ಲೀ ಜುನ್ (ಜನನ ೧೬ ಡಿಸೆಂಬರ್ ೧೯೬೯) ಒಬ್ಬ ಚೀನೀ ಬಿಲಿಯನೇರ್ ವಾಣಿಜ್ಯೋದ್ಯಮಿ ಮತ್ತು ದಾನಿ. ಅವರು ಗ್ರಾಹಕ ಎಲೆಕ್ಟ್ರಾನಿಕ್ಸ್ ಕಂಪನಿಯಾದ ಶಿಯೋಮಿ ಅನ್ನು ಸ್ಥಾಪಿಸಿ ಅತ್ಯಂತ ಹೆಸರುವಾಸಿಯಾಗಿದ್ದಾರೆ. ಅಕ್ಟೋಬರ್ ೨೦೨೨ ರ ಹೊತ್ತಿಗೆ ಬ್ಲೂಮ್‌ಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್‌ನ ಪ್ರಕಾರ ಲೀ ಅವರ ನಿವ್ವಳ ಮೌಲ್ಯವು ಯು.ಎಸ್ $೮.೧ ಶತಕೋಟಿ ಎಂದು ಅಂದಾಜಿಸಲಾಗಿದೆ. ಇದು ಅವರನ್ನು ವಿಶ್ವದ ೨೦೩ ನೇ ಶ್ರೀಮಂತ ವ್ಯಕ್ತಿಯನ್ನಾಗಿ ಮಾಡಿದೆ.[] ಫೋರ್ಬ್ಸ್‌ ಅವರಿಗೆ ವಿಶ್ವಾದ್ಯಂತ ೨೬೫ನೇ ಶ್ರೀಮಂತ ವ್ಯಕ್ತಿಯೆಂಬ ಶ್ರೇಯಾಂಕ ನೀಡಿದೆ.[]

ಲೀ ಜುನ್
雷军
೨೦೨೨ ರಲ್ಲಿ ಲೀ
ಜನನ (1969-12-07) ೭ ಡಿಸೆಂಬರ್ ೧೯೬೯ (ವಯಸ್ಸು ೫೫)
ಕ್ಸಿಯಾಂಟಾ, ಹುಬೈ,ಚೀನಾ
ಶಿಕ್ಷಣ ಸಂಸ್ಥೆವುಹಾನ್ ವಿಶ್ವವಿದ್ಯಾನಿಲಯ (೧೯೯೧)[][]
ವೃತ್ತಿ(ಗಳು)ಸಹ-ಸಂಸ್ಥಾಪಕ ಮತ್ತು ಸಿಇಒ ಶಿಯೋಮಿ[]
ಅಧ್ಯಕ್ಷರು ಕಿಂಗ್ಸಾಫ್ಟ್
ಅಧ್ಯಕ್ಷರು ಯುಸಿವೆಬ್[]
ಅಧ್ಯಕ್ಷರು ವೈವೈ.ಕಾಮ್[]
ಅಧ್ಯಕ್ಷರು ಶುನ್ವೀ ರಾಜಧಾನಿ
ಗಮನಾರ್ಹ ಕೆಲಸಗಳುಶಿಯೋಮಿ ನ ಸಹ-ಸ್ಥಾಪಕರು []
ಮಂಡಳಿಯ ಸದಸ್ಯKingsoft|ಕಿಂಗ್ಸಾಫ್ಟ್
ಸಂಗಾತಿಜಾಂಗ್ ಟಾಂಗ್ (张彤)
ಮಕ್ಕಳು
ಜಾಲತಾಣLei Jun's Weibo Page

