ರಘು
ರಘು ಇಕ್ಷ್ವಾಕು ವಂಶದ ದೊರೆ. ವೀರತೆ, ಧರ್ಮನಿಷ್ಟೆಯಿಂದ ಹಿರಿಮೆ ಪಡೆದ ರಘುವು, ಶ್ರೀರಾಮನ ತಂದೆ ದಶರಥನ ಅಜ್ಜ.[೧]
ಕೀರ್ತಿ
ಬದಲಾಯಿಸಿಇಕ್ಷ್ವಾಕು ವಂಶದ ದಿಲೀಪ ರಾಜನಿಗೆ ಸುದಕ್ಷಿಣಾ ಎಂಬ ಪತ್ನಿಗೆ ರಘು ಜನಿಸಿದನು. ರಘು ಎಂದರೆ ಬಹಳ ವೇಗವಾಗಿ ಸಾಗುವವ ಎಂದು ಅರ್ಥ. ರಘುವು ವಹಳ ವೇಗವಾಗಿ ಯುದ್ಧರಥವನ್ನು ನಡೆಸುವ ಛಾತಿ ಉಳ್ಳವನು ಎಂದು ಪ್ರತೀತಿ. ರಘುವಿನ ಹೆಗ್ಗಳಿಕೆಯಿಂದ ಇಕ್ಷ್ವಾಕು ವಂಶವನ್ನು ರಘುವಂಶವೆಂದೇ ಕರೆಯಲಾಗುತ್ತದೆ. ವಿಷ್ಣು ಪುರಾಣ,ವಾಯು ಪುರಾಣ, ಲಿಂಗ ಪುರಾಣ ಇವು ಎಲ್ಲದರಲ್ಲೂ ರಘುವಿನ ಬಗ್ಗೆ ಉಲ್ಲೇಖ ಇವೆ.
ಹುಟ್ಟು
ಬದಲಾಯಿಸಿನಂದಿನಿಧೇನು ಹಸುವನ್ನು ಪೂಜಿಸಿದ ನಂತರ ಹುಟ್ಟಿದ ಮಗನೇ ರಘು. ರಘು ಎಂದರೆ ವೇಗವಾದುದು ಎಂದರ್ಥ. ವಿಷ್ಣುಪುರಾಣ, ಲಿಂಗಪುರಾಣಗಳು ದಿಲೀಪನ ಮಗ ದೀರ್ಘಬಾಹು ಎಂದೂ, ದೀರ್ಘಬಾಹುವಿನ ಮಗನು ರಘುವು ಎಂದು ಹೇಳುತ್ತವೆ. ಆದರೆ, ಹರಿವಂಶ, ಬ್ರಹ್ಮಪುರಾನ ಮತ್ತು ಶಿವಪುರಾಣಗಳು ದಿಲೀಪನ ಮಗನೇ ರಘುವೆಂದೂ, ದೀರ್ಘಬಾಹು ಎಂಬುದು ರಘುವಿನ ಬಿರುದು ಎಂದು ಹೇಳುತ್ತವೆ. ರಘುವಿನ ಮಗ ಅಜ. ಅಜನ ಮಗ ಒಮ್ಮೆಗೆ ಹತ್ತು ರಥಗಳನ್ನು ಚಲಿಸಬಲ್ಲ ದಶರಥ. ದಷರಥನ ಮಗನೇ ಭಗವಾನ್ ಶ್ರೀ ರಾಮಚಂದ್ರ.
ಆಡಳಿತ
ಬದಲಾಯಿಸಿರಘುವು ಸ್ವಯಂವರದಲ್ಲಿ ತನ್ನ ಪತ್ನಿಯನ್ನು ಗೆದ್ದು ತರುವಾಗ, ಸೋತ ಇತರ ರಾಜರುಗಳು ರಘುವಿನ ಮೇಲೆ ಯುದ್ಧ ಮಾಡುತ್ತಾರೆ. ಅವರ ಹಗೆತನವನ್ನೂ ಮತ್ತು ಮೋಸಗಳನ್ನು ಗೆದ್ದು ರಘು ತನ್ನ ಪತ್ನಿಯನ್ನು ಅಯೋಧ್ಯೆಗೆ ಕರೆತರುತ್ತಾನೆ. ಜಯೆಯನ್ನೂ, (ಯುದ್ಧದಲ್ಲಿ ವಿಜಯ) ಜಾಯೆಯನ್ನೂ (ಹೆಂಡತಿ) ಹೊತ್ತು ತಂದ ಮಗನಿಗೆ ಆನಂದದಿಂದ ದಿಲೀಪನು ಪಟ್ಟ ಕಟ್ಟುತ್ತಾನೆ. ರಘುವು ಬಹುಕಾಲ ಸತ್ಯ-ನ್ಯಾಯ-ಧರ್ಮ ಇವುಗಳನ್ನು ಎತ್ತಿಹಿಡಿಯುತ್ತಾ, ಅಯೋಧ್ಯೆಯಿಂದ ರಾಜ್ಯಭಾರ ಮಾಡುತ್ತಾನೆ.
