ರಾಯಲಸೀಮ
"ರಾಯಲಸೀಮೆ"( Telugu:రాయలసీమ ) ಆಂಧ್ರ ಪ್ರದೇಶದ ಭೌಗೋಳಿಕ ವಿಭಾಗಗಳಲ್ಲೊಂದು. ಇದು ಅನಂತಪುರ, ಚಿತ್ತೂರು, ಕಡಪ ಮತ್ತು ಕರ್ನೂಲ್ ಜಿಲ್ಲೆಗಳನ್ನೊಳಗೊಂಡಿದೆ. ಕರ್ನೂಲು ಪಟ್ಟಣವು ಆಂಧ್ರರಾಷ್ಟ್ರದ ಮೊದಲ ರಾಜಧಾನಿಯಾಗಿತ್ತು. ಈ ಪ್ರಾಂತ್ಯವನ್ನಾಳಿದ ಶ್ರೀಕೃಷ್ಣದೇವರಾಯನ ಸ್ಮರಣಾರ್ಥ ’ರಾಯಲಸೀಮ’ ಎಂಬ ಹೆಸರು ಪ್ರದೇಶಕ್ಕೆ ಬಂದಿತು.
ಈ ಭಾಗವನ್ನು ಚಾಲುಕ್ಯರು ಆಳುವ ಮೊದಲು(ಸುಮಾರು ಕ್ರಿ.ಶ ೭ನೇ ಶತಮಾನ) ಇದು "ಹಿರಣ್ಯಕ ರಾಷ್ಟ್ರ’ವೆಂದು ಹೆಸರಾಗಿತ್ತು. ಪುರಾಣ ಕಾಲದಲ್ಲಿ ಹಿರಣ್ಯಾಕ್ಷ ಮತ್ತು ಹಿರಣ್ಯಕಶಿಪು ಈ ಭಾಗವನ್ನಾಳಿದ್ದರೆಂಬ ನಂಬಿಕೆಯಿದೆ. ವಿಜಯನಗರ ಕಾಲದ ನಂತರವಷ್ಟೇ ಈ ಭಾಗ ರಾಯಲಸೀಮೆಯೆಂಬ ಹೆಸರು ಪಡೆದುಕೊಂಡಿತು.
ಪ್ರೇಕ್ಷಣೀಯ ಸ್ಥಳಗಳು
ಬದಲಾಯಿಸಿ- ತಿರುಮಲ.
- ಶ್ರೀಶೈಲ.
- ಅಹೋಬಿಲಮ್.
- ಶ್ರೀಕಾಳಹಸ್ತಿ.
- ಲೇಪಾಕ್ಷಿ.
- ಮಂತ್ರಾಲಯ.
- ಪುಟ್ಟಪರ್ತಿ.
- ಕದಿರಿ.
- ಕಾನಿಪಾಕಮ್.
- ತಾಡಪತ್ರಿ.
- ನಂದ್ಯಾಲ.
- ಅದೋನಿ.
- ಪೆನುಕೊಂಡ.
- ನಾಗನಾಥಾನಹಲ್ಲಿ
Wikimedia Commons has media related to Rayalaseema.