ಯುವರಾಜ ಕಾಲೇಜು ಮೈಸೂರು

ಯುವರಾಜ ಕಾಲೇಜಿನ ಸ್ಥಾಪಕರು

ಬದಲಾಯಿಸಿ

ಮೈಸೂರು ಒಡೆಯರ ಆಳ್ವಿಕೆಯಕಾಲದಲ್ಲಿ ಹಳೆಯ ಮೈಸೂರು ಸಂಸ್ಥಾನದಲ್ಲಿ ಇಡೀ ಮೈಸೂರಿಗೆ ಕೇವಲ ನಾಲ್ಕು ಕಾಲೇಜುಗಳು ಮಾತ್ರ ಇದ್ದುವು. ಅದನ್ನು ಮನಗಂಡ ಅಂದಿನ ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿಗಳಾಗಿದ್ದ ಸರ್.ಕೆ.ಬ್ರಜೇಂದ್ರನಾಥ್ ಸೀಲ್ ಅವರು ದಿನಾಂಕ:೦೮-೦೮-೧೯೨೭ರಲ್ಲಿ, ಆಗಿನ ಇಂಟರ್ ಮೀಡಿಯೆಟ್ ಕಾಲೇಜಿನ ಸಂಸ್ತಾಪಕರಾಗಲು ಶ್ರೀಯುತ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರನ್ನು ಒಪ್ಪಿಸಿ, ಯುವರಾಜ ಕಾಲೇಜಿನ ಶಂಕುಸ್ಥಾಪನೆಗೆ ಕಾರಣಕರ್ತರಾದರು. ಜೂನ್ ೨೪,೧೯೨೮ರಲ್ಲಿ ಯುವರಾಜ ಕಾಲೇಜು "ಇಂಟರ್ ಮೀಡಿಯೆಟ್" ಕಾಲೇಜಾಗಿ ರೂಪುಗೊಂಡಿತು. ಸ್ವಾತಂತ್ರ ನಂತರ ಅಂದರೆ ೧೯೪೭-೪೮ನೇ ಸಾಲಿನಲ್ಲಿ ಇದನ್ನು ಪ್ರಥಮದರ್ಜೆ ಕಾಲೇಜೆಂದು ಘೋಷಿಸಲಾಯಿತು.[] []