ಆರಂಭಿಕ ಜೀವನ ಮತ್ತು ಶಿಕ್ಷಣ

ಬದಲಾಯಿಸಿ

ಲೀ ಅವರು ೭ ಡಿಸೆಂಬರ್ ೧೯೬೯ ರಂದು ಹುಬೈಯ ಅಭಿವೃದ್ಧಿಯಾಗದ ಗ್ರಾಮಾಂತರದಲ್ಲಿರುವ ಕ್ಸಿಯಾಂಟಾದಲ್ಲಿ ಜನಿಸಿದರು. ಅವರ ತಂದೆ-ತಾಯಿ ಇಬ್ಬರೂ ಶಿಕ್ಷಕರಾಗಿದ್ದರು. ಇದು ಸಾಂಸ್ಕೃತಿಕ ಕ್ರಾಂತಿಯ ನಂತರ ನಾಚಿಕೆಗೇಡಿನ ವೃತ್ತಿಯಾಗಿತ್ತು.[] ಅವರ ತಂದೆ ತಿಂಗಳಿಗೆ $೭ ವೇತನ ಪಡೆಯುತ್ತಿದ್ದರು.[] ಬಾಲ್ಯದಲ್ಲಿ ಅವರು ಎಲೆಕ್ಟ್ರಾನಿಕ್ಸ್‌ನಲ್ಲಿ ಹೆಚ್ಚಿನ ಆಸಕ್ತಿ ಹೊಂದಿದ್ದರು ಮತ್ತು ರೇಡಿಯೊಗಳನ್ನು ವಿಭಜನೆ ಮಾಡುವುದು ಮತ್ತು ಮರು-ಜೋಡಣೆ ಮಾಡುವುದರಲ್ಲಿ ಹೆಚ್ಛಿನ ಆಸಕ್ತಿ ಹೊಂದಿದ್ದರು. ಇದನ್ನು ಅವರ ತಂದೆ ಪ್ರೋತ್ಸಾಹಿಸಿದರು.[] ಅವರು ಎರಡು ಬ್ಯಾಟರಿಗಳು, ಒಂದು ಬಲ್ಬ್, ಒಂದು ಮರದ ಪೆಟ್ಟಿಗೆ, ಮತ್ತು ಕೆಲವು ತಂತಿಗಳನ್ನು ಬಳಸಿ ತಮ್ಮ ಹಳ್ಳಿಯಲ್ಲಿ ಮೊದಲ ವಿದ್ಯುತ್ ದೀಪವನ್ನು ತಯಾರಿಸಿದರು.[]

೧೯೮೭ ರಲ್ಲಿ ಅವರು ಮಿಯಾನ್ಯಾಂಗ್ ಮಿಡಲ್ ಸ್ಕೂಲ್ ( ಈಗ ಕ್ಸಿಯಾಂಟಾವೊ ಮಿಡಲ್ ಸ್ಕೂಲ್) ನಿಂದ ಪದವಿ ಪಡೆದರು ಮತ್ತು ವುಹಾನ್ ವಿಶ್ವವಿದ್ಯಾನಿಲಯದಲ್ಲಿ ಅದ್ಯಯನ ಪ್ರಾರಂಭಿಸಿದರು. ಅಲ್ಲಿಂದ ಅವರು ೧೯೯೧ ರಲ್ಲಿ ಕಂಪ್ಯೂಟರ್ ಸೈನ್ಸ್‌ನಲ್ಲಿ ಬ್ಯಾಚುಲರ್ ಆಫ್ ಆರ್ಟ್ಸ್‌ನೊಂದಿಗೆ ಪದವಿ ಪಡೆದರು.[] ಕಾಲೇಜಿನ ಕೊನೆಯ ವರ್ಷದಲ್ಲಿ ಅವರು ತಮ್ಮ ಮೊದಲ ಕಂಪನಿಯಾದ ಗುಂಡುಗೊಮ್ಸ್ ಅನ್ನು ಸ್ಥಾಪಿಸಿದರು. ಅವರು ಶಾಲೆಯಲ್ಲಿ ಉತ್ತಮ ಸಾಧನೆಯನ್ನು ಮಾಡಿದರು.

