ರಮೇಶ ಸ. ಚಿ.
ಸ.ಚಿ. ರಮೇಶ ಜಾನಪದ ಸಂಶೋಧಕರು. ಇವರು ೧೯೯೬ರಿಂದ ಕರ್ನಾಟಕದ ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲೂಕಿನ ಹಂಪಿಯ ಕನ್ನಡ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ ಸೇವೆ ನೀಡುತ್ತಿದ್ದಾರೆ.[೧] ಸಂಸ್ಕೃತಿಯ ಶೋಧನೆ, ಪ್ರಸಾರ ಹಾಗೂ ಸಂರಕ್ಷಣೆಗೆ ಕನ್ನಡ ವಿಶ್ವವಿದ್ಯಾಲಯದ ಹುಟ್ಟಿಕೊಂಡಿತು. ಪ್ರಸ್ತುತ ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಕುಲಪತಿ.[೨][೩] ಹಂಪಿ ವಿಶ್ವವಿದ್ಯಾನಿಲಯದ ಕುಲಸಚಿವರಾಗಿ (ಮೌಲ್ಯಮಾಪನ), ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲೂಕಿನ ಗೊಟಗೋಡಿಯ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದಲ್ಲಿ ೨೦೧೨ ರಿಂದ ೨೦೧೫ರವರೆಗೆ ಪ್ರಭಾರ ನಿರ್ದೇಶಕರಾಗಿ, ವಿಸ್ತರಣೆ ಹಾಗೂ ಸಲಹಾ ಕೇಂದ್ರದ ನಿರ್ದೇಶಕರಾಗಿ ಸೇವೆ ನೀಡಿರುತ್ತಾರೆ.[೪]
ಹುಟ್ಟು ಮತ್ತು ವಿದ್ಯಾರ್ಹತೆ
ಬದಲಾಯಿಸಿ೨೪.೦೨.೧೯೬೧ರಂದು ಜನಿಸಿದ ಇವರು ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಎಂ.ಎ, ಜಾನಪದ ಮತ್ತು ಭಾರತೀಯ ಸಾಹಿತ್ಯದ ಕುರಿತಂತೆ ಡಿಪ್ಲೊಮ ಪದವಿಯನ್ನು ಪಡೆದರು. ಕನ್ನಡ ವಿಶ್ವವಿದ್ಯಾಲಯ ಹಂಪಿಯಲ್ಲಿ ಜಾನಪದ ಎಂ.ಫಿಲ್, ಮತ್ತು ಜಾನಪದ ಪಿಎಚ್.ಡಿ. ಪದವಿಯನ್ನು ಪಡೆದರು. ಜಾಮಿಯ ಮಿಲಿಯ ವಿಶ್ವವಿದ್ಯಾಲಯ, ದೆಹಲಿಯಲ್ಲಿ ೧೯೯೬ರಲ್ಲಿ ಆಡಳಿತಕ್ಕೆ ಸಂಬಂಧಿಸಿ ಎಂ.ಡಿ.ಪಿ. ಮಾಡಿರುತ್ತಾರೆ.
