರ್ಚ್ 22ರಂದು ಲುಫ್ಥಾನ್ಸ ಏರ್‌ಲೈನ್ಸ್‌ನೊಂದಿಗೆ SWISS ವಿಲೀನಗೊಂಡಿತು. ವಿಲೀನದ ನಂತರದ ವರ್ಷಗಳ ಅವಧಿಯಲ್ಲಿ, ಒಂದುವೇಳೆ ಲುಫ್ಥಾನ್ಸದ ಷೇರು ಬೆಲೆಯು ವಿಮಾನಯಾನ ಸಂಸ್ಥೆಯೊಂದರ ಸೂಚಿಗಿಂತ ಮೇಲುಗೈ ಸಾಧಿಸಿದರೆ, ಹೆಚ್ಚುಪಾಲು ಷೇರುಗಳನ್ನು ಹೊಂದಿದವರಿಗೆ (ಅಂದರೆ ಸ್ವಿಸ್ ಸರ್ಕಾರ ಮತ್ತು ಬೃಹತ್ ಸ್ವಿಸ್ ಕಂಪನಿಗಳಿಗೆ) ಪಾವತಿಯನ್ನು ಮಾಡಬೇಕೆಂಬ ಷರತ್ತನ್ನು ಈ ವಿಲೀನವು ಒಳಗೊಂಡಿತ್ತು. ಎರಡು ಕಂಪನಿಗಳು ಪ್ರತ್ಯೇಕವಾಗಿ ನಡೆದುಕೊಂಡುಹೋಗುವಂತೆ ಮುಂದುವರಿಯಲಿವೆ.
2006ರ ಡಿಸೆಂಬರ್ 6ರಂದು, ಬೋಯಿಂಗ್ 747-8 ಎಂದು ಕರೆಯಲ್ಪಡುವ 20 ದೊಡ್ಡ ಪ್ರಯಾಣ-ವಿಮಾನಗಳಿಗೆ ಒಂದು ಬೇಡಿಕೆಯನ್ನು ಸಲ್ಲಿಸುವ ಮೂಲಕ, ಲುಫ್ಥಾನ್ಸವು ಈ ಬಗೆಗೆ ಸಂಬಂಧಿಸಿದ ಉಪಕ್ರಮದ ಗ್ರಾಹಕ ಎನಿಸಿಕೊಂಡಿತು. ಈ ವಿಮಾನಯಾನ ಸಂಸ್ಥೆಯು (ಏರ್ ಫ್ರಾನ್ಸ್ ನಂತರ) ಏರ್‌ಬಸ್ A380 ವಿಮಾನದ ಕಾರ್ಯಾಚರಣೆ ನಡೆಸುವ ಎರಡನೇ ಐರೋಪ್ಯ ವಿಮಾನಯಾನ ಸಂಸ್ಥೆ ಎನಿಸಿಕೊಳ್ಳಲಿದೆ.
ಅವರ ಮೊದಲ A380 ವಿಮಾನವನ್ನು 2010ರ ಮೇ 19ರಂದು ವಿತರಿಸಲಾಯಿತು.[೧೧]
ಒಕ್ಕೂಟಗಳು ಮತ್ತು ಪಾಲುದಾರಿಕೆಗಳು
ಬದಲಾಯಿಸಿಖಾಸಗಿ ಹೂಡಿಕೆದಾರರು (88.52%), MGL ಜೆಸೆಲ್‌ಷಾಫ್ಟ್ ಫೂರ್ ಲುಫ್ತ್‌ವೆರ್ಕರ್‌ಸ್ವೆರ್ಟೆ (10.05%), ಡ್ಯೂಷೆ ಪೋಸ್ಟ್‌ಬ್ಯಾಂಕ್ (1.03%) ಲುಫ್ಥಾನ್ಸದ ಮಾಲೀಕತ್ವವನ್ನು ಹೊಂದಿದ್ದು, 2007ರ ಮಾರ್ಚ್ ವೇಳೆಗೆ ಇದ್ದಂತೆ ಕಂಪನಿಯು 37,042 ಉದ್ಯೋಗಿಗಳನ್ನು ಹೊಂದಿದೆ.[೩]
ಲುಫ್ಥಾನ್ಸ ಹಾಗೂ ಅಮೆರಿಕಾದ ಕಡಿಮೆ-ವೆಚ್ಚದ ವಿಮಾನಯಾನ ಸಂಸ್ಥೆಯಾದ ಜೆಟ್‌ಬ್ಲೂ ಕಂಪನಿಗಳು ಪಾಲುದಾರಿಕೆಯೊಂದರ ಪ್ರಾರಂಭದ ಕುರಿತು ಡಿಸೆಂಬರ್ 14ರಂದು ಘೋಷಿಸಿದವು; ಜೆಟ್‌ಬ್ಲೂನಲ್ಲಿನ 19%ನಷ್ಟು ಪಾಲನ್ನು ಲುಫ್ಥಾನ್ಸವು ಖರೀದಿಸುವುದರ ಮೂಲಕ ಈ ಪಾಲುದಾರಿಕೆಗೆ ಚಾಲನೆ ಸಿಕ್ಕಂತಾಗಿದೆ. ಇದು EU–U.S. ಓಪನ್ ಸ್ಕೈಸ್ ಒಪ್ಪಂದವು 2008ರಲ್ಲಿ ಜಾರಿಗೆ ಬಂದಾಗಿನಿಂದ, ಅಮೆರಿಕಾದ ಸಾಗಣೆ ಸಂಸ್ಥೆಯೊಂದರಲ್ಲಿ ಐರೋಪ್ಯ ಸಾಗಣೆ ಸಂಸ್ಥೆಯೊಂದು ಮಾಡಿದ ಮೊದಲ ಪ್ರಮುಖ ಒಡೆತನ ಹೂಡಿಕೆ ಎನಿಸಿಕೊಂಡಿದೆ.
2007ರ ಅಂತ್ಯದ ವೇಳೆಗೆ, ರಷ್ಯಾದಿಂದ ಲುಫ್ಥಾನ್ಸ ಕಾರ್ಗೋ ಕೇಂದ್ರದ ವಿವಾದವು ಶುರುಮಾಡಲ್ಪಟ್ಟಿತು. ತನ್ನ ಸರಕು ಕೇಂದ್ರವನ್ನು ಕಜಖ್‌ಸ್ತಾನ್‌ನಿಂದ ರಷ್ಯಾಕ್ಕೆ ವರ್ಗಾಯಿಸಲು ಲುಫ್ಥಾನ್ಸ ಒತ್ತಾಯಕ್ಕೊಳಗಾಯಿತು.
ಲುಫ್ಥಾನ್ಸ ಹಾಗೂ ಬ್ರಸೆಲ್ಸ್ ಏರ್‌ಲೈನ್ಸ್ ಕಂಪನಿಗಳು ತಾವು ಒಟ್ಟಾಗಿ ಸೇರುವುದರ ಕುರಿತು ಸಮಾಲೋಚಿಸುತ್ತಿದ್ದುದಾಗಿ 2008ರ ಆಗಸ್ಟ್ 28ರಂದು ಘೋಷಿಸಿದವು.[೧೨]
2008ರ ಸೆಪ್ಟೆಂಬರ್ 15ರಂದು ಎರಡೂ ವಿಮಾನಯಾನ ಸಂಸ್ಥೆಗಳಿಂದ ಜಂಟಿಯಾಗಿ ಘೋಷಿಸಲ್ಪಟ್ಟ ಪ್ರಕಾರ, ಬ್ರಸೆಲ್ಸ್ ಏರ್‌ಲೈನ್ಸ್‌ನಲ್ಲಿನ 45%ನಷ್ಟು ಪಾಲನ್ನು ಲುಫ್ಥಾನ್ಸ ತನ್ನ ಸ್ವಾಧೀನಕ್ಕೆ ತೆಗೆದುಕೊಳ್ಳಲಿದೆಯೆಂದೂ, ಉಳಿದಿರುವ 55%ನಷ್ಟು ಪಾಲನ್ನು 2011ರಿಂದ ಸ್ವಾಧೀನಕ್ಕೆ ತೆಗೆದುಕೊಳ್ಳುವ ಒಂದು ಆಯ್ಕೆಯನ್ನು ಅದು ಹೊಂದಿದೆಯೆಂದೂ ತಿಳಿದುಬಂತು. ಈ ವ್ಯವಹಾರದ ಒಂದು ಭಾಗವಾಗಿ ಸ್ಟಾರ್ ಅಲಯೆನ್ಸ್ ಒಕ್ಕೂಟವನ್ನು ಬ್ರಸೆಲ್ಸ್ ಏರ್‌ಲೈನ್ಸ್ ಸೇರಿಕೊಳ್ಳಲಿದೆ. 2009ರ ಡಿಸೆಂಬರ್‌ನಲ್ಲಿ ಸ್ಟಾರ್ ಅಲಯೆನ್ಸ್‌ನೊಳಗೆ ಬ್ರಸೆಲ್ಸ್ ಪ್ರವೇಶಿಸಿತು.[೧೩][೧೪][೧೫]
BMIನಲ್ಲಿನ ಮತ್ತೊಂದು 60%ನಷ್ಟು (ಲುಫ್ಥಾನ್ಸ ಅಷ್ಟು ಹೊತ್ತಿಗಾಗಲೇ ಹೊಂದಿದ್ದ 20%ನಷ್ಟು ಭಾಗಕ್ಕೆ ಹೆಚ್ಚುವರಿಯಾಗಿ) ಷೇರನ್ನು ಖರೀದಿಸುವಲ್ಲಿನ ತನ್ನ ಆಯ್ಕೆಯನ್ನು 2008ರ ಅಕ್ಟೋಬರ್ 28ರಂದು ಲುಫ್ಥಾನ್ಸ ಚಲಾಯಿಸಿತು; ಇದು ಹಿಂದಿನ ಮಾಲೀಕನಾದ ಸರ್ ಮೈಕೇಲ್ ಬಿಷಪ್‌ನೊಂದಿಗೆ ವಿವಾದವೊಂದು ಹುಟ್ಟಿಕೊಳ್ಳಲು ಕಾರಣವಾಯಿತು. 2009ರ ಜೂನ್ ಅಂತ್ಯದ ವೇಳೆಗೆ ಎರಡೂ ಪಕ್ಷಸ್ಥರು ಒಂದು ಒಪ್ಪಂದಕ್ಕೆ ತಲುಪಿದ್ದರಿಂದ, 2009ರ ಜುಲೈ 1ರಿಂದ ಅನ್ವಯವಾಗುವಂತೆ ಸ್ವಾಧೀನ ಪ್ರಕ್ರಿಯೆಯು ಜಾರಿಗೆ ಬರಲು ಸಾಧ್ಯವಾಯಿತು.[೧೬] ಸ್ಕ್ಯಾಂಡಿನೇವಿಯನ್ ಏರ್‌ಲೈನ್ಸ್‌ನಿಂದ ಉಳಿದಿರುವ 20%ನಷ್ಟು ಭಾಗವನ್ನು ಸ್ವಾಧೀನಕ್ಕೆ ತೆಗೆದುಕೊಳ್ಳುವ ಮೂಲಕ, 2009ರ ನವೆಂಬರ್ 1ರಿಂದ ಅನ್ವಯವಾಗುವಂತೆ BMI ಮೇಲೆ ಲುಫ್ಥಾನ್ಸ ಸಂಪೂರ್ಣ ಹತೋಟಿಯನ್ನು ಹೊಂದಿದೆ.[೧೭]
ಲುಫ್ಥಾನ್ಸ ಹಾಗೂ ಆಸ್ಟ್ರಿಯನ್ ಕಂಪನಿಗಳು ನವೆಂಬರ್‌ನಲ್ಲಿ ಒಂದು ವ್ಯವಹಾರವನ್ನು ಘೋಷಿಸಿದ್ದು, ಇದರನ್ವಯ ಆಸ್ಟ್ರಿಯನ್ ಸರ್ಕಾರದಿಂದ ಲುಫ್ಥಾನ್ಸ ಕಂಪನಿಯು ಬಹುಪಾಲು ಸ್ಟಾಕನ್ನು ಖರೀದಿಸಲಿದೆ. ಈ ವ್ಯವಹಾರವು 2009ರ ಜನವರಿಯಲ್ಲಿ ಸಂಪೂರ್ಣಗೊಂಡಿತು. ಎರಡು ವಿಮಾನಯಾನ ಸಂಸ್ಥೆಗಳ ನಡುವಿನ ಒಂದು ವಿಲೀನದ ಕುರಿತಾಗಿ ಸ್ಕ್ಯಾಂಡಿನೇವಿಯನ್ ಏರ್‌ಲೈನ್ಸ್ ಸಿಸ್ಟಮ್ ಜೊತೆಯಲ್ಲಿ ತಾನು ಗಂಭೀರ ಸ್ವರೂಪದ ಮಾತುಕತೆಗಳಲ್ಲಿ ತೊಡಗಿಕೊಂಡಿರುವುದಾಗಿ 2009ರ ಜನವರಿಯಲ್ಲಿ ಲುಫ್ಥಾನ್ಸ ಘೋಷಿಸಿತು; ಅದರೆ ಕಳೆದ ಕೆಲವು ವರ್ಷಗಳಿಂದ ಇರುವ ಸ್ಕ್ಯಾಂಡಿನೇವಿಯನ್ ಏರ್‌ಲೈನ್ಸ್ ಸಿಸ್ಟಮ್‌ನ ಹಣಕಾಸಿನ ಸ್ಥಿತಿಯ ಕಾರಣದಿಂದಾಗಿ, ಇದು ಕಾರ್ಯಸಾಧ್ಯವಾಗುವುದಕ್ಕೆ ಮುಂಚಿತವಾಗಿ ಲುಫ್ಥಾನ್ಸವು SASಗೆ ಮಹತ್ತರವಾದ ಬದಲಾವಣೆಗಳನ್ನು ಮಾಡಬೇಕಾಗಿ ಬರುತ್ತದೆ. ಎರಡೂ ಕಂಪನಿಗಳ ನಡುವೆ ಒಂದು "ಅತ್ಯಂತ ನಿಕಟವಾದ ವಾಣಿಜ್ಯ ಸಹ-ಕಾರ್ಯಾಚರಣೆ"ಯನ್ನು ಹೊಂದುವುದರ ಕುರಿತಾದ ಮಾತುಕತೆಗಳು ನಡೆಯುತ್ತಿವೆ, ಆದರೆ ಒಂದು ಸ್ವಾಧೀನವೆಂಬುದು ಲುಫ್ಥಾನ್ಸದ ಯೋಜನೆಗಳಲ್ಲಿಲ್ಲ ಎಂಬುದಾಗಿ 2009ರ ಮೇ ತಿಂಗಳಲ್ಲಿ ಅದು ಘೋಷಿಸಿತು.[೧೮] ಇಷ್ಟೇ ಅಲ್ಲದೇ, ಒಂದು ವೇಳೆ ಇಬೆರಿಯಾ ವಿಮಾನಯಾನ ಸಂಸ್ಥೆಗಳ ಜೊತೆಗೆ ಬ್ರಿಟಿಷ್ ಏರ್‌ವೇಸ್ ತನ್ನ ವಿಲೀನವನ್ನು ಸಂಪೂರ್ಣಗೊಳಿಸಲು ಯಶಸ್ವಿಯಾಗದಿದ್ದಲ್ಲಿ, ಸ್ವತಃ ಸ್ಪ್ಯಾನಿಷ್ ವಿಮಾನಯಾನ ಸಂಸ್ಥೆಯ ಜೊತೆಗೇ ತಾನೇ ಮಾತುಕತೆಗಳನ್ನು ಶುರುಮಾಡಲು ಪ್ರಯತ್ನಿಸುವುದಾಗಿ ಅದು ಘೋಷಿಸಿತು.[೧೯]
