ರಿಕ್ಟರ್ ಮಾಪಕ
ರಿಕ್ಟರ್, ಮಾನಕ ಅಧಿಕೇಂದ್ರಗಳಲ್ಲಿ ಭೂಕಂಪನಗಳ ಪರಿಮಾಣ ವನ್ನು ಅಂದಾಜು ಮಾಡಲು ಮತ್ತು ತುಲನೆ ಮಾಡಲು ಉಪಯೋಗಿಸುವ ಅಳತೆಗೋಲು (ರಿಕ್ಟರ್ ಸ್ಕೇಲ್).
ಈ ಅಳತೆಗೋಲನ್ನು ಮೊಟ್ಟಮೊದಲಿಗೆ ೧೯೩೫ರಲ್ಲಿ ಚಾರ್ಲ್ಸ್ ರಿಕ್ಟರ್ ಎಂಬ ವ್ಯಕ್ತಿಯು ಬೆನೋ ಗುಟನ್‌ಬರ್ಗ್ ಎಂಬ ವ್ಯಕ್ತಿಯೊಡಗೂಡಿ ಕ್ಯಾಲಿಫೋರ್ನಿಯಾದ ಕೆಲವು ಭಾಗಗಳಲ್ಲಿ ಅಳವಡಿಸಿದ್ದ ವುಡ್-ಆಂಡರ್ಸನ್ ಭೂಕಂಪ ಮಾಪಕದಲ್ಲಿ ದಾಖಲಾದ ಕಂಪನಗಳನ್ನು ಅಳೆಯಲು ಉಪಯೋಗಿಸಿದನು.
ಈ ಅಳತೆಗೋಲು ಭೂಮಿಗೆ ಸಮಾನಾಂತರವಾಗಿ ಆಗುವ ಕಂಪನದ ತೀವ್ರತೆಯನ್ನು ಅವಲಂಬಿಸಿ ೧೦ರ ಲಘುಗಣಕವನ್ನು ಆಧರಿಸಿರುದ ಒಂದು ಸಂಖ್ಯೆಯನ್ನು ನೀಡುತ್ತದೆ. ಇದೊಂದು ವಿವೃತಾಂತ (ಓಪನ್ ಎಂಡೆಡ್) ಲಘುಗಣಕೀಯ (ಲಾಗರಿತ್ಮಿಕ್) ಮಾನಕವಾಗಿದ್ದರೂ 0ಯಿಂದ 10ರವರೆಗೆ ಸಂಖ್ಯೆಗಳುಳ್ಳ ಮಾನಕವೆಂದು ನಿರೂಪಿಸುವುದು ರೂಢಿ. ಈ ವ್ಯಾಪ್ತಿಯನ್ನು ಮೀರುವ ಭೂಕಂಪನದ ಸಂಭವನೀಯತೆ ಕಡಿಮೆ ಎಂಬುದೇ ಕಾರಣ.
ಅಳತೆಗೋಲಿನ ಬಗ್ಗೆ ಹೆಚ್ಚಿನ ಮಾಹಿತಿ
ಬದಲಾಯಿಸಿಭೂಚಲನೆಯ ಪಾರವನ್ನು (ಆಂಪ್ಲಿಟ್ಯೂಡ್) ಪ್ರಧಾನ ಅಲೆಯ ಅವಧಿಯಿಂದ ಭಾಗಿಸಿದಾಗ ಲಭಿಸುವ ಭಾಗಲಬ್ಧದ ಲಘುಗಣಕವನ್ನು ಈ ಮಾನಕದಲ್ಲಿ ನಮೂದಿಸಿರುವ ಸಂಖ್ಯೆಗಳು ಪ್ರತಿನಿಧಿಸುತ್ತವೆ. ಎಂದೇ, ರಿಕ್ಟರ್ ಮಾನಕದಲ್ಲಿ ಯಾವುದೇ ಸಂಖ್ಯೆ ಪ್ರತಿನಿಧಿಸುವ ಭೂಕಂಪನ ಅದರ ಹಿಂದಿನ ಸಂಖ್ಯೆಯದಕ್ಕಿಂತ 10ಪಟ್ಟು ಅಧಿಕ ಪರಿಮಾಣವುಳ್ಳದ್ದಾಗಿದೆ. ಭೂಕಂಪನ ಬಿಡುಗಡೆ ಮಾಡಿದ ಒಟ್ಟು ಶಕ್ತಿಯನ್ನು ಅಂದಾಜು ಮಾಡಲು ಮಾತ್ರ ಇದು ಉಪಯುಕ್ತ (ಸ್ಥಳದಿಂದ ಸ್ಥಳಕ್ಕೆ ಬದಲಾಗುವ ಭೂಕಂಪನ ವಿನಾಶಕಾರೀ ಸಾಮಥ್ರ್ಯ ವನ್ನು ಅಂದಾಜು ಮಾಡಲು ಮರ್ಕಲಿ ಮಾನಕ ಬಳಕೆಯಲ್ಲಿದೆ). ಅಮೆರಿಕನ್ ಭೂಕಂಪನವಿಜ್ಞಾನಿ ಚಾಲ್ರ್ಸ್ ಫ್ರಾನ್ಸಿಸ್ ರಿಕ್ಟರ್(1900-85) ಈ ಮಾನಕವನ್ನು ಉಪಜ್ಞಿಸಿದ (1935).
