ರಚಿತಾ ಮಿಸ್ಟ್ರಿ(ಹುಟ್ಟು ಹೆಸರು: ರಚಿತಾ ಪಾಂಡಾ) ಅವರು ೧೯೭೪ರ ಮಾರ್ಚ್ ೪ ರಂದು ಒಡಿಶಾದ ರೌರ್ಕೆಲಾದಲ್ಲಿ ಜನಿಸಿದರು. ಇವರು ಒಡಿಶಾದ ಮಾಜಿ ಓಟಗಾರ್ತಿಯಾಗಿದ್ದಾರೆ.[][]

ರಚಿತಾ ಮಿಸ್ಟ್ರಿ
ವೈಯುಕ್ತಿಕ ಮಾಹಿತಿ
ಹುಟ್ಟು ಹೆಸರುರಚಿತಾ ಪಾಂಡಾ
ರಾಷ್ರೀಯತೆಭಾರತೀಯ
ಜನನ (1974-03-04) ೪ ಮಾರ್ಚ್ ೧೯೭೪ (ವಯಸ್ಸು ೫೦)
ರೌರ್ಕೆಲಾ, ಒಡಿಶಾ, ಭಾರತ
ತೂಕ೫೫ ಕೆಜಿ
Sport
ದೇಶಭಾರತ
ಕ್ರೀಡೆಓಟ
ಸ್ಪರ್ಧೆಗಳು(ಗಳು)೧೦೦ ಮೀ, ೨೦೦ ಮೀ
ಕ್ಲಬ್ಭಾರತೀಯ ರೈಲ್ವೆ
ನಿವೃತ್ತಿಹೌದು
Achievements and titles
ವೈಯಕ್ತಿಕ ಪರಮಶ್ರೇಷ್ಠ೧೦೦ ಮೀ: ೧೧.೨೬ (ತಿರುವನಂತಪುರಂ ೨೦೦೦)
೨೦೦ಮೀ: ೨೩.೧೦
(ಚೆನ್ನೈ ೨೦೦೦)

ವೃತ್ತಿಜೀವನ

ಬದಲಾಯಿಸಿ

ಆಗಸ್ಟ್ ೧೨, ೨೦೦೦ ರಂದು ತಿರುವನಂತಪುರಂನಲ್ಲಿ ನಡೆದ ರಾಷ್ಟ್ರೀಯ ಸರ್ಕ್ಯೂಟ್ ಅಥ್ಲೆಟಿಕ್ ಮೀಟ್ನಲ್ಲಿ ಸ್ಥಾಪಿಸಲಾದ ೧೦೦ ಮೀಟರ್ ರಾಷ್ಟ್ರೀಯ ದಾಖಲೆಯನ್ನು ಅವರು ೧೩ ವರ್ಷಗಳ ಕಾಲ (೨೦೧೩ ರಲ್ಲಿ ಮೆರ್ಲಿನ್ ಕೆ. ಜೋಸೆಫ್ ಅವರು ಉತ್ತಮಗೊಳಿಸುವವರೆಗೆ) ಹೊಂದಿದ್ದರು.[][][] ಜುಲೈ ೫, ೨೦೦೧ ರಂದು ಬೆಂಗಳೂರಿನಲ್ಲಿ ನಡೆದ ೧೦೦ ಮೀಟರ್ ಓಟದಲ್ಲಿ ರಚಿತಾರವರು ೧೧.೨೬ ಸೆಕೆಂಡುಗಳಲ್ಲಿ ತಮ್ಮ ವೈಯಕ್ತಿಕ ಅತ್ಯುತ್ತಮ ಸಮಯವನ್ನು ನಿಗದಿಪಡಿಸಿದರು ಮತ್ತು ಈ ಪ್ರಕ್ರಿಯೆಯಲ್ಲಿ ಅವರು ಜಕಾರ್ತಾದಲ್ಲಿ ನಡೆದ ೧೯೮೫ರ ಏಷ್ಯನ್ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ನಲ್ಲಿ ಪಿ. ಟಿ. ಉಷಾರವರ ದೀರ್ಘಕಾಲದ ದಾಖಲೆಯಾದ ೧೧.೩೯ ಸೆಕೆಂಡುಗಳನ್ನು ಮುರಿದರು.[][] ಆದಾಗ್ಯೂ, ಕೆಲವು ವಿವಾದಗಳ ನಂತರ, ಭಾರತದ ಹವ್ಯಾಸಿ ಅಥ್ಲೆಟಿಕ್ ಒಕ್ಕೂಟವು (ಎಎಎಫ್ಐ) ಈ ಕೂಟದಲ್ಲಿ ಯಾವುದೇ ಡೋಪ್ ಪರೀಕ್ಷೆಗಳನ್ನು ನಡೆಸಲಾಗಿಲ್ಲ ಎಂಬ ಕಾರಣ ನೀಡಿ ರಾಷ್ಟ್ರೀಯ ದಾಖಲೆಯನ್ನು ಅನುಮೋದಿಸಲಿಲ್ಲ. [][][೧೦] ಆದಾಗ್ಯೂ, ೨೦೦೦ ರ ರಾಷ್ಟ್ರೀಯ ಸರ್ಕ್ಯೂಟ್ ಮೀಟ್‌ನಲ್ಲಿ ರಾಷ್ಟ್ರೀಯ ದಾಖಲೆಯನ್ನು ನಿರ್ಮಿಸಿದ ಕ್ರೀಡಾಪಟುಗಳ ಪ್ರದರ್ಶನಗಳನ್ನು ಅವರ ವೈಯಕ್ತಿಕ ಅತ್ಯುತ್ತಮ ಪ್ರದರ್ಶನಗಳಾಗಿ ನಿಲ್ಲಲು ಅವಕಾಶ ನೀಡಲಾಗುವುದು ಎಂದು ಎಎಐಎಫ್ ಸ್ಪಷ್ಟಪಡಿಸಿದೆ.[೧೦]

