ರಂಜನಿ ರಾಘವನ್ ಅವರು ೨೯ ನೇ ಮಾರ್ಚ್ ೧೯೯೪ ರಂದು ಬೆಂಗಳೂರಿನಲ್ಲಿ ಜನಿಸಿದರು. ಅವರು ರೂಪಾಂತರಾ ಅಮೇಚರ್ ಥಿಯೇಟರ್ ತಂಡದ ನಿರ್ದೇಶನದ ಮತ್ತು ನಿರ್ಮಾಣದ ಅನೇಕ ನಾಟಕಗಳಲ್ಲಿ ನಟಿಸಿದ ಒಬ್ಬ ದೂರದರ್ಶನ ಮತ್ತು ಸಿನಿಮಾ ನಟಿ."ಪುಟ್ಟಗೌರಿ ಮದುವೆ" ಎಂಬ ಹೆಸರಿನ ಕನ್ನಡ ಟವಿ ಧಾರವಾಹಿಯಲ್ಲಿ ಅವರು ಅಭಿನಯಸಿದ್ದಾರೆ.

ಆರಂಭಿಕ ಜೀವನಸಂಪಾದಿಸಿ

ರಂಜನಿ ಸಾಂಪ್ರದಾಯಿಕ ಕುಟುಂಬದಲ್ಲಿ ಜನಿಸಿದವರು.ಅವರು ಲಲಿತ ಕಲೆ ಮತ್ತು ಸಾಹಿತ್ಯದಲ್ಲಿ ಬಹಳ ಅಸಕ್ತಿ ಹೊಂದಿದ್ದರು.ಅವರು ಗುರು ವಿದ್ವಾನ್,ಚಿಂತಾಲ್ಪಲ್ಲಿ ಶ್ರೀನಿವಾಸ್ ಮತ್ತು ಆಶಾ ವಿಶ್ವನಾಥರಿಂದ ಎಂಟನೆಯ ವಯಸ್ಸಿನಲ್ಲಿ ಕರ್ನಾಟಿಕ್ ಸಂಗೀತವನ್ನು ಕಲಿಯಲು ಪ್ರಾರಂಭಿಸಿದರು. ಅವರು ವಿದ್ಯಾರ್ಥಿಯಾಗಿ, ಅನೇಕ ರಾಜ್ಯ ಮತ್ತು ಜಿಲ್ಲೆಯ ಮಟ್ಟದ ಹಾಡುಗಾರಿಕೆ ಮತ್ತು ಸಾಹಿತ್ಯಿಕ ಸ್ಪರ್ಧೆಗಳಲ್ಲಿ ಪಾಲ್ಗೊಂಡರು ಮತ್ತು ಬಹುಮಾನಗಳನ್ನು ಗೆದ್ದರು.[೧]

ಶಿಕ್ಷಣಸಂಪಾದಿಸಿ

ರಂಜನಿ ಶೇಷಾದ್ರಿಪುರಂ ಕಾಲೇಜಿನಲ್ಲಿ ತಮ್ಮ ಬಿ.ಕಾಂ ಪದವಿಯನ್ನು ಹಾಗೂ ಸರ್.ಎಮ್.ವಿ.ಐ.ಟಿ ಕಾಲೇಜಿನಲ್ಲಿ ಎಂ.ಬಿ.ಎ(ಎಚ್.ಆರ್ ಮತ್ತು ಮಾರ್ಕೆಟಿಂಗ್) ಮಾಡಿದ್ದಾರೆ.[೨]

ವೃತ್ತಿ ಜೀವನಸಂಪಾದಿಸಿ

ರಂಜನಿ ತಮ್ಮ ನಟನಾ ವೃತ್ತಿಯನ್ನು 'ಆಕಾಶದೀಪ'ಎಂಬ ಧಾರವಾಹಿಯ ಮೂಲಕ ಪ್ರಾರಂಭಿಸಿದರು.ನಂತರ 'ಕೆಳದಿ ಚೆನ್ನಮ್ಮ'ದಲ್ಲಿಯೂ ಅಭಿನಯಿಸಿದರು.'ಪುಟ್ಟಗೌರಿ ಮದುವೆ' ಎಂಬ ಧಾರವಾಹಿಯಿಂದ, ಸಣ್ಣ ಪರದೆಯಲ್ಲಿ ತಮ್ಮ ದೊಡ್ಡ ಖ್ಯಾತಿ ಮತ್ತು ಯಶಸ್ಸನ್ನು ಗಳಿಸಿದರು.ಅಲ್ಲಿ ಅವರು ಶೀರ್ಷಿಕೆ ಪಾತ್ರವಾದ ಗೌರಿ ಪಾತ್ರವನ್ನು ನಿರ್ವಹಿಸಿದ್ದಾರೆ.ನಂತರದಲ್ಲಿ ೨೦೧೭ ರಲ್ಲಿ ಜಡೇಶ್ ಕುಮಾರ್ ಹಂಪಿ ನಿರ್ದೇಶಿಸಿದ 'ರಾಜಹಂಸ'ಚಿತ್ರದಲ್ಲಿ ಅಭಿನಯಿಸಿದರು.ಟಕ್ಕರ್ ಅವರ ಎರಡನೆಯ ಚಿತ್ರ.ಇದಲ್ಲದೇ 'ಟ್ರೇನ್ ಟು ಪಾಕಿಸ್ತಾನ್','ಕರ್ವಾಲೋ','ರಾಮಧಾನ್ಯ','ಯಹೂದಿ ಹುಡುಗಿ'ಮುಂತಾದ ನಾಟಕಗಳಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದಾರೆ.[೩]

