ರಾನ್‌ಬಾಕ್ಸಿ ಲ್ಯಾಬರೇಟರೀಸ್ ಲಿಮಿಟೆಡ್

ರಾನ್‌ಬಾಕ್ಸಿ ಲ್ಯಾಬರೇಟರೀಸ್ ಲಿಮಿಟೆಡ್ (ಬಿಎಸ್‌ಇ: 500359) ಇದು ಭಾರತದಲ್ಲಿ ಅತೀದೊಡ್ಡ ಔಷಧಿಗಳ ಮಾರಾಟ ಮತ್ತು ತಯಾರಿಕಾ ಕಂಪನಿಯಾಗಿದೆ. ೧೯೬೧ರಲ್ಲಿ ಸ್ಥಾಪಿಸಲ್ಪಟ್ಟಿರುವ ರಾನ್‌ಬಾಕ್ಸಿ ಕಂಪನಿಯು ತನ್ನ ಉತ್ಪನ್ನಗಳನ್ನು ೪೬ ದೇಶಗಳಲ್ಲಿ ಸ್ವತಃ ಮಾರುಕಟ್ಟೆ ಮಾಡುವುದು ಮತ್ತು ೭ ದೇಶಗಳಲ್ಲಿ ಉತ್ಪಾದನೆ ಸೇರಿದಂತೆ ಓಟ್ಟೂ ೧೨೫ ದೇಶಗಳಿಗೆ ರಫ್ತು ಮಾಡುವ ಕಾರ್ಯ ಮಾಡುತ್ತಿದೆ. ಈ ಕಂಪನಿಯು ೧೯೭೩ರಲ್ಲಿ ಸಾರ್ವಜನಿಕ ಕಂಪನಿಯಾಗಿ ಪರಿವರ್ತನೆಯಾಯಿತು ಮತ್ತು ಜಪಾನಿನ ಔಷಧ ಕಂಪನಿಯಾದ ದಾಯಿಚಿ ಸಾಂಕ್ಯೋ ಕಂಪನಿಯು ರಾನ್‌ಬಾಕ್ಸಿ ಕಂಪನಿಯ ಮೇಲೆ ಹೆಚ್ಚಿನ ಸ್ವಾಮ್ಯತ್ವವನ್ನು ಹೊಂದಿತು.[] ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಮತ್ತು ವ್ಯವಸ್ಥಾಪಕ ನಿರ್ದೇಶಕರೂ ಆದ ಅತುಲ್ ಸೊಬ್ತಿಯವರು ಕಳೆದ ೨೦೧೦ರಲ್ಲಿ ತಮ್ಮ ಹುದ್ದೆಗೆ ರಾಜಿನಾಮೆ ನೀಡಿದರು.

Ranbaxy Research Laboratories Limited
ಸಂಸ್ಥೆಯ ಪ್ರಕಾರPublic (ಬಿಎಸ್‌ಇ: 500359)
ಸ್ಥಾಪನೆ೧೯೬೧
ಮುಖ್ಯ ಕಾರ್ಯಾಲಯGurgaon, ಹರಿಯಾಣ, India
ಉದ್ಯಮPharmaceutical
ಉತ್ಪನ್ನPharmaceuticals and diagnostics
ಉದ್ಯೋಗಿಗಳು೧೧೦೦ in R&D
ಜಾಲತಾಣwww.ranbaxy.com