ಸಾಂಸ್ಥಿಕ ವ್ಯವಹಾರಗಳು ಮತ್ತು ಗುರುತು
ಬದಲಾಯಿಸಿಕೇಂದ್ರ ಕಾರ್ಯಾಲಯ
ಬದಲಾಯಿಸಿಲುಫ್ಥಾನ್ಸದ ಸಾಂಸ್ಥಿಕ ಕೇಂದ್ರಕಾರ್ಯಾಲಯಗಳು ಕಲೋನ್‌ನಲ್ಲಿ ನೆಲೆಗೊಂಡಿವೆ.[೨೦]
1971ರಲ್ಲಿ, ದಿ ನ್ಯೂಯಾರ್ಕ್ ಟೈಮ್ಸ್ ನ ಲಾರೆನ್ಸ್ ಫೆಲೋಸ್ ಎಂಬಾತ, ಕಲೋನ್‌ನಲ್ಲಿ ಲುಫ್ಥಾನ್ಸವು ಆಕ್ರಮಿಸಿಕೊಂಡ ಅಂದಿನ-ಹೊಸದಾದ ಕೇಂದ್ರ ಕಾರ್ಯಾಲಯ ಕಟ್ಟಡವನ್ನು "ಮಿನುಗುತ್ತಿರುವ" ಕಟ್ಟಡ ಎಂದು ವರ್ಣಿಸಿದ.[೨೧] 1986ರಲ್ಲಿ ಭಯೋತ್ಪಾದಕರು ಲುಫ್ಥಾನ್ಸದ ಕೇಂದ್ರ ಕಾರ್ಯಾಲಯದ ಮೇಲೆ ಬಾಂಬ್‌ದಾಳಿ ಮಾಡಿದರು.[೨೨] ಬಾಂಬ್‌ದಾಳಿಯ ಪರಿಣಾಮವಾಗಿ ಯಾರಿಗೂ ಗಾಯಗಳಾಗಲಿಲ್ಲ.[೨೩]
2006ರಲ್ಲಿ, ಕಲೋನ್‌ನ ಡ್ಯೂಟ್ಜ್‌ನಲ್ಲಿ ಲುಫ್ಥಾನ್ಸದ ಹೊಸ ಕೇಂದ್ರ ಕಾರ್ಯಾಲಯದ ಕಟ್ಟಡಕ್ಕೆ ಕಟ್ಟಡ ನಿರ್ಮಾಣಗಾರರು ಮೊದಲ ಅಡಿಗಲ್ಲನ್ನಿಟ್ಟರು. 2007ರ ಅಂತ್ಯ ವೇಳೆಗೆ, ಕಂಪನಿಯ ಹಣಕಾಸು ವಿಭಾಗವೂ ಸೇರಿದಂತೆ 800 ಉದ್ಯೋಗಿಗಳನ್ನು ಹೊಸ ಕಟ್ಟಡಕ್ಕೆ ಸಾಗಿಸಲು ಲುಫ್ಥಾನ್ಸ ಯೋಜಿಸಿತು.[೨೪]
ಲುಫ್ಥಾನ್ಸದ ಹಲವಾರು ವಿಭಾಗಗಳು ಕೇಂದ್ರ ಕಾರ್ಯಾಲಯದಲ್ಲಿ ನೆಲೆಗೊಂಡಿಲ್ಲ; ಅದರ ಬದಲಿಗೆ, ಫ್ರಾಂಕ್‌ಫರ್ಟ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿರುವ ಲುಫ್ಥಾನ್ಸ ಏವಿಯೇಷನ್ ಸೆಂಟರ್‌ನಲ್ಲಿ ಅವಕ್ಕೆ ಜಾಗ ಕಲ್ಪಿಸಲಾಗಿದೆ. ಈ ವಿಭಾಗಗಳಲ್ಲಿ ಸಾಂಸ್ಥಿಕ ಸಂವಹನಗಳು,[೨೫] ಹೂಡಿಕೆದಾರ ಸಂಬಂಧಗಳು,[೨೬] ಹಾಗೂ ಮಾಧ್ಯಮ ಸಂಬಂಧಗಳ ಕುರಿತಾದ ವಿಭಾಗಗಳು ಸೇರಿವೆ.[೨೭]
ಅಂಗಸಂಸ್ಥೆಗಳು
ಬದಲಾಯಿಸಿತನ್ನ ಮುಖ್ಯ ಕಾರ್ಯಾಚರಣೆಯ ಜೊತೆಗೆ, ಹಲವಾರು ಅಂಗಸಂಸ್ಥೆಗಳನ್ನು ಲುಫ್ಥಾನ್ಸ ಹೊಂದಿದೆ. ಅವುಗಳೆಂದರೆ:
ವಿಮಾನಯಾನದ ಅಂಗಸಂಸ್ಥೆಗಳು:
- ಏರ್ ಡೊಲೊಮಿಟಿ: ಇದೊಂದು ವಿಮಾನಯಾನ ಸಂಸ್ಥೆಯಾಗಿದ್ದು, ಇಟಲಿಯ ರೊಂಚಿ ಡೆಯ್ ಲೆಗಿಯೊನಾರಿ ಎಂಬಲ್ಲಿ ತನ್ನ ಕೇಂದ್ರ ಕಾರ್ಯಾಲಯವನ್ನು ಹೊಂದಿದೆ; ಇದರ ಸಂಪೂರ್ಣ ಸ್ವಾಮ್ಯತೆಯನ್ನು ಲುಫ್ಥಾನ್ಸ ಹೊಂದಿದೆ.
- ಆಸ್ಟ್ರಿಯನ್ ಏರ್‌ಲೈನ್ಸ್: ಇದು ಆಸ್ಟ್ರಿಯಾದ ರಾಷ್ಟ್ರೀಯ ವಿಮಾನಯಾನ ಸಂಸ್ಥೆಯಾಗಿದ್ದು, ಆಸ್ಟ್ರಿಯಾದ ಷ್ವೆಚಾಟ್ ಎಂಬಲ್ಲಿ ತನ್ನ ಮೂಲವನ್ನು ಹೊಂದಿದೆ; ಇದರ ಸಂಪೂರ್ಣ ಸ್ವಾಮ್ಯತೆಯನ್ನು ಲುಫ್ಥಾನ್ಸ ಹೊಂದಿದೆ.
- BMI: ಇದು UKಯ ಒಂದು ವಿಮಾನಯಾನ ಸಂಸ್ಥೆಯಾಗಿದ್ದು, ಇದರ ಸಂಪೂರ್ಣ ಸ್ವಾಮ್ಯತೆಯನ್ನು ಲುಫ್ಥಾನ್ಸ ಹೊಂದಿದೆ.
- ಬ್ರಸೆಲ್ಸ್ ಏರ್‌ಲೈನ್ಸ್: ಈ ಬೆಲ್ಜಿಯನ್ ವಿಮಾನಯಾನ ಸಂಸ್ಥೆಯಲ್ಲಿನ 45% ನಷ್ಟು ಪಾಲನ್ನು 2009ರ ಜುಲೈ 1ರಂದು ಲುಫ್ಥಾನ್ಸ ಸ್ವಾಧೀನಕ್ಕೆ ತೆಗೆದುಕೊಂಡಿತು ಹಾಗೂ ಉಳಿದಿರುವ 55%ನಷ್ಟು ಪಾಲನ್ನು 2011ರಲ್ಲಿ ಸ್ವಾಧೀನಕ್ಕೆ ತೆಗೆದುಕೊಳ್ಳುವ ಒಂದು ಆಯ್ಕೆಯನ್ನೂ ಲುಫ್ಥಾನ್ಸ ಹೊಂದಿದೆ.
- ಎಡೆಲ್ವಿಸ್ ಏರ್: ಇದು ಸ್ವಿಸ್ ಇಂಟರ್‌ನ್ಯಾಷನಲ್‌ನ ಬಾಡಿಗೆ ಹಾರಾಟದ ಅಂಗವಾಗಿದೆ.
- ಯುರೋವಿಂಗ್ಸ್: ಇದೊಂದು ಪ್ರಾದೇಶಿಕ ಸಾಗಣೆ ಸಂಸ್ಥೆಯಾಗಿದ್ದು, ಇದರ 49% ನಷ್ಟು ಪಾಲನ್ನು ಲುಫ್ಥಾನ್ಸ ಹೊಂದಿದೆ.[೨೮]
- ಜರ್ಮನ್‌ವಿಂಗ್ಸ್: ಇದು ಯುರೋವಿಂಗ್ಸ್‌ನ ಒಂದು ಹಿಂದಿನ ಕಡಿಮೆ-ವೆಚ್ಚದ ಅಂಗಸಂಸ್ಥೆಯಾಗಿದ್ದು, ಈಗ ಇದರ ಸಂಪೂರ್ಣ ಸ್ವಾಮ್ಯತೆಯನ್ನು ಲುಫ್ಥಾನ್ಸ ಹೊಂದಿದೆ.
- ಜೇಡ್ ಕಾರ್ಗೋ ಇಂಟರ್‌ನ್ಯಾಷನಲ್: ಇದನ್ನು 2004ರ ಅಕ್ಟೋಬರ್‌ನಲ್ಲಿ ಸ್ಥಾಪಿಸಲಾಯಿತು. ಇದರಲ್ಲಿ ಲುಫ್ಥಾನ್ಸ ಕಾರ್ಗೋ 25%ನಷ್ಟು ಪಾಲನ್ನು ಹೊಂದಿದೆ. ಇದರ ಸಹ-ಮಾಲೀಕತ್ವವನ್ನು ಶೆನ್‌ಝೆನ್ ಏರ್‌ಲೈನ್ಸ್ ಹೊಂದಿದ್ದು, ಇದರ ಪಾಲು 51%ನಷ್ಟಿದೆ. ಇನ್ನುಳಿದಂತೆ, ಜರ್ಮನ್ ಸರ್ಕಾರಿ-ಸ್ವಾಮ್ಯದ KfW ಬ್ಯಾಂಕ್‌ನ ಒಂದು ಅಂಗಸಂಸ್ಥೆಯಾಗಿರುವ DEG – ಡ್ಯೂಷೆ ಇನ್ವೆಸ್ಟಿಷನ್ಸ್- ಅಂಡ್ ಎಂಟ್ವಿಕ್‌ಲಂಗ್ಸ್‌ಜೆಸೆಲ್‌ಷಾಫ್ಟ್ mbH 24%ನಷ್ಟು ಪಾಲನ್ನು ಹೊಂದಿದೆ. ಏಷ್ಯಾ ಖಂಡದೊಳಗಿನ ಸೇವೆಗಳೊಂದಿಗೆ ಇದು ತನ್ನ ಕಾರ್ಯಾಚರಣೆಗಳನ್ನು 2005ರ ಮಾರ್ಚ್‌ನಲ್ಲಿ ಪ್ರಾರಂಭಿಸಿತು. ಇದು ಚೀನಾದಲ್ಲಿರುವ ವಿದೇಶಿ ಒಡೆತನದೊಂದಿಗಿನ ಮೊದಲ ಸರಕು ವಿಮಾನಯಾನ ಸಂಸ್ಥೆಯಾಗಿದೆ.[೨೯]
- ಜೆಟ್‌ಬ್ಲೂ ಏರ್‌ವೇಸ್: ಈ ವಿಮಾನಯಾನ ಸಂಸ್ಥೆಯ ಕೇಂದ್ರ ಕಾರ್ಯಾಲಯವು ನ್ಯೂಯಾರ್ಕ್‌ನಲ್ಲಿದ್ದು, ಇದರ 19% ನಷ್ಟು ಪಾಲನ್ನು ಲುಫ್ಥಾನ್ಸ ಹೊಂದಿದೆ.[೩೦]
- ಲುಫ್ಥಾನ್ಸ ಕಾರ್ಗೋ: ಇದೊಂದು ಹಾರಾಟ ವ್ಯವಸ್ಥಾಪನಾ ತಂತ್ರದ ಕಂಪನಿಯಾಗಿದ್ದು, ಇದರ ಸಂಪೂರ್ಣ ಸ್ವಾಮ್ಯತೆಯನ್ನು ಲುಫ್ಥಾನ್ಸ ಹೊಂದಿದೆ.