ಧಾರವಾಹಿಗಳುಸಂಪಾದಿಸಿ

೨೦೧೩ ರಲ್ಲಿ ಆಕಾಶದೀಪದಲ್ಲಿ ಅಮ್ರತ ಪಾತ್ರದಲ್ಲಿ, ೨೦೧೪ ರಲ್ಲಿ ಕೆಳದಿ ಚೆನ್ನಮ್ಮದಲ್ಲಿ ನಾಗವೇಣಿ ಪಾತ್ರದಲ್ಲಿ ಹಾಗೂ ನಂತರದಲ್ಲಿ ಪುಟ್ಟಗೌರಿ ಮದುವೆಯಲ್ಲಿ ಗೌರಿ ಪಾತ್ರದಲ್ಲಿ ಅಭಿನಯಿಸಿದ್ದಾರೆ.[೪]ರಂಜನಿಯವರು ಪೌರ್ಣಮಿ ತಿಂಕಲ್ ಎಂಬ ಮಲಯಾಳಂ ಧಾರವಾಹಿಯಲ್ಲಿ ಪೌರ್ಣಮಿ ಎಂಬ ಪಾತ್ರದಲ್ಲಿ ಅಭಿನಯಿಸಿದ್ದಾರೆ.[೫]೨೦೧೯ ರಲ್ಲಿ ಇಷ್ಟದೇವತೆ ಧಾರವಾಹಿಯ ಸಹ ನಿರ್ಮಾಪಕಿಯಾಗಿಯೂ ಕಾರ್ಯನಿರ್ವಹಿಸಿದ್ದಾರೆ.ಪ್ರಸ್ತುತ ಅವರು ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿರುವ 'ಕನ್ನಡತಿ' ಎಂಬ ಹೊಸ ಧಾರವಾಹಿಯಲ್ಲಿ ಭುವನೇಶ್ವರಿ ಎಂಬ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಪ್ರಶಸ್ತಿಗಳು ಮತ್ತು ಗೌರವಗಳುಸಂಪಾದಿಸಿ

೨೦೧೫,೨೦೧೬,೨೦೧೭ ರಲ್ಲಿ ಕಲರ್ಸ್ ಕನ್ನಡ ಅನುಬಂಧ ಅವಾರ್ಡ್ಸ್ ನ ಮನೆ ಮೆಚ್ಚಿದ ಸೊಸೆ, ೨೦೧೬ ರಲ್ಲಿ ಕಲರ್ಸ್ ಕನ್ನಡ ಅನುಬಂಧ ಅವಾರ್ಡ್ಸ್ ನ ಜನ ಮೆಚ್ಚಿದ ನಾಯಕಿ, ೨೦೧೭ ರಲ್ಲಿ ಮಿಸ್ ಸೂಪರ್ ಮಾದರಿ ಬೆಂಗಳೂರು, ೨೦೧೭ ರಲ್ಲಿ ರಾಜಹಂಸ ಚಿತ್ರಕ್ಕೆ ಭರವಸೆಯ ನಾಯಕಿಯ ಹೆಗ್ಗಳಿಕೆ ಕೂಡ ಇವರಿಗಿದೆ.[೬]

ಉಲ್ಲೇಖಗಳುಸಂಪಾದಿಸಿ

  1. https://timesofindia.indiatimes.com/topic/Ranjani-Raghavan
  2. https://in.linkedin.com/in/ranjani-raghavan-b2a33b82
  3. https://in.bookmyshow.com/person/ranjani-raghavan/1074827
  4. http://www.celebwikipro.com/2017/11/ranjani-raghavan-biography-movies-list-age-date-of-birth-height.html
  5. https://timesofindia.indiatimes.com/tv/news/malayalam/pournamithinkal-a-new-serial/articleshow/69098319.cms
  6. https://kannada.filmibeat.com/tv/actress-ranjani-raghavan-exits-from-puttagowri-maduve-seria-033817.html