ರೆಡ್ವುಡ್
ರೆಡ್ವುಡ್ ಶಂಕುಧಾರಿ ಜಾತಿಯ ಕುಪ್ರೆಸೇಸಿಯೈ ಕುಟುಂಬದ (ಟ್ಯಾಕ್ಸೊಡೈಯೇಸೀ) ನಿತ್ಯಹಸುರು ವೃಕ್ಷಗಳ ಸಾಮಾನ್ಯ ಸರ್ವನಾಮ. ವೈಜ್ಞಾನಿಕ ಸರ್ವನಾಮ: ಸೆಕ್ವಿಯಾಯ್ಡಿಯೀ. ದೈತ್ಯಗಾತ್ರದ ಸಿಕ್ವೊಯಿಯ ಡೆಂಡ್ರಾನ್ ಜೈಜೇಂಟಿಯಮ್, ಕ್ಯಾಲಿಫೋರ್ನಿಯದ ಸಿಕ್ವೊಯಿಯ ಸೆಂಪರ್ವಿರೆನ್ಸ್ ಎಂಬ ಎರಡು ಪ್ರಭೇದಗಳುಂಟು. ಎರಡನೆಯದರ ಪೂರ್ವಜ ಎಂದು ಪರಿಗಣಿಸುವ ಮೆಟಸಿಕ್ವೊಯಿಯಗ್ಲಿಪ್ಟೊಸ್ಟ್ರೊ ಬಾಯ್ಡಿಸ್ (ಡಾನ್ ರೆಡ್‌ವುಡ್) ವೃಕ್ಷ ಮತ್ತು ಟ್ಯಾಕ್ಸೋಡಿಯಮ್ ಡಿಸ್ಟಿಶಮ್ (ಬಾಲ್ಡ್ ರೆಡ್‌ವುಡ್) ಇವುಗಳ ಸಮೀಪದ ಬಂಧುಗಳು.
ರೆಡ್‍ವುಡ್ | |
---|---|
Sequoiadendron giganteum | |
Scientific classification | |
ಸಾಮ್ರಾಜ್ಯ: | ಸಸ್ಯ |
ಏಕಮೂಲ ವರ್ಗ: | ಟ್ರ್ಯಾಕಿಯೋಫೈಟ್‍ಗಳು |
ಏಕಮೂಲ ವರ್ಗ: | ನಗ್ನಬೀಜಿಗಳು |
Division: | ಪೈನೊಫೈಟಾ |
ವರ್ಗ: | ಪೈನಾಪ್ಸಿಡಾ |
ಗಣ: | ಕುಪ್ರೆಸೇಲ್ಸ್ |
ಕುಟುಂಬ: | ಕುಪ್ರೆಸೇಸಿಯೈ |
ಉಪಕುಟುಂಬ: | ಸೆಕ್ವಿಯಾಯ್ಡಿಯೀ |
Genera | |
ಒಂದು ಕಾಲದಲ್ಲಿ ಉತ್ತರದ ಸಮಶೀತೋಷ್ಣವಲಯಾದ್ಯಂತ ಇದ್ದ ಇವುಗಳ ಸಂಖ್ಯಾಬಲ ಕ್ಷೀಣಿಸತೊಡಗಿತು. ಕಳೆದ ಹಿಮಾನಿಯುಗದಲ್ಲಿ ಈ ಯುಗಾಂತ್ಯದ ವೇಳೆಗೆ ಉಳಿದದ್ದು ಮೂರು ಪ್ರಭೇದಗಳು ಮಾತ್ರ - ದೈತ್ಯ ಸಿಕ್ವೊಯಿಯ, ಕ್ಯಾಲಿಫೋರ್ನಿಯದ ಕರಾವಳಿ ರೆಡ್‌ವುಡ್ ಮತ್ತು ನೈರುತ್ಯ ಚೀನದ ಡಾನ್ ರೆಡ್‌ವುಡ್. ಅರಿಜೋನದ ಕಾಡುಗಳಲ್ಲಿ ವಿಲುಪ್ತ ಸಿಕ್ವೊಯಿಯ ಪ್ರಭೇದಗಳ ಅಶ್ಮೀಭವಿತ (ಪೆಟ್ರಿಫೈಡ್) ಪಳೆಯುಳಿಕೆಗಳಿವೆ (ಫಾಸಿಲ್). ಜುರಾಸಿಕ್ ಅವಧಿಯ ಪಳಿಯುಳಿಕೆಗಳೂ ದೊರೆತಿವೆ.
