ರವಿವರ್ಮ ನರಸಿಂಹ ಡೊಂಬ ಹೆಗ್ಗಡೆ

ರವಿವರ್ಮ ನರಸಿಂಹ ಡೊಂಬ ಹೆಗ್ಗಡೆ (ಮರಣ 1800) ಅವರು ವಿಟ್ಲ ಸಂಸ್ಥಾನದ ರಾಜರಾಗಿದ್ದರು. ಅವರು ಭಾರತದಲ್ಲಿ ಬ್ರಿಟಿಷರ ಆಳ್ವಿಕೆ ಇದ್ದ ಸಮಯದಲ್ಲಿ ಹಿಂದಿನ ಕೆನರಾ ಯುನೈಟೆಡ್ ಕಿಂಗ್‌ಡಂ ಜಿಲ್ಲೆ(ಈಗಿನ ದಕ್ಷಿಣ ಕನ್ನಡ ಜಿಲ್ಲೆ) ಯಲ್ಲಿ ಬ್ರಿಟಿಷ್ ವಸಾಹತುಶಾಹಿಗಳ ವಿರುದ್ಧ ಪ್ರತಿರೋಧವನ್ನು ವ್ಯಕ್ತಪಡಿಸಿದ್ದರು.

ಜೀವನ ಮತ್ತು ಮರಣ ಬದಲಾಯಿಸಿ

ರವಿವರ್ಮ ಅವರು ಬಂಟ ರಾಜವಂಶದ ಡೊಂಬ ಹೆಗ್ಗಡೆ [೧] ಎಂದು ಕರೆಯಲ್ಪಡುವ ರಾಜಮನೆತನದಲ್ಲಿ ಜನಿಸಿದರು ಮತ್ತು ಅವರು ವಿಟ್ಲ ಸಂಸ್ಥಾನವನ್ನು ಆಳಿದರು. ಈ ಸಂಸ್ಥಾನವು ಈಗಿನ ದಕ್ಷಿಣ ಕನ್ನಡ ಜಿಲ್ಲೆಯ ದಕ್ಷಿಣ ಭಾಗದ ತಾಲೂಕುಗಳನ್ನು ಒಳಗೊಂಡಿತ್ತು. ಬಂಟ ಸಮುದಾಯದ ಮಾತೃವಂಶದ ಉತ್ತರಾಧಿಕಾರತ್ವದ ಕಾನೂನಿನ ಪ್ರಕಾರದಂತೆ ರವಿವರ್ಮ ಅವರು ತನ್ನ ಸೋದರಮಾವ ಅಚ್ಯುತ ಡೊಂಬ ಹೆಗ್ಗಡೆಯ ನಂತರ ಸಿಂಹಾಸನವನ್ನು ಏರಿದರು . ಅವರು ಸಿಂಹಾಸನವನ್ನು ಬಹಳ ಪ್ರಕ್ಷುಬ್ಧ ಪರಿಸ್ಥಿತಿಯಲ್ಲಿ ಏರಬೇಕಾಾಯಿತು, ವಿಜಯದ ಕಾರ್ಯಾಚರಣೆಯಲ್ಲಿ ಸೆರೆಹಿಡಿಯಲ್ಪಟ್ಟ ರವಿವರ್ಮ ಹೆಗ್ಗಡೆಯವರ ಸೋದರಮಾವ ಅಚ್ಯತ ಹೆಗ್ಗಡೆಯವರು ಸೆರೆಹಿಡಿಯಲ್ಪಟ್ಟ ನಂತರ ಮೈಸೂರಿನ ಮುಸ್ಲಿಂ ದೊರೆ ಹೈದರ್ ಅಲಿಯಿಂದ ಅಚ್ಯುತ ಹೆಗ್ಗಡೆಯ ಶಿರಚ್ಛೇದವಾಗುತ್ತದೆ. ಅಂತಹ ಸಂಂದರ್ಭದಲ್ಲಿ ರವಿವರ್ಮರವರು ಸಿಂಹಾಸನವನ್ನು ಏರಬೇಕಾಯಿತು. ಹೈದರ್ ಅಲಿಯ ಕಾರ್ಯಾಚರಣೆಯ ಸಮಯದಲ್ಲಿ ರಾಜಮನೆತನದವರು ಇಂದಿನ ಕೇರಳದ ತಲಿಚೇರಿಗೆ ಹೋಗಿ ಜೀವ ಉಳಿಸಿಕೊಂಡರು.

ಕೆಲವು ವರ್ಷಗಳ ಅಜ್ಞಾತವಾಸದ ನಂತರ, ರವಿವರ್ಮ ತನ್ನ ರಾಜ್ಯವನ್ನು ಮರಳಿ ಪಡೆಯಲು ಮಿಲಿಟರಿ ಕಾರ್ಯಾಚರಣೆಯನ್ನು ನಡೆಸಿದರು ಮತ್ತು ಯಶಸ್ವಿಯಾದರು. ಅವರಿಗೆ ನೀಲೇಶ್ವರಂ ರಾಜ ಮತ್ತು ಬ್ರಿಟಿಷರು ಸಹಾಯ ಮಾಡಿದರು . ಆದರೆ ನಂತರ, ಬ್ರಿಟಿಷರು ಡೊಂಬ ಹೆಗ್ಗಡೆ ರಾಜವಂಶದ ಪ್ರಭಾವವನ್ನು ಕಡಿಮೆ ಮಾಡಲು ಪ್ರಯತ್ನಿಸಿದಾಗ, ರವಿವರ್ಮ ಅವರು ದಕ್ಷಿಣ ಕೆನರಾ(ದಕ್ಷಿಣ ಕನ್ನಡ) ಜಿಲ್ಲೆಯಲ್ಲಿ ತಮ್ಮ ಅಸ್ತಿತ್ವದ ವಿರುದ್ಧ ನೆರೆಯ ಕುಂಬಳ ರಾಜ ಮತ್ತು ನೀಲೇಶ್ವರಂ ರಾಜರೊಂದಿಗೆ ಬಹಿರಂಗವಾಗಿ ಬಂಡಾಯವೆದ್ದರು. ಮೂರು ಸಂಸ್ಥಾನಗಳು ಒಟ್ಟಿಗೆ ಸೇರಿ ಬ್ರಿಟಿಷರ ವಿರುದ್ಧ ಸಂಯೋಜಿತ ದಂಗೆಯನ್ನು ಮುನ್ನಡೆಸಿದವು ಆದರೆ ಯಶಸ್ವಿಯಾಗಲಿಲ್ಲ ಮತ್ತು ಮೂರೂ ಸಂಸ್ಥಾನಗಳು ಸೋತು ಹೋದವು. ತದನಂತರ 1800ರಲ್ಲಿ ಆಗಸ್ಟ್ 22 ರಂದು ದಕ್ಷಿಣ ಕೆನರಾ ಭೂ ಪ್ರದೇಶದ ಸಂಪೂರ್ಣ ನಿಯಂತ್ರಣವನ್ನು ಬ್ರಿಟಿಷರು ಪಡೆದ ನಂತರ ರವಿವರ್ಮ ಹೆಗ್ಗಡೆಯವರನ್ನು ಅವರ ಡೊಂಬ ಹೆಗ್ಗಡೆ ರಾಜವಂಶದ 9 ಸದಸ್ಯರ ಜೊತೆಗೆ ಗಲ್ಲಿಗೇರಿಸಲಾಯಿತು.

ಉಲ್ಲೇಖ ಬದಲಾಯಿಸಿ

  1. P. Gururaja Bhat, Studies in Tuluva history and culture: From the pre-historic times upto the modern (1975)