ಆಸಕ್ತಿಯ ಕ್ಷೇತ್ರಗಳು
ಬದಲಾಯಿಸಿ- ಜಾನಪದ
- ಕನ್ನಡ ಸಾಹಿತ್ಯ
- ಸಂಸ್ಕೃತಿ ಚಿಂತನೆ
- ಪರಿಸರ ಚಿಂತನೆ
- ಪಾರಂಪರಿಕ ಕೃಷಿ
ಪ್ರಕಟಿತ ಪುಸ್ತಕ
ಬದಲಾಯಿಸಿ- ಡಾ. ಬೆಸಗರಹಳ್ಳಿ ರಾಮಣ್ಣ- ಜೀವನ ಚರಿತ್ರೆ, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ, ೧೯೯೬,
- ಸ್ಯಾಸಿ ಚಿನ್ನಮ್ಮ ಕಾವ್ಯ, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ, ೧೯೯೬
- ಬೇಟೆ : ಸಾಂಸ್ಕೃತಿಕ ಪದಕೋಶ, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ, ೨೦೦೧
- ಶಬ್ದಾಂಜಲಿ, ಹಾಮಾನ ಸಂಸ್ಮರಣ ಗ್ರಂಥ, ಅಂಶು ಪ್ರಕಾಶನ, ಸದಾಶಿವನಗರ, ಹೊಸಪೇಟೆ ೨೦೦೧
- ಶಿಕಾರಿ ಪರಂಪರೆ, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ, ೨೦೦೩
- ಮಾಟ–ಮಂತ್ರ–ಮೋಡಿ, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ, ೨೦೦೩
- ಜಾನಪದ ಕರ್ನಾಟಕ ಸಂಪುಟ ೩, ಸಂಚಿಕೆ ೧, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ, ೨೦೦೪
- ಜಾನಪದ ಕರ್ನಾಟಕ ಸಂಪುಟ ೩, ಸಂಚಿಕೆ ೨, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ, ೨೦೦೫
- ಜಾನಪದ ಕರ್ನಾಟಕ ಸಂಪುಟ ೪, ಸಂಚಿಕೆ ೧, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ, ೨೦೦೫
- ಬುನಾದಿ, ಜಾನಪದ ಅಧ್ಯಯನ ಲೇಖನಗಳು, ಅಂಶು ಪ್ರಕಾಶನ, ಸದಾಶಿವನಗರ, ಹೊಸಪೇಟೆ ೨೦೦೫
- ಕರಾವು, ಜಾನಪದ ಅಧ್ಯಯನ ಲೇಖನಗಳು, ಅಂಶು ಪ್ರಕಾಶನ, ಸದಾಶಿವನಗರ, ಹೊಸಪೇಟೆ ೨೦೦೫
- ಜಾನಪದ ಕರ್ನಾಟಕ ಸಂಪುಟ ೪, ಸಂಚಿಕೆ ೨, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ, ೨೦೦೫
- ನೀರು : ಒಂದು ಜಾನಪದ ನೋಟ, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ, ೨೦೦೫
- ಅಲೆಮಾರಿಗಳ ಸ್ಥಿತಿಗತಿ, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ, ೨೦೦೫
- ಮಾರ‍್ವಾಡಿ ಶೇಠ್, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ, ೨೦೧೦.
- ಕರ್ನಾಟಕದ ಜನಪದ ಆಚರಣೆಗಳು, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ, ೨೦೧೦.
- ದಕ್ಷಿಣ ಭಾರತೀಯ ಜಾನಪದ ಕೋಶ, ಸಂಪುಟ ೧- (ಸಂ), ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ, ೨೦೧೧.
- ದಕ್ಷಿಣ ಭಾರತೀಯ ಜಾನಪದ ಕೋಶ, ಸಂಪುಟ ೨- (ಸಂ), ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ, ೨೦೧೧.
- ಬಲೀಂದ್ರ, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ, ೨೦೧೧.
- ಕೃಷಿ : ಪಾರಂಪರಿಕ ಜ್ಞಾನ- (ಸಂ), ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ, ೨೦೧೧.
- ಜಾನಪದ ಸೆಲೆ- (ಸಂ), ಜಾನಪದ ಅಕಾಡೆಮಿ, ಬೆಂಗಳೂರು, ೨೦೧೧.
