ಡೊಂಬ ಎಂಬುದು ಅಥವಾ ಡೊಮ್ ( ಸಂಸ್ಕೃತ ಡೊಮ್, ಆಡುಭಾಷೆಯಲ್ಲಿ ಡೊಂಬೊ, ಡೊಮ್ರಾ, ಡೊಮಾಕ, ಡೊಂಬರಿ ಮತ್ತು ರೂಪಾಂತರಗಳು) ಭಾರತದಾದ್ಯಂತ ಹರಡಿರುವ ಜನಾಂಗೀಯ ಗುಂಪು ಅಥವಾ ಗುಂಪುಗಳಾಗಿವೆ.

ಡೊಮ್ ಮನುಷ್ಯ-1860 - ಬಂಗಾಳ

ಡೊಂಬರು ಉತ್ತರ ಪ್ರದೇಶದ ಅಲೆಮಾರಿಗಳಾಗಿದ್ದು, ಬಂಗಾಳ, ಭಂಟು, ಬಾಝಿಗರ್, ಹಬುರ, ಕಂಜರ್ ಮತ್ತು ಸಂಸಿ ಸ್ಥಳಗಳ ಡೊಮ್ ಮೂಲದವರೆಂದು ಹೇಳಲಾಗುತ್ತದೆ. ಯಾವುದೇ ಅಲೆಮಾರಿಗಳನ್ನು ವಿವರಿಸಲು ಡೊಮ್ ಎಂಬ ಪದವನ್ನು ಸಾಮಾನ್ಯವಾಗಿ ಬಳಸಲಾಗುತ್ತದೆ, ಏಕೆಂದರೆ ಈ ಎಲ್ಲಾ ಗುಂಪುಗಳು ವಿಭಿನ್ನವಾಗಿವೆ ಮತ್ತು ಕಟ್ಟುನಿಟ್ಟಾಗಿ ತಮ್ಮ ತಮ್ಮ ಪಂಗಡಗಳ ಒಳಗೇ ವಿವಾಹ ಮಾಡಿಕೊಳ್ಳುವವರಾಗಿರುತ್ತಾರೆ. ಕೆಲವರು ತಮ್ಮದೇ ಆದ ಉಪಭಾಷೆ ಅಥವಾ ಆಡುಭಾಷೆಯನ್ನು ಮಾತನಾಡುತ್ತಾರೆ, ಆದರೆ ಇತರರು ಚಾಲ್ತಿಯಲ್ಲಿರುವ ಪ್ರಮುಖ ಭಾಷೆ ಮಾತನಾಡುತ್ತಾರೆ. [] 2011 ರ ಭಾರತದ ಜನಗಣತಿಯು ಉತ್ತರ ಪ್ರದೇಶದಲ್ಲಿ 110,353 ಜನಸಂಖ್ಯೆ ಇರುವ ಡೊಮ್ ಜನಾಂಗವನ್ನು ಪರಿಶಿಷ್ಟ ಜಾತಿ ಎಂದು ಪರಿಸಿದೆ. [] ಯುರೋಪ್‌ನ ರೋಮಾ ಜೊತೆಗೆ ಮಧ್ಯಪ್ರಾಚ್ಯದ ಡೊಮ್ ಅಥವಾ ಡೊಮಿ ಜನರು []  ಡೊಂಬ ಜನಾಂಗದ ವಂಶಸ್ಥರು ಎಂದು ನಂಬಲಾಗಿದೆ.

ಡಮರು ಎಂಬ ಮೂಲದಿಂದ ಡೊಂಬ ಪದ ಬಂದಿದೆ ಎಂದು ನಂಬಲಾಗಿದೆ. []

ಈ ಜನರನ್ನು ಬೆರಿಚೋ, ಡೊಮ್ ಅಥವಾ ಡೊಮಾ ಎಂದು ಕರೆಯಲಾಗುತ್ತದೆ. ಸಂಗೀತಗಾರಾಗಿರುವುದರಿಂದ ಅವರನ್ನು ಡೊಮ್ ಎಂದು ಗುರುತಿಸಲಾಯಿತು. ಡೋಮ್ ವಂಶಸ್ಥರು ವಿವಿಧ ಸ್ಥಳೀಯ ಆಡಳಿತಗಾರರಲ್ಲಿ ಸೇವೆಯನ್ನು ಸಲ್ಲಿಸುತ್ತಿದ್ದರು. ಹುಂಝ ಕಣಿವೆಯ ನಿಝಾರಿ ಇಸ್ಮಾಯಿಲಿ ಪಂಗಡಕ್ಕೆ ಡೋಮ್ ಸೇರಿದೆ. []

ಒಡಿಶಾದಲ್ಲಿ ಸುಮಾರು 706,000 ಡೊಮ್‌ಗಳಿದ್ದಾರೆ. []

ಹಿಂದೂಗಳ ಪವಿತ್ರ ನಗರವಾದ ಉತ್ತರ ಪ್ರದೇಶದ ವಾರಣಾಸಿಯಲ್ಲಿ, ಡೊಮ್ ಜನರು ಮೃತ ದೇಹಗಳ ದಹನದ ಪ್ರಮುಖ ಕಾರ್ಯವನ್ನು ನಿರ್ವಹಿಸುತ್ತಾರೆ.

ಉಲ್ಲೇಖಗಳು

ಬದಲಾಯಿಸಿ
  1. Nomads in India : proceedings of the National Seminar / edited by P.K. Misra, K.C. Malhotra
  2. "A-10 Individual Scheduled Caste Primary Census Abstract Data and its Appendix – Uttar Pradesh". Registrar General & Census Commissioner, India. Retrieved 6 February 2017.
  3. Matras, Yaron (1 June 1995). Romani in Contact. John Benjamins Publishing Company. p. 21. ISBN 978-9-02727-648-3.
  4. T. Burrow and M.B. Emeneau, A Dravidian Etymological Dictionary 2nd ed. (Oxford: Clarendon Press, 1984), p. 257, entry #2949.
  5. Disappearing peoples? : indigenous groups and ethnic minorities in South and Central Asia. Brower, Barbara Anne., Johnston, Barbara Rose. Walnut Creek, CA: Left Coast Press. 2007. ISBN 978-1-59874-726-3. OCLC 647914842.{{cite book}}: CS1 maint: others (link)
  6. "Census of India Website : Office of the Registrar General & Census Commissioner, India". censusindia.gov.in. Retrieved 2020-05-11.

 

"https://kn.wikipedia.org/w/index.php?title=ಡೊಂಬ&oldid=1088350" ಇಂದ ಪಡೆಯಲ್ಪಟ್ಟಿದೆ