- ಲುಫ್ಥಾನ್ಸ ಸಿಟಿಲೈನ್: ಇದೊಂದು ಪ್ರಾದೇಶಿಕ ಸಾಗಣೆ ಸಂಸ್ಥೆಯಾಗಿದ್ದು, ಇದರ ಸಂಪೂರ್ಣ ಸ್ವಾಮ್ಯತೆಯನ್ನು ಲುಫ್ಥಾನ್ಸ ಹೊಂದಿದೆ.
- ಲುಫ್ಥಾನ್ಸ ಇಟಾಲಿಯಾ: ಇದೊಂದು ಹೊಸ ಅಂಗಸಂಸ್ಥೆಯಾಗಿದ್ದು, ಮಿಲನ್ ಮಾಲ್ಪೆನ್ಸಾದ ಆಚೆಗೆ ಯುರೋಪ್‌ನಾದ್ಯಂತದ ಗಮ್ಯಸ್ಥಾನಗಳಿಗೆ ಹಾರಾಟಗಳನ್ನು ನಿರ್ವಹಿಸುತ್ತಿದೆ. ಎಂಟು ಏರ್‌ಬಸ್ A319 ವಿಮಾನಗಳ ಒಂದು ಶ್ರೇಣಿಯು ಇದರ ತೆಕ್ಕೆಯಲ್ಲಿದೆ. ಲಾಭದಾಯಕತೆಗೆ ಹಿಂದಿರುಗುವ ತನ್ನ ಆಶಯದ ಅನುಸಾರ ಅಲಿಟಾಲಿಯಾವು ಪ್ರಮುಖ ತಗ್ಗಿಸುವಿಕೆಗಳನ್ನು ಕೈಗೊಂಡಿರುವುದನ್ನು ಅನುಸರಿಸಿ, ಮಿಲನ್ ಮಾರುಕಟ್ಟೆಯ ಒಂದು ಬೃಹತ್ ಭಾಗವನ್ನು ವಶಮಾಡಿಕೊಳ್ಳಲು ಈ ಹೊಸ ಅಂಗಸಂಸ್ಥೆಯು ಆಶಿಸಿದೆ.[೩೧]
- ಲಕ್ಸ್‌ಏರ್: ಇದರಲ್ಲಿ ಲುಫ್ಥಾನ್ಸ 13%ನಷ್ಟು ಪಾಲನ್ನು ಹೊಂದಿದೆ.
- ಸನ್‌ಎಕ್ಸ್‌ಪ್ರೆಸ್: ಇದು ಟರ್ಕಿಯ ಆಂಟಾಲ್ಯ ಮೂಲದ ಒಂದು ವಿಮಾನಯಾನ ಸಂಸ್ಥೆಯಾಗಿದ್ದು, ಇದರ 50%ನಷ್ಟು ಪಾಲು ಲುಫ್ಥಾನ್ಸ ಬಳಿಯಿದೆ (50%ನಷ್ಟು ಪಾಲು ಟರ್ಕಿಷ್ ಏರ್‌ಲೈನ್ಸ್ ಬಳಿಯಿದೆ).
- ಸ್ವಿಸ್ ಇಂಟರ್‌ನ್ಯಾಷನಲ್ ಏರ್‌ಲೈನ್ಸ್: ಇದೊಂದು ಬಸೆಲ್ ಮೂಲದ ವಿಮಾನಯಾನ ಸಂಸ್ಥೆಯಾಗಿದ್ದು, ಇದರ ಸಂಪೂರ್ಣ ಸ್ವಾಮ್ಯತೆಯನ್ನು ಲುಫ್ಥಾನ್ಸ ಹೊಂದಿದೆ.
ಇತರ ಕಾರ್ಯಾಚರಣೆಗಳು:
- ಡೆಲ್ವಾಗ್: ಇದು ಒಂದು ವಿಮಾ ಕಂಪನಿಯಾಗಿದ್ದು, ವಾಯು ಸಾರಿಗೆಯಲ್ಲಿ ವಿಶೇಷಜ್ಞತೆಯನ್ನು ಹೊಂದಿದೆ.
- ಗ್ಲೋಬಲ್ ಲೋಡ್ ಕಂಟ್ರೋಲ್: ಇದು ದೂರದ ತೂಕಪದ್ಧತಿ ಹಾಗೂ ತಕ್ಕಡಿ ಸೇವೆಗಳ ಕ್ಷೇತ್ರದಲ್ಲಿ ವಿಶ್ವದ ಅಗ್ರಗಣ್ಯನಾಗಿದೆ.
- LSG ಸ್ಕೈ ಚೆಫ್ಸ್: ಇದು ವಿಮಾನಯಾನ ಸಂಸ್ಥೆಗೆ ಆಹಾರ ಒದಗಿಸುವ ವಿಶ್ವದ ಅತಿದೊಡ್ಡ ಪೂರೈಕೆದಾರನಾಗಿದ್ದು, ವಿಶ್ವದ ವಿಮಾನಯಾನ ಸಂಸ್ಥೆಯ ಊಟ ವ್ಯವಸ್ಥೆಗಳ ಪೂರೈಕೆಯ ಮೂರನೇ ಒಂದು ಭಾಗವನ್ನು ತನ್ನದಾಗಿಸಿಕೊಂಡಿದೆ.
- ಲುಫ್ಥಾನ್ಸ ಕಮರ್ಷಿಯಲ್ ಹೋಲ್ಡಿಂಗ್: ಇದರಲ್ಲಿ ಲುಫ್ಥಾನ್ಸ 19%ನಷ್ಟು ಪಾಲನ್ನು ಹೊಂದಿದೆ. 400ಕ್ಕೂ ಹೆಚ್ಚಿನ ಸೇವಾ ಮತ್ತು ಹಣಕಾಸು ಕಂಪನಿಗಳನ್ನು LCH ಹೊಂದಿದ್ದು, ಅವುಗಳ ಷೇರುಗಳನ್ನು ಲುಫ್ಥಾನ್ಸ ಹೊಂದಿದೆ.
- ಲುಫ್ಥಾನ್ಸ ಫ್ಲೈಟ್ ಟ್ರೇನಿಂಗ್: ಇದು ಹಲವಾರು ವಿಮಾನಯಾನ ಸಂಸ್ಥೆಗಳಿಗೆ ವಿಮಾನದ ಸಿಬ್ಬಂದಿ ತರಬೇತಿ ಸೇವೆಗಳನ್ನು ಒದಗಿಸುತ್ತದೆ ಮತ್ತು ಲುಫ್ಥಾನ್ಸ ವಿಮಾನಯಾನ ಸಂಸ್ಥೆಯದೇ ಆದ ವಿಮಾನ ಚಾಲಕರಿಗೆ ಮೀಸಲಾದ ಮುಖ್ಯ ತರಬೇತಿ ಅಂಗವಾಗಿದೆ.
- ಲುಫ್ಥಾನ್ಸ ರೀಜನಲ್: ಇದು ಲುಫ್ಥಾನ್ಸ ಸಿಟಿಲೈನ್‌ನ್ನು ಒಳಗೊಂಡಂತೆ, ಹಲವಾರು ಸಣ್ಣ ಪ್ರಾದೇಶಿಕ ವಿಮಾನಯಾನ ಸಂಸ್ಥೆಗಳ ಒಂದು ಒಕ್ಕೂಟದಿಂದ ನಿರ್ವಹಿಸಲ್ಪಡುವ ಒಂದು ಬ್ರಾಂಡ್ ಆಗಿದೆ.
- ಲುಫ್ಥಾನ್ಸ ಸಿಸ್ಟಮ್ಸ್: ಇದು ಯುರೋಪಿನ ಅತಿದೊಡ್ಡ ವಾಯುಯಾನ ಸಂಬಂಧಿ IT ಸರಬರಾಜುದಾರನಾಗಿದೆ.
- ಲುಫ್ಥಾನ್ಸ ಟೆಕ್ನಿಕ್: ವಿಮಾನ ನಿರ್ವಹಣಾ ಸೇವೆಯನ್ನು ಇದು ಒದಗಿಸುತ್ತದೆ.
ಬ್ರಾಂಡ್ ಇತಿಹಾಸ
ಬದಲಾಯಿಸಿಹಾರುತ್ತಿರುವ ಕೊಕ್ಕರೆಯೊಂದನ್ನು ವೃತ್ತವೊಂದು ಸುತ್ತುವರೆದಿರುವಂತೆ ವಿನ್ಯಾಸಗೊಳಿಸಲಾಗಿರುವ ಲುಫ್ಥಾನ್ಸದ ಲಾಂಛನವನ್ನು 1918ರಲ್ಲಿ ಸೃಷ್ಟಿಸಲಾಯಿತು. ಇದು 1919ರ ಫೆಬ್ರುವರಿ 5ರಂದು ವಾಯುಯಾನ ಸೇವೆಯನ್ನು ಆರಂಭಿಸಿದ ಡ್ಯೂಷೆ ಲುಫ್ತ್‌ರೀಡೆರೀ GmbH (DLR) ಎಂಬ ಹೆಸರಿನ ಜರ್ಮನಿಯ ಮೊದಲ ವಿಮಾನಯಾನ ಸಂಸ್ಥೆಯ ವಿನ್ಯಾಸದ ಭಾಗವಾಗಿತ್ತು. ವಿಲಕ್ಷಣವಾಗಿ ಚಿತ್ರಿಸಲಾಗಿರುವ ಕೊಕ್ಕರೆಯನ್ನು ಪ್ರೊಫೆಸರ್ ಒಟ್ಟೊ ಫರ್ಲೆ ಎಂಬಾತ ವಿನ್ಯಾಸಗೊಳಿಸಿದ. 1923ರಲ್ಲಿ DLRನೊಂದಿಗೆ ವಿಲೀನಗೊಂಡ ಏರೋ ಲಾಯ್ಡ್ AGಯಿಂದ ಈ ಲಾಂಛನವನ್ನು ಲುಫ್ಥಾನ್ಸ 1926ರಲ್ಲಿ ಅಳವಡಿಸಿಕೊಂಡಿತು. F.A. ಫಿಶರ್ ವಾನ್ ಪುಟುರ್‌ಝಿನ್ ಎಂಬಾತ ಲುಫ್ಥಾನ್ಸ ಎಂಬ ಹೆಸರಿನ ಮೂಲ ಸೃಷ್ಟಿಕರ್ತನಾಗಿರಬಹುದು ಎಂದು ಭಾವಿಸಲಾಗಿದೆ. 1925ರಲ್ಲಿ ಆತ "ಲುಫ್ತ್-ಹಾನ್ಸಾ" ಎಂಬ ಶೀರ್ಷಿಕೆಯ ಪುಸ್ತಕವೊಂದನ್ನು ಪ್ರಕಟಿಸಿದ; ಇದು ಆ ಸಮಯದಲ್ಲಿನ ವಾಯುಯಾನ ಕಾರ್ಯನೀತಿಯ ನಿರ್ಮಾತೃಗಳಿಗೆ ಮುಕ್ತವಾಗಿದ್ದ ಆಯ್ಕೆಗಳನ್ನು ಅವಲೋಕಿಸಿತು. ಲುಫ್ತ್ ಹಾನ್ಸಾ ಎಂಬುದು, ಜಂಕರ್ಸ್ ಲುಫ್ತ್‌ವೆರ್ಕರ್ AG ಹಾಗೂ ಡ್ಯೂಷೆರ್ ಏರೋ ಲಾಯ್ಡ್ ಸಂಸ್ಥೆಗಳ ವಿಲೀನದಿಂದ ರೂಪುಗೊಂಡ ಹೊಸ ವಿಮಾನಯಾನ ಸಂಸ್ಥೆಗೆ ನೀಡಿದ ಹೆಸರಾಗಿತ್ತು.[೯]
ಗಮ್ಯಸ್ಥಾನಗಳು
ಬದಲಾಯಿಸಿವಿಮಾನಶ್ರೇಣಿ
ಬದಲಾಯಿಸಿವಿಮಾನ | ಒಟ್ಟು | ಬೇಡಿಕೆಗಳು | ಪ್ರಯಾಣಿಕರು (ಮೊದಲ/ವ್ಯವಹಾರ/ಕನಿಷ್ಠ ತರಗತಿ) |
---|---|---|---|
ಏರ್‌ಬಸ್ A319-100 | 28 | 9 | 126 (0/24/102) |
ಏರ್‌ಬಸ್ A330-200 | 44 | 8 | 146 (0/32/114) |
ಏರ್‌ಬಸ್ A321-100 | 20 | 0 | 186 (0/31/155) |
ಏರ್‌ಬಸ್ A321-200 | 23 | 22 | 186 (0/31/155) |
ಏರ್‌ಬಸ್ A330-300 | 15 | 0 | 221 (8/48/165) |
ಏರ್‌ಬಸ್ A340-300 | 26 | 0 | 241 (8/36/197) 221 (8/48/165) 266 (0/44/222) |
ಏರ್‌ಬಸ್ A340-600 | 24 | 0 | 306 (8/60/238) 345 (0/66/279) |
ಏರ್‌ಬಸ್ A380-800 | 1 | 14 | 526 (8/98/420) |
ಬೋಯಿಂಗ್ 737-300 | 33 | 0 | 124 (0/18/106) |
ಬೋಯಿಂಗ್ 737-500 | 30 | 0 | 108 (0/18/90) |
ಬೋಯಿಂಗ್ 747-400 | 30 | 0 | 330 (16/80/234) 352 (16/66/270) 378 (16/52/310) |
ಬೋಯಿಂಗ್ 747-8I | 0 | 20 | TBA |
ಒಟ್ಟು | 274 | 73 |
ವಿಮಾನಶ್ರೇಣಿಯ ಇತಿಹಾಸ
ಬದಲಾಯಿಸಿವರ್ಷಗಳಾಗುತ್ತಿದ್ದಂತೆ, ಈ ಕೆಳಗೆ ನಮೂದಿಸಿರುವ ವಿಮಾನ ಬಗೆಗಳೊಂದಿಗೆ ಲುಫ್ಥಾನ್ಸ ಕಾರ್ಯಾಚರಣೆಯನ್ನು ನಡೆಸಿತು:[೩೫][೩೬]
- This transport-related list is incomplete; you can help by expanding it.