ವೃತ್ತಿ

ಬದಲಾಯಿಸಿ

೧೯೯೨ ರಲ್ಲಿ ಲೀ ಕಿಂಗ್‌ಸಾಫ್ಟ್‌ಗೆ ಇಂಜಿನಿಯರ್ ಆಗಿ ಸೇರಿದರು. ಇವರು ೧೯೯೮ ರಲ್ಲಿ ಕಂಪನಿಯ ಸಿಇಒ ಆದರು ಮತ್ತು ೨೦೦೭ ರಲ್ಲಿ ಹಾಂಗ್ ಕಾಂಗ್ ಸ್ಟಾಕ್ ವಿನಿಮಯವನ್ನು ಆರಂಭಿಕ ಸಾರ್ವಜನಿಕ ಕೊಡುಗೆಯತ್ತ ಮುನ್ನಡೆಸಿದರು. ೨೦ ಡಿಸೆಂಬರ್ ೨೦೦೭ ರಂದು ಅವರು ಆರೋಗ್ಯ ಕಾರಣಗಳಿಗಾಗಿ ಕಿಂಗ್‌ಸಾಫ್ಟ್‌ನ ಅಧ್ಯಕ್ಷ ಮತ್ತು ಸಿಇಒ ಸ್ಥಾನಕ್ಕೆ ರಾಜೀನಾಮೆ ನೀಡಿದರು.[]


೨೦೦೦ ರಲ್ಲಿ ಲೀ ಅವರು ಜೋಯೋ.ಕಾಮ್ ಎಂಬ ಆನ್‌ಲೈನ್ ಪುಸ್ತಕದ ಅಂಗಡಿಯನ್ನು ಸ್ಥಾಪಿಸಿದರು. ಅದನ್ನು ಅವರು ಯು.ಎಸ್$೭೫ ಮಿಲಿಯನ್‌ಗೆ ಅಮೆಜಾನ್.ಕಾಮ್ ಗೆ ೨೦೦೪ ರಲ್ಲಿ ಮಾರಾಟ ಮಾಡಿದರು.[] ೨೦೦೫ ರಲ್ಲಿ ಅವರು ವೈವೈ ನಲ್ಲಿ $೧ ಮಿಲಿಯನ್ ಹೂಡಿಕೆ ಮಾಡಿದರು. ೨೦೧೨ ರಲ್ಲಿ ಆರಂಭಿಕ ಸಾರ್ವಜನಿಕ ಕೊಡುಗೆಯ ಮೂಲಕ ಕಂಪನಿಯು ಷೇರುಗಳು $೧೨೯ ದಶಲಕ್ಷ ಮೌಲ್ಯದ್ದಾಗಿದ್ದವು.[೧೦] ೨೦೦೮ ರಲ್ಲಿ ಅವರು ಯುಸಿವೆಬ್ ನ ಅಧ್ಯಕ್ಷರಾದರು.[೧೧]


೨೦೧೦ ರಲ್ಲಿ ಮಾಜಿ ಗೂಗಲ್ ಕಾರ್ಯನಿರ್ವಾಹಕರಾದ ಲಿನ್ ಬಿನ್ ಸೇರಿದಂತೆ ಅನೇಕ ಪಾಲುದಾರರೊಂದಿಗೆ ಸೇರಿ ಲೀ ಶಿಯೋಮಿ ಅನ್ನು ಸ್ಥಾಪಿಸಿದರು.[೧೨] ೨೦೨೨ ರಲ್ಲಿ ಉಕ್ರೇನ್ ಆಕ್ರಮಣದ ನಂತರ ರಷ್ಯಾದಲ್ಲಿ ವ್ಯಾಪಾರವನ್ನು ನಿರ್ವಹಿಸುವುದಕ್ಕಾಗಿ ಭ್ರಷ್ಟಾಚಾರ ತಡೆಗಟ್ಟುವಿಕೆಯ ರಾಷ್ಟ್ರೀಯ ಸಂಸ್ಥೆಯ ಅಂತರರಾಷ್ಟ್ರೀಯ ಯುದ್ಧದ ಪ್ರಾಯೋಜಕರ ಪಟ್ಟಿಯಲ್ಲಿ ಹದಿಮೂರು ಶಿಯೋಮಿ ಅಧಿಕಾರಿಗಳಲ್ಲಿ ಲೀ ಒಬ್ಬರಾಗಿದ್ದಾರೆ.[೧೩]