ರೆಡ್‌ವುಡ್‍ಗಳಿಗಿರುವ ಅಪಾಯಗಳೆಂದರೆ ಮರಗಳನ್ನು ಕಡಿಯುವುದು, ಬೆಂಕಿ ಹತ್ತಿಕೊಳ್ಳುವುದು,[೨] ವಾಯುಗುಣ ಬದಲಾವಣೆ, ಅಕ್ರಮವಾದ ಗಾಂಜಾ ಕೃಷಿ, ಮತ್ತು ಅಂಟುಪುರುಳೆಯನ್ನು ಕಡಿಯುವುದು.[೩][೪][೫]
ವೈಶಿಷ್ಟ್ಯಗಳು
ಬದಲಾಯಿಸಿತಳದಲ್ಲಿ ಆನಿಕೆ ನೆರವಿನಿಂದ ನಿಂತಿರುವ ಕೆಂಪುಕಂದು ಬಣ್ಣದ ಕಂಬದಂತೆ ಕಾಣುವ ಕಾಂಡ, ಕನಿಷ್ಠ 30 ಮೀ ಎತ್ತರ, ಶಂಕುವಿನ ಆಕಾರ, ಸೂಜಿಯಂಥ ಎಲೆಗಳು, ಚಿಕ್ಕ ದೀರ್ಘವೃತ್ತಾಕಾರದ ಶಂಕುಗಳು ಈ ವೃಕ್ಷಗಳ ವೈಶಿಷ್ಟ್ಯಗಳು.
ದೈತ್ಯ ಸಿಕ್ವೊಯಿಯ
ಬದಲಾಯಿಸಿಸಿಯೆರ ನೆವಾಡದಲ್ಲಿ ಸಮುದ್ರಮಟ್ಟದಿಂದ 900-2440 ಮೀ ಎತ್ತರದಲ್ಲಿರುವ ಸು. 300 ಕಿಮೀ ಉದ್ದದ ಕಿರಿದಗಲದ ಪಶ್ಚಿಮ ಇಳಿಜಾರು ಪ್ರದೇಶದಲ್ಲಿ ಇವು ಬೆಳೆಯುತ್ತವೆ. ಇವುಗಳ ಕನಿಷ್ಠ ಎತ್ತರ 46 ಮೀ, ಗರಿಷ್ಠ ವ್ಯಾಸ 9 ಮೀ. ಸಿಕ್ವೊಯಿಯ ರಾಷ್ಟ್ರೀಯ ಉದ್ಯಾನವನದಲ್ಲಿರುವ ಜನರಲ್ ಶೆರ್ಮನ್ ಹೆಸರಿನ ವೃಕ್ಷ ಅತ್ಯಂತ ದೊಡ್ಡದು. ಇದರ ಎತ್ತರ 84 ಮೀ, ವ್ಯಾಸ 11 ಮೀ, ಅಂದಾಜು ತೂಕ 1950 ಟನ್. ಇಲ್ಲಿ 4000 ವರ್ಷ ವಯಸ್ಸಿನ ವೃಕ್ಷಗಳಿವೆ. ಕೊಂಬೆಗಳ ಅತಿ ಸಮೀಪದಲ್ಲಿರುವ ಹುರುಪೆಯಂತೆ ಕಾಣುವ ಎಲೆಗಳು; ಸ್ಪಂಜಿನಂಥ ಅರೆಗೊಳವಿಯಾಕಾರದ ಗಾಡಿಯುಕ್ತ (ಫ್ಲೂಟೆಡ್) ತೊಗಟೆ ಈ ವೃಕ್ಷದ ವೈಶಿಷ್ಟ್ಯಗಳು. ಕೆಲವದರ ತೊಗಟೆ 60 ಸೆಮೀ ದಪ್ಪವಿರುವುದುಂಟು. ಇದರ ದಾರು (ವುಡ್) ಹಗುರ, ಒರಟು ಮತ್ತು ಕೀಟ ಹಾಗೂ ಬೆಂಕಿ ನಿರೋಧಕ.
