ರೋಹಿಣಿ ಭಾಟೆ (14 ನವೆಂಬರ್ 1924 - 10 ಅಕ್ಟೋಬರ್ 2008) ಭಾರತದ ಹಿರಿಯ ಕಥಕ್ ನೃತ್ಯ ನಿರೂಪಕರಲ್ಲಿ ಒಬ್ಬರು.[] ಅವರು ಒಬ್ಬ ನೃತ್ಯ ಪ್ರದರ್ಶಕರಾಗಿ, ಶಿಕ್ಷಕಿಯಾಗಿ, ಬರಹಗಾರ್ತಿಯಾಗಿ, ಸಂಶೋಧಕಿ ಮತ್ತು ವಿಮರ್ಶಕರಾಗಿ ಭಾರತೀಯ ಶಾಸ್ತ್ರೀಯ ನೃತ್ಯವನ್ನು ಅಭಿವೃದ್ಧಿಪಡಿಸಿದವರು. ಅವರ ವೃತ್ತಿಜೀವನದ ಅವಧಿಯಲ್ಲಿ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಮತ್ತು ಕಾಳಿದಾಸ್ ಸಮ್ಮಾನ್ ಮುಂತಾದ ಹಲವಾರು ಪ್ರಶಸ್ತಿಗಳನ್ನು ಅವರಿಗೆ ನೀಡಲಾಯಿತು. ಅವರು ಜೈಪುರ ಮತ್ತು ಲಖನೌ ಘರಾನಗಳಿಂದ ಕಥಕ್ ಅಧ್ಯಯನ ಮಾಡಿದರು.

ರೋಹಿಣಿ ಭಾಟೆ
Born14 ನವೆಂಬರ್ 1924
ಪಾಟ್ನಾ, ಬಿಹಾರ, ಭಾರತ
Died10 ಅಕ್ಟೋಬರ್ 2008
ಪುಣೆ, ಮಹಾರಾಷ್ಟ್ರ
Nationalityಭಾರತೀಯ
Educationಭಾರತೀಯ ಶಾಸ್ತ್ರೀಯ ನೃತ್ಯ, ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ
Occupation(s)ಶಾಸ್ತ್ರೀಯ ನರ್ತಕಿ, ನೃತ್ಯ ಸಂಯೋಜಕಿ. ಬರಹಗಾರ್ತಿ, ಸಂಶೋಧಕಿ
Organizationನೃತ್ಯಭಾರತಿ ಕಥಕ್ ನೃತ್ಯ ಅಕಾಡೆಮಿ
Styleಕಥಕ್
Awardsಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ

ಆರಂಭಿಕ ಜೀವನ

ಬದಲಾಯಿಸಿ

ಭಾಟೆ ರವರು ಬಿಹಾರಪಾಟ್ನಾದಲ್ಲಿ 14 ನವೆಂಬರ್ 1924ರಂದು ಜನಿದರು. ಅವರು ತನ್ನ ಪ್ರಾಥಮಿಕ ಹಾಗೂ ಕಾಲೇಜು ಶಿಕ್ಷಣವನ್ನು ಪುಣೆಯಲ್ಲಿ ಮುಗಿಸಿದರು. ಆರಂಭದಲ್ಲಿ ಗುರು ಪಾರ್ವತಿ ಕುಮಾರ್ ಅವರ ಅಡಿಯಲ್ಲಿ ಭರತನಾಟ್ಯದಲ್ಲಿ ತರಬೇತಿಯನ್ನು ಪಡೆದರು. ಅವರು 1946ರಲ್ಲಿ ಫರ್ಗುಸ್ಸನ್ ಕಾಲೇಜಿನಲ್ಲಿ ಕಲೆ ಕ್ಷೇತ್ರದಲ್ಲಿ ಪದವಿಯನ್ನು ಪಡೆದರು. ಅದೇ ವರ್ಷ ಜೈಪುರ ಘರಾನಾದ ಸೊಹನ್ ಲಾಲ್ ಅವರೊಂದಿಗೆ ಕಥಕ್ ಕಲಿಯಲು ಪ್ರಾರಂಭಿಸಿದರು. ಕೇಶವರಾವ್ ಭೋಲ್ ಮತ್ತು ವಸಂತರಾವ್ ದೇಶಪಾಂಡೆ ಅವರಿಂದ ಹಿಂದೂಸ್ತಾನಿ ಸಂಗೀತವನ್ನು ಕಲಿತರು ಮತ್ತು ಕಥಕ್ನಲ್ಲಿ ಡಾಕ್ಟರೇಟ್ ಪಡೆದರು.[]