ವಿಮಾನ | ಪರಿಚಯಿಸಿದ್ದು | ನಿವೃತ್ತಿಯಾಗಿದ್ದು | ಟಿಪ್ಪಣಿಗಳು |
---|---|---|---|
ಏರ್‌ಬಸ್ A300 | 1976 1987 |
1984 2009 |
|
ಏರ್‌ಬಸ್ A310 | 1984 | 2005 | |
ಏರ್‌ಬಸ್ A319 | 1996 | ||
ಏರ್‌ಬಸ್ A320 | 1989 | ||
ಏರ್‌ಬಸ್ A321 | 1994 | ||
ಏರ್‌ಬಸ್ A330-200 | 2002 | 2006 | |
ಏರ್‌ಬಸ್ A330-300 | 2004 | ||
ಏರ್‌ಬಸ್ A340-200 | 1993 | 2006 | |
ಏರ್‌ಬಸ್ A340-300 | 1999 | ||
ಏರ್‌ಬಸ್ A340-600 | 2003 | ||
ಏರ್‌ಬಸ್ A380 | 2010 | ||
ಬೋಯಿಂಗ್ 707 | 1960 | 1984 | ಸರಕು ವ್ಯವಸ್ಥೆಯ ವಿನ್ಯಾಸದಲ್ಲೂ ಬಳಸಲ್ಪಟ್ಟಿತು |
ಬೋಯಿಂಗ್ 720 | 1961 | ? | |
ಬೋಯಿಂಗ್ 727 | 1964 | 1992 | ಸರಕು ವಿಮಾನವಾಗಿ ಮಾರ್ಪಾಡು ಮಾಡಬಹುದು |
ಬೋಯಿಂಗ್ 737-100 | 1967 | 1983 | ಉಪಕ್ರಮದ ಗ್ರಾಹಕ, ಸಿಟಿ ಜೆಟ್ ಎಂಬ ಅಡ್ಡ ಹೆಸರಿಡಲ್ಪಟ್ಟ ವಿಮಾನ |
ಬೋಯಿಂಗ್ 737-200 | 1969 | 2000 | |
ಬೋಯಿಂಗ್ 737-300 | 1986 | ||
ಬೋಯಿಂಗ್ 737-400 | 1992 | 1998 | |
ಬೋಯಿಂಗ್ 737-500 | 1990 | ||
ಬೋಯಿಂಗ್ 747-100 | 1970 | 1979 | ಸರಕು ವಿನ್ಯಾಸ ವ್ಯವಸ್ಥೆಯಲ್ಲೂ ಬಳಸಲ್ಪಟ್ಟಿದೆ |
ಬೋಯಿಂಗ್ 747-200 | 1971 | 2005 | ಸರಕು ವಿನ್ಯಾಸ ವ್ಯವಸ್ಥೆಯಲ್ಲೂ ಬಳಸಲ್ಪಟ್ಟಿದೆ |
ಬೋಯಿಂಗ್ 747-400 | 1989 | ||
ಕಾನ್ವೇರ್ CV-340/440 | 1955 | 1969 | ಸರಕು ವಿನ್ಯಾಸ ವ್ಯವಸ್ಥೆಯಲ್ಲೂ ಬಳಸಲ್ಪಟ್ಟಿದೆ |
ಲಾಕ್‌ಹೀಡ್ ಸೂಪರ್ ಕಾನ್ಸ್ಟೆಲ್ಲೇಷನ್/ಸ್ಟಾರ್‌ಲೈನರ್ | 1955 | 1967 | |
ಡೊಗ್ಲಾಸ್ DC-4 | 1957 | ? | ಸರಕು ವಿಮಾನ |
ಮೆಕ್‌ಡೊನೆಲ್ ಡೊಗ್ಲಾಸ್ DC-10 | 1974 | 1996 | |
ಮೆಕ್‌ಡೊನೆಲ್ ಡೊಗ್ಲಾಸ್ MD-11 | 1998 | ಸರಕು ವಿಮಾನ | |
ವಿಕರ್ಸ್ ವಿಸ್ಕೌಂಟ್ | 1957 | 1971 | ಸರಕು ವಿನ್ಯಾಸ ವ್ಯವಸ್ಥೆಯಲ್ಲೂ ಬಳಸಲ್ಪಟ್ಟಿದೆ |
ಏರ್‌ಬಸ್ A380
ಬದಲಾಯಿಸಿ2001ರ ಡಿಸೆಂಬರ್ 6ರಂದು, 10 ಹೆಚ್ಚಿನ ಆಯ್ಕೆಗಳೊಂದಿಗಿನ 15 ಏರ್‌ಬಸ್ A380 ಸೂಪರ್‌ಜಂಬೋ ವಿಮಾನಗಳಿಗಾಗಿ ಲುಫ್ಥಾನ್ಸ ಒಂದು ಬೇಡಿಕೆಯನ್ನು ಪ್ರಕಟಿಸಿತು. 2001ರ ಡಿಸೆಂಬರ್ 20ರಂದು ಈ ವ್ಯವಹಾರವು ದೃಢೀಕರಿಸಲ್ಪಟ್ಟಿತು. ಏಕಮಾತ್ರವಾಗಿ ಫ್ರಾಂಕ್‌ಫರ್ಟ್‌ನಿಂದ ಸುದೀರ್ಘ ಪ್ರಯಾಣ ದೂರದ ಹಾರಾಟಗಳನ್ನು ನಡೆಸುವುದಕ್ಕಾಗಿ A380 ವಿಮಾನಶ್ರೇಣಿಯನ್ನು ಬಳಸಲಾಗುತ್ತದೆ. 2010ರ ಮೇ 19ರಂದು ಆಗಮಿಸಿದ ಮೊದಲ ವಿಮಾನಕ್ಕೆ "ಫ್ರಾಂಕ್‌ಫರ್ಟ್ ಆಮ್ ಮೇನ್" ಎಂದು ಹೆಸರಿಸಲಾಯಿತು. ಲುಫ್ಥಾನ್ಸದೊಂದಿಗಿನ ಏರ್‌ಬಸ್ A380ರ ಮೊದಲ ಮಾರ್ಗವು ಫ್ರಾಂಕ್‌ಫರ್ಟ್‌ನಿಂದ ಟೋಕಿಯೋಗೆ ಇದ್ದು, ಇದರ ಮೊದಲ ಹಾರಾಟವು 2010ರ ಜೂನ್ 11ರಂದು ನಡೆಯಿತು.[೩೮] ಎರಡನೇ ವಿಮಾನವನ್ನು ಅದೇ ತಿಂಗಳಿನಲ್ಲಿ ವಿತರಿಸಲಾಗುವುದೆಂದು ತಿಳಿದುಬಂದಿದ್ದು, ಮೂರನೇ ವಿಮಾನವು 2010ರ ಜುಲೈನಲ್ಲಿ, ನಾಲ್ಕನೆಯದು 2010ರ ಅಕ್ಟೋಬರ್‌ನಲ್ಲಿ ಹಾಗೂ ಐದನೆಯದು 2011ರ ಜನವರಿಯಲ್ಲಿ ವಿತರಿಸಲ್ಪಡಲಿವೆ.[೩೯] ಆ ಹೊಸ ಮತ್ತು ಹೆಚ್ಚಿನ ವಿಮಾನಗಳು ಆಗಮಿಸುತ್ತಿದ್ದಂತೆ, 2010ರ ಆಗಸ್ಟ್‌ನಲ್ಲಿ ಬೀಜಿಂಗ್‌ಗೆ ಹಾಗೂ 2010ರ ಅಕ್ಟೋಬರ್‌ನಲ್ಲಿ ಜೊಹಾನ್ಸ್‌ಬರ್ಗ್‌ಗೆ A380ರ ಹಾರಾಟ ಕಾರ್ಯಾಚರಣೆಗಳನ್ನು ಲುಫ್ಥಾನ್ಸ ನಿರ್ವಹಿಸಲಿದೆ. ಕುತೂಹಲಕರವೆಂಬಂತೆ, ಈ ಎಲ್ಲಾ ಮೂರು ಗಮ್ಯಸ್ಥಾನಗಳೂ ಐರೋಪ್ಯ A380 ನಿರ್ವಾಹಕನಾದ ಏರ್ ಫ್ರಾನ್ಸ್‌ನಿಂದಲೂ ಸೇವೆಯನ್ನು ಪಡೆಯುತ್ತಿವೆ (ಅಥವಾ ಪಡೆಯಲಿವೆ). 2010-2011ರ ಚಳಿಗಾಲದ ಋತುವಿನಲ್ಲಿ ನವದೆಹಲಿಗೆ ಸೂಪರ್‌ಜಂಬೋ ವಿಮಾನದ ಹಾರಾಟವನ್ನು ನಡೆಸಲು ಕೂಡಾ ಲುಫ್ಥಾನ್ಸ ಯೋಜಿಸಿದೆ.[೪೦]
ಹಳೆಯ ಮಾದರಿಯ ವಿಮಾನದ ನವೀಕರಣ
ಬದಲಾಯಿಸಿಲುಫ್ಥಾನ್ಸ ವಿಮಾನಯಾನ ಸಂಸ್ಥೆಯ ನಿರ್ವಹಣಾ ಅಂಗವಾದ ಲುಫ್ಥಾನ್ಸ ಟೆಕ್ನಿಕ್, 1936ರಲ್ಲಿ ನಿರ್ಮಿಸಲ್ಪಟ್ಟ ಒಂದು ಜಂಕರ್ಸ್ JU-52 ವಿಮಾನವನ್ನು ವಾಯುಯಾನ ಯೋಗ್ಯತೆಯ ಸ್ಥಿತಿಗೆ ತಲುಪುವಂತೆ ನವೀಕರಿಸಿತು; ಈ ವಿಮಾನವು 1930ರ ದಶಕದಲ್ಲಿ ಆಲ್ಪ್ಸ್ ಪರ್ವತಶ್ರೇಣಿಗೆ ಅಡ್ಡಲಾಗಿ ಸಾಗುವ, ಬರ್ಲಿನ್‌ನಿಂದ ರೋಮ್‌ವರೆಗಿನ 10 ಗಂಟೆಗಳ ಮಾರ್ಗದಲ್ಲಿನ ಹಾರಾಟದಲ್ಲಿ ಬಳಸಲ್ಪಡುತ್ತಿತ್ತು. ಹರಾಜಿನಲ್ಲಿ ಕೊಳ್ಳಲಾದ ಇಂಥ ಮೂರು ವಿಮಾನಗಳಿಂದ ಪಡೆಯಲಾಗಿರುವ ಭಾಗಗಳನ್ನು ಬಳಸಿಕೊಂಡು, ಒಂದು ಲಾಕ್‌ಹೀಡ್ ಸೂಪರ್ ಕಾನ್ಸ್ಟೆಲ್ಲೇಷನ್ ವಿಮಾನವನ್ನು ಲುಫ್ಥಾನ್ಸ ಈಗ ಸುಸ್ಥಿತಿಗೆ ತರುತ್ತಿದೆ. ಲುಫ್ಥಾನ್ಸದ ಸೂಪರ್ ಕಾನ್ಸ್ಟಲೇಷನ್ ವಿಮಾನಗಳು ಮತ್ತು L1649 "ಸ್ಟಾರ್‌ಲೈನರ್ ವಿಮಾನಗಳು" ಹ್ಯಾಂಬರ್ಗ್-ಮ್ಯಾಡ್ರಿಡ್-ಡಾಕಾರ್-ಕ್ಯಾರಕಾಸ್-ಸ್ಯಾಂಟಿಗೋದಂಥ ಮಾರ್ಗಗಳಲ್ಲಿ ಸೇವೆ ಸಲ್ಲಿಸಿದವು. ತರಬೇತಾದ ಕೆಲಸಗಾರರ ಅಗತ್ಯಗಳಿಗೆ ಸಂಬಂಧಿಸಿದಂತೆ, ನಿವೃತ್ತಿಯಾಗಿರುವ ಉದ್ಯೋಗಿಗಳು ಹಾಗೂ ಸ್ವಯಂಸೇವಕರನ್ನು ಲುಫ್ಥಾನ್ಸ ಟೆಕ್ನಿಕ್ ನೇಮಿಸಿಕೊಳ್ಳುತ್ತದೆ.[೪೧][೪೨] ದುರಸ್ತಿ ಮಾಡಿ ಸುಸ್ಥಿತಿಗೆ ತಂದ ವಿಮಾನಗಳಲ್ಲಿ ಸವಾರಿಗಳನ್ನು ಮಾಡಲು ವಾಯುಯಾನ ಉತ್ಸಾಹಿಗಳಿಗೆ ಲುಫ್ಥಾನ್ಸವು ಅವನ್ನು ಮಾರಾಟ ಮಾಡುತ್ತದೆ. (ಇದನ್ನೂ ನೋಡಿ: ವಾಯುಯಾನಯೋಗ್ಯ ಜು 52 ವಿಮಾನಗಳ ಪಟ್ಟಿ)
