ಲಾರ್ಡ ಅಲ್ಬರ್ಟ್
ಪರಿಚಯ
ಬದಲಾಯಿಸಿಹೋಮರೀಯ ಕಾವ್ಯ ಸಂಪ್ರಾದಾಯದ ಅಧ್ಯಯನದ ಸಂದರ್ಭದಲ್ಲಿ ಜನಪದ ಮಹಾಕಾವ್ಯಗಳ ಸಂರಚನೆ ಹಾಗೂ ಪ್ರಸರಣವನ್ನು ಕುರಿತಂತೆ ಮಿಲ್ಮನ್ ಪ್ಯಾರಿ ಮಂಡಿಸಿದ ಸೂತ್ರಾತ್ಮಕ ಅಭಿವ್ಯಕ್ತಿಯ ಪರಿಕಲ್ಪನೆಯನ್ನು ಪರಿಷ್ಕೃತಗೊಳಿಸ ಮೌಕಿಕ ಸೂತ್ರತಾತ್ಮಕ ಸಿದ್ಧಾಂಥ ಅಥವಾ ಪ್ಯಾರಿ ಲರ್ಡ ಸಿದ್ಧಾಂತವನ್ನು ಪ್ರಚುರಪಡಿಸಿದವರು ಲಾರ್ಡ ಅಲ್ಬರ್ಟ್ ೧೯೬೦. ತನ್ನ ಗುರು ಮಿಲ್‍ಮನ್ ಪ್ಯಾರಿ ಜೊತೆ ಯುಗೋಸ್ಲಾವಿಯಾ ದೇಶದ ಸ್ಲಾವಿಕ್ ಮೌಕಿಕ ಕಾವ್ಯವನ್ನು ಕುರೊತಂತೆ ನಡೆಸಿದ ವ್ಯಾಪಕ ಕ್ಷೇತ್ರ ಕಾರ್ಯ ಹಾಗೂ ಸಂಗ್ರಹಿಸಿದ ಅಪಾರ ಪ್ರಮಾಣದ ಪಠ್ಯ ಶರೀರವನ್ನು ಬಳಸಿಕೊಂಡು ಆಲ್ಬರ್ಟ್ ಲಾರ್ಡ್ ಮೌಕಿಕ ಸೂತ್ರಾತ್ಮಕ ಸಿದ್ಧಾಂತವನ್ನು ಪ್ರತಿಪಾದಿಸುವ 'ದಿ ಸಿಂಗರ್ ಆಫ್ ಟೇಲ್ಸ್' ಗ್ರಂಥವನ್ನು ಪ್ರಕಟಪಡಿಸಿದರು.[೧]
ಸಾಹಿತ್ಯ
ಬದಲಾಯಿಸಿಲಾರ್ಡ್ ಅವರು ನಡೆಸಿದ ಸ್ಲಾವಿಕ್ ಕಾವ್ಯ ಗಾಯಕರ ಕಾವ್ಯ ಪ್ರದರ್ಶನಗಳ ಅಧ್ಯಯನದ ಫಲವಾಗಿ ನಿರೂಪಕರು ಸೂತ್ರಗಳನ್ನು ತಮ್ಮ ಸ್ಮರಣೆಯಲ್ಲಿರಿಸಿಕೊಂಡು ಕಾವ್ಯ ನಿರೂಪಣೆಯ ಸಂದರ್ಭದಲ್ಲಿ ಅವುಗಳನ್ನು ಬಳಸುತ್ತಾರೆ ಎಂಬ ನಿಲುವನ್ನು ಪ್ರಕಟಿಸಿದ್ದಾರೆ. ಲಾರ್ಡಾ ಅವರು ಹೇಳುವಂತೆ ಸೂತ್ರಗಳೆಂದರೆ, ಗೇಯಾತ್ಮಕ, ಛಂದೋಬಧ್ಧ, ನಾದಾತ್ಮಕ ಮಾದರಿಗಳಾಗಿದ್ದು ಅವು ಮೌಕಿಕ ಕಾವ್ಯ ಸಂರಚನೆಯಲ್ಲಿ ಅಣಿಗೊಳ್ಳುತ್ತವೆ. ಯುವ ಗಾಯಕರು ಕಾವ್ಯ ಗಾಯನ ಆರಂಭಿಸುವ ಈ ಸೂತ್ರಗಳನ್ನು ತಮ್ಮಲ್ಲಿ ಅಂತಸ್ಥಗೊಳಿಸಿಕೊಳ್ಳಬೇಕಾಗುತ್ತದೆ ಹಿಗಾಗಿ ಆ ಸೂತ್ರಗಳನ್ನು ಮೌಖಿಕ ನಿರೂಪಣೆಯ ಶೈಲಿಯ ಅಡಿಗಲ್ಲು ಎನ್ನಬಹುದು.