೧೯೯೮ರ ಏಷ್ಯನ್ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್‌ನಲ್ಲಿ ಪಿ. ಟಿ. ಉಷಾ, ಇ.ಬಿ.ಶೈಲಾ ಮತ್ತು ಸರಸ್ವತಿ ಸಹಾ ಅವರೊಂದಿಗೆ ೪*೧೦೦ ಮೀಟರ್ ರಿಲೇಯಲ್ಲಿ ಭಾರತವನ್ನು ಪ್ರತಿನಿಧಿಸಿದರು. ಅಲ್ಲಿ ಅವರ ತಂಡವು ಪ್ರಸ್ತುತ ೪೪.೪೩ ಸೆಕೆಂಡುಗಳ ರಾಷ್ಟ್ರೀಯ ದಾಖಲೆಯನ್ನು ಸ್ಥಾಪಿಸುವ ಹಾದಿಯಲ್ಲಿ ಚಿನ್ನದ ಪದಕವನ್ನು ಗೆದ್ದಿತು.[೧೧][೧೨] ನಂತರ ೨೦೦೦ ರಲ್ಲಿ ಸಿಡ್ನಿ ಒಲಿಂಪಿಕ್ಸ್ನಲ್ಲಿ ೪ x ೧೦೦ ಮೀಟರ್ ರಿಲೇಯಲ್ಲಿ ವಿ. ಜಯಲಕ್ಷ್ಮಿ, ವಿನೀತಾ ತ್ರಿಪಾಠಿ ಮತ್ತು ಸರಸ್ವತಿ ಸಹಾ ಅವರನ್ನೊಳಗೊಂಡ ತಂಡವು ಮೊದಲ ಸುತ್ತಿನಲ್ಲಿ ೪೫.೨೦ ಸೆಕೆಂಡುಗಳ ಸಮಯವನ್ನು ಸಾಧಿಸಿತು. ತಂಡವು ತಮ್ಮ ಹೀಟ್ಸ್ ನಲ್ಲಿ ಕೊನೆಯ ಸ್ಥಾನ ಪಡೆಯಿತು.[೧೩][೧೪]

ರಚಿತಾರವರು ೨೦೦ ಮೀಟರ್ ಓಟದಲ್ಲಿ ರಾಷ್ಟ್ರೀಯ ದಾಖಲೆ ನಿರ್ಮಿಸಿದ್ದಾರೆ. ಅವರು ಜುಲೈ ೩೧, ೨೦೦೦ ರಂದು ಚೆನ್ನೈನಲ್ಲಿ ನಡೆದ ೨೦೦ ಮೀಟರ್ ಓಟದಲ್ಲಿ ೨೩.೧೦ ಸೆಕೆಂಡುಗಳಲ್ಲಿ ಓಡುವ ಮೂಲಕ ದಾಖಲೆ ನಿರ್ಮಿಸಿದರು.[೧೫] ಈ ಮೂಲಕ ಪಿ. ಟಿ. ಉಷಾ ಅವರ ದಾಖಲೆಯನ್ನು ಮುರಿದರು. ರಚಿತಾ ಅವರ ೨೦೦ ಮೀಟರ್ ದಾಖಲೆಯನ್ನು ನಂತರ ಆಗಸ್ಟ್ ೨೦೦೨ ರಲ್ಲಿ ಸರಸ್ವತಿ ಸಹಾ ಬದಲಾಯಿಸಿದರು. ೧೯೯೮ ರಲ್ಲಿ, ಭಾರತೀಯ ಅಥ್ಲೆಟಿಕ್ಸ್‌ಗೆ ನೀಡಿದ ಕೊಡುಗೆಗಾಗಿ ಅವರಿಗೆ ಅರ್ಜುನ ಪ್ರಶಸ್ತಿ ನೀಡಲಾಯಿತು.[೧೬]

