ರಾವೂರಿ ಭರದ್ವಾಜ

ತೆಲುಗು ಬರಹಗಾರ
(ರವುರಿ ಭಾರದ್ವಾಜ ಇಂದ ಪುನರ್ನಿರ್ದೇಶಿತ)

ರಾವೂರಿ ಭರದ್ವಾಜ (೧೯೨೭ ರಲ್ಲಿ ಜನನ)ರು ತೆಲುಗು ಭಾಷೆಯ ಕಾದಂಬರಿಕಾರರು, ಸಣ್ಣ ಕಥೆಗಾರರು, ಕವಿ ಮತ್ತು ವಿಮರ್ಶಕರು. ೨೦೧೨ ರ ಜ್ಞಾನಪೀಠ ಪ್ರಶಸ್ತಿ ವಿಜೇತರು. ಅವರು ಸಣ್ಣ ಕಥೆಗಳ 37 ಸಂಗ್ರಹಗಳು, ಹದಿನೇಳು ಕಾದಂಬರಿಗಳು, ನಾಲ್ಕು ನಾಟಕಗಳು , ಮತ್ತು ಐದು ರೇಡಿಯೋ ನಾಟಕಗಳನ್ನ್ನು ಬರೆದಿದ್ದಾರೆ . ಅವರು ಮಕ್ಕಳ ಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ . ಚಲನಚಿತ್ರೋದ್ಯಮದಲ್ಲಿ ಪರದೆಯ ಹಿಂದಿನ ಜೀವನವನ್ನು ಚಿತ್ರಿಸಿರುವ 'ಪಾಕುಡು ರಾಳ್ಳು' ಅವರ ಮೇರುಕೃತಿ ಎಂದು ಪರಿಗಣಿಸಲಾಗಿದೆ. 'ಜೀವನಸಮರಂ' ಅವರ ಇನ್ನೊಂದು ಜನಪ್ರಿಯ ಕೃತಿ.

ಅವರ ಕೃತಿ 'ಪಾಕುಡು ರಾಳ್ಳು' ಗಾಗಿ ೨೦೧೨ ನೇ ಇಸವಿಯ ಜ್ಞಾನಪೀಠ ಪ್ರಶಸ್ತಿಯನ್ನು ೧೭ ಏಪ್ರಿಲ್ ೨೦೧೩ ರಂದು ಘೋಷಿಸಲಾಯಿತು.

ಶಿಕ್ಷಣಸಂಪಾದಿಸಿ

ಅವರದು ೭ ನೇ ತರಗತಿವರೆಗೆ ಮಾತ್ರ ಶಿಕ್ಷಣ. ಆದರೆ ಅವರ ಪುಸ್ತಕಗಳನ್ನು ಬಿಎ, ಎಂಎ ಕೋರ್ಸ್ ಗಳಿಗೆ ಪಠ್ಯಪುಸ್ತಕಗಳಾಗಿವೆ.ಅವರ ಕೃತಿಗಳನ್ನು ಕುರಿತಾದ ಸಂಶೋಧನೆಗಾಗಿ ಹಲವಾರು ಜನರು ಪಿಎಚ್ಡಿ ಪದವಿಗಳನ್ನು ಪಡೆದಿದ್ದಾರೆ. ನಡೆದಿವೆ. ಅವರಿಗೆ ಆಂಧ್ರ, ನಾಗಾರ್ಜುನ ಮತ್ತು ಜವಾಹರಲಾಲ್ ನೆಹರೂ ತಾಂತ್ರಿಕ ವಿಶ್ವವಿದ್ಯಾಲಯಗಳು ಗೌರವ ಡಾಕ್ಟರೇಟ್ ಕೊಟ್ಟಿವೆ.

ಅವರು ಜ್ಞಾನಪೀಠ ಪ್ರಶಸ್ತಿಯನ್ನು ಪಡೆದ ಮೂರನೆಯ ತೆಲುಗು ಲೇಖಕರಾಗಿದ್ದಾರೆ.

ಕೃತಿಗಳುಸಂಪಾದಿಸಿ

ಪಾಕುಡು ರಾಳ್ಳು

ಲೋಕಂ ಕೋಸಂ

ಜೀವನಸಮರಂ - ಕನ್ನಡಕ್ಕೆ ಅನುವಾದಗೊಂಡಿದೆ