ರುದ್ರಮೂರ್ತಿ ಶಾಸ್ತ್ರಿ

ಸುಗ್ಗನಹಳ್ಳಿ ರುದ್ರಮೂತಿ೯ ಶಾಸ್ತ್ರಿ ಗಳು ಅಧುನಿಕ ಕನ್ನಡ ಸಾಹಿತ್ಯ ಲೇಖಕರು, ಕಾದಂಬರಿಕಾರರು, ಚಿತ್ರಕತೆ ಸಂಭಾಷಣೆಕಾರು ಮತ್ತು ಗೀತೆ ರಚನಗಾರರು.

ಸು ರುದ್ರಮೂತಿ೯ ಶಾಸ್ತ್ರಿ
ಜನನ೧೧ -೧೧-೧೯೪೮
ಸುಗ್ಗನಹಳ್ಳಿ, ಮಾಗಡಿ, ಬೆಂಗಳೂರು ಗ್ರಾಮಾಂತರ ಜಿಲ್ಲೆ, ಕರ್ನಾಟಕ, ಭಾರತ
ವೃತ್ತಿಲೇಖಕ, ಕಾದಂಬರಿಕಾರ,ಕವಿ, ಸಂಭಾಷಣೆಗಾರ
ರಾಷ್ಟ್ರೀಯತೆಭಾರತೀಯ
ಪ್ರಕಾರ/ಶೈಲಿಕಥೆ, ಕಾದಂಬರಿ, ಇತಿಹಾಸ,ಚಲನಚಿತ್ರ

ಸು ರುದ್ರಮೂರ್ತಿ ಶಾಸ್ತ್ರಿಯವರು ಹುಟ್ಟಿದ್ದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಮಾಗಡಿ ತಾಲೋಕಿನ ಸುಗ್ಗನಹಳ್ಳಿಯಲ್ಲಿ. ತಂದೆ ಎಸ ಏನ್ ಶಿವರುದ್ರಯ್ಯ, ತಾಯಿ ಶಿವಗಂಗಮ್ಮ, ಪ್ರಾಥಮಿಕ ಶಿಕ್ಷಣ ಸುಗ್ಗನಹಳ್ಳಿ, ಪ್ರೌಡ ಶಿಕ್ಷಣ ರಾಮನಗರ ದಲ್ಲಿ, ಎಂ ಎ ಕನ್ನಡ ಪದವಿ ಬೆಂಗಳೂರು ವಿಶ್ವವಿದ್ಯಾಲಯ ದಲ್ಲಿ ಪಡೆದಿದ್ದಾರೆ. ರುದ್ರಮೂರ್ತಿ ಯವರು ೧೯೧೯೭೨ ರಿಂದ ೧೯೮೨ ರವರೆಗೆ ರೇಣುಕಾಚಾರ್ಯ ಸಂಜೆ ಕಾಲೇಜಿನ ಕನ್ನಡ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸಿದ್ದಾರೆ.

ಕೃತಿಗಳು

ಬದಲಾಯಿಸಿ

ಕವನ ಸಂಕಲನ

ಬದಲಾಯಿಸಿ

ಭಾವ ಲಹರಿ, ಪರಿ, ಅಂತರಂಗ ಬಹಿರಂಗ , ಚಿತ್ರಕಲ್ಪನೆ, ರಾಗ, ನಾದಗೀತೆಗಳು, ನಾದರೂಪಕ ಕವನ ಸಂಕಲನ, ಪ್ರಾಸ-ಪ್ರಯಾಸ, ಕೆಂಪನ ವಚನಗಳು, ಅಲ್ಪಜ್ನ್ನ ವಚನಗಳು, ಕೆಂಪ ರಾಮಾಯಣಂ, ಕೆಮ್ಪಭಾರತಮ್

ಕಾದಂಬರಿಗಳು

ಬದಲಾಯಿಸಿ
  1. ಚಾಣಕ್ಯ
  2. ಧರ್ಮ ಚಕ್ರವರ್ತಿ ಅಶೋಕ
  3. ಸರ್ವಜ್ಞ
  4. ಔರಂಗಜೆಬ
  5. ಚಾರುದತ್ತ
  6. ರಾಧಾ ರಜನಿ
  7. ಬಣ್ಣದಹಕ್ಕಿ
  8. ಮಣ್ಣಿನ ಋಣ
  9. ಸ್ವಪ್ನ ಗಾನ
  10. ಕುಮಾರ ರಾಮ

ಚಲನಚಿತ್ರ ಮತ್ತು ಟಿ.ವಿ. ಧಾರಾವಾಹಿಯಾಗಿರುವ ಕೃತಿಗಳು

ಬದಲಾಯಿಸಿ
  1. ಗಂಡುಗಲಿ ಕುಮಾರರಾಮ
  2. ಅಣ್ಣ ಬಸವಣ್ಣ
  3. ವೆಂಕಟೇಶ ಮಹಿಮೆ
  4. ನಳದಮಯಂತಿ
  5. ವಿಕ್ರಮ ಮತ್ತು ಬೇತಾಳ

ಉಲ್ಲೇಖಗಳು

ಬದಲಾಯಿಸಿ