೨೦೧೧ ರಲ್ಲಿ ಅವರು ಷುನ್‌ವೀ ಕ್ಯಾಪಿಟಲ್ ಎಂಬ ಹೂಡಿಕೆ ಕಂಪನಿಯನ್ನು ಸಹ-ಸ್ಥಾಪಿಸಿದರು. ಅದರ ಮೂಲಕ ಅವರು ಇ-ಕಾಮರ್ಸ್, ಸಾಮಾಜಿಕ ನೆಟ್‌ವರ್ಕಿಂಗ್ ಮತ್ತು ಜಂಗಮ ಉದ್ಯಮಗಳಲ್ಲಿನ ಕಂಪನಿಗಳಲ್ಲಿ ಹೂಡಿಕೆ ಮಾಡುತ್ತಾರೆ.[೧೪] ೨೦೧೧ ರಲ್ಲಿ, ಅವರು ಮತ್ತೆ ಕಿಂಗ್‌ಸಾಫ್ಟ್‌ಗೆ ಅಧ್ಯಕ್ಷರಾಗಿ ಸೇರಿಕೊಂಡರು.[]

ವೈಯಕ್ತಿಕ ಜೀವನ

ಬದಲಾಯಿಸಿ

ಲೀ ಮತ್ತು ಅವರ ಪತ್ನಿ ಜಾಂಗ್ ಟಾಂಗ್‌ಗೆ ಇಬ್ಬರು ಮಕ್ಕಳಿದ್ದಾರೆ.[] ೨೦೧೩ ರಲ್ಲಿ, ಲೀ ಅವರನ್ನು ನ್ಯಾಷನಲ್ ಪೀಪಲ್ಸ್ ಕಾಂಗ್ರೆಸ್‌ನ ಪ್ರತಿನಿಧಿಯಾಗಿ ನೇಮಿಸಲಾಯಿತು.[೧೫] ೨೦೧೬ ರ ಹೊತ್ತಿಗೆ, ಅವರು ಬಹಳ ಕಡಿಮೆ ಆಂಗ್ಲ ಭಾಷೆ ಮಾತನಾಡುತ್ತಿದ್ದರು ಮತ್ತು ಭಾಷಾಂತರಕಾರರ ಸಹಾಯ ಪಡೆದು ಮಾಧ್ಯಮಗಳೊಂದಿಗೆ ಮಾತನಾಡಿದರು.[೧೬]

ಪರೋಪಕಾರ

ಬದಲಾಯಿಸಿ

೨೦೧೭ ರ ಹೊತ್ತಿಗೆ ಲೀ $೧ ಶತಕೋಟಿಯನ್ನು ಸಂಸ್ಥೆಗೆ ದೇಣಿಗೆಯಾಗಿ ನೀಡಿದ್ದರು. ೧೯೯೭ ರಲ್ಲಿ ಅವರ ಅಲ್ಮಾ ಮೇಟರ್ ವುಹಾನ್ ವಿಶ್ವವಿದ್ಯಾಲಯಕ್ಕೆ ¥೧೪೦,೦೦೦ ದೇಣಿಗೆಯನ್ನು ನೀಡಿದ್ದರು. ನಂತರ ಅವರು ೨೦೧೩ ರ ಲುಶನ್ ಭೂಕಂಪದ ಸಂತ್ರಸ್ತರಾದ ವಲಸಿಗರಿಗೆ ಶಾಲೆಗಳು, ಶಾಲೆಗಳ ನವೀಕರಣ ಮತ್ತು ಮಣ್ಣಿನ ಇಟ್ಟಿಗೆ ಮನೆಗಳು ಮತ್ತು ಸಾಂಸ್ಕೃತಿಕ ಕಟ್ಟಡಗಳ ನಿರ್ಮಾಣಕ್ಕಾಗಿ ಯಾಂಗ್‌ಚುನ್ ಗ್ರಾಮಸ್ಥರಿಗೆ ಧನಸಹಾಯ ನೀಡುವ ಸಂಸ್ಥೆಯಾದ ಝುಹೈ ಚಾರಿಟಿಗೆ ದೇಣಿಗೆ ನೀಡಿದ್ದರು.[೧೭] ೨೦೨೧ ರಲ್ಲಿ, ಅವರು $೨.೨ ಶತಕೋಟಿ ಮೌಲ್ಯದ ಶಿಯೋಮಿ ಷೇರುಗಳನ್ನು ಚಾರಿಟಿಗೆ ದಾನ ಮಾಡಿದರು..[೧೮]