ಇತಿಹಾಸ

ಬದಲಾಯಿಸಿ

ರಾನ್‌ಬಾಕ್ಸಿ ಕಂಪನಿಯನ್ನು ೧೯೩೭ರಲ್ಲಿ ರನಭೀರ್ ಸಿಂಗ್ ಮತ್ತು ಗುರುಭಕ್ಷ್‌್ ಸಿಂಗ್ ಇವರು ಜಪಾನಿನ ಕಂಪನಿಯಾದ ಶಿಯೊನೋಗಿಯ ವಿತರಕರಾಗಿ ಪ್ರಾರಂಭಿಸಿದರು. ರಾನ್‌ಬಾಕ್ಸಿ ಕಂಪನಿ ಹೆಸರು ಮೊದಲ ಯಜಮಾನರಾದ ರಣ ಭೀರ್‌ ಮತ್ತು ಗುರುಭಕ್ಷ್‌ ಹೆಸರಿನಿಂದ ಬಂದಿತು. ಭಾಯಿ ಮೋಹನ್ ಸಿಂಗ್‌ರವರು ೧೯೫೨ರಲ್ಲಿ ತನ್ನ ಮಲ ಸಹೋದರರಾದ ರಣಭೀರ್ ಮತ್ತು ಗುರುಭಕ್ಷ್‌ ಇವರಿಂದ ಖರೀದಿಸಿದರು. ಭಾಯಿ ಮೋಹನ್‌ ಸಿಂಗ್‌ರವರ ಮಗನಾದ ಪರ್ವಿಂದರ್ ಸಿಂಗ್‌ರವರು ೧೯೬೭ರಲ್ಲಿ ಕಂಪನಿಗೆ ಸೇರಿಕೊಂಡ ನಂತರ ಕಂಪನಿಯ ವ್ಯವಹಾರದಲ್ಲಿ ಅಮೂಲಾಗ್ರವಾದ ಬದಲಾವಣೆಗಳನ್ನು ತಂದರು. ಅವರ ಮಕ್ಕಳಾದ ಮಾಳವಿಂದರ್ ಮೋಹನ ಸಿಂಗ್ ಮತ್ತು ಶಿವಿಂದರ್ ಮೋಹನ್ ಸಿಂಗ್ ಇವರು ಕಂಪನಿಯನ್ನು ೨೦೦೮ರಲ್ಲಿ ಜಪಾನಿನ ದಾಯಿಚಿ ಸ್ಯಾಂಕ್ಯೊ ಕಂಪನಿಗೆ ಮಾರಾಟಮಾಡಿದರು.

ವ್ಯಾಪಾರ ಮಾಡುವಿಕೆ

ಬದಲಾಯಿಸಿ

೧೯೯೮ರಲ್ಲಿ ರಾನ್‌ಬಾಕ್ಸಿ ಕಂಪನಿಯು ಇಂದಿಗೂ ಕಂಪನಿಗೆ ಅತ್ಯಂತ ದೊಡ್ಡ ಮಾರುಕಟ್ಟೆಯನ್ನು ಒದಗಿಸಿಕೊಟ್ಟ, ೨೦೦೫ರ ಅಂಕಿ ಅಂಶದಂತೆ ಕಂಪನಿಯ ಒಟ್ಟೂ ವಹಿವಾಟಿನ ಶೇ.೨೮ನ್ನು ಭರಿಸುತ್ತಿರುವ ಅಮೇರಿಕಾದ ಮಾರುಕಟ್ಟೆಯನ್ನು ಪ್ರವೇಶಿಸಿತು.[ಸೂಕ್ತ ಉಲ್ಲೇಖನ ಬೇಕು]

೨೦೦೫ರ ಡಿಸೆಂಬರ್ ಅಂತ್ಯಕ್ಕೆ ಕಂಪನಿಯ ಅಂತರಾಷ್ಟ್ರೀಯ ವಹಿವಾಟು ಅಮೇರಿಕಾದ ಡಾಲರ್ ೧,೧೭೮ ಮಿಲಿಯನ್‌ಗೆ ತಲುಪಿತು. ಅದರಲ್ಲಿ ಸಮುದ್ರದಾಚೆಗಿನ ವಹಿವಾಟೇ ಶೇ.೭೫ರಷ್ಟಿತ್ತು.(ಅಮೇರಿಕಾ ಶೇ.೨೮, ಯುರೋಪ್ ಶೇ.೧೭ ಮತ್ತು ಬ್ರೆಜಿಲ್, ರಷ್ಯಾ, ಚೀನಾ ಸೇರಿ ಶೇ.೨೯%) ೨೦೦೬ರ ಡಿಸೆಂಬರ್ ೩೧ರ ಅಂತ್ಯಕ್ಕೆ ಕಂಪನಿಯ ವಹಿವಾಟು ಅಮೇರಿಕಾದ ೧,೩೦೦ ಮಿಲಿಯನ್ ಡಾಲರ್ ತಲುಪಿತು.