ಕಾಲೇಜಿನ ಹಿನ್ನೆಲೆ

ಬದಲಾಯಿಸಿ

ಹಳೆಯ ಮೈಸೂರು ಸಂಸ್ಥಾನದ ಕಡೆಯ ಒಡೆಯರೆಂಬ ಖ್ಯಾತಿಗೆ ಭಾಜನರಾಗಿದ್ದ ಶ್ರೀ ಜಯಚಾಮರಾಜೇಂದ್ರ ಒಡೆಯರ್ ಅವರು ಯುವರಾಜರಾಗಿದ್ದಾಗ ತಮ್ಮ ಇಂಟರ್ ಮೀಡಿಯೆಟ್ ಶಿಕ್ಷಣವನ್ನು ಸುಮಾರು ೧೯೩೪-೩೬ರ ಅವಧಿಯಲ್ಲಿ ಈ ಕಾಲೇಜಿನಲ್ಲಿ ಮುಗಿಸಿದರು. ಅವರು ಇಲ್ಲಿ ಓದಿದ ಸ್ಮರಣಾರ್ಥ ೧೯೫೪ರಲ್ಲಿ ಯುವರಾಜ ಕಾಲೇಜಿನ ಬೆಳ್ಳಿಹಬ್ಬದ ರಜತಮಹೋತ್ಸವ ಆಚರಣೆಯನ್ನು ಅವರು ಮಹಾರಾಜರಾದ ಮೇಲೆ ಉದ್ಘಾಟಿಸಿದರು. ಅಂದಿನಿಂದ ಈ ಕಾಲೇಜಿಗೆ "ಯುವರಾಜ ಕಾಲೇಜು" ಎಂದು ಹೆಸರಿಡಲಾಯಿತು. ಮೈಸೂರು ವಿಶ್ವವಿದ್ಯಾನಿಲಯದ ಅಂಗ ಸಂಸ್ಥೆಗಳಲ್ಲಿ ಒಂದೆನಿಸಿರುವ ಯುವರಾಜ ಕಾಲೇಜು ೨೦೦೫-೦೬ನೇ ಸಾಲಿನಲ್ಲಿ ಸ್ವಾಯತ್ತತೆ ಗಳಿಸಿದ ಮೈಸೂರು ವಿಶ್ವವಿದ್ಯಾನಿಲಯದ ಏಕೈಕ ಕಾಲೇಜು ಎಂಬ ಅಭಿದಾನಕ್ಕೆ ಪಾತ್ರವಾಗಿದೆ. ಹನ್ನೊಂದನೆಯ ಪಂಚವಾರ್ಷಿಕುಯೋಜನೆಯ ಅಂಗವಾಗಿ ಯುವರಾಜ ಕಾಲೇಜಿಗೆ 'ಉತ್ಕೃಷ್ಟತಾ ಸಾಮರ್ಥ್ಯವಿರುವ ವಿದ್ಯಾಲಯ' ಎಂಬ ಉನ್ನತ ಸ್ತಾನ-ಮಾನ ದೊರಕಿದೆ. ಈ ಹೆಗ್ಗಳಿಕೆ ಪಡೆದ ಅಖಂಡ ಭಾರತದ ೧೪೯ ಕಾಲೇಜುಗಳಲ್ಲಿ ಯುವರಾಜ ಕಾಲೇಜು ಪ್ರಮುಖವಾದುದಾಗಿದೆ.

ಶೈಕ್ಷಣಿಕ ಸಾಧನೆ

ಬದಲಾಯಿಸಿ

ಯುವರಾಜ ಕಾಲೇಜಿನಲ್ಲಿ ವೈವಿಧ್ಯಮಯ ವಿಜ್ಞಾನ ವಿಷಯಗಳಿವೆ. ಏಕೆಂದರೆ ಇಲ್ಲಿ ಬಹುಮುಖ್ಯವಾಗಿ ವಿಜ್ಞಾನದ ವಿಷಯಗಳನ್ನು ಬೋದಿಸಲಾಗುತ್ತದೆ. ವಿಜ್ಞಾನದ ವಿಶಿಷ್ಟಶಾಖೆಗಳಾದ ಮೂಲವಿಜ್ಞಾನಗಳೊಂದಿಗೆ ಬಿಎಸ್ಸಿ, ಬಿಬಿಎ, ಬಿಸಿಎ ವಿಷಯಗಳನ್ನು ಬೋಧಿಸಲಾಗುತ್ತದೆ. ಅವುಗಳೆಂದರೆ-

  • ಬಿಎಸ್ಸಿ
  • ವಿದ್ಯುನ್ಮಾನ,
  • ಅಣುಜೀವಶಾಸ್ತ್ರ
  • ಸೂಕ್ಷ್ಮಜೀವಾಣುಶಾಸ್ತ್ರ,
  • ರೇಷ್ಮೇಕೃಷಿ,
  • ರೇಷ್ಮೇವಿಜ್ಞಾನ,
  • ಜೀವರಸಾಯನಶಾಸ್ತ್ರ,
  • ಜೈವಿಕ ತಂತ್ರಜ್ಞಾನ,
  • ಪರಿಸರ ವಿಜ್ಞಾನ,
  • ಸಂಖ್ಯಾಶಾಸ್ತ್ರ,
  • ಆಹಾರವಿಜ್ಞಾನ ಮತ್ತು ಪೋಷಣೆ,
  • ರಸಾಯನಶಾಸ್ತ್ರ,
  • ಭೌತಶಾಸ್ತ್ರ,
  • ಸಸ್ಯಶಾಸ್ತ್ರ,
  • ಗಣಿತಶಾಸ್ತ್ರ,
  • ಪ್ರಾಣಿಶಾಸ್ತ್ರ
  • ಭೂಗರ್ಭಶಾಸ್ತ್ರ
  • ಅರ್ಥಶಾಸ್ತ್ರ
  • ಬಿ.ಸಿ.ಎ
  • ಅನ್ವಯಿಕ ಗಣಕ ವಿಜ್ಞಾನ,
  • ಬಿ.ಬಿ.ಎ
  • ವ್ಯವಹಾರ ವಿರ್ವಹಣಾಶಾಸ್ತ್ರ