ವಿಮಾನ ಚಾಲಕನ ಕೋಣೆ
ಬದಲಾಯಿಸಿಖಂಡಾಂತರದ ವಿಮಾನ
ಬದಲಾಯಿಸಿಮೊದಲ ದರ್ಜೆ: ಏರ್‌ಬಸ್ A380, ಬೋಯಿಂಗ್ 747, ಏರ್‌ಬಸ್ A330 ಮತ್ತು A340 ವಿಮಾನಗಳಲ್ಲಿ ಲುಫ್ಥಾನ್ಸ ಮೊದಲ ದರ್ಜೆಯ ಸೌಲಭ್ಯವನ್ನು ನೀಡಲಾಗುತ್ತದೆ. ಪ್ರತಿ ಆಸನವೂ ಎರಡು ಮೀಟರುಗಳ ಒಂದು ಹಾಸಿಗೆಯಾಗಿ ಮಾರ್ಪಡುತ್ತದೆ, ಲ್ಯಾಪ್‌ಟಾಪ್ ವಿದ್ಯುತ್ ಸಂಪರ್ಕ ಬಿಂದುಗಳು, ಮನರಂಜನೆ ಸೌಕರ್ಯಗಳನ್ನೂ ಸಹ ಇದು ಒಳಗೊಳ್ಳುತ್ತದೆ. ಬೇಡಿಕೆಯ ಮೇರೆಗೆ ಊಟದ ವ್ಯವಸ್ಥೆಗಳು ಲಭ್ಯವಿರುತ್ತವೆ. ಬಹುಪಾಲು ವಿಮಾನ ನಿಲ್ದಾಣಗಳಲ್ಲಿ ಮೀಸಲಾಗಿರುವ ಮೊದಲ ದರ್ಜೆಯ ದಾಖಲಾತಿ ಕೌಂಟರುಗಳನ್ನು, ಮತ್ತು ಫ್ರಾಂಕ್‌ಫರ್ಟ್ ಹಾಗೂ ಮ್ಯುನಿಕ್‌ಗಳಲ್ಲಿ ಮೀಸಲಾಗಿರುವ ಮೊದಲ ದರ್ಜೆಯ ಕಾಯುವ ಕೋಣೆಗಳನ್ನು ಲುಫ್ಥಾನ್ಸ ಒದಗಿಸುತ್ತದೆ. ಅಷ್ಟೇ ಅಲ್ಲ, ಫ್ರಾಂಕ್‌ಫರ್ಟ್‌ನಲ್ಲಿ ಒಂದು ಮೀಸಲಾಗಿರುವ ಮೊದಲ ದರ್ಜೆಯ ಆಗಮನ-ನಿರ್ಗಮನ ನಿಲ್ದಾಣವನ್ನೂ ಲುಫ್ಥಾನ್ಸ ವ್ಯವಸ್ಥೆಗೊಳಿಸಿದೆ. ಆಗಮಿಸುವ ಪ್ರಯಾಣಿಕರು ಲುಫ್ಥಾನ್ಸದ ಮೊದಲ ದರ್ಜೆಯ ಆಗಮನ ಸೌಕರ್ಯಗಳನ್ನಷ್ಟೇ ಅಲ್ಲದೇ ಹೊಸ ಸ್ವಾಗತ ಕೋಣೆಯನ್ನು ಬಳಸಿಕೊಳ್ಳುವ ಆಯ್ಕೆಯನ್ನು ಹೊಂದಿರುತ್ತಾರೆ. ಏರ್‌ಬಸ್ A380 ವಿಮಾನದ ಒಳಗೆ ಹೊಸ ಮೊದಲ ದರ್ಜೆಯ ಉತ್ಪನ್ನವನ್ನು ಲುಫ್ಥಾನ್ಸ ಪರಿಚಯಿಸಿದೆ ಮತ್ತು ಸುದೀರ್ಘ-ಪ್ರಯಾಣ ದೂರದ ತನ್ನ ಉಳಿದೆಲ್ಲಾ ವಿಮಾನಗಳಲ್ಲಿ ಇದನ್ನು ಕ್ರಮೇಣವಾಗಿ ಪರಿಚಯಿಸಲು ಅದು ಯೋಜಿಸುತ್ತಿದೆ. http://a380.lufthansa.com/VIRTUALTOUR/#/DE/EN/EXPERIENCE/FIRSTCLASS
ವ್ಯವಹಾರ ದರ್ಜೆ: ಲುಫ್ಥಾನ್ಸದ ಸುದೀರ್ಘ-ಪ್ರಯಾಣ ದೂರದ ವ್ಯವಹಾರ ದರ್ಜೆಯ ವ್ಯವಸ್ಥೆಯನ್ನು ಸುದೀರ್ಘ-ಪ್ರಯಾಣ ದೂರದ ಎಲ್ಲಾ ವಿಮಾನಗಳಲ್ಲಿ ಒದಗಿಸಲಾಗಿದೆ. ಪ್ರತಿ ಆಸನವೂ ಎರಡು ಮೀಟರ್ ಸಮತಲವಾಗಿ-ಹರಡಿರುವ ಒಂದು ಹಾಸಿಗೆಯಾಗಿ ಮಾರ್ಪಡುತ್ತದೆ ಹಾಗೂ ಲ್ಯಾಪ್‌ಟಾಪ್ ವಿದ್ಯುತ್ ಸಂಪರ್ಕ ಬಿಂದುಗಳು ಮತ್ತು ಮನರಂಜನಾ ಸೌಕರ್ಯಗಳನ್ನು ಒಳಗೊಳ್ಳುತ್ತದೆ. ಎಲ್ಲಾ ವಿಮಾನ ನಿಲ್ದಾಣಗಳಲ್ಲಿ ಮೀಸಲಾಗಿರುವ ವ್ಯವಹಾರ ದರ್ಜೆಯ ದಾಖಲಾತಿ ಕೌಂಟರುಗಳನ್ನು, ಬಹುಪಾಲು ವಿಮಾನ ನಿಲ್ದಾಣಗಳಲ್ಲಿ ಮೀಸಲಾಗಿರುವ ವ್ಯವಹಾರ ದರ್ಜೆಯ ಕಾಯುವ ಕೋಣೆಗಳನ್ನು, ಅಥವಾ ಇತರ ವಿಮಾನ ನಿಲ್ದಾಣಗಳಲ್ಲಿ ಒಪ್ಪಂದದ ಮೇರೆಗೆ ಪಡೆದುಕೊಂಡ ಕಾಯುವ ಕೋಣೆಗಳನ್ನು ಲುಫ್ಥಾನ್ಸ ಒದಗಿಸುತ್ತದೆ. ಅಷ್ಟೇ ಅಲ್ಲ, ಫ್ರಾಂಕ್‌ಫರ್ಟ್‌ನಲ್ಲಿ ಆಗಮನದ ನಂತರದ ಲುಫ್ಥಾನ್ಸ ಸ್ವಾಗತ ಕೋಣೆಯನ್ನು ಅದು ಒದಗಿಸುತ್ತದೆ.
ಕನಿಷ್ಠ ತರಗತಿ ದರ್ಜೆ: ಲುಫ್ಥಾನ್ಸದ ಸುದೀರ್ಘ-ಪ್ರಯಾಣ ದೂರದ ಕನಿಷ್ಠ ತರಗತಿ ದರ್ಜೆಯ ಸೌಲಭ್ಯವನ್ನು ಸುದೀರ್ಘ ಪ್ರಯಾಣ ದೂರದ ಎಲ್ಲಾ ವಿಮಾನಗಳಲ್ಲಿ ಒದಗಿಸಲಾಗುತ್ತದೆ. ಊಟ ವ್ಯವಸ್ಥೆಗಳನ್ನಷ್ಟೇ ಅಲ್ಲದೇ ಉಚಿತ ಪಾನೀಯಗಳನ್ನು ಪ್ರಯಾಣಿಕರು ಸ್ವೀಕರಿಸುತ್ತಾರೆ. 2007ರಲ್ಲಿ, ಕನಿಷ್ಠ ತರಗತಿ ದರ್ಜೆಗಳಲ್ಲಿ ವೈಯಕ್ತಿಕ ಆಡಿಯೋ-ವಿಡಿಯೋ-ಆನ್-ಡಿಮಾಂಡ್ (AVOD) ಪರದೆಗಳ ಅಳವಡಿಕೆಯನ್ನು ಲುಫ್ಥಾನ್ಸ ಶುರುಮಾಡಿತು. ಎಲ್ಲಾ A330-300, A340-300 ಮತ್ತು A340-600 ವಿಮಾನಗಳನ್ನು ಪುನಸ್ಸಜ್ಜುಗೊಳಿಸಲಾಗಿದೆ.
ಐರೋಪ್ಯ ಸ್ವದೇಶಿ ವಿಮಾನ
ಬದಲಾಯಿಸಿವ್ಯವಹಾರ ದರ್ಜೆ: ಲುಫ್ಥಾನ್ಸದ ಅಲ್ಪ-ಪ್ರಯಾಣ ದೂರದ ವ್ಯವಹಾರ ದರ್ಜೆ ಸೌಲಭ್ಯವನ್ನು ಎಲ್ಲಾ A319, A320, A321 ಮತ್ತು B737 ವಿಮಾನಗಳಲ್ಲಿ ಒದಗಿಸಲಾಗುತ್ತದೆ. ಊಟಗಳು ಮತ್ತು ಪಾನೀಯಗಳನ್ನು ಪ್ರಯಾಣಿಕರು ಸ್ವೀಕರಿಸುತ್ತಾರೆ. ಅಷ್ಟೇ ಅಲ್ಲ, ಮೀಸಲಾಗಿರುವ ವ್ಯವಹಾರ ದರ್ಜೆಯ ದಾಖಲಾತಿ ಕೌಂಟರುಗಳು, ಮತ್ತು ಲುಫ್ಥಾನ್ಸ ವ್ಯವಹಾರ ದರ್ಜೆಯ ಕಾಯುವ ಕೋಣೆಗಳಿಗೆ ಸಂಪರ್ಕ ವ್ಯವಸ್ಥೆಯನ್ನು ಇಲ್ಲಿ ನೀಡಲಾಗುತ್ತದೆ. ಆಯ್ದ ಮಧ್ಯಮ-ಪ್ರಯಾಣ ದೂರದ ಹಾರಾಟಗಳಲ್ಲಿ ಈ ವಿಮಾನಗಳನ್ನು ಬಳಸಲಾಗುತ್ತದೆ. ಯಾವುದೇ ಅಲ್ಪ-ಪ್ರಯಾಣ ದೂರದ ಹಾರಾಟಗಳಲ್ಲಿ ವಿಮಾನದೊಳಗಿನ ಮನರಂಜನೆಯ ಸೌಲಭ್ಯವು ದೊರೆಯುವುದಿಲ್ಲ.
ಕನಿಷ್ಠ ತರಗತಿ ದರ್ಜೆ: ಲುಫ್ಥಾನ್ಸದ ಅಲ್ಪ-ಪ್ರಯಾಣ ದೂರದ ಕನಿಷ್ಠ ತರಗತಿ ದರ್ಜೆಯ ಸೌಲಭ್ಯವನ್ನು ಎಲ್ಲಾ A319, A320, A321 ಮತ್ತು B737 ವಿಮಾನಗಳಲ್ಲಿ ಒದಗಿಸಲಾಗುತ್ತದೆ. ಉಚಿತ ಪಾನೀಯಗಳು, ಮತ್ತು ಉಪಾಹಾರಗಳು ಅಥವಾ ಊಟಗಳನ್ನು ಪ್ರಯಾಣಿಕರು ಸ್ವೀಕರಿಸುತ್ತಾರೆ. ಯಾವುದೇ ಅಲ್ಪ-ಪ್ರಯಾಣ ದೂರದ ಹಾರಾಟಗಳಲ್ಲಿ ವಿಮಾನದೊಳಗಿನ ಮನರಂಜನೆಯ ಸೌಲಭ್ಯವು ದೊರೆಯುವುದಿಲ್ಲ.