ಹೆಚ್ಚಿಗೆ ರಾನ್‌ಬಾಕ್ಸಿಯ ಉತ್ಪಾದನೆಗಳು ವಿದೇಶಿ ಅಭಿವರ್ಧಕರಿಂದ ಪಡೆದ ಅನುಮತಿ ಪತ್ರದೊಂದಿಗೆ ತಯಾರಿಸಲ್ಪಟ್ಟಿವೆ. ಹೆಚ್ಚಿಗೆ ರಾನ್‌ಬಾಕ್ಸಿ ಕಂಪನಿಯ ಔಷಧೀಯ ಉತ್ಪನ್ನಗಳು ಸ್ವಾಮ್ಯತ್ವದ ಪರವಾನಗಿ ಇಲ್ಲದ ಔಷಧಗಳಾಗಿವೆ. ಅವುಗಳು ಪರವಾನಗಿ ಪತ್ರವೇ ಇಲ್ಲದೇ ತಯಾರಾಗುತ್ತಿವೆ ಮತ್ತು ಮಾರಾಟವಾಗುತ್ತಿವೆ. ಏಕೆಂದರೆ ಅವುಗಳ ಕಾನೂನು ರಿತ್ಯಾ ಉಪಯೋಗಿಸಲು ನಿಗದಿಯಾದ ಅವಧಿಯು ಮುಗಿದುಹೋಗಿದೆ.

೨೦೦೫ ಡಿಸೆಂಬರ್ ತಿಂಗಳಿನಲ್ಲಿ ಸ್ವಾಮ್ಯತ್ವದ ಪರವಾನಗಿ ಇಲಾಖೆಯು ಫೈಜರ್(Pfizer) ಕಂಪನಿಯ ಸ್ವಂತ ಉತ್ಪಾದನೆಯಾದ ವರ್ಷವೊಂದಕ್ಕೆ ೧೦ ಬಿಲಿಯನ್ ಡಾಲರ್ ಮಾರಾಟವನ್ನು ಹೊಂದಿರುವ ರಕ್ತದಲ್ಲಿರುವ ಕೊಬ್ಬಿನ ಪ್ರಮಾಣವನ್ನು ಕರಗಿಸುವ ಲಿಪಿಟರ್ ಗುಳಿಗೆಗಳ ತಯಾರಿಕೆಯನ್ನು ತಡೆಹಿಡಿದಿದ್ದರಿಂದಾಗಿ ಕಂಪನಿಯ ಶೇರುಗಳ ಮೌಲ್ಯವು ದಿಢೀರನೇ ಕುಸಿಯಿತು.[] ೨೦೦೮ನೇ ಇಸವಿಯಲ್ಲಿ ರಾನ್‌ಬಾಕ್ಸಿ ಕಂಪನಿಯು ಫೈಜರ್ ಕಂಪನಿಗೆ ಅಟ್ರೋವಿನ್ ಕ್ಯಾಲ್ಸಿಯಂ, ಸಾಮಾನ್ಯ ಜಾತಿಗೆ ಸೇರಿದ ಲಿಪಿಟರ್(ರಿ), ಮತ್ತು ಅಟ್ರೋವಿನ್ ಕ್ಯಾಲ್ಸಿಯಂ ಅಮಿಲೋಡಿಪಿನ್ ಬೆಸಲೈಟ್ ಔಷಧಿಗಳ ಮಾರಾಟದ ಸ್ವಾಮಿತ್ವವನ್ನು ನೀಡಿ ಫೈಜರ್ ಕಂಪನಿಯೊಂದಿಗಿನ ಸ್ವಾಮ್ಯತ್ವದ ಬಗೆಗಿನ ವಿವಾದವನ್ನು ಬಗೆಹರಿಸಿಕೊಂಡಿತು. ಫೈಜರ್ ಕಂಪನಿಯ ಸಾಮಾನ್ಯ ಜಾತಿಯ ಕ್ಯಾಡುಯೆಟ್(ರಿ) ಔಷಧಿಯು ಅಮೇರಿಕಾದಲ್ಲಿ ೩೦ ನವೆಂಬರ್ ೨೦೧೧ರಲ್ಲಿ ಬಿಡುಗಡೆಯಾಗಲಿದೆ. ಈ ಒಪ್ಪಂದವು ಅನೇಕ ದೇಶಗಳಲ್ಲಿನ ವಿವಾದಗಳನ್ನು ಬಗೆಹರಿಸಿಕೊಳ್ಳುವುದನ್ನೂ ಸೇರಿತ್ತು.[ಸೂಕ್ತ ಉಲ್ಲೇಖನ ಬೇಕು]

