ರತ್ನಗಂಧಿ
Caesalpinia pulcherrima | |
---|---|
Caesalpinia pulcherrima f. rosea buds and flowers | |
Conservation status | |
Scientific classification | |
ಸಾಮ್ರಾಜ್ಯ: | Plantae |
ಏಕಮೂಲ ವರ್ಗ: | ಹೂಬಿಡುವ ಸಸ್ಯ |
ಏಕಮೂಲ ವರ್ಗ: | Eudicots |
ಏಕಮೂಲ ವರ್ಗ: | Rosids |
ಗಣ: | Fabales |
ಕುಟುಂಬ: | Fabaceae |
ಉಪಕುಟುಂಬ: | Caesalpinioideae |
ಕುಲ: | ಸಿಸಾಲ್‍ಪಿನಿಯಾ |
ಪ್ರಜಾತಿ: | C. pulcherrima
|
Binomial name | |
Caesalpinia pulcherrima | |
Synonyms[೨] | |
|
ರತ್ನಗಂಧಿ ಲೆಗ್ಯೂಮಿನೋಸೀ ಕುಟುಂಬದ ಸಿಸಾಲ್‌ಪಿನೇ ಉಪಕುಟುಂಬಕ್ಕೆ ಸೇರಿದ ಅಲಂಕಾರ ಸಸ್ಯ (ಪೀಕಾಕ್ ಕೋಂಬ್ ಫ್ಲವರ್). ಕೆಂಜಿಗೆಗಿಡ್ಡ ಪರ್ಯಾಯ ನಾಮ. ಸೀಸಾಲ್‌ಪಿನಿಯ ಪಲ್ಚರೈಮ ಇದರ ವೈಜ್ಞಾನಿಕ ಹೆಸರು. ಇದು ಅಮೇರಿಕಾ ಖಂಡಗಳ ಉಷ್ಣವಲಯ ಮತ್ತು ಉಪೋಷ್ಣವಲಯಗಳಿಗೆ ಸ್ಥಳೀಯವಾಗಿದೆ. ಇದು ವೆಸ್ಟ್ ಇಂಡೀಸ್‍ಗೆ ಸ್ಥಳೀಯವಾಗಿರಬಹುದು,[೩] ಆದರೆ ವ್ಯಾಪಕ ಬೇಸಾಯದ ಕಾರಣದಿಂದ ಇದರ ನಿಖರವಾದ ಮೂಲ ಗೊತ್ತಿಲ್ಲ. ಭಾರತವೂ ಸೇರಿದಂತೆ ಉಷ್ಣವಲಯದ ಹಲವಾರು ದೇಶಗಳಲ್ಲಿ ಇದನ್ನು ಕಾಣಬಹುದು.
ಗುಣಲಕ್ಷಣಗಳು
ಬದಲಾಯಿಸಿಇದು ಸುಮಾರು ೩.೭ ಮೀಟರ್ ಎತ್ತರ ಬೆಳೆಯುವ ಪೊದೆರೂಪದ ಮರ. ಎಲೆಗಳು ಸಂಯುಕ್ತ ಮಾದರಿಯವು; ಒಂದೊಂದು ಎಲೆಯಲ್ಲೂ ೮.೧೬ ಕಿರುಎಲೆಗಳಿರುವುವು. ಹೂಗಳು ರೆಂಬೆಗಳ ತುದಿಗಳಲ್ಲಿ ರೇಸಿಮೋಸ್ ಮಾದರಿಯ ಗೊಂಚಲುಗಳಲ್ಲಿ ಅರಳುವುವು. ದಳಗಳು ಕೆಂಪು ಇಲ್ಲವೆ ಹಳದಿ ಬಣ್ಣದವಾಗಿದ್ದು ಹೂಗಳ ಆಕರ್ಷಕ ಗುಣಕ್ಕೆ ಕಾರಣವಾಗಿದೆ.
ಕೃಷಿ
ಬದಲಾಯಿಸಿರತ್ನಗಂಧಿ ಗಿಡವನ್ನು ಬೀಜಗಳಿಂದ ವೃದ್ಧಿಸಬಹುದು.
ಉಪಯೋಗಗಳು
ಬದಲಾಯಿಸಿಕೇವಲ ಅಲಂಕಾರಕ್ಕಾಗಿ ಮಾತ್ರವಲ್ಲದೆ ಈ ಸಸ್ಯವನ್ನು ಔಷಧಿಗಾಗಿಯೂ ಬಳಸುವುದುಂಟು. ಸೊಪ್ಪಿನ ಕಷಾಯ ಗರ್ಭಸ್ರಾವಕಾರಕ. ಆಮಶಂಕೆ, ಚರ್ಮರೋಗ ಚಿಕಿತ್ಸೆಯಲ್ಲೂ ಕಷಾಯವನ್ನು ಉಪಯೋಗಿಸುವುದಿದೆ. ಹೂವಿನಲ್ಲಿ ಗ್ಯಾಲಿಕ್ ಆಮ್ಲ, ಟ್ಯಾನಿನ್ ಮುಂತಾದ ರಾಸಾಯನಿಕಗಳು ಸಮೃದ್ಧಿಯಾಗಿದೆ. ಹೂವಿನಿಂದ ಕೆಂಪು ಬಣ್ಣವನ್ನು ತಯಾರಿಸುವುದುಂಟು.
ಛಾಯಾಂಕಣ
ಬದಲಾಯಿಸಿ-
orange red variant flower
-
Buds opening
-
Yellow flowers
-
"Peacock" flower
-
Colors in petals
-
Flowers in Jharkhand, India
-
whole stack of Caesalpinia pulcherrima
ಉಲ್ಲೇಖಗಳು
ಬದಲಾಯಿಸಿ- ↑ Botanic Gardens Conservation International (BGCI); IUCN SSC Global Tree Specialist Group (2019). "Caesalpinia pulcherrima". IUCN Red List of Threatened Species. 2019: e.T130102665A148994097. doi:10.2305/IUCN.UK.2019-2.RLTS.T130102665A148994097.en. Retrieved 16 December 2022.
- ↑ "Caesalpinia pulcherrima". Germplasm Resources Information Network (GRIN). Agricultural Research Service (ARS), United States Department of Agriculture (USDA). Retrieved 2010-12-03.
- ↑ "Tropical Flower Guide". Archived from the original on 14 October 2012. Retrieved 30 November 2012.