ರಿಕ್ಟರ್ ಮಾನಕದ ಸಂಖ್ಯೆಗಳು ಪ್ರತಿನಿಧಿಸುವ ಭೂಕಂಪಗಳ ಸಂಕ್ಷಿಪ್ತ ವಿವರಣೆ
ಬದಲಾಯಿಸಿ- 3.5 ಅಥವಾ ಅದಕ್ಕಿಂತ ಕಡಿಮೆ: ಭೂಕಂಪನ ಮಾಪಕಗಳು ಮಾತ್ರ ಗುರುತಿಸುತ್ತವೆ, ಮಾನವಗ್ರಾಹ್ಯ ಪರಿಣಾಮ ಗಳು ಇಲ್ಲ;
- 3.5-6: ಸಾಪೇಕ್ಷ ಅತ್ಯಂತ ಲಘು ಕಂಪನ, ಅಸ್ಥಿರ ವಸ್ತುಗಳ ಬೀಳುವಿಕೆ ಮುಂತಾದ ಮಾನವಗ್ರಾಹ್ಯ ಪರಿಣಾಮಗಳು;
- 6-7: ಗೋಡೆಗಳಲ್ಲಿ ಬಿರುಕು ಅಥವಾ ದುರ್ಬಲ ಗೋಡೆ, ಕಟ್ಟಡಗಳ ಕುಸಿತ, ಭೂಬಿರಿತ ಮುಂತಾದ ಗಂಭೀರ ಪರಿಣಾಮಗಳು;
- 7-8: ಬಹುತೇಕ ಕಟ್ಟಡಗಳ ಹಾಗೂ ಸೇತುವೆಗಳ ನಾಶ, ರೈಲ್ವೆ ಹಳಿಗಳ ಬಾಗುವಿಕೆ, ಪ್ರವಾಹಗಳು, ಭೂಕುಸಿತಗಳು ಮುಂತಾದ ಆಪತ್ತುಗಳು.
- 8ಕ್ಕಿಂತ ಅಧಿಕ: ಸರ್ವನಾಶ.
ಬಾಹ್ಯ ಸಂಪರ್ಕಗಳು
ಬದಲಾಯಿಸಿ- IRIS Real-time Seismic Monitor of the Earth
- USGS: magnitude and intensity comparison Archived 2009-05-14 ವೇಬ್ಯಾಕ್ ಮೆಷಿನ್ ನಲ್ಲಿ.
- USGS: Earthquake Magnitude Policy
- USGS: 2000–2006 Earthquakes worldwide Archived 2006-08-12 ವೇಬ್ಯಾಕ್ ಮೆಷಿನ್ ನಲ್ಲಿ.
- USGS: 1990–1999 Earthquakes worldwide Archived 2009-08-30 ವೇಬ್ಯಾಕ್ ಮೆಷಿನ್ ನಲ್ಲಿ.
- Alaska Railroad Earthquake with a table of yield-to-magnitude relations.