ಕಾಯುವ ಕೋಣೆಗಳು
ಬದಲಾಯಿಸಿಕಾಯುವ ಕೋಣೆ | ಪ್ರವೇಶಮಾರ್ಗ - ದರ್ಜೆ | ಪ್ರವೇಶಮಾರ್ಗ - ಸ್ಥಿತಿಗತಿ | ಟಿಪ್ಪಣಿಗಳು | ಜಾಲದ ಮೇಲಿನ ಸಂಖ್ಯೆ |
---|---|---|---|---|
ಮೊದಲ ದರ್ಜೆಯ ಆಗಮನ-ನಿರ್ಗಮನ ನಿಲ್ದಾಣ | ಮೊದಲ ದರ್ಜೆ | HON ವಲಯ | FRA ಮಾತ್ರ | 1 |
ಮೊದಲ ದರ್ಜೆಯ ಕಾಯುವ ಕೋಣೆ | ಮೊದಲ ದರ್ಜೆ | HON ವಲಯ | FRA ಮತ್ತು MUC ಮಾತ್ರ | 3 |
ಸೆನೆಟ್ ಸದಸ್ಯರ ಕಾಯುವ ಕೋಣೆ | ಮೊದಲ ದರ್ಜೆ | ಸೆನೆಟ್ ಸದಸ್ಯ (ಅಥವಾ ಹೆಚ್ಚಿನದು) ಸ್ಟಾರ್ ಅಲಯೆನ್ಸ್ ಗೋಲ್ಡ್ |
30 | |
ವ್ಯವಹಾರ ವರ್ಗದ ಕಾಯುವ ಕೋಣೆ | ವ್ಯವಹಾರ ದರ್ಜೆ (ಅಥವಾ ಹೆಚ್ಚಿನದು) | ಆಗಿಂದಾಗ್ಗೆ ಪಯಣಿಸುವವ (ಅಥವಾ ಹೆಚ್ಚಿನದು) | 26 | |
ಸ್ವಾಗತ ಕೋಣೆ | ವ್ಯವಹಾರ ದರ್ಜೆ (ಅಥವಾ ಹೆಚ್ಚಿನದು) | ಆಗಿಂದಾಗ್ಗೆ ಪಯಣಿಸುವವ (ಅಥವಾ ಹೆಚ್ಚಿನದು) | FRA ಮಾತ್ರ ಖಂಡಾಂತರದ ಪ್ರಯಾಣಿಕರು ಮಾತ್ರ ಯಾವುದೇ ಸ್ಟಾರ್ ಅಲಯೆನ್ಸ್ ಗೋಲ್ಡ್ ಇಲ್ಲ |
1 |
ನಾಲ್ಕು ಬಗೆಯ ಕಾಯುವ ಕೋಣೆಗಳನ್ನು ಲುಫ್ಥಾನ್ಸ ನಿರ್ವಹಿಸುತ್ತದೆ. ಅವುಗಳೆಂದರೆ: ಮೊದಲ ದರ್ಜೆ, ಸೆನೆಟರ್, ವ್ಯವಹಾರ ದರ್ಜೆ, ಮತ್ತು ಸ್ವಾಗತ ಕೋಣೆಗಳು. ನಿರ್ಗಮನದ ಪ್ರತಿಯೊಂದು ಕಾಯುವ ಕೋಣೆಯೂ ಪ್ರಯಾಣ ದರ್ಜೆ, ಅಥವಾ ಮೈಲ್ಸ್ ಅಂಡ್ ಮೋರ್ / ಸ್ಟಾರ್ ಅಲಯೆನ್ಸ್ ಸ್ಥಿತಿಗತಿಯ ಮೂಲಕ ಪ್ರವೇಶಸಾಧ್ಯವಿದೆ; ಆಗಮಿಸುವ ಲುಫ್ಥಾನ್ಸದ ಗಣ್ಯ ಪ್ರಯಾಣಿಕರಿಗೆ ಮಾತ್ರವೇ ಸ್ವಾಗತ ಕೋಣೆಯು ಸೀಮಿತವಾಗಿದೆ.
ಮೊದಲ ದರ್ಜೆಯ ಆಗಮನ-ನಿರ್ಗಮನ ನಿಲ್ದಾಣ
ಬದಲಾಯಿಸಿಫ್ರಾಂಕ್ಫರ್ಟ್ ವಿಮಾನ ನಿಲ್ದಾಣದಲ್ಲಿ ಒಂದು ಮೊದಲ ದರ್ಜೆಯ ಆಗಮನ-ನಿರ್ಗಮನ ನಿಲ್ದಾಣವನ್ನು ಲುಫ್ಥಾನ್ಸವು ನಿರ್ವಹಿಸುತ್ತದೆ. ಇದೇ ತೆರನಾದ ಆಗಮನ-ನಿರ್ಗಮನ ನಿಲ್ದಾಣಗಳ ಪೈಕಿ ಇದು ಮೊದಲನೆಯದಾಗಿದ್ದು, ನಿರ್ಗಮಿಸುತ್ತಿರುವ ಲುಫ್ಥಾನ್ಸದ ಮೊದಲ ದರ್ಜೆಯ, ಹಾಗೂ HON ವಲಯದ ಸದಸ್ಯರಿಗೆ ಮಾತ್ರವೇ ಇದರ ಪ್ರವೇಶಮಾರ್ಗವು ಸೀಮಿತವಾಗಿದೆ. ಆಗಮನ-ನಿರ್ಗಮನ ನಿಲ್ದಾಣದಲ್ಲಿ ಪ್ರತಿದಿನವೂ ಸರಿಸುಮಾರು 300 ಪ್ರಯಾಣಿಕರಿಗೆ ಸಂಬಂಧಿಸಿದಂತೆ ಸರಿಸುಮಾರು 200 ಸಿಬ್ಬಂದಿಗಳು ಕಾಳಜಿ ವಹಿಸುತ್ತಾರೆ; ಒಂದು ಸಂಪೂರ್ಣ-ಸೇವೆಯ ಭೋಜನಾ ಮಂದಿರ, ಸಂಪೂರ್ಣ ಪಾನಗೃಹ, ಸಿಗಾರ್ ಸೇದುವ ಕೋಣೆ, ವಿಶ್ರಾಂತಿ ಕೋಣೆಗಳು ಹಾಗೂ ಕಚೇರಿಗಳನ್ನಷ್ಟೇ ಅಲ್ಲದೇ, ಸ್ನಾನ ಸೌಕರ್ಯಗಳನ್ನೂ ಈ ತಾಣವು ಒಳಗೊಂಡಿದೆ. ಮರ್ಸಿಡಿಸ್-ಬೆಂಜ್ S-ದರ್ಜೆ, ಅಥವಾ ಪೋರ್ಷೆ ಕಾಯೆನ್ನೆ ಮೂಲಕ ಅತಿಥಿಗಳನ್ನು ನೇರವಾಗಿ ಅವರ ನಿರ್ಗಮನದ ವಿಮಾನಗಳಿಗೆ ಕರೆದುಕೊಂಡು ಹೋಗಲಾಗುತ್ತದೆ.
ಮೈಲ್ಸ್ ಅಂಡ್ ಮೋರ್
ಬದಲಾಯಿಸಿಲುಫ್ಥಾನ್ಸದ ವಾಡಿಕೆಯ ಹಾರಾಟದ ಕಾರ್ಯಸೂಚಿಯನ್ನು ಮೈಲ್ಸ್ ಅಂಡ್ ಮೋರ್ ಎಂದು ಕರೆಯಲಾಗುತ್ತದೆ. ಇದನ್ನು ಹಲವಾರು ಐರೋಪ್ಯ ವಿಮಾನಯಾನ ಸಂಸ್ಥೆಗಳು ಹಂಚಿಕೊಂಡಿವೆ. ಅವುಗಳೆಂದರೆ: ಆಸ್ಟ್ರಿಯನ್ ಏರ್‌ಲೈನ್ಸ್, LOT ಪೋಲಿಷ್ ಏರ್‌ಲೈನ್ಸ್, ಸ್ವಿಸ್ ಇಂಟರ್‌ನ್ಯಾಷನಲ್ ಏರ್‌ಲೈನ್ಸ್, ಲಕ್ಸ್‌ಏರ್, ಕ್ರೊವೇಷಿಯಾ ಏರ್‌ಲೈನ್ಸ್, ಏಡ್ರಿಯಾ ಏರ್‌ವೇಸ್, ಹಾಗೂ ಬ್ರಸೆಲ್ಸ್ ಏರ್‌ಲೈನ್ಸ್. ಮೈಲ್ಸ್ ಅಂಡ್ ಮೋರ್ ಸದಸ್ಯರು ಲುಫ್ಥಾನ್ಸ ವಿಮಾನಗಳು ಮತ್ತು ಸ್ಟಾರ್ ಅಲಯೆನ್ಸ್ ಪಾಲುದಾರ ವಿಮಾನಗಳಲ್ಲಿನ ಹಾರಾಟದ ಮೇಲೆ ಪ್ರಯೋಜನಗಳನ್ನು ಗಳಿಸಬಹುದು; ಅಷ್ಟೇ ಅಲ್ಲ, ಲುಫ್ಥಾನ್ಸ ಕ್ರೆಡಿಟ್ ಕಾರ್ಡುಗಳ ಮೂಲಕ, ಹಾಗೂ ಲುಫ್ಥಾನ್ಸ ಮಳಿಗೆಗಳಲ್ಲಿ ಮಾಡಿದ ಖರೀದಿಗಳ ಮೂಲಕವೂ ಅವರು ಪ್ರಯೋಜನಗಳನ್ನು ಗಳಿಸಬಹುದು. ನಿರ್ದಿಷ್ಟ ಪಾಲುದಾರ ವಿಮಾನಗಳೊಂದಿಗೆ ಒಂದು ಕ್ಯಾಲೆಂಡರ್ ವರ್ಷದ ಅವಧಿಯಲ್ಲಿ ನಡೆಸಿದ ಹಾರಾಟದ ಮೈಲುಗಳ ಆಧಾರದ ಮೇಲೆ, ಮೈಲ್ಸ್ ಅಂಡ್ ಮೋರ್ ವ್ಯಾಪ್ತಿಯೊಳಗಿನ ಸ್ಥಾನಮಾನವನ್ನು ನಿರ್ಣಯಿಸಲಾಗುತ್ತದೆ. ಸದಸ್ಯತ್ವ ಮಟ್ಟಗಳಲ್ಲಿ ಇವು ಸೇರಿವೆ: ಪ್ರಾಥಮಿಕ (ಯಾವುದೇ ಕನಿಷ್ಟತಮ ಮಿತಿಯಿಲ್ಲ), ಆಗಿಂದಾಗ್ಗೆ ಪಯಣಿಸುವವ (ರಜತ, 35,000 ಮೈಲು ಮಿತಿ), ಸೆನೆಟರ್ (ಸುವರ್ಣ, 100,000 ಮೈಲು ಮಿತಿ, ಜರ್ಮನ್ ನಿವಾಸಿಗಳಿಗಾಗಿ 130,000 ಮೈಲು), ಮತ್ತು HON ವಲಯ (ಕಪ್ಪು, 600,000 ಮೈಲು ಮಿತಿ, ಎರಡು ಕ್ಯಾಲೆಂಡರ್ ವರ್ಷಗಳ ಅವಧಿಯಲ್ಲಿ). ಪ್ರಾಥಮಿಕ ಮಟ್ಟದ್ದಲ್ಲದ ಎಲ್ಲಾ ಮೈಲ್ಸ್ ಅಂಡ್ ಮೋರ್ ಸ್ಥಾನಮಾನದ ಮಟ್ಟಗಳು ಕಾಯುವ ಕೋಣೆಯ ಸಂಪರ್ಕ ಮತ್ತು ಕಾರ್ಯಕಾರಿ ಬೋನಸ್ ಮೈಲುಗಳನ್ನು ಒದಗಿಸುತ್ತವೆ; ಉನ್ನತವಾದ ಮಟ್ಟಗಳು ಹೆಚ್ಚು ಪ್ರತ್ಯೇಕವಾದ ಪ್ರಯೋಜನಗಳನ್ನು ಒದಗಿಸುತ್ತವೆ.
ಸಂಕೇತ ಹಂಚಿಕೆಯ ಒಪ್ಪಂದಗಳು
ಬದಲಾಯಿಸಿಈ ಕೆಳಕಂಡ ವಿಮಾನಯಾನ ಸಂಸ್ಥೆಗಳೊಂದಿಗೆ (2010ರ ಜೂನ್ ವೇಳೆಗೆ ಇದ್ದಂತೆ) ಸಂಕೇತ ಹಂಚಿಕೆಯ ಒಪ್ಪಂದಗಳು ಮತ್ತು/ಅಥವಾ ವಾಡಿಕೆಯ ಹಾರಾಟದ ಕಾರ್ಯಸೂಚಿ ಪಾಲುದಾರಿಕೆಗಳನ್ನು ಲುಫ್ಥಾನ್ಸ ಹೊಂದಿದೆ:
*ಸ್ಟಾರ್ ಅಲಯೆನ್ಸ್ ಸದಸ್ಯ
ಅಫಘಾತಗಳು ಮತ್ತು ಘಟನೆಗಳು
ಬದಲಾಯಿಸಿ- ದೇಹಭಾಗ-ನಷ್ಟದ ಅಪಘಾತಗಳು: 1955ರಿಂದ ಆಗಿರುವ ಒಟ್ಟು 182 ಅಪಮೃತ್ಯುಗಳೊಂದಿಗಿನ 7 ಅಪಘಾತಗಳು (ಹೊಸ ಲುಫ್ಥಾನ್ಸ ಮಾತ್ರ)
- 1959ರ ಜನವರಿ 11– ಜರ್ಮನಿಯ ಹ್ಯಾಂಬರ್ಗ್ನಿಂದ ಹೊರಟ ಒಂದು ಲಾಕ್‌ಹೀಡ್ L-1049G ಸೂಪರ್ ಕಾನ್ಸ್ಟೆಲ್ಲೇಷನ್ ವಿಮಾನವು ಪಯಣ ಮಾರ್ಗದಲ್ಲಿ ಬ್ರೆಜಿಲ್ನ ರಯೋ ಡಿ ಜನೈರೋದಲ್ಲಿ ಧಾರಾಕಾರವಾದ ಮಳೆಯಲ್ಲಿ ಇಳಿಯುವಾಗ ಅಲ್ಲಿನ ಬೀಚಿಗೆ ಅಪ್ಪಳಿಸಿತು. ಇದರಿಂದ 36 ಜನರು ಸತ್ತರು, 3 ಮಂದಿ ಬದುಕುಳಿದರು.