ಕರಾವಳಿ ರೆಡ್ವುಡ್
ಬದಲಾಯಿಸಿಇವು ದಕ್ಷಿಣ ಓರೆಗಾನ್‌ನಿಂದ ಮಧ್ಯ ಕ್ಯಾಲಿಫೋರ್ನಿಯವರೆಗಿನ ಪೆಸಿಫಿಕ್ ಸಾಗರದ ಕರಾವಳಿಯಲ್ಲಿ ಬೆಳೆಯುತ್ತವೆ. ಸುಮಾರು 30ರಿಂದ 112 ಮೀ ಎತ್ತರ, 7.5 ಮೀ ವ್ಯಾಸದ ಕಾಂಡವುಳ್ಳ ಇವುಗಳ ಜೀವಿತಾವಧಿ ಸುಮಾರು 2500 ವರ್ಷಗಳು. ದೈತ್ಯ ಸಿಕ್ವೊಯಿಯಕ್ಕಿಂತ ಮೊನಚು ಮತ್ತು ನೀಲಿಛಾಯೆ ಯುಕ್ತ ಎಲೆಗಳು, ನಯ ಮತ್ತು ಗಟ್ಟಿಯಾದ ದಾರು ಈ ವೃಕ್ಷಗಳ ವೈಶಿಷ್ಟ್ಯ. ಚೌಬೀನೆಗಾಗಿ (ಟಿಂಬರ್) ಕಡಿದ ಬಳಿಕ ಉಳಿಯುವ ಬೊಡ್ಡೆ ಪುನಃ ಚಿಗುರಿ ಸುಮಾರು 40 ವರ್ಷಗಳ ಅನಂತರ ಮರಳಿ ಚೌಬೀನೆ ನೀಡುವಷ್ಟು ಬೆಳೆಯುತ್ತದೆ.
ಡಾನ್ ರೆಡ್ವುಡ್
ಬದಲಾಯಿಸಿಕರಾವಳಿ ರೆಡ್‌ವುಡ್‌ನ ಪೂರ್ವಜ ಎಂದು ಭಾವಿಸಲಾಗಿರುವ ಈ ಪರ್ಣಪಾತಿ (ಡೆಸಿಡ್ಯುಅಸ್) ವೃಕ್ಷಗಳ ಸರಾಸರಿ ಎತ್ತರ 30 ಮೀ, ವ್ಯಾಸ 1.8 ಮೀ. ತೆಳು ಎದುರುಬದಿರಾಗಿ ಬೆಳೆಯುವ ಕೊಂಬೆಗಳು ಮತ್ತು ಚಪ್ಪಟೆ ಎಲೆಗಳು ಇವುಗಳ ಇತರ ವೈಶಿಷ್ಟ್ಯಗಳು.
ಉಲ್ಲೇಖಗಳು
ಬದಲಾಯಿಸಿ- ↑ Wan, Mingli; Yang, Wan; Tang, Peng; Liu, Lujun; Wang, Jun (2017). "Medulloprotaxodioxylon triassicum gen. Et sp. Nov., a taxodiaceous conifer wood from the Norian (Triassic) of northern Bogda Mountains, northwestern China". Review of Palaeobotany and Palynology. 241: 70–84. doi:10.1016/j.revpalbo.2017.02.009.
- ↑ "Prescribed Fire at Redwood National and State Parks - Redwood National and State Parks (U.S. National Park Service)".
- ↑ "The Threats to the Redwoods".
- ↑ "Why redwood burl poaching is so destructive". Christian Science Monitor. 5 March 2014.
- ↑ Kurland, Justin; Pires, Stephen F; Marteache, Nerea (2018). "The spatial pattern of redwood burl poaching and implications for prevention". Forest Policy and Economics. 94: 46–54. doi:10.1016/j.forpol.2018.06.009. S2CID 158505170.
ಗ್ರಂಥಸೂಚಿ ಮತ್ತು ಕೊಂಡಿಗಳು
ಬದಲಾಯಿಸಿ- "About the trees". National Park Service. Retrieved 10 January 2014.
- "A few basic facts about Redwoods, and Parks". National Park Service. Retrieved 10 January 2014.
- "Calaveras Big Trees Association". Retrieved 10 January 2014.
- Hanks, Doug (2005). "Crescent Ridge Dawn Redwood Preserve". Retrieved 10 January 2014.
- de:Liste der dicksten Mammutbäume in Deutschland. List of Large Giant Redwoods in Germany
- IUCN 2013. IUCN Red List of Threatened Species. Version 2013.2. Downloaded on 10 January 2014.
- James Donald, John Rubin (directors) (2009). Climbing Redwood Giants (film). National Geographic. Archived from the original on 2013-04-12. Retrieved 2023-05-03.
- "Big trees". Notes from the Field tv. 6 minutes in. PBS. http://vimeo.com/56524336.