೨೩ ಜೂನ್ ೨೦೦೬ರಂದು ರಾನ್‌ಬಾಕ್ಸಿ ಕಂಪನಿಯು ಅಮೇರಿಕಾದ ಆಹಾರ ಮತ್ತು ಔಷಧ ನಿಯಂತ್ರಣ ಮಂಡಳಿಯಿಂದ ೧೮೦ ದಿನಗಳ ಏಕಸ್ವಾಮಿತ್ವದ ಅಧಿಕಾರವನ್ನು ಪಡೆಯಿತು ಈ ಅಧಿಕಾರದಲ್ಲಿ ಅದು ಸಿಮ್ವಾಸ್ಟ್ಯಾಟಿನ್(Zocor) ಹೊಂದಿರುವ ಸಾಮಾನ್ಯ ಜಾತಿಯ ೮೦ ಮಿ.ಗ್ರಾಂ ಶಕ್ತಿಯನ್ನು ಹೊಂದಿರುವ ಔಷಧಿಗಳನ್ನು ಅಮೇರಿಕಾದಲ್ಲಿ ಮಾರಬಹುದಾಗಿತ್ತು. ಈಗ ರಾನ್‌ಬಾಕ್ಸಿ ಕಂಪನಿಯು ೮೦ ಮಿ.ಗ್ರಾಂ ಶಕ್ತಿಯ ಹೊರತಾಗಿ ಏಕಸ್ವಾಮಿತ್ವವನ್ನು ಹೊಂದಿರುವ ಝೊಕೋರ್ ಚಿನ್ಹೆಯಡಿ ಮಾರಾಟ ಮಾಡುತ್ತಿರುವ ಕಂಪನಿಗಳಾದ ಮರ್ಕ್&ಕಂ.;ಐವ್ಯಾಕ್ಸ್ ಕಾರ್ಪೋರೇಶನ್ (ತೇವಾ ಔಷಧೀಯ ಕಂಪನಿಯಿಂದ ಸ್ವಂತವಾಗಿ ಸಂಪಾದಿಸಲ್ಷಟ್ಟ ಮತ್ತು ಅದರೊಂದಿಗೆ ವಿಲೀನಹೊಂದಿದ) ಮತ್ತು ಭಾರತ ದೇಶದ ಡಾ.ರೆಡ್ಡಿಸ್ ಪ್ರಯೋಗಾಲಯದೊಂದಿಗೆ ಫೈಪೋಟಿ ನೀಡುತ್ತಿದೆ. ಆದರೆ ಡಾ.ರೆಡ್ಡಿಸ್ ಪ್ರಯೋಗಾಲಯದ ಮರ್ಕ್‌ನಿಂದ ಪರವಾನಗಿ ಪಡೆದ ಸಾಮಾನ್ಯಜಾತಿಯ ಔಷಧಿಗಳು ಏಕಸ್ವಾಮಿತ್ವದಿಂದ ರಿಯಾಯಿತಿ ಹೊಂದಿದೆ.

೧೦ ಜೂನ್ ೨೦೦೮ರಂದು ಜಪಾನಿನ ದಾಯಿಚಿ ಸಾಂಕ್ಯೋ ಕಂಪನಿಯು ಕಂಪನಿಯು ೪.೬ ಬಿಲಿಯನ್ ಡಾಲರ್ ಮೊತ್ತದ ಶೇ.೫೦.೧ರಷ್ಟು ಬಂಡವಾಲನ್ನು ಹೂಡಲು ಒಪ್ಪಿಗೆ ನೀಡಿತು. ಶ್ರೀ ಮಾಳವಿಂದರ್ ಸಿಂಗ್‌ರವರೇ ಮುಂದಿನ ಮುಖ್ಯ ಕಾರ್ಯನಿರ್ವಾಹಕರಾಗಿ ಮುಂದುವರಿದರು. ಅವರೇ ಹೇಳುವಂತೆ ಇದೊಂದು ಕಂಪನಿಯ ಮಾರಾಟವಾಗಿರದೇ ವಿರಳ ಪ್ರಯೋಗವಾಗಿತ್ತು.[]

