ರಾಷ್ತ್ರೀಯ ಐಕ್ಯತೆ
ಭಾರತದಲ್ಲಿ ವಿಶಾಲ ರಾಷ್ಟ್ರಕ್ಕೆ ಹೊಂದುವಂತಹ ವಿಶಿಷ್ಟ ಸಂವಿಧಾನ ಹೊಂದಿದ್ದೇವೆ.ಈ ಸಂವಿಧಾನದ ದ್ರಷ್ಟಿಯಲ್ಲಿ ಬಡವ-ಬಲ್ಲಿದ ಎಲ್ಲರೂ ಸಮಾನರು.ಈ ಹಿನ್ನಲೆಯಲ್ಲಿಯೇ ಸ್ತ್ರೀ ಪುರುಷರೆಂಬ ಲಿಂಗ, ಜಾತಿ, ಭಾಷೆ, ಪ್ರಾಂತ, ಧರ್ಮ, ಆಹಾರ, ಉಡುಗೆ-ತೊಡುಗೆ, ರೀತಿ-ನೀತಿ, ಸಂಪ್ರದಾಯಗಳ ಭೇದವನ್ನೆಣಿಸದೇ ನಾವೆಲ್ಲಾ ಒಂದೇ ಎಂದು ಪರಿಗಣಿಸಿದ್ದಾರೆ. ನಮ್ಮ ಸಂವಿಧಾನ ಪ್ರಾಂತೀಯತೆಯ ಸಂಕುಚಿತ ಮನೋಭಾವನೆಯನ್ನು ತೊಡೆದು ಹಾಕಲು ಏಕಪೌರತ್ವ ವ್ಯವಸ್ಥೆಯನ್ನು ಜಾರಿಗೆ ತಂದಿದೆ. ಹಾಗೆಯೇ ನಮ್ಮ ಸಂವಿಧಾನ ಸಮಾಜವಾದ, ಸಮತಾವಾದ ತತ್ವಗಳನ್ನು ಒಪ್ಪಿಕೊಂಡಿದ್ದರೂ ಬಡವ ಶ್ರೀಮಂತರ ಮಧ್ಯ ದೊಡ್ಡ ಕಂದಕವೇ ಇದೆ. ಇದನ್ನು ಹೋಗಲಾಡಿಸಿ ರಾಷ್ತ್ರೀಯ ಏಕತೆಯನ್ನು ಪೋಷಿಸಲು ನಮ್ಮ ನಾಯಕರುಗಳು ಇಡೀ ರಾಷ್ಟ್ರಕ್ಕೆ ಏಕ ಅರ್ಥಪೂರ್ಣ ರಾಷ್ಟ್ರಧ್ವಜ, ರಾಷ್ಟ್ರಗೀತೆ, ರಾಷ್ತ್ರೀಯ ಚಿನ್ನ್ಹೆಗಳನ್ನೂ ಗುರುತಿಸಿ ಆಚರಣೆಗೆ ತಂದಿದ್ದಾರೆ. ರಾಷ್ತ್ರೀಯ ಹಬ್ಬ ಮತ್ತು ರಾಷ್ಟ್ರ ನಾಯಕರುಗಳ ಜನ್ಮದಿನಾಚರಣೆಗಳನ್ನು ಶಾಲಾ ಕಾಲೇಜುಗಳಲ್ಲಿ ಆಚರಿಸುವ ಮೂಲಕ ಇವುಗಳಿಗೆ ಸಾಮೂಹಿಕವಾಗಿ ಗೌರವವನ್ನು ಸಲ್ಲಿಸಿ ಭಿನ್ನತೆ ಮರೆತು ಭ್ರಾತ್ರತ್ವದಿಂದ ಮತ್ತು ಶಾಂತಿಯಿಂದ ಬಾಳುವ ಮೂಲಕ ರಾಷ್ತ್ರೀಯ ಏಕತೆಯನ್ನು ಮೂಡಿಸಬೇಕು ಎಂದು ಪೌರನೀತಿ ಬೋಧನೆಯ ಮೂಲಕ ತಿಳಿಸಬೇಕಾಗಿದೆ.p