ಮುಂತಾದ ೨೭ ವಿಷಯಗಳನ್ನು ಪದವಿ ಮಟ್ಟದಲ್ಲಿ ಅಭ್ಯಸಿಸುವ ವಿಫುಲ ಅವಕಾಶಗಳಿವೆ. ೨೦೦೭ರಿಂದ ಬಿ.ಬಿ.ಎ ಮತ್ತು ೨೦೧೧ ನೇ ಸಾಲಿನಿಂದ ಬಿ.ಸಿ.ಎ ಪದವಿಗಳನ್ನು ಆರಂಭಿಸಲಾಗಿದೆ. ಯುವರಾಜ ಕಾಲೇಜಿನಲ್ಲಿ ಸುಮಾರು ೨೦೦೦ಕ್ಕೂ ಅಧಿಕ ವಿದ್ಯಾರ್ಥಿಗಳು ಉತ್ತಮ ಗುಣಮಟ್ಟದ ಶಿಕ್ಷಣವನ್ನು ಪಡೆಯುತ್ತಿದ್ದಾರೆ. ಇಲ್ಲಿನ ವಿದ್ಯಾರ್ಥಿಗಳು ಪದವಿ ಪರೀಕ್ಷೆಯಲ್ಲಿ ಉನ್ನತ ರ್ಯಾಂಕುಗಳಲ್ಲಿ ಸಿಂಹಪಾಲನ್ನು ಪಡೆಯುತ್ತಿದ್ದಾರೆ. ಇವಲ್ಲದೆ ತಮಿಳು. ತೆಲುಗು, ಫ್ರೆಂಚ್, ಪರ್ಷಿಯನ್ ಮುಂತಾದ ಭಾಷೆಗಳನ್ನು ಕಲಿಯಲು ಇಚ್ಛಿಸುವ ವಿದ್ಯಾರ್ಥಿಗಳು ಆ ಭಾಷೆಗಳನ್ನು ತಾವೇ ಸ್ವಂತಕ್ಕೆ ಓದಿ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಲಿಖಿತ ಪರೀಕ್ಷೆ ಬರೆಯಬಹುದು. []

  • ಇತ್ತೀಚೆಗೆ ಯುವರಾಜ ಕಾಲೇಜಿನಲ್ಲಿ ಕೆಲವು ಪಠ್ಯವಿಷಯಗಳಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆಯಬಹುದಾಗಿದೆ. ಅವುಗಳೆಂದರೆ-