೧೬ ಸೆಪ್ಟೆಂಬರ್ ೨೦೦೮ರಂದು ಆಹಾರ ಮತ್ತು ಔಷಧ ನಿಯಂತ್ರಣ ಮಂಡಳಿಯು ಭಾರತದ ಎರಡು ಔಷಧ ಉತ್ಪಾದಕ ಸ್ಥಳಗಳಿಂದ ಆಮದಾಗುವ ಸಾಮಾನ್ಯ ಜಾತಿಯ ಔಷಧಗಳ ಬಗ್ಗೆ ಎಚ್ಚರಿಕೆಯಿಂದಿರುವಂತೆ ಸೂಚಿಸಿ ರಾನ್‌ಬಾಕ್ಸಿ ಕಂಪನಿಗೆ ೨ ಎಚ್ಚರಿಕೆ ಪತ್ರವನ್ನು ನೀಡಿತು.[]

ಫೆಬ್ರುವರಿ ೨೫, ೨೦೦೯ರಂದು ಅಮೇರಿಕಾದ ಆಹಾರ ಮತ್ತು ಔಷಧ ನಿಯಂತ್ರಣ ಮಂಡಳಿಯು ನಕಲಿ ಪರಿಕ್ಷಾ ಪ್ರಮಾಣ ಪತ್ರಗಳನ್ನು ಪೂರೈಸಿದ್ದಕ್ಕಾಗಿ ಭಾರತದ ಪೋಂಟಾ ಶಾಹೀಬ್ ಸ್ಥಳದಿಂದ ಬರುವ ಎಲ್ಲ ಔಷಧಿಗಳನ್ನು ಸ್ಥಗಿತಗೊಳಿಸುವಂತೆ ಸೂಚಿಸಿತು. FDA ಯು ತಿಳಿಸಿದಂತೆ "ಈ ವಿಷಯದ ಬಗ್ಗೆ ವಿಚಾರಣೆಯನ್ನು ಕೈಗೊಂಡಿತು".[][]

೧೧ನೇ ಜೂನ್ ೨೦೦೮ರಂದು ದಾಯಿಚಿ ಸಾಂಕ್ಯೋ ಕಂಪನಿಯು ರಾನ್‌ಬಾಕ್ಸಿ ಕಂಪನಿಯ ಶೇ.೩೪.೮ರಷ್ಟು ಪಾಲುದಾರಿಕೆಯನ್ನು[] ೨.೪ ಬಿಲಿಯನ್ ಡಾಲರ್ ಮೊತ್ತಕ್ಕೆ ಖರೀದಿಸಿತು. ೨೦೦೮ರ ನವೆಂಬರ್‌ನಲ್ಲಿ ದಾಯಿಚಿ ಸಾಂಕ್ಯೋ ಕಂಪನಿಯು ಉಳಿದ ಶೇ. ೬೩.೯೨ರಷ್ಟು ಪಾಲುದಾರಿಕೆಯನ್ನು ೪.೬ ಬಿಲಿಯನ್ ಡಾಲರ್[] ಮೊತ್ತಕ್ಕೆ ಖರೀದಿಸುವುದರೊಂದಿಗೆ ಸಂಪೂರ್ಣ ಸ್ವಾಮ್ಯತ್ವವನ್ನು ಸಾಧಿಸಿತು.

ರಾನ್‌ಬಾಕ್ಸಿ ಕಂಪನಿಯ ವಿಲೀನದಿಂದಾಗಿ ದಾಯಿಚಿ ಸಾಂಕ್ಯೋ ಕಂಪನಿಯು ತನ್ನ ಕಾರ್ಯಕ್ಷೇತ್ರವನ್ನು ಮತ್ತಷ್ಟು ಹೆಚ್ಚಿಸಿತು. ಈ ಕಂಪನಿಯು ಈಗಾಗಲೇ ೨೨ದೇಶಗಳಲ್ಲಿ ತನ್ನ ವ್ಯಾಪಾರ ವಹಿವಾಟನ್ನು ಹೊಂದಿದೆ.[ಸೂಕ್ತ ಉಲ್ಲೇಖನ ಬೇಕು] ವಿಲೀನವಾದ ಕಂಪನಿಯ ಬಂಡವಾಳವು ೩೦ ಬಿಲಿಯನ್ ಡಾಲರ್‌ ಡಾಲರ್‌ ಮೀರಿದೆ.[]