ಸಾಧನೆಗಳು

ಬದಲಾಯಿಸಿ
ವರ್ಷ ಪಂದ್ಯ ಸ್ಥಳ ಸ್ಥಾನ ಶರಾ
ಪ್ರತಿನಿಧಿ   ಭಾರತ
೧೯೯೮ ಏಷ್ಯನ್ ಚಾಂಪಿಯನ್ ಶಿಪ್ ಫುಕುವೊಕಾ, ಜಪಾನ್ ಪ್ರಥಮ ೪ x ೧೦೦ ಮೀ NR
೨೦೦೦ ಏಷ್ಯನ್ ಚಾಂಪಿಯನ್ ಶಿಪ್ ಜಕಾರ್ತ, ಇಂಡೋನೇಷ್ಯಾ ತೃತೀಯ ೧೦೦ ಮೀ.

ರಾಷ್ಟ್ರೀಯ ಪ್ರಶಸ್ತಿಗಳು

ಬದಲಾಯಿಸಿ
  • ಅಖಿಲ ಭಾರತ ಮುಕ್ತ ರಾಷ್ಟ್ರೀಯ ಚಾಂಪಿಯನ್ ಶಿಪ್
  • ಅಖಿಲ ಭಾರತ ಅಂತರ ರಾಜ್ಯ ಚಾಂಪಿಯನ್ಶಿಪ್
    • ೧೦೦ ಮೀ: ೧೯೯೮,೨೦೦೦
    • ೨೦೦ ಮೀ: ೨೦೦೦
  • ಭಾರತೀಯ ರಾಷ್ಟ್ರೀಯ ಕ್ರೀಡಾಕೂಟ
    • ೧೦೦ ಮೀ: ೧೯೯೭

ಉಲ್ಲೇಖಗಳು

ಬದಲಾಯಿಸಿ
  1. "Rachita Mistry". iaaf.org. Retrieved 28 January 2016.
  2. "Rachita Mistry". Orisports. Retrieved 3 March 2022.
  3. "Official Website of Athletics Federation of India: NATIONAL RECORDS as on 21.3.2009". Athletics Federation of INDIA. Archived from the original on 2009-08-05. Retrieved 2009-09-02.
  4. "Neelam heaves discus to a new National mark". The Hindu. 2000-08-13. Archived from the original on 2012-11-05. Retrieved 2009-10-02.
  5. "Merlin K Joseph 'betters' national mark". The Times of India. 9 September 2013. Retrieved 9 September 2013.
  6. "Shakti Singh betters Asian shot put record". International Association of Athletics Federations (IAAF). 2000-07-07. Archived from the original on 10 June 2012. Retrieved 2009-10-02.
  7. "Shakti Singh creates Asian record". The Hindu. 2000-07-06.
  8. "Not a bitter pill to swallow!". The Hindu. 2000-07-22. Archived from the original on 2012-11-05. Retrieved 2009-09-02.
  9. "Time to set the record straight". The Hindu. 2002-04-04. Archived from the original on 20 December 2008. Retrieved 2009-09-19.{{cite news}}: CS1 maint: unfit URL (link)
  10. ೧೦.೦ ೧೦.೧ "AAFI rejects four National records". The Hindu. 2002-08-05. Archived from the original on 21 March 2006. Retrieved 2009-09-19.{{cite news}}: CS1 maint: unfit URL (link)
  11. Vijaykumar, C.N.R (1998-12-15). "After the feast, the famine". www.rediff.com. Retrieved 2009-09-04.
  12. "National records" (PDF). ATHLETICS FEDERATION of INDIA. 2011-12-31. Retrieved 2013-08-17.[ಶಾಶ್ವತವಾಗಿ ಮಡಿದ ಕೊಂಡಿ][ಮಡಿದ ಕೊಂಡಿ]
  13. "Sydney2000 Results: Official Results - 4 X 100 METRES - Women - Round 1". IAAF. Archived from the original on 2009-09-16. Retrieved 2009-10-02.
  14. "Rachita Mistry - Biography and Olympics results". Sports Reference LLC. Archived from the original on 2020-04-18. Retrieved 2009-09-05.
  15. "Saraswati breaks 23-second barrier". The Hindu. 2002-08-29. Archived from the original on 2012-11-06. Retrieved 2009-09-03.
  16. "Arjuna Awardees". Ministry of Youth Affairs and Sports. Archived from the original on 2007-12-25. Retrieved 2009-09-05.
  17. "Indian Championships and Games". gbrathletics.com. Retrieved 2009-09-06.