- 1966ರ ಜನವರಿ 28– ಒಂದು ಕಾನ್ವೇರ್ CV 440 ಮಾದರಿಯ ಲುಫ್ಥಾನ್ಸ ವಿಮಾನ 005, ಜರ್ಮನಿಯ ಬ್ರೆಮೆನ್ಗೆ ಸಾಗುವಾಗ ಕಡಿಮೆ ಗೋಚರತ್ವದಲ್ಲಿನ ಒಂದು ಇಳಿದಾಣ ಸಮೀಪಿಸುವಿಕೆಯ ನಂತರದ ಭೂಸ್ಪರ್ಶದಲ್ಲಿ ಅಪ್ಪಳಿಸಿತು. ವಿಮಾನದಲ್ಲಿದ್ದ ಎಲ್ಲಾ 46 ಪ್ರಯಾಣಿಕರು ಹಾಗೂ ಸಿಬ್ಬಂದಿವರ್ಗದವರು ಅಸುನೀಗಿದರು.
- 1974ರ ನವೆಂಬರ್ 20 – ಒಂದು ಬೋಯಿಂಗ್ 747-130 ಮಾದರಿಯ ಲುಫ್ಥಾನ್ಸ ವಿಮಾನ 540, ನೈರೋಬಿಯಲ್ಲಿ ಉಡ್ಡಯನಗೊಂಡ ಅಲ್ಪಕಾಲದಲ್ಲಿಯೇ ನೆಲಕ್ಕೆ ಅಪ್ಪಳಿಸಿತು. ವಿಮಾನದಲ್ಲಿದ್ದ 157 ಮಂದಿಯ ಪೈಕಿ 59 ಮಂದಿ ತಮ್ಮ ಜೀವವನ್ನು ಕಳೆದುಕೊಂಡರು. ಇದು ಒಂದು ಬೋಯಿಂಗ್ 747 ವಿಮಾನವನ್ನು ಒಳಗೊಂಡಿದ್ದ ಮೊದಲ ಅಪ್ಪಳಿಸುವಿಕೆಯಾಗಿತ್ತು.
- 1979ರ ಜುಲೈ 26 – ಒಂದು ಬೋಯಿಂಗ್ 707-330C ಮಾದರಿಯಾದ ಲುಫ್ಥಾನ್ಸ ಕಾರ್ಗೋ ವಿಮಾನ 527, ಬ್ರೆಜಿಲ್ನ ರಯೋ ಡಿ ಜನೈರೋನಲ್ಲಿ ಉಡ್ಡಯನದ ನಂತರ ನೆಲಕ್ಕೆ ಅಪ್ಪಳಿಸಿ, 3 ಸಿಬ್ಬಂದಿ ಸದಸ್ಯರ ಸಾವಿಗೆ ಕಾರಣವಾಯಿತು.
- 1993ರ ಸೆಪ್ಟೆಂಬರ್ 14 – ಒಂದು ಏರ್‌ಬಸ್ A320 ಮಾದರಿಯಾದ ಲುಫ್ಥಾನ್ಸ ವಿಮಾನ 2904, ಫ್ರಾಂಕ್‌ಫರ್ಟ್‌ನಿಂದ ಪೋಲೆಂಡ್ನ ವಾರ್ಸಾಕ್ಕೆ 70 ಜನರನ್ನು ಹೊತ್ತು ಹಾರುತ್ತಿದ್ದು, ಓಡುದಾರಿ 11ರಲ್ಲಿ ಮಿತಿಮೀರಿ ಓಡಿ, ಓಡುದಾರಿಯ ಅಂತ್ಯದ 90 ಮೀ ಆಚೆಗೆ ಕಟ್ಟಲಾಗಿದ್ದ ಒಂದು ನೆಲದ ಒಡ್ಡಿಗೆ ಅಪ್ಪಳಿಸಿತು. ಸಹ-ವಿಮಾನ ಚಾಲಕ ಹಾಗೂ ಓರ್ವ ಪ್ರಯಾಣಿಕ ಇದರಿಂದ ಸತ್ತರು. ಯೂನಿವರ್ಸಿಟ್ಯಾಟ್ ಬಿಯೆಲೆಫೆಲ್ಡ್ (German)
- ಅಪಹರಣಗಳು
- 1977ರ ಅಕ್ಟೋಬರ್ 13 – ಒಂದು ಬೋಯಿಂಗ್ 737 ಮಾದರಿಯಾಗಿರುವ ಲುಫ್ಥಾನ್ಸ ವಿಮಾನ 181 ಅಪಹರಿಸಲ್ಪಟ್ಟಿತು ಮತ್ತು ವಿಮಾನ ಚಾಲಕನು ಕೊಲ್ಲಲ್ಪಟ್ಟ; ಆದರೆ ಸೊಮಾಲಿಯಾದ ಮೊಗಾದಿಶು ಎಂಬಲ್ಲಿ ಈ ವಿಮಾನದ ಮೇಲೆ ಒಂದು ಜರ್ಮನ್ ಪ್ರತಿ-ಭಯೋತ್ಪಾದನಾ ಪಡೆಯು (GSG 9) ಲಗ್ಗೆಹಾಕಿ ವಶಪಡಿಸಿಕೊಂಡಾಗ, ಇತರೆಲ್ಲಾ ಸಿಬ್ಬಂದಿ ಸದಸ್ಯರು ಹಾಗೂ ಇತರೆಲ್ಲಾ ಪ್ರಯಾಣಿಕರರು ಸುರಕ್ಷಿತವಾಗಿ ವಿಮೋಚನೆಗೊಳಿಸಲ್ಪಟ್ಟರು. ಓರ್ವ ಅಪಹರಣಕಾರ ಬದುಕುಳಿದ.
- 1993ರ ಫೆಬ್ರುವರಿ 11 – 94 ಪ್ರಯಾಣಿಕರು ಹಾಗೂ 10 ಸಿಬ್ಬಂದಿ ಸದಸ್ಯರನ್ನು ಹೊತ್ತುಕೊಂಡು ಫ್ರಾಂಕ್‌ಫರ್ಟ್‌ನಿಂದ ಕೈರೋಗೆ ಸಾಗುತ್ತಿದ್ದ ಲುಫ್ಥಾನ್ಸ ವಿಮಾನ 592, 20-ವರ್ಷ ವಯಸ್ಸಿನ ನೆಬಿಯು ಝೆವೊಲ್ಡೆ ಡೆಮೆಕ್ ಎಂಬಾತನಿಂದ ಅಪಹರಿಸಲ್ಪಟ್ಟಿತು; ಆಶ್ರಯದ ಹಕ್ಕನ್ನು ಪಡೆದುಕೊಳ್ಳುವ ಆಶಯದೊಂದಿಗೆ ಈತ ವಿಮಾನವನ್ನು ಅಮೆರಿಕಾ ಸಂಯುಕ್ತ ಸಂಸ್ಥಾನಗಳ ಕಡೆಗೆ ತಿರುಗಿಸಿದ. ತನ್ನ ಸ್ವಂತ ಸ್ಥಳವಾದ ಎಥಿಯೋಪಿಯಾಕ್ಕೆ ಮರಳಿ ಗಡೀಪಾರು ಮಾಡಲ್ಪಡುತ್ತಿದ್ದ ಡೆಮೆಕ್, ನ್ಯೂಯಾರ್ಕ್ ನಗರದಲ್ಲಿನ ಜಾನ್ F. ಕೆನಡಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿಯುತ್ತಿದ್ದಂತೆ ಅಲ್ಲಿನ ಅಧಿಕಾರಿಗಳಿಗೆ ಶರಣಾದ. ಯಾವುದೇ ಪ್ರಯಾಣಿಕರಾಗಲೀ ಅಥವಾ ಸಿಬ್ಬಂದಿಯಾಗಲೀ ಗಾಯಗೊಳ್ಳಲಿಲ್ಲ ಅಥವಾ ಕೊಲ್ಲಲ್ಪಡಲಿಲ್ಲ.
ಇವನ್ನೂ ನೋಡಿ
ಬದಲಾಯಿಸಿ- ಅಮಾಡಿಯಸ್ IT ಗ್ರೂಪ್
- ಏರ್ ಬರ್ಲಿನ್
- ಏರ್ ಡೊಲೊಮಿಟಿ
- ಆಗ್ಸ್ಬರ್ಗ್ ಏರ್‌ವೇಸ್
- ಆಸ್ಟ್ರಿಯನ್ ಏರ್‌ಲೈನ್ಸ್
- ಬ್ರಸೆಲ್ಸ್ ಏರ್‌ಲೈನ್ಸ್
- ಕಾಂಟ್ಯಾಕ್ಟ್ ಏರ್
- ಕ್ರಾಸ್ಏರ್
- ಯುರೋವಿಂಗ್ಸ್
- ಲುಫ್ಥಾನ್ಸ ಕಾರ್ಗೋ
- ಲುಫ್ಥಾನ್ಸ ಸಿಟಿಲೈನ್
- ಇಂಟರ್‌ಫ್ಲಗ್
- ಜೆಟ್‌ಬ್ಲೂ ಏರ್‌ವೇಸ್
- ಲುಫ್ಥಾನ್ಸ ಹೀಸ್ಟ್
- SWISS
- ಸ್ವಿಸ್‌ಏರ್
- ಸನ್‌ಎಕ್ಸ್‌ಪ್ರೆಸ್
- ಲುಫ್ಥಾನ್ಸ ಟೆಕ್ನಿಕ್.
ಆಕರಗಳು
ಬದಲಾಯಿಸಿ- ↑ "Our hubs in Frankfurt, Munich, Dusseldorf and Zurich". Lufthansa. 2007-02-16. Archived from the original on 2009-12-06. Retrieved 2010-06-06.
- ↑ "Airline Membership". IATA. Archived from the original on 2015-07-11. Retrieved 2010-07-22.
- ↑ ೩.೦ ೩.೧ ೩.೨ "Directory: World Airlines". Flight International. 2007-04-03. p. 107.
- ↑ "ಲುಫ್ಥಾನ್ಸ ವಿಮಾನಶ್ರೇಣಿ"
- ↑ "ವೀ ಹಿಯರ್‌ಬೈ ಇನ್‌ವೈಟ್ ಅವರ್ ಷೇರ್‌ಹೋಲ್ಡರ್ಸ್ ಟು ಅಟೆಂಡ್ ದಿ 51ಸ್ಟ್ ಆನ್ಯುಯಲ್ ಜನರಲ್ ಮೀಟಿಂಗ್ Archived 2012-04-24 ವೇಬ್ಯಾಕ್ ಮೆಷಿನ್ ನಲ್ಲಿ.." ಲುಫ್ತಾನ್ಸಾ. 2009ರ ಆಗಸ್ಟ್ 25ರಂದು ಮರು ಸಂಪಾದಿಸಲಾಯಿತು.
- ↑ "ಹೌ ಟು ಗೆಟ್ ದೇರ್ Archived 2006-11-01 ವೇಬ್ಯಾಕ್ ಮೆಷಿನ್ ನಲ್ಲಿ.." ಲುಫ್ತಾನ್ಸಾ. 2009ರ ಜುಲೈ 30ರಂದು ಮರುಸಂಪಾದಿಸಲಾಯಿತು.
- ↑ "ಲುಫ್ಥಾನ್ಸ ಓಪನ್ಸ್ ನ್ಯೂ ಆಫೀಸ್ ಕಾಂಪ್ಲೆಕ್ಸ್ ಇನ್ ಫ್ರಾಂಕ್‌ಫರ್ಟ್ (ಲುಫ್ಥಾನ್ಸ ಎರೊಫ್‌ನೆಟ್ ನ್ಯೂ ಕೊನ್‌ಜೆರ್‌ಜೆನ್‌ಟ್ರೇಲ್ ಇನ್ ಫ್ರಾಂಕ್‌ಫರ್ಟ್)." ಯುರೋಪ್ ಇಂಟೆಲಿಜೆನ್ಸ್ ವೈರ್. 200ರ ಜುಲೈ 19. 2009ರ ಆಗಸ್ಟ್ 25ರಂದು ಮರುಸಂಪಾದಿಸಲಾಯಿತು.
- ↑ "ಲುಫ್ಥಾನ್ಸ ಫ್ಲೈಸ್ ಟು 50-ಇಯರ್ ಮೈಲ್‌ಸ್ಟೋನ್." ಡ್ಯೂಷೆ ವೆಲ್ಲೆ . 2005ರ ಜನವರಿ 4. 2009ರ ಆಗಸ್ಟ್ 25ರಂದು ಮರುಸಂಪಾದಿಸಲಾಯಿತು.
- ↑ ೯.೦ ೯.೧ "ಲುಫ್ಥಾನ್ಸ ಕ್ರಾನಿಕಲ್". Archived from the original on 2009-10-10. Retrieved 2010-07-22.
- ↑ "Sedta Cuts Rates". Time Magazine. January 27, 1941. Archived from the original on 2007-10-12. Retrieved 2007-09-14.
{{cite journal}}
: Cite has empty unknown parameters:|laydate=
,|quotes=
,|laysource=
,|laysummary=
,|coauthors=
, and|month=
(help) - ↑ ಅನದರ್ ಏರ್‌ಲೈನ್ ಎಂಟರ್ಸ್ ದಿ “A380 ಎರಾ” ಆಸ್ ಲುಫ್ಥಾನ್ಸ ರಿಸೀವ್ಸ್ ಇಟ್ಸ್ ಇನಿಷಿಯಲ್ 21ಸ್ಟ್ ಸೆಂಚುರಿ ಫ್ಲಾಗ್‌ಶಿಪ್ ಏರ್‌ಕ್ರಾಫ್ಟ್
- ↑ "Lufthansa.com". Archived from the original on 2009-01-08. Retrieved 2021-08-10.
