ರಾಚೆಲ್ ಲೂಯಿಸ್ ಕಾರ್ಸನ್
ರಾಚೆಲ್ ಲೂಯಿಸ್ ಕಾರ್ಸನ್ (ಮೇ ೨೭,೧೯೦೭ - ಏಪ್ರಿಲ್ ೧೪,೧೯೬೪) ಅಮೇರಿಕಾದ ಜೀವಶಾಸ್ತ್ರಜ್ಞೆ, ಲೇಖಕಿ ಮತ್ತು ಸಂರಕ್ಷಕರಾಗಿದ್ದಾರೆ[೧]
ರಾಚೆಲ್ ಕಾರ್ಸನ್ | |
---|---|
ಜನನ | ರಾಚೆಲ್ ಲೂಯಿಸ್ ಕಾರ್ಸನ್ ೨೭ ಮೇ ೧೯೦೭ Springdale, Pennsylvania, U.S. |
ಮರಣ | April 14, 1964 Silver Spring, Maryland, U.S. | (aged 56)
ವೃತ್ತಿ | Marine biologist, author and environmentalist |
ಅಭ್ಯಾಸ ಮಾಡಿದ ವಿದ್ಯಾ ಸಂಸ್ಥೆ | Chatham University (BA), Johns Hopkins University (MS) |
ಕಾಲ | 1937–1964 |
ಪ್ರಕಾರ/ಶೈಲಿ | Nature writing |
ವಿಷಯ | Marine biology, ecology, pesticides |
ಪ್ರಮುಖ ಕೆಲಸ(ಗಳು) | ಅಂಡರ್ ದ ಸೀ ವಿಂಡ್ (1941) ದಿ ಸೀ ಅರೌಂಡ್ ಅಸ್ (1951) ದಿ ಎಡ್ಜ್ ಆಫ್ ದ ಸೀ (1955) ಸೈಲೆಂಟ್ ಸ್ಪ್ರಿಂಗ್ (1962) |
ವೈಯಕ್ತಿಕ ಜೀವನ
ಬದಲಾಯಿಸಿರಾಚೆಲ್ ಲೂಯಿಸ್ ಕಾರ್ಸನ್ ಅವರು ಪೆನ್ಸಿಲ್ವೇನಿಯಾದ ಸ್ಪ್ರಿಂಗ್ಡೇಲ್ ನಲ್ಲಿ ಮೇ ೨೭,೧೯೦೭ರಂದು ಜನಿಸಿದರು. ಇವರು ಮರಿಯಾ ಫ್ರೇಜಿಯರ್ (ಮ್ಯಾಕ್ಲೀನ್) ಮತ್ತು ರಾಬರ್ಟ್ ವಾರ್ಡನ್ ಕಾರ್ಸನ್ರ ಪುತ್ರಿಯಾಗಿದ್ದಾರೆ. ಇವರ ತಂದೆ ವೃತ್ತಿಯಲ್ಲಿ ವಿಮಾ ಮಾರಾಟಗಾರರಾಗಿದ್ದರು. ರಾಚೆಲ್ ಕಾರ್ಸನ್ ಅವರು ತಮ್ಮ ಕುಟುಂಬದ ೬೫ ಎಕರೆ (೨೬ ಹೆಕ್ಟೇರ್) ಫಾರ್ಮ್ನ ಸುತ್ತಲೂ ಸಾಕಷ್ಟು ಸಮಯವನ್ನು ಕಳೆಯುತ್ತಿದ್ದರು. ಓದಿನಲ್ಲಿ ಅತೀ ಆಸಕ್ತಿಯಿರುವ ಇವರು ತಮ್ಮ ಎಂಟನೇ ವಯಸ್ಸಿನಲ್ಲಿ ಕಥೆಗಳನ್ನು (ಹೆಚ್ಚಾಗಿ ಪ್ರಾಣಿಗಳನ್ನು ಒಳಗೊಂಡಿರುವ ಕಥೆ) ಬರೆಯಲಾರಂಭಿಸಿದರು. ಇವರಿಗೆ ಹತ್ತು ವರ್ಷವಾಗಿದ್ದಾಗ ಇವರ ಮೊದಲ ಕಥೆಯು ಪ್ರಕಟವಾಯಿತು. ಇವರು ಬೀಟ್ರಿಕ್ಸ್ ಪಾಟರ್ನ ಕೃತಿಗಳು ಮತ್ತು ಜೀನ್ ಸ್ಟ್ರಾಟನ್-ಪೋರ್ಟರ್ನ ಕಾದಂಬರಿಗಳು ಹೊಂದಿರುವ ಸೇಂಟ್ ನಿಕೋಲಸ್ ಮ್ಯಾಗಝೀನ್ ಅನ್ನು ಇಷ್ಟಪಡುತ್ತಿದ್ದರು. ಏಕೆಂದರೆ ಅದರಲ್ಲಿ ಅವರ ಮೊದಲ ಪ್ರಕಟಿತ ಕಥೆಗಳನ್ನು ಪ್ರಕಟಿಸಿದ್ದರು. ನೈಸರ್ಗಿಕ ಪ್ರಪಂಚ, ವಿಶೇಷವಾಗಿ ಸಾಗರ ಇವರ ನೆಚ್ಚಿನ ಸಾಹಿತ್ಯವಾಗಿತ್ತು. ಕಾರ್ಸನ್ ಅವರು ಹತ್ತನೇ ಗ್ರೇಡ್ ಮೂಲಕ ಸ್ಪ್ರಿಂಗ್ಡೇಲ್ನ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣವನ್ನು ಮಾಡಿದರು. ಪಾರ್ನಾಸಸ್ನಲ್ಲಿ ಪ್ರೌಢ ಶಿಕ್ಷಣವನ್ನು ಮಾಡಿದರು. ಮುಂದೆ ೧೯೨೫ರಲ್ಲಿ ಉನ್ನತ ದರ್ಜೆಯಲ್ಲಿ ಪದವಿ ಪಡೆದರು.[೨]
ವೃತ್ತಿ ಜೀವನ
ಬದಲಾಯಿಸಿಕಾರ್ಸನ್ ಯು.ಎಸ್. ಬ್ಯೂರೊ ಆಫ್ ಫಿಶರೀಸ್ನಲ್ಲಿ ಜಲಜೀವಿ ಜೀವಶಾಸ್ತ್ರಜ್ಞನಾಗಿ ವೃತ್ತಿಜೀವನವನ್ನು ಪ್ರಾರಂಭಿಸಿದರು ಮತ್ತು ೧೯೫೦ರ ದಶಕದಲ್ಲಿ ಪೂರ್ಣಕಾಲಿಕ ಪ್ರಕೃತಿ ಬರಹಗಾರರಾದರು. ಯು.ಎಸ್. ಬ್ಯೂರೋ ಆಫ್ ಫಿಶರೀಸ್ನಲ್ಲಿ,ಕಾರ್ಸನ್ ಅವರು ಮೀನುಗಳ ಸಂಖ್ಯೆಯ ಕುರಿತು ಸಾರ್ವಜನಿಕರಿಗೆ ಬ್ರೋಷರ್ಗಳು, ಇತರ ಸಾಹಿತ್ಯವನ್ನು ಬರೆಯಲು, ಕ್ಷೇತ್ರದ ಮಾಹಿತಿಯನ್ನು ವಿಶ್ಲೇಷಿಸುವುದು ಮತ್ತು ವರದಿ ಮಾಡುವುದು ಇವರ ಪ್ರಮುಖ ಜವಾಬ್ದಾರಿಗಳಾಗಿತ್ತು. ಆರಂಭದ ಹಂತಗಳಲ್ಲಿ ಸಮುದ್ರ ಜೀವಶಾಸ್ತ್ರಜ್ಞರೊಂದಿಗಿನ ಸಂಶೋಧನೆ ಮತ್ತು ಸಮಾಲೋಚನೆಗಳನ್ನು ಜೊತೆಗೆ ದಿ ಬಾಲ್ಟಿಮೋರ್ ಸನ್ ಮತ್ತು ಇತರ ಪತ್ರಿಕೆಗಳ ಕುರಿತು ನಿರಂತರ ಲೇಖನಗಳನ್ನು ಬರೆಯಲು ಪ್ರಾರಂಭಿಸಿದರು. ೧೯೫೧ರಲ್ಲಿ "ದ ಸೀ ಅರೌಂಡ್ ಅಸ್" ಎಂಬ ಕೃತಿಗೆ ಒಬ್ಬ ಮಾನ್ಯತೆ ಬರಹಗಾರ ಎಂದು ಯು.ಎಸ್.ನ್ಯಾಷನಲ್ ಬುಕ್ ಅವಾರ್ಡ್ ಅನ್ನು ಪಡೆದರು. ಇವರ ಮುಂದಿನ ಪುಸ್ತಕ, "ದಿ ಎಡ್ಜ್ ಆಫ್ ದ ಸೀ" ಹಾಗೂ ಮೊದಲ ಪುಸ್ತಕದ ಮರುಮುದ್ರಣವಾಗಿರುವ "ಅಂಡರ್ ದಿ ಸೀ ವಿಂಡ್" ಕೂಡ ಇವರ ಪುಸ್ತಕಗಳಾಗಿವೆ. "ಅಂಡರ್ ದ ಸೀ" ಎಂಬ ಪ್ರಬಂಧವು ಸಾಗರದಲ್ಲಿನ ಪ್ರಯಾಣದ ಕುರಿತು ಪ್ರಕಾಶಮಾನವಾದ ನಿರೂಪಣೆಯನ್ನು ಪ್ರಕಟಿಸಲ್ಪಟ್ಟಿದೆ. "ಹೆಲ್ಪ್ ಯುವರ್ ಚೈಲ್ಡ್ ಟು ವಂಡರ್"(೧೯೫೬)ಮತ್ತು "ಅವರ್ ಎವರ್ ಚೇಂಜಿಗ್ ಶೋರ್"(೧೯೫೭),ಇವರ ಪರಿಸರ ವಿಜ್ಞಾನದ ಬಗ್ಗೆ ಇನ್ನೊಂದು ಪುಸ್ತಕವಾಗಿದೆ. ಅಲ್ಲದೆ ಜೀವನ ಎಂಬ ಅದ್ಭುತ ಪ್ರಪಂಚ ಮತ್ತು ಸೌಂದರ್ಯದ ಬಗ್ಗೆ ಜನರಿಗೆ ಕಲಿಸಲು ವಿನ್ಯಾಸಗೊಳಿಸಿದ ಹಲವಾರು ಲೇಖನಗಳನ್ನು ಇವರು ಬರೆದಿದ್ದಾರೆ.[೩]
ಕೃತಿಗಳು
ಬದಲಾಯಿಸಿ- ಅಂಡರ್ ದ ಸೀ ವಿಂಡ್
- ಫಿಷಸ್ ಆಫ್ ದ ಮಿಡಲ್ ವೆಸ್ಟ್
- ಫಿಷ್ ಆಂಡ್ ಶೆಲ್ ಫಿಷ್ ಆಫ್ ದ ಮಿಡಲ್ ಅಟ್ಲಾಂಟಿಕ್ ಕೋಸ್ಟ್
- ದಿ ಸೀ ಅರೌಂಡ್ ಅಸ್
- ದಿ ಎಡ್ಜ್ ಆಫ್ ದ ಸೀ
- ಚಿನ್ಕೋಟೀಗ್: ಎ ನ್ಯಾಷನಲ್ ವೈಲ್ಡ್ಲೈಫ್ ರೆಫ್ಯೂಜ್, ೧೯೪೭.
- ಮ್ಯಾಟಮಸ್ಕಿಟ್: ಎ ನ್ಯಾಷನಲ್ ವೈಲ್ಡ್ಲೈಫ್ ರೆಫ್ಯೂಜ್, ೧೯೪೭.
- ಪಾರ್ಕರ್ ನದಿ: ಎ ನ್ಯಾಷನಲ್ ವೈಲ್ಡ್ಲೈಫ್ ರೆಫ್ಯೂಜ್, ೧೯೪೭.
- ಬೇರ್ ರಿವರ್: ಎ ನ್ಯಾಷನಲ್ ವೈಲ್ಡ್ಲೈಫ್ ರೆಫ್ಯೂಜ್ , ೧೯೫೦.
- ಸೈಲೆಂಟ್ ಸ್ಪ್ರಿಂಗ್, ೧೯೬೨.
- ದಿ ಸೆನ್ಸ್ ಆಫ್ ವಂಡರ್,೧೯೬೫.
- ಲಾಸ್ಟ್ ವುಡ್ಸ್:ದಿ ಡಿಸ್ಕವರ್ಡ್ ರೈಟಿಂಗ್ ಆಫ್ ರಾಚೆಲ್ ಕಾರ್ಸನ್[೪]
ಮರಣೋತ್ತರ ಗೌರವ
ಬದಲಾಯಿಸಿ೧೯೮೦ರ ಜೂನ್ ೯ರಂದು ಕಾರ್ಸನ್ ಅವರಿಗೆ ಅಮೇರಿಕದ ಅತ್ಯುನ್ನತ ನಾಗರೀಕ ಗೌರವವಾದ ಅಧ್ಯಕ್ಷೀಯ ಪದಕವನ್ನು ನೀಡಲಾಯಿತು.[೫]
ನಿಧನ
ಬದಲಾಯಿಸಿರಾಚೆಲ್ ಲೂಯಿಸ್ ಕಾರ್ಸನ್ ಅವರು ಎಪ್ರಿಲ್ ೧೪, ೧೯೬೪ ರಂದು ನಿಧನರಾದರು.[೬]
ಉಲ್ಲೇಖ
ಬದಲಾಯಿಸಿ- ↑ https://www.sciencedaily.com/terms/rachel_carson.htm
- ↑ http://www.rachelcarson.org/
- ↑ "ಆರ್ಕೈವ್ ನಕಲು". Archived from the original on 2019-03-18. Retrieved 2019-03-15.
- ↑ https://www.thriftbooks.com/a/rachel-carson/197845/
- ↑ https://www.audubon.org/about/rachel-carson-award
- ↑ "ಆರ್ಕೈವ್ ನಕಲು". Archived from the original on 2019-03-07. Retrieved 2019-03-15.