೨೦೨೩ ರಲ್ಲಿ ವುಹಾನ್ ವಿಶ್ವವಿದ್ಯಾಲಯದ ೧೩೦ ನೇ ವಾರ್ಷಿಕೋತ್ಸವದಲ್ಲಿ ಲೀ ಜುನ್ ಅವರು ೧.೩ ಶತಕೋಟಿ ಯುವಾನ್‌ಗಳನ್ನು ವೈಯಕ್ತಿಕ ದೇಣಿಗೆಯಾಗಿ ನೀಡಿದರು. ಇದು ಈ ವಿಶ್ವವಿದ್ಯಾನಿಲಯಕ್ಕೆ ದೊರೆತ ಇದುವರೆಗಿನ ಅತಿದೊಡ್ಡ ವೈಯಕ್ತಿಕ ದೇಣಿಗೆಯಾಗಿದೆ.[೧೯][೨೦]

ಪ್ರಶಸ್ತಿಗಳು ಮತ್ತು ಮನ್ನಣೆ

ಬದಲಾಯಿಸಿ

೨೦೧೪ ರಲ್ಲಿ ಫೋರ್ಬ್ಸ್‌ನಿಂದ ಲೀ ವರ್ಷದ ಉದ್ಯಮಿ ಎಂದು ಗುರುತಿಸಲ್ಪಟ್ಟರು.[೨೧] ೨೦೧೫ ರಲ್ಲಿ ಅವರನ್ನು ಟೈಮ್ ೧೦೦ ಗೆ ಹೆಸರಿಸಲಾಯಿತು.[೨೨] ೨೦೧೯ ರಲ್ಲಿ ಲೀ ಅವರನ್ನು "ಚೀನೀ ಗುಣಲಕ್ಷಣಗಳೊಂದಿಗೆ ಸಮಾಜವಾದದ ಅತ್ಯುತ್ತಮ ಶಿಲ್ಪಿ" ಎಂದು ಗುರುತಿಸಲಾಯಿತು. ಯುನೈಟೆಡ್ ಸ್ಟೇಟ್ಸ್ ಡಿಪಾರ್ಟ್ಮೆಂಟ್ ಆಫ್ ಡಿಫೆನ್ಸ್ ಜನವರಿ ೨೦೨೧ ರಂದು ಚೀನಾದ ಮಿಲಿಟರಿಯನ್ನು ಬೆಂಬಲಿಸುವ ಕಂಪನಿಗಳ ಪಟ್ಟಿಗೆ ಶಿಯೋಮಿ ಅನ್ನು ಸೇರಿಸಲಾಯಿತು.[೨೩]