ಇವನ್ನೂ ನೋಡಿ

ಬದಲಾಯಿಸಿ

ಟಿಪ್ಪಣಿಗಳು

ಬದಲಾಯಿಸಿ
  1. ಬ್ಲೂಂಬರ್ಗ್ - ದಾಯಿಚಿ ಟು ಟೆಕ್ ಕಂಟ್ರೋಲ್ ಆಫ್‌ ರಾನ್‌ಬಾಕ್ಸಿ ಫಾರ್ 4.6 ಬಿಲಿಯನ್ ಡಾಲರ್ - ಜೂನ್ 11 2008
  2. ಬಿಬಿಸಿ ನ್ಯೂಸ್ - ಪೆಟೆಂಟ್ ರೂಲಿಂಗ್ ಹಿಟ್ಸ್ ರಾನ್‌ಬಾಕ್ಸಿ ಷೇರ್ಸ್ - 19 ಡಿಸೆಂಬರ್ 2005
  3. ಬ್ಲೂಂಬರ್ಗ್ - ದಾಯಿಚಿ ಟು ಟೆಕ್ ಕಂಟ್ರೋಲ್ ಆಫ್‌ ರಾನ್‌ಬಾಕ್ಸಿ ಫಾರ್ 4.6 ಬಿಲಿಯನ್ ಡಾಲರ್ - ಜೂನ್ 11, 2008
  4. "FDA.gov - ಎಫ್‌ಡಿಎ ಇಷ್ಯುಸ್ ವಾರ್ನಿಂಗ್ ಲೆಟರ್ಸ್ ಟು ರಾನ್‌ಬಾಕ್ಸಿ ಲ್ಯಾಬೊರೆಟೊರಿಸ್ ಲಿ. - ಸೆಪ್ಟೆಂಬರ್ 16, 2008". Archived from the original on 2009-05-13. Retrieved 2011-01-23.
  5. ರಾಯ್ಟರ್ಸ್ - ಯುಎಸ್ ಎಫ್‌ಡಿಎ ಸೇಯ್ಸ್ ರಾನ್‌ಬಾಕ್ಸಿ ಪ್ಲಾಂಟ್ ಫಾಲ್ಸಿಫೈಡ್ ಡೇಟಾ - ಫೆಬ್ರುವರಿ 25, 2009
  6. FDA.gov - ರಾನ್‌ಬಾಕ್ಸಿ ಎಐಪಿ ಇನ್‌ಫೊಪೇಜ್
  7. ಇಂಡಿಯಾ ನೊಲೆಡ್ಜ್@ವಾರ್ಟೊನ್ - ದಿ ರಾನ್‌ಬಾಕ್ಸಿ-ದಾಯಿಚಿ ಡೀಲ್: ಗುಡ್ ಮೆಡಿಸಿನ್, ಆರ್ ಅ ಹರ್ಬಿಂಗರ್ ಆಫ್‌ ಫ್ಯುಚರ್ ಇಲ್ಸ್? - ಜೂನ್ 12, 2008
  8. "ಟೈಮ್ಸ್‌ಒನ್‌ಲೈನ್‌ಯುಕೆ - ಬಿಸಿನೆಸ್ - ಟೆಕ್‌ಒವರ್ ಆಫ್‌ ರಾನ್‌ಬಾಕ್ಸಿ". Archived from the original on 2011-08-15. Retrieved 2011-01-23.
  9. "ದಾಯಿಚಿ ಸ್ಯಾಂಕ್ಯೊ ಗೊಬಲ್ಸ್ ರಾನ್‌ಬಾಕ್ಸಿ ಲ್ಯಾಬೊರೆಟೊರಿಸ್ ಫಾರ್ 4.6 ಬಿಲಿಯನ್ ಡಾಲರ್". Archived from the original on 2009-11-16. Retrieved 2011-01-23.


ಬಾಹ್ಯ ಕೊಂಡಿಗಳು

ಬದಲಾಯಿಸಿ

ಟೆಂಪ್ಲೇಟು:Portal