ಎಂ.ಸಿ.ಎ

  • ಅನ್ವಯಿಕ ಗಣಕ ವಿಜ್ಞಾನ,

ಎಂ.ಎಸ್ಸಿ

  • ರಸಾಯನಶಾಸ್ತ್ರ,
  • ಸಸ್ಯಶಾಸ್ತ್ರ
  • ರೇಷ್ಮೇವಿಜ್ಞಾನ,
  • ಜೈವಿಕ ತಂತ್ರಜ್ಞಾನ,

ಎಂ.ಎ

  • ಇಂಗ್ಲೀಷ್

ಕಾಲೇಜಿನ ವಿಶೇಷತೆಗಳು

ಬದಲಾಯಿಸಿ
  • ೧.ಜ್ಞಾನವಾಹಿನಿ - ಪಠ್ಯೇತರ ಚಟುವಟಿಕೆಗಳ ವೇದಿಕೆ
  • ೨.ವಿದ್ಯಾರ್ಥಿನಿಲಯಗಳ ಸೌಲಭ್ಯಗಳು
  • ೩.ಉಪಹಾರ ಮಂದಿರ
  • ೪.ಗ್ರಂಥಾಲಯ ಮತ್ತು ವಾಚನಾಲಯ
  • ೫.ಉಚಿತ ಆರೋಗ್ಯ ಕೇಂದ್ರ
  • ೬.ಸಹಕಾರ ಸಂಘ
  • ೭.ಕ್ರೀಡಾ ವ್ಯವಸ್ಥೆ
  • ೮.ರಾಷ್ಟ್ರೀಯ ಯುವಸೇವಾದಳ [ಎನ್.ಸಿ.ಸಿ]
  • ೯.ರಾಷ್ಟ್ರೀಯ ಸೇವಾ ಯೋಜನೆ [ಎನ್,ಎಸ್.ಎಸ್]
  • ೧೦.ಮಧ್ಯ್ನಾನದ ಉಚಿತ ಲಘು ಉಪಹಾರ
  • ೧೧.ವಿದ್ಯಾರ್ಥಿ ವೇತನಗಳು
  • ೧೨.ಕಾಲೇಜಿನ ಶಿಸ್ತಿಗೆ ಸಂಬಂಧಿಸಿರುವ ನಿಯಮಗಳು
  • ೧೩.ಕಡ್ಡಾಯ ಹಾಜರಾತಿಯ ನಿಯಮಗಳು
  • ೧೪.ಶುಲ್ಕವಿವರಣೆ
  • ೧೫.ಲೈಂಗಿಕ ದೌರ್ಜನ್ಯ/ಮಾನವ ಹಕ್ಕುಗಳ ಉಲ್ಲಂಘನೆ/ರ್ಯಾಗಿಂಗ್ ಘಟನೆಗಳಿಗೆ ಸಂಬಂಧಿಸಿದಂತೆ ಆಡಳಿತಾತ್ಮಕ ಕ್ರಮಗಳು

ವಿವಿಧ ಸಮಿತಿಗಳು

ಬದಲಾಯಿಸಿ

ಕಾಲೇಜಿನ ಆಡಳಿತದ ಹಿತದೃಷ್ಠಿಯಿಂದ ಕಾಲೇಜಿನಲ್ಲಿ ಹಲವಾರು ಸಮಿತಿಗಳನ್ನು ಮಾಡಿಕೊಂಡು ಆ ಸಮಿತಿಗಳ ನೆರವು,ಸಹಕಾರದಿಂದ ಆಡಳಿತ ಕೆಲಸವನ್ನು ಸುಗಮ ಮಾಡಿಕೊಳ್ಳಲಾಗುತ್ತದೆ. ಅವುಗಳಲ್ಲಿ ಮುಖ್ಯವಾದುವುಗಳೆಂದರೆ-

  • ೧.ಪ್ರವೇಶಾತಿ
  • ೨.ಯೋಜನೆ
  • ೩.ಶೈಕ್ಷಣಿಕ
  • ೪.ಶಿಸ್ತುಪಾಲನೆ
  • ೫.ವಿದ್ಯಾರ್ಥಿ ಕ್ಷೇಮಪಾಲನೆ
  • ೬.ಪಠ್ಯೇತರ ಚಟುವಟಿಕೆ
  • ೭.ಕ್ರೀಡೆ
  • ೮.ವಾರ್ಷಿಕ ಸಂಚಿಕೆ
  • ೯.ಸ್ಥಾನಿಕಘಟಕ
  • ೧೦.ವಾಚನಾಲಯ
  • ೧೧.ಪರಿಸರ
  • ೧೨.ನ್ಯಾಕ್ ಸಮಿತಿ
  • ೧೩.ವೇಳಾಪಟ್ಟಿ
  • ೧೪.ಖರೀದಿ
  • ೧೫.ಮೂಲಭೂತ ಸೌಕರ್ಯ ಅಭಿವೃದ್ಧಿ
  • ೧೬.ಹಾಜರಾತಿ
  • ೧೭.ಕಾಲೇಜು ಆಡಳಿತ ಮಂಡಳಿ
  • ೧೮.ಪರಿಶೀಲನೆ
  • ೧೯.ವಿಜ್ಞಾನವೇದಿಕೆ - ಮೊದಲಾದುವು.