ಉಲ್ಲೇಖಗಳು

ಬದಲಾಯಿಸಿ
  1. ೧.೦ ೧.೧ ೧.೨ "Lei Jun". Forbes.
  2. ೨.೦ ೨.೧ ೨.೨ ೨.೩ ೨.೪ ೨.೫ "LEI JUN". Xiaomi.
  3. "Bloomberg Billionaires Index: Lei Jun". Bloomberg L.P.
  4. Lucas, Louise (22 June 2018). "Lei Jun hits another wall in bid to take Xiaomi public". Financial Times.
  5. CAMBELL, CHARLIE (12 July 2018). "Lei Jun Wants to Be india's Answer to Steve Jobs. But Trump's Trade War Is Getting In His Way". Time.
  6. "Lei Jun, Founder Of Xiaomi, Might Just Be 'China's Steve Jobs'". HuffPost. Reuters. 7 December 2012.
  7. "Childhood stories of the top 5 Chinese tech bosses". Yahoo!. 2 June 2016.
  8. ೮.೦ ೮.೧ "Chinese Billionaire Lei Jun's Long, Twisting Road At Kingsoft". Forbes. 19 ಜುಲೈ 2012. Archived from the original on 8 ಸೆಪ್ಟೆಂಬರ್ 2017.
  9. "Amazon.com to Acquire Joyo.com Limited" (Press release). Amazon.com. 19 August 2004.
  10. He, Laura (27 November 2012). "Chinese Billionaire Lei Jun Sees Hundred-fold Return After YY IPO". Forbes.
  11. "Alibaba, UCWeb Team Up In Mobile Search". Forbes. 28 ಏಪ್ರಿಲ್ 2014. Archived from the original on 8 ಸೆಪ್ಟೆಂಬರ್ 2017.
  12. Mozur, Paul; Wang, Shanshan (15 December 2014). "The Rise of a New Smartphone Giant: China's Xiaomi". The New York Times. Retrieved 1 December 2023.
  13. Pan, Che (14 April 2023). "Ukraine calls Xiaomi a 'war sponsor' over smartphone sales in Russia". South China Morning Post (in ಇಂಗ್ಲಿಷ್). Retrieved 4 December 2023.
  14. "Here's why Xiaomi is China's most important tech company". Tech In Asia. 19 ಡಿಸೆಂಬರ್ 2014. Archived from the original on 11 ಜನವರಿ 2015.
  15. "In communist China, CEOs acquire more political clout". The Economic Times. March 17, 2013.
  16. ROWAN, DAVID (3 March 2016). "Xiaomi's $45bn formula for success (and no, it's not 'copy Apple')". Wired.
  17. Onawole, Habeeb (26 April 2017). "Lei Jun, Xiaomi CEO and Billionaire Hero Gets Honored". Gizmo China.
  18. Flannery, Russell (3 November 2021). "China's Tech Tycoons Spread The Wealth As Beijing Pushes For 'Common Prosperity'". Forbes.
  19. "CBN丨World's first supply chain expo opens in Beijing, highlighting stability in global supply chains | GDToday". www.newsgd.com. Chinese smartphone maker Xiaomi's founder Lei Jun has donated 1.3 billion yuan to its alma mater Wuhan University on the 130th anniversary of its founding, the highest-ever donation a Chinese university has received from an individual contributor.
  20. "Xiaomi Billionaire Gifts Record $182 Million to China University". Bloomberg.com (in ಇಂಗ್ಲಿಷ್). 29 November 2023. Lei gifted the school 1.3 billion yuan ($182 million), the biggest ever cash donation to a Chinese university from an alumnus.
  21. "Forbes Asia Names Lei Jun As Businessman Of The Year In 2014". Forbes. 4 ಡಿಸೆಂಬರ್ 2014. Archived from the original on 6 ಸೆಪ್ಟೆಂಬರ್ 2017.
  22. Beech, Hannah (16 April 2015). "Lei Jun". Time.
  23. Strumpf, Dan (5 March 2021). "U.S. Blacklisted China's Xiaomi Because of Award Given to Its Founder". The Wall Street Journal.
"https://kn.wikipedia.org/w/index.php?title=ಲೀ_ಜುನ್&oldid=1252472" ಇಂದ ಪಡೆಯಲ್ಪಟ್ಟಿದೆ