ಸಾಧನೆ
ಬದಲಾಯಿಸಿ೧೯೩೪ರಲ್ಲಿ ಪ್ಯಾರಿಯರ ನಿಧನದ ಬಳಿಕ ಯುಗೊಸ್ಲವಿಯಾ ದೇಶದ ಜನಪದ ಕಾವ್ಯಗಳನ್ನು ಅಭ್ಯಸಿಸಿ ಜನಪದದ ಮಹಾಕಾವ್ಯಗಳಿಗೆ ಸಂಬಂದಿಸಿದಂತೆ ಅನೇಕ ಕಲ್ಪನೆಯನ್ನು ಬಳಕೆಗೆ ತಂದರು. ವಸ್ತುವೊಂದು ಸಂಪ್ರಾದಾಯಿಕ ಕಾವ್ಯಗಳಲ್ಲಿ ಮತ್ತೆ ಪುನರಾವೃತ್ತಿಯಾಗುವ ವಿವಾರಾತ್ತಮಕ ಅಂಶವೇ ವಸ್ತು. ಲಾರ್ಡ್ ಪ್ರಚುರಪಡಿಸಿದರು ಸೊತ್ರಾತ್ಮಕ ಸಿದ್ಧಾಂತ ಇಂದು ಜಗತ್ತಿನಾದ್ಯಂತ ಒಂದು ಅಧ್ಯಯನ ಪಂಥವಾಗಿ ಬೆಳೆದಿದೆ. ಕಾವ್ಯವೊಂದು ಗಾಯಕನಲ್ಲಿ ಬಾಯಿಪಾಠದ ಮೊಲಕ ಹರಿದುಬರುತ್ತದೆಯೋಅಥವಾ ಪ್ರತಿಪ್ರದರ್ಶನದ ಮುಹೊರ್ತದಲ್ಲಿ ಪುನರ್ ಸಂಯೋಜಿಸ್ಪಡುವುದೋ ಎಂಬುದನ್ನು ತಿಳಯುವುದರಲ್ಲಿ ಈ ಸಿದ್ದಾಂತವು ನೆರವಿಗೆ ಬಂದಿತು. ವರ್ತಮಾನದೊಂದಿಗೆ ಶತಶತಮಾನಗಳ ಸಂಸ್ಕ್ರತಿಯನ್ನು ಗರ್ಭೀಕರಿಸಿಕೊಂಡು ಬರಬಲ್ಲ ಕಾವ್ಯ ಸಂಪ್ರದಾಯವೆಂಬ ಭಾವನೆಯ ಪರಿಚಯವಾಯಿತು. ಪ್ಯಾರಿ ಲಾರ್ಡ್ ಅವರ ಮೌಖಿಕ ಸೊತ್ರಾತ್ಮಕ ಸಿದ್ಧಾಂತವು ಪಠ್ಯ ಕೇಂದ್ರಿತವಾಗಿದ್ದು ಸಂದರ್ಭವನ್ನು ವಿಶೇಷವಾಗಿ ಗಮನಿಸುವುದಿಲ್ಲಿ ಎಂಬ ಆಕ್ಷೇಪವನ್ನು ಡಂಡೆಸ್ ಮುಂತಾದ ವಿದ್ವಾಂಸರು ಮಾಡಿದುದುಂಟು. ಆದರೆ ಸಂದರ್ಭದಿಂದ ಪಠ್ಯದ ಮೇಲಾಗುವ ಪರಿಣಾಮವನ್ನು ಈಸಿದ್ಧಾಂತ ಗಮನಿಸುತ್ತದೆ. ಒಂದೇ ಪಠ್ಯದ ಹಲವು ಪಾಠಗಳನ್ನು ಭಿನ್ನ ಭಿನ್ನ ಸಂದರ್ಭಗಳಲ್ಲಿ ಸಂಗ್ರಹಿಸಿ ಅಲ್ಲಿನ ಸೊತ್ರ ಹಾಗೊ ವಸ್ತುಗಳನ್ನು ಗಮನಿಸಲಾಗುತ್ತದೆ.
ಉಲ್ಲೇಖ
ಬದಲಾಯಿಸಿ- ↑ Albert B. Lord, The Singer of Tales (Cambridge, MA: Harvard Univ. Press, 1960).