ಯುದ್ಧದಲ್ಲಿ ಗೆಲುವು
ಬದಲಾಯಿಸಿರಘುವು ವಂಕ್ಷು, ಕಾಂಬೋಜ, ಪಾಮೀರರು, ಹೂಣರು, (ಬಿಳಿಯ ಹುನ್ ಜನಾಂಗ) ಮ್ಲೇಂಛರು ಮತ್ತು ಇತರ ಹೀನಕುಲಗಳನ್ನು ಸೋಲಿಸಿ ಅವರ ರಾಜ್ಯಗಳನ್ನು ಗೆದ್ದು ವಶ ಪಡಿಸಿ ಕೊಂಡನು ಎಂದು ಉಲ್ಲೇಖವಿದೆ.
ಕೀರ್ತಿ
ಬದಲಾಯಿಸಿಸತ್ಯವಂತ ದೊರೆ ದಿಲೀಪನಿಗೆ ಬಹುಕಾಲದ ತಪಸ್ಸಿನ ಬಳಿಕ ಜನಿಸಿದ ರಘುವು, ತನ್ನ ತಂದೆಗೆ ೧೦೦ ಅಶ್ವಮೇಧಯಾಗ ಮಾಡಿದ ಪುಣ್ಯ ಲಭಿಸಲು ಇಂದ್ರನೊಡನೆ ಹೋರಾಡಿ ಗೆಲ್ಲುತ್ತಾನೆ. ವಿಶ್ವಜಿತ್ ಎಂಬ ಬಹು ದೊಡ್ಡ ಯಾಗ ಮಾಡಿ, ತನ್ನ ಎಲ್ಲಾ ಸಂಪತ್ತನ್ನೂ ದಾನ ಮಾಡಿದ ಶ್ರೇಯ ರಘುವಿನದು.
ದಾನ ಮಾಡುವಿಕೆ
ಬದಲಾಯಿಸಿವಾರತಂತ ಋಷಿಯ ಶಿಷ್ಯನಾದ ಕೌತ್ಸ್ಯ ಎಂಬವನು ತನ್ನ ಶಿಷ್ಯವೃತ್ತಿಮುಗಿದ ನಂತರ ಗುರುವಿಗೆ ಏನು ಗುರುದಕ್ಷಿಣೆ ನೀಡಲಿ ಎಂದು ಕೇಳುವನು. ಅದಾಗ ವಾರತಂತರು ಹದಿನಾಲ್ಕು ಕೋಟಿ ವರಹ ನೀಡು ಎಂದು ಕೇಳುವರು. ದಾರಿ ಕಾಣದ ಕೌತ್ಸ್ಯ, ರಾಜ ರಘುವಿನ ಬಳಿ ಸಹಾಯ ಬೇಡುತ್ತಾನೆ. ತನ್ನ ಬೊಕ್ಕಸವನ್ನು ಬರಿದು ಮಾಡಿದರೂ, ವಾರತಂತ ಋಷಿಯ ಬೇಡಿಕೆಯನ್ನು ತೀರಿಸಲು ಆಗುವುದಿಲ್ಲ. ಅದಾಗ ಕುಬೇರನ ಖಜಾನೆಯನ್ನು ರಘುವು ಯುದ್ಧ ಮಾಡಿ ಗೆಲ್ಲುತ್ತಾನೆ. ಬೇಡಿ ಬಂದ ಯಾಚಕನ ಮನವಿಗಾಗಿ, ಅವನ ಗುರುದಕ್ಷಿಣೆಗಾಗಿ ಇಷ್ಟು ಶ್ರಮ ವಹಿಸಿದ ರಘುವನ್ನು ಕುಬೇರ ಮನದುಂಬಿ ಹಾರೈಸುತ್ತಾನೆ. ವಾರತಂತ ಋಷಿಯು ನಿನಗಿಂತಲೂ ಕೀರ್ತಿವಂತನಾದ ಮಗನು ನಿನಗೆ ಹುಟ್ಟಲಿ ಎಂದು ಹರಸುತ್ತಾನೆ. ಅದಾಗ ಜನಿಸಿದ ಮಗನೇ ಮಹಾ ಪರಾಕ್ರಮಶಾಲಿಯಾದ ಅಜ.
ಕವಿಕಾವ್ಯದಲ್ಲಿ ರಘು
ಬದಲಾಯಿಸಿಕಾಳಿದಾಸನ ರಘುವಂಶ ಕಾವ್ಯದಲ್ಲಿ ರಘುವೇ ನಾಯಕ. ಆ ಕಾವ್ಯದ ೧ ಭಾಗವಾದ ಅನುಷ್ಟುಪ್ ನಿಂದ ಕಡೆಯ ಭಾಗವಾದ ಹರಿಣಿಯ ವರೆಗಿನ ೨೧ ಭಾಗಗಳಲ್ಲಿ ರಘುವಿನ ಗುಣಗಾನವಿದೆ.
ಮಹಾವಿಷ್ಣು ಶ್ರೀರಾಮನ ರೂಪ ತಾಳಿದಾಗ, ರಘುವಿನ ವಂಶದವನಾದ್ದರಿಂದ ರಘುನಂದನ, ರಘುವರ, ರಘುವೀರ, ರಘುಕುಲ ನಾಯಕ ಎಂದು ಕರೆಸಿಕೊಳ್ಳುತ್ತಾನೆ.
೧೦ನೆ ಶತಮಾನದ ಕಾಶ್ಮೀರದ ಕವಿ ವಲ್ಲಭದೇವ,೧೪ ಶತಮಾನದ ಕವಿ ಮಲ್ಲಿನಾಥ ಇವರುಗಳು ಸಹ ರಘುವಿನ ಬಗ್ಗೆ ಗ್ರಂಥ ಬರೆದಿದ್ದಾರೆ.