ವಿವಿಧ ದತ್ತಿಗಳು ಮತ್ತು ನಗದು ಬಹುಮಾನ

ಬದಲಾಯಿಸಿ

ಯುವರಾಜ ಕಾಲೇಜಿನಲ್ಲಿ ಈಗಾಗಾಲೇ ಓದಿದ ಮಹನೀಯರು, ಉದ್ಯೋಗಿಗಳಾಗಿ ನಿವೃತ್ತರಾದವರು ತಮ್ಮ ಹೆಸರು ಅಥವಾ ತಮ್ಮ ತಂದೆ-ತಾಯಿ, ಅತ್ತೆ-ಮಾವ, ತಮಗೆ ಪ್ರಿಯವಾದವರ ಹೆಸರು ತಾವು ಓದಿದ ಕಾಲೇಜಿನಲ್ಲಿ ಉಳಿದಿರಲೆಂಬ ಆಶಯದಿಂದ ಹಲವಾರು ದತ್ತಿಗಳನ್ನು ನಗದು ಬಹುಮಾನವನ್ನು ಬ್ಯಾಂಕಿನಲ್ಲಿ ಠೇವಣಿ ಮಾಡಿರುತ್ತಾರೆ. ಠೇವಣಿ ಮಾಡಿದ ಹಣದಲ್ಲಿನ ವಾರ್ಷಿಕ ಬಡ್ಡಿಯನ್ನು ಅವರು ಈಗಾಗಲೇ ನೀಡಿರುವ ಹೆಸರಿನಲ್ಲಿ ದತ್ತಿ, ನಗದು ಬಹುಮಾನ ನೀಡುವುದು ವಾಡಿಕೆ. ಅವುಗಳೆಂದರೆ-

  • ೧.ಪ್ರೊ.ಎಚ್.ಎನ್.ಚಾಮಯ್ಯ
  • ೨.ಪ್ರೊ.ರಮಾನಂದಶೆಟ್ಟಿ
  • ೩.ಪ್ರೊ.ಗಾಯತ್ರಿ
  • ೪.ದಿ.ಕಾನಡ್ಕ ಗಂಗಮ್ಮ ಅಣ್ಣಮ್ಮಯ್ಯ
  • ೫.ದಿ.ಪ್ರೊ.ಎಲ್.ಎನ್.ಚಕ್ರವರ್ತಿ
  • ೬.ದಿ.ಶ್ರೀ ಕರಿಯಪ್ಪ ಜಿ.ಐಲಾಪುರ
  • ೭.ಶ್ರೀಮತಿ ನೀಲಮ್ಮ ಕರಿಯಪ್ಪ ಜಿ.ಐಲಾಪುರ ಯಲಕಪ್ಪನಹಟ್ಟಿ
  • ೮.ಪ್ರೊ.ಬಿ.ಎಸ್.ವಿಜಯಲಕ್ಷ್ಮೀ
  • ೯.ಪ್ರೊ.ಟಿ.ಎನ್.ನಾಗರಾಜಶೆಟ್ಟಿ
  • ೧೦.ಪ್ರೊ.ಎನ್.ಮುನಿಯಪ್ಪ
  • ೧೧.ಅಂಬಾಲೆ ವೆಂಕಟರಾಮ್
  • ೧೨.ಶ್ರೀ ಎಸ್.ಎಲ್.ಎನ.ರಾವ್