ವೃತ್ತಿ ಜೀವನ

ಬದಲಾಯಿಸಿ

ಭಾಟೆ ರವರು 1947ರಲ್ಲಿ ಪುಣೆಯಲ್ಲಿ ನೃತ್ಯಭಾರತಿ ಕಥಕ್ ನೃತ್ಯ ಅಕಾಡೆಮಿಯನ್ನು ಸ್ಥಾಪಿಸಿದರು. ಕಳೆದ ಆರು ದಶಕಗಳಲ್ಲಿ ಅವರು ತಮ್ಮ ಅಕಾಡೆಮಿಯಿಂದ ನೂರಾರು ನೃತ್ಯಗಾರರಿಗೆ ತರಬೇತಿ ನೀಡಿದ್ದಾರೆ. 1952ರಲ್ಲಿ ಅವರು ಭಾರತೀಯ ಸಾಂಸ್ಕೃತಿಕ ನಿಯೋಗದ ಸದಸ್ಯರಾಗಿ ಚೀನಾಕ್ಕೆ ಭೇಟಿ ನೀಡಿದ್ದರು. ಈ ಪ್ರವಾಸವು ಭಾರತೀಯ ನೃತ್ಯಗಳು ಮತ್ತು ನಾಟಕಗಳಿಗೆ ಸಂಬಂಧಿಸಿದ ಹಳೆಯ ಗ್ರಂಥಗಳನ್ನು ಅಧ್ಯಯನ ಮಾಡಲು ಒಂದು ಅವಕಾಶವಾಗಿತ್ತು. ರೋಹಿಣಿ ಭಾಟೆ ಮರಾಠಿಯಲ್ಲಿ ಹಲವಾರು ಪುಸ್ತಕಗಳನ್ನು ಬರೆದಿದ್ದಾರೆ. 2002ರಲ್ಲಿ ಅವರು ಟೈಮ್ ಅಂಡ್ ಸ್ಪೇಸ್ ಎಂಬ ಜರ್ಮನ್ ಸಾಕ್ಷ್ಯಚಿತ್ರದಲ್ಲಿ ಭಾಗವಹಿಸಿದ್ದಾರೆ.[]

ಭಾಟೆ 2008 ರ ಅಕ್ಟೋಬರ್ 10 ರಂದು ತನ್ನ 83ನೇ ವಯಸ್ಸಿನಲ್ಲಿ ಮಹಾರಾಷ್ಟ್ರದ ಪುಣೆಯಲ್ಲಿ ನಿಧನರಾದರು.[] ಅವರ ಸೊಸೆ ಮತ್ತು ಶಿಷ್ಯೆ ಶಾಮಾ ಭಾಟೆ ಪ್ರಕಾರ, ರೋಹಿಣಿ ಭಾಟೆ ರವರು ಕಳೆದ ಐದು ವರ್ಷಗಳಿಂದ ಪಾರ್ಕಿನ್ಸನ್ ಕಾಯಿಲೆಯಿಂದ ಬಳಲುತ್ತಿದ್ದರು ಮತ್ತು ಕಾಯಿಲೆಯಿಂದ ಉಂಟಾಗುವ ತೊಂದರೆಗಳಿಂದ ಸಾವನ್ನಪ್ಪಿದ್ದರು.[]

ಪರಂಪರೆ

ಬದಲಾಯಿಸಿ

ರೋಹಿಣಿ ಭಾಟೆ ಐದು ದಶಕಗಳವರೆಗೆ ವ್ಯಾಪಕವಾಗಿ ಪ್ರದರ್ಶನ ನೀಡಿದ್ದಾರೆ ಮತ್ತು ಕಥಕ್‌ ನ ಪ್ರಮುಖ ಪ್ರತಿಪಾದಕರಾದ ಶಮಾ ಭಾಟೆ, ಹಸಿತಾ ಓಜಾ, ಪ್ರಣತಿ ಪ್ರತಾಪ್, ಸುನಿಲ್ ಗನು, ನೀಲಿಮಾ ಅಧ್ಯಾ, ಪ್ರಭಾ ಮರಾಠೆ ಮತ್ತು ಪ್ರೇರಣಾ ದೇಶಪಾಂಡೆ ಮುಂತಾದ ಹಲವಾರು ಶಿಷ್ಯರಿಗೆ ತರಬೇತಿ ನೀಡಿದ್ದಾರೆ. ನೃತ್ಯಭಾರತಿ ಕಥಕ್ ನೃತ್ಯ ಅಕಾಡೆಮಿ ಪುಣೆಯ ಶಿವಾಜಿ ನಗರದಲ್ಲಿ ತನ್ನ ಮುಖ್ಯ ಕಛೇರಿಯನ್ನು ಹೊಂದಿದೆ. ಅವರ ಕೆಲಸದ ಬಗ್ಗೆ ಸಾಕ್ಷ್ಯಚಿತ್ರಗಳನ್ನು ಮಾಡಲಾಗಿದೆ.

ಪ್ರಶಸ್ತಿಗಳು

ಬದಲಾಯಿಸಿ

ಉಲ್ಲೇಖಗಳು

ಬದಲಾಯಿಸಿ
  1. "Guru Rohini Bhate". www.roshandatyekathak.com. Archived from the original on 27 ಜನವರಿ 2020. Retrieved 23 February 2020.
  2. "CUR_TITLE". sangeetnatak.gov.in. Archived from the original on 12 ಆಗಸ್ಟ್ 2020. Retrieved 23 February 2020.
  3. "Rohini Bhate". Retrieved 23 February 2020.
  4. Ch, Rahul; Oct 11, awarkar. "Noted Kathak exponent Rohini Bhate no more | Pune News - Times of India". Retrieved 23 February 2020. {{cite news}}: Cite has empty unknown parameters: |1= and |2= (help)CS1 maint: numeric names: authors list (link)
  5. Jan 12, TNN. "cultural festival: Artistes to honour Rohini Bhate's legacy | Pune News - Times of India". Retrieved 23 February 2020. {{cite news}}: Cite has empty unknown parameters: |1= and |2= (help)CS1 maint: numeric names: authors list (link)