- ಜಾನಪದ ವಸ್ತುಕೋಶ (ಸಂ): ವಿಸ್ತರಣೆ ಹಾಗೂ ಸಲಹಾ ಕೇಂದ್ರ, ಕರ್ನಾಟಕ ಜಾನಪದ ವಿಶ್ವವಿದ್ಯಾಲಯ, ಗೊಟಗೋಡಿ ೨೦೧೩
- ದಕ್ಷಿಣ ಭಾರತೀಯ ದೇಶೀ ಕೃಷಿ ವಿಜ್ಞಾನ ಕೋಶ, ಸಂಪುಟ ೧, ವಿಸ್ತರಣೆ ಹಾಗೂ ಸಲಹಾ ಕೇಂದ್ರ, ಕರ್ನಾಟಕ ಜಾನಪದ, ಗೊಟಗೋಡಿ ೨೦೧೪
- ದಕ್ಷಿಣ ಭಾರತೀಯ ದೇಶೀ ಕೃಷಿ ವಿಜ್ಞಾನ ಕೋಶ, ಸಂಪುಟ ೨, ವಿಸ್ತರಣೆ ಹಾಗೂ ಸಲಹಾ ಕೇಂದ್ರ, ಕರ್ನಾಟಕ ಜಾನಪದ ವಿಶ್ವವಿದ್ಯಾಲಯ, ಗೊಟಗೋಡಿ ೨೦೧೫
- ಹಣತೆ (ಸಂ), (ಕನ್ನಡ ಆವೃತ್ತಿ) ತ್ರೈಮಾಸಿಕ ವಾರ್ತಾ ಪತ್ರಿಕೆ, ವಿಸ್ತರಣೆ ಹಾಗೂ ಸಲಹಾ ಕೇಂದ್ರ, ಕರ್ನಾಟಕ ಜಾನಪದ ವಿಶ್ವವಿದ್ಯಾಲಯ, ಗೊಟಗೋಡಿ
- ಹಣತೆ (ಸಂ), (ಇಂಗ್ಲಿಷ್ ಆವೃತ್ತಿ) ತ್ರೈಮಾಸಿಕ ವಾರ್ತಾ ಪತ್ರಿಕೆ, ವಿಸ್ತರಣೆ ಹಾಗೂ ಸಲಹಾ ಕೇಂದ್ರ, ಕರ್ನಾಟಕ ಜಾನಪದ ವಿಶ್ವವಿದ್ಯಾಲಯ, ಗೊಟಗೋಡಿ.
ಪ್ರಮುಖ ಪ್ರಕಟಿತ ಲೇಖನಗಳು
ಬದಲಾಯಿಸಿ- ಬಳ್ಳಾರಿ ದುರ್ಗಮ್ಮ, ಪ್ರಬುದ್ಧ ಕರ್ನಾಟಕ ೧೯೯೪
- ಪಟ್ಟಣದ ಎಲ್ಲಮ್ಮ, ಹಂಪಿ ಪರಂಪರೆ ೧೯೯೬, ದೀಪಾವಳಿ ಹಬ್ಬದ ಬಾಗಿನ, ಸಂಜೆವಾಣಿ ೧೯೯೭
- ಅಂಟಿಕೆ ಪಂಟಿಕೆ ಹಬ್ಬದ ಬಾಗಿನ, ಜಾನಪದ ವಿವಿಧ ಮುಖಗಳು ೨೦೦೦
- ಆರಾಧ್ಯ ದೈವಗಳು, ಚಿನ್ಮೂಲಾದ್ರಿ ಚೇತನ ೨೦೦೦
- ಕುಮಾರರಾಮ ಸ್ಥಿತ್ಯಂತರದ ಸಂಕೇತ, ಸ್ಮೃತಿ ಸಂಸ್ಕೃತಿ ೨೦೦೦
- ಜೇಡ : ಫಲ ಸಮೃದ್ಧಿ ಸಂಕೇತ, ಜಾನಪದ ಕರ್ನಾಟಕ ೨೦೦೧
- ಇಲಿಗಳ ನಿಯಂತ್ರಣ : ಪಾರಂಪರಿಕ ಜ್ಞಾನ, ಜಾನಪದ ಕರ್ನಾಟಕ ೨೦೦೨
- ಜ್ಯೋತಿ ಪದಗಳು, ಜಾನಪದ ಕರ್ನಾಟಕ ೨೦೦೨
- ತೀರ್ಥಹಳ್ಳಿ ಸ್ಥಳನಾಮ ಅಧ್ಯಯನ, ಪಿ.ಎನ್.ಎಸ್. ಇಂಡಿಯ ೨೦೦೨
- ನೀರಿನ ಬಳಕೆ : ಪಾರಂಪರಿಕ ಜ್ಞಾನ, ಫಾಸಿಲ್ ೨೦೦೨
- ಕೃಷಿ : ಆಧುನಿಕತೆ, ಜಾನಪದ ಅಧ್ಯಯನ ವಿಭಾಗ ೨೦೦೨