- ↑ "ಲುಫ್ಥಾನ್ಸದಿಂದ ಬಿಡುಗಡೆ ಮಾಡಲ್ಪಟ್ಟ ಅಧಿಕೃತ ಪತ್ರಿಕಾ ಹೇಳಿಕೆ". Archived from the original on 2008-09-18. Retrieved 2021-08-10.
- ↑ ಬ್ರಸೆಲ್ಸ್ ಏರ್‌ಲೈನ್ಸ್‌ನಿಂದ ಬಿಡುಗಡೆ ಮಾಡಲ್ಪಟ್ಟ ಅಧಿಕೃತ ಪತ್ರಿಕಾ ಹೇಳಿಕೆ
- ↑ staralliance.com
- ↑ http://www.dowjones.de/site/2009/06/lufthansa-reaches-deal-to-raise-stake-in-bmi-to-80.html Archived 2011-07-27 ವೇಬ್ಯಾಕ್ ಮೆಷಿನ್ ನಲ್ಲಿ., ಡೌ ಜೋನ್ಸ್ ಡ್ಯೂಷ್‌ಲ್ಯಾಂಡ್, ಜುಲೈ 22, 2009
- ↑ ಲುಫ್ಥಾನ್ಸ ಟು ಗೇನ್ ಫುಲ್ ಕಂಟ್ರೋಲ್ ಆಫ್ ಬಿಎಂಐ ಫ್ರಂ SAS, ವೈಲ್ BA ಕನ್‌ಫರ್ಮ್ಸ್ ಇಂಟರೆಸ್ಟ್ ಇನ್ ದಿ UK ಕ್ಯಾರಿಯರ್ Archived 2017-07-07 ವೇಬ್ಯಾಕ್ ಮೆಷಿನ್ ನಲ್ಲಿ., ಸೆಂಟರ್ ಫಾರ್ ಪೆಸಿಫಿಕ್ ಏವಿಯೇಷನ್, ಅಕ್ಟೋಬರ್ 2, 2009
- ↑ ಇಂಪ್ಯಾಕ್ಟ್ ಪಬ್ಲಿಕೇಷನ್ಸ್
- ↑ FT.com UK
- ↑ "ಇಂಪ್ರಿಂಟ್ Archived 2009-11-05 ವೇಬ್ಯಾಕ್ ಮೆಷಿನ್ ನಲ್ಲಿ.." ಲುಫ್ತಾನ್ಸಾ. 2009ರ ಆಗಸ್ಟ್ 25ರಂದು ಮರುಸಂಪಾದಿಸಲಾಯಿತು.
- ↑ ಫೆಲೋಸ್, ಲಾರೆನ್ಸ್. "ಜರ್ಮನ್ಸ್ ಸೆಟ್ಟಿಂಗ್ ಓನ್ ಆಫೀಸ್ ಅವರ್ಸ್; ಸಮ್ ಜರ್ಮನ್ ವರ್ಕರ್ಸ್ ಸೆಟ್ ದೆರ್ ಓನ್ ಅವರ್ಸ್ -ವಿಥಿನ್ ರೀಸನ್." ದಿ ನ್ಯೂಯಾರ್ಕ್ ಟೈಮ್ಸ್ . ಸೋಮವಾರ ಜುಲೈ 12, 1971. ಪುಟ 1. 2010ರ ಫೆಬ್ರವರಿ 14ರಂದು ಮರುಸಂಪಾದಿಸಲಾಯಿತು. "ಅಟ್ ಲುಫ್ಥಾನ್ಸ'ಸ್ ಗ್ಲೀಮಿಂಗ್ ನ್ಯೂ ಆಫೀಸ್ ಹಿಯರ್, ಅಂಡ್ ಅಟ್ ಮೆನಿ ಅದರ್ ಆಫೀಸಸ್ ಅಂಡ್ ಫ್ಯಾಕ್ಟರೀಸ್ ಅರೌಂಡ್ ವೆಸ್ಟ್ ಜರ್ಮನಿ, ಮೆನ್ ಅಂಡ್ ವುಮೆನ್ ನೌ ಗೋ ಟು ವರ್ಕ್ ವೆನ್ ದೆ ವಾಂಟ್ ಅಂಡ್ ಸ್ಟೇ ಆಸ್ ಲಾಂಗ್ ಆಸ್ ದೆ ವಾಂಟ್ -- ವಿಥಿನ್ ರೀಸನ್."
- ↑ "ಟೆರರಿಸ್ಟ್ಸ್ ಷೂಟ್ ಬರ್ಲಿನ್ ಅಫಿಷಿಯಲ್, ಬಾಂಬ್ ಏರ್‌ಲೈನ್ Archived 2012-07-25 ವೇಬ್ಯಾಕ್ ಮೆಷಿನ್ ನಲ್ಲಿ.." ಲಾಸ್ ಏಂಜಲೀಸ್ ಟೈಮ್ಸ್ . 1986ರರ ಅಕ್ಟೋಬರ್ 28. ವಿಭಾಗ 1, ಲೇಟ್ ಫೈನಲ್ ಡೆಸ್ಕ್. ಪ್ರಾರಂಭದ ಪುಟ 2. 2010ರ ಫೆಬ್ರವರಿ 14ರಂದು ಮರುಸಂಪಾದಿಸಲಾಯಿತು. "ವೆಸ್ಟ್ ಜರ್ಮನ್ ಟೆರರಿಸ್ಟ್ಸ್ ಟುಡೆ ಷಾಟ್ ಎ ವೆಸ್ಟ್ ಬರ್ಲಿನ್ ಇಮಿಗ್ರೇಷನ್ ಅಫಿಷಿಯಲ್ ಇನ್ ದಿ ಲೆಗ್ಸ್ ಅಂಡ್ ಬಾಂಬ್‌ಡ್ ದಿ ಕಲೋನ್ ಹೆಡ್‌ಕ್ವಾರ್ಟರ್ಸ್ ಆಫ್ ದಿ ಸ್ಟೇಟ್-ಓನ್ಡ್ ಲುಫ್ಥಾನ್ಸ ಏರ್‌ಲೈನ್."
- ↑ "AROUND THE WORLD; ಬಾಂಬ್ ರಿಪ್ಸ್ ಆಫೀಸಸ್ ಆಫ್ ಲುಫ್ಥಾನ್ಸ ಇನ್ ಕಲೋನ್." ದಿ ನ್ಯೂಯಾರ್ಕ್ ಟೈಮ್ಸ್ ನಲ್ಲಿನ ಅಸೋಸಿಯೇಟೆಡ್ ಪ್ರೆಸ್ . 1986ರ ಅಕ್ಟೋಬರ್ 29. 2010ರ ಫೆಬ್ರವರಿ 14ರಂದು ಮರುಸಂಪಾದಿಸಲಾಯಿತು.
- ↑ "Grundsteinlegung für Lufthansa Hauptverwaltung in Köln." KFZ.net. 2010ರ ಫೆಬ್ರವರಿ 12ರಂದು ಮರುಸಂಪಾದಿಸಲಾಯಿತು. "Die Lufthansa hat mit einer Grundsteinlegung in Köln-Deutz den Beginn der Arbeiten für ihre neue Kölner Konzernzentrale gefeiert. Ende 2007 werden rund 800 Kölner Lufthanseaten, vor allem aus dem Konzernressort Finanzen, das Hochhaus am Rhein verlassen und in den nur wenige hundert Meter entfernten Neubau umziehen, erklärte das Unternehmen."
- ↑ "ಸರ್ವೀಸ್ ಕಾಂಟ್ಯಾಕ್ಟ್ ಪರ್ಸನ್ Archived 2012-03-20 ವೇಬ್ಯಾಕ್ ಮೆಷಿನ್ ನಲ್ಲಿ.." ಲುಫ್ತಾನ್ಸ. 2010ರ ಫೆಬ್ರುವರಿ 15ರಂದು ಮರುಸಂಪಾದಿಸಲಾಯಿತು.
- ↑ "ಕಾಂಟ್ಯಾಕ್ಟ್ಸ್ ಇನ್ವೆಸ್ಟರ್ ರಿಲೇಷನ್ಸ್ Archived 2011-07-14 ವೇಬ್ಯಾಕ್ ಮೆಷಿನ್ ನಲ್ಲಿ.." ಲುಫ್ತಾನ್ಸ. 2010ರ ಫೆಬ್ರುವರಿ 14ರಂದು ಮರುಸಂಪಾದಿಸಲಾಯಿತು.
- ↑ "ಮೀಡಿಯಾ ರಿಲೇಷನ್ಸ್ Archived 2011-06-20 ವೇಬ್ಯಾಕ್ ಮೆಷಿನ್ ನಲ್ಲಿ.." ಲುಫ್ತಾನ್ಸ. 2010ರ ಫೆಬ್ರುವರಿ 14ರಂದು ಮರುಸಂಪಾದಿಸಲಾಯಿತು.
- ↑ http://www.wer-zu-wem.de/firma/Eurowings.html
- ↑ [೧]
- ↑ CNN.com
- ↑ Reuters.com
- ↑ "ಲುಫ್ಥಾನ್ಸ-ವಿಮಾನಶ್ರೇಣಿ". Archived from the original on 2012-05-19. Retrieved 2010-07-22.
- ↑ Lufthansa fleet list at ch-aviation.ch. 2010-05-08ರಂದು ಮರುಸಂಪಾದಿಸಲಾಯಿತು.
- ↑ "ಲುಫ್ಥಾನ್ಸ ಆಸನ ನಕ್ಷೆ" (PDF). Archived from the original (PDF) on 2010-03-31. Retrieved 2010-07-22.
- ↑ Lufthansa historic fleet at airfleets.ner. 2009-11-20ರಂದು ಮರು ಸಂಪಾದಿಸಲಾಯಿತು.
- ↑ ಲುಫ್ಥಾನ್ಸ ಹಿಸ್ಟರಿ ಅಟ್ ಜರ್ಮನ್ ವಿಕಿಪೀಡಿಯಾ.2009-11-30ರಂದು ಮರುಸಂಪಾದಿಸಲಾಗಿಯಿತು.
- ↑ [50]
- ↑ "A380". Lufthansa. 2007-02-16. Retrieved 2010-06-06.
- ↑ Gigacz, Oliver (2010-05-15). "A380 Production Update: May 2010 (#8) « Airbus A380 Production". A380production.com. Archived from the original on 2010-06-19. Retrieved 2010-06-06.
- ↑ "Lufthansa plans to fly Airbus A380 to India in winter - Yahoo! India News". In.news.yahoo.com. Retrieved 2010-06-06.
- ↑ ಲುಫ್ಥಾನ್ಸ'ಸ್ ಲೇಬರ್ ಆಫ್ ಲವ್: ರೆಸ್ಟೋರಿಂಗ್ ಸಮ್ ರಿಯಲಿ ಓಲ್ಡ್ ಜಂಕರ್ಸ್, ವಾಲ್ ಸ್ಟ್ರೀಟ್ ಜರ್ನಲ್, ಜೂನ್ 16, 2008
- ↑ ಎಂಜಿನಿಯರಿಂಗ್ ವೆಟರನ್ ಪ್ಲೇಸ್ ಎ ವೈಟಲ್ ರೋಲ್ ಇನ್ ಪ್ಲೇನ್'ಸ್ ರೀಬರ್ತ್
- ↑ 20100525. "Azerbaijan Airlines codeshare with Lufthansa/Austrian « AIRLINE ROUTE". Airlineroute.net. Retrieved 2010-06-06.
{{cite web}}
:|author=
has numeric name (help) - ↑ "ಜೆಟ್‌ಬ್ಲೂ ಏರ್‌ವೇಸ್". Archived from the original on 2013-07-09. Retrieved 2021-08-10.
- ↑ TAAG TO START LUFTHANSA CODESHARING
ಹೊರಗಿನ ಕೊಂಡಿಗಳು
ಬದಲಾಯಿಸಿ- ಲುಫ್ಥಾನ್ಸ Archived 2008-08-21 ವೇಬ್ಯಾಕ್ ಮೆಷಿನ್ ನಲ್ಲಿ.
- ಲುಫ್ಥಾನ್ಸ USAಯ ಅಧಿಕೃತ ವೆಬ್ಸೈಟ್ Archived 2011-06-28 ವೇಬ್ಯಾಕ್ ಮೆಷಿನ್ ನಲ್ಲಿ.
- ಲುಫ್ಥಾನ್ಸ UKಯ ಅಧಿಕೃತ ವೆಬ್ಸೈಟ್ Archived 2011-06-28 ವೇಬ್ಯಾಕ್ ಮೆಷಿನ್ ನಲ್ಲಿ.
- ಬಿ-ಲುಫ್ಥಾನ್ಸ Archived 2009-07-07 ವೇಬ್ಯಾಕ್ ಮೆಷಿನ್ ನಲ್ಲಿ. - ಕೆಲಸಗಳು ಮತ್ತು ವೃತ್ತಿ ಅವಕಾಶಗಳು
- ಲುಫ್ಥಾನ್ಸ'ಸ್ ಲೇಬರ್ ಆಫ್ ಲವ್: ರೆಸ್ಟೋರಿಂಗ್ ಸಮ್ ರಿಯಲಿ ಓಲ್ಡ್ ಜಂಕರ್ಸ್, ವಾಲ್ ಸ್ಟ್ರೀಟ್ ಜರ್ನಲ್, ಜೂನ್ 16, 2008
- ಎಂಜಿನಿಯರಿಂಗ್ ವೆಟರನ್ ಪ್ಲೇಸ್ ಎ ವೈಟಲ್ ರೋಲ್ ಇನ್ ಪ್ಲೇನ್'ಸ್ ರೀಬರ್ತ್, ವಾಲ್ ಸ್ಟ್ರೀಟ್ ಜರ್ನಲ್, ಜೂನ್ 16, 2008