- ಜಾನಪದ ಪಿಹೆಚ್.ಡಿ ನಿಬಂಧಗಳು, ದಶಕದ ಕನ್ನಡ ಸಾಹಿತ್ಯ ೨೦೦೩
- ಕರಾವಳಿ ಪ್ರದೇಶದ ಮಾಟ-ಮಂತ್ರ-ಮೋಡಿ, ೨೦೦೩
- ವರಹ : ವಿಜಯನಗರ ಲಾಂಛನದ ಹೊಸ ಸಾಧ್ಯತೆಗಳು ವಿಜಯನಗರ ಅಧ್ಯಯನ ೨೦೦೩
- ಆಚರಣೆ : ದೇಸಿ ಜ್ಞಾನ ಪರಂಪರೆ, ಜಾನಪದ ಕರ್ನಾಟಕ ೨೦೦೪
- ಹಂಪಿ ಸ್ಮಾರಕಗಳಲ್ಲಿ ಜನಪದ ಸಂಗೀತ ಪರಿಕರಗಳು, ವಿಜಯನಗರ ಅಧ್ಯಯನ ೨೦೦೪
- ಡಾ. ಹಾಮಾನಾ, ತಲೆಮಾರು ೨೦೦೪
- ಪ್ರವಾಸಿ ತಾಣವಾಗಿ ಹಂಪಿ, ವಿಜಯನಗರ ಅಧ್ಯಯನ ೨೦೦೫
- ಕೊಡೇಕಲ್ಲು ಬಸವಣ್ಣ, ಜಾನಪದ ಕರ್ನಾಟಕ ೨೦೦೫
- ಸಂಸ್ಕೃತಿ ಗ್ರಾಮ, ಜಾನಪದ ಕರ್ನಾಟಕ ೨೦೦೫
- ಗಾದೆಗಳ ಗರ್ಭದೊಳಗೆ, ಜಾನಪದ ಕರ್ನಾಟಕ ೨೦೦೫
- ಆಧುನಿಕ ಕೃಷಿ : ವಿಷ ವರ್ತುಲದ ಜೇಡ, ಜಾನಪದ ಕರ್ನಾಟಕ ೨೦೦೫
- ಜಲ : ಪಾರಂಪರಿಕ ಜ್ಞಾನ, ದ್ರಾವಿಡ ಅಧ್ಯಯನ ೨೦೦೫
- ನಾಗಾರಾಧನೆ, ದಕ್ಷಿಣ ಭಾರತೀಯ ಜಾನಪದ ಕೋಶ, ೨೦೧೧
- ಬಲೀಂದ್ರ, ದಕ್ಷಿಣ ಭಾರತೀಯ ಜಾನಪದ ಕೋಶ, ೨೦೧೧
- ಕೃಷಿ ಬೆಳೆ ಸಂರಕ್ಷಣೆ, ಕೃಷಿ ಪಾರಂಪರಿಕ ಜ್ಞಾನ, ೨೦೧೧
- ಗೀಜಗ : ಜಾನಪದರು ಕಂಡಂತೆ, ಕರ್ನಾಟಕ ಜಾನಪದ, ೨೦೧೧
- ಬುರ್ರಕಥಾ ಈರಮ್ಮ, ಶಾಸ್ತ್ರೀಯ ಭಾಷೆ ಯೋಜನೆ, ಮಹಿಳಾ ವಿಶ್ವವಿದ್ಯಾಲಯ
ಉಲ್ಲೇಖ
ಬದಲಾಯಿಸಿ- ↑ "ಆರ್ಕೈವ್ ನಕಲು". Archived from the original on 2019-08-23. Retrieved 2019-09-01.
- ↑ http://vismayamadyama.com/ನೂತನ-ಕುಲಪತಿಯಾಗಿ-ಡಾ-ಸ-ಚಿ-ರಮ/
- ↑ https://vijaykarnataka.indiatimes.com/district/ballari/hampi-kannada-university-prof-ramesh-chancellor/articleshow/68100806.cms
- ↑ https://www.bookbrahma.com/author/sa-chi-ramesh