ಸಾಂಸ್ಕೃತಿಕ ವೇದಿಕೆ

ಬದಲಾಯಿಸಿ

ಯುವರಾಜ ಕಾಲೇಜಿನ ಸಾಂಸ್ಕೃತಿಕ ವೇದಿಕೆಯ ಹೆಸರು ಜ್ಞಾನವಾಹಿನಿ. ಇದು ವಿದ್ಯಾರ್ಥಿಗಳಲ್ಲಿನ ಪಠ್ಯೇತರ ಚಟುವಟಿಕೆಗಳನ್ನು ಅನಾವರಣಗೊಳಿಸುವಂತಹುದು. ವರ್ಷಕ್ಕೊಮ್ಮೆ ವಿದ್ಯಾರ್ಥಿಗಳಲ್ಲಿ ಹುದುಗಿರುವ ಪ್ರತಿಭೆಗಳನ್ನು ಹೊರತೆಗೆಯಲು ಈ ವೇದಿಕೆಯ ವತಿಯಿಂದ 'ಪ್ರತಿಭಾ ಶೋಧ' ಎಂಬ ಶೀರ್ಷಿಕೆಯಡಿಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಇದರಲ್ಲಿ ಹಲವಾರು ಸ್ಪರ್ಧೆಗಳನ್ನು ಇಡಲಾಗುತ್ತದೆ. ಅವುಗಳೆಂದರೆ-

  • ೧.ಕನ್ನಡ-ಇಂಗ್ಲಿಷ್ ಪ್ರಬಂಧಸ್ಪರ್ಧೆ
  • ೨.ಕನ್ನಡ-ಇಂಗ್ಲಿಷ್ ಚರ್ಚಾಸ್ಪರ್ಧೆ
  • ೩.ರಸಪ್ರಶ್ನೆ
  • ೪.ರಂಗೋಲಿ ಸ್ಪರ್ಧೆ
  • ೫.ರೇಖಾಚಿತ್ರ ಮತ್ತು ಪೆನ್ಸಿಲ್ ಸ್ಕೆಚ್
  • ೬.ಚಿತ್ರಕಲಾ ಸ್ಪರ್ಧೆ
  • ೭.ಕೋಲಾಜ್
  • ೮.ಜಾಹೀರಾತು
  • ೯.ಕ್ಲೇ ಮಾಡೆಲಿಂಗ್
  • ೧೦.ವ್ಯಂಗ್ಯಚಿತ್ರ ಸ್ಪರ್ಧೆ
  • ೧೧.ಭಾವಗೀತೆ ಸ್ಪರ್ಧೆ
  • ೧೨.ಭಕ್ತಿಗೀತೆ ಸ್ಪರ್ಧೆ
  • ೧೩.ಜನಪದಗೀತೆ ಸ್ಪರ್ಧೆ
  • ೧೪.ಚಲನಚಿತ್ರಗೀತೆ ಸ್ಪರ್ಧೆ
  • ೧೫.ಮಿಮಿಕ್ರಿ
  • ೧೬.ಏಕಪಾತ್ರಾಭಿನಯ
  • ೧೭.ಶಾಸ್ತ್ರೀಯ ಸಂಗೀತಸ್ಪರ್ಧೆ
  • ೧೮.ಸಮೂಹಗೀತೆ ಸ್ಪರ್ಧೆ
  • ೧೯.ಪಾಶ್ಚ್ಯಾತ್ಯ ನೃತ್ಯಸ್ಪರ್ಧೆ
  • ೨೦.ಮೂಕಾಭಿನಯ
  • ೨೧.ಪ್ರಹಸನ
  • ೨೨.ಮಿಶ್ರಹಾಡಿನ ನೃತ್ಯಸ್ಪರ್ಧೆ
  • ೨೩.ಜನಪದ ನೃತ್ಯಸ್ಪರ್ಧೆ
  • ೨೪.ಮೈಮ್
  • ೨೫.ಸಮೂಹ ನೃತ್ಯಸ್ಪರ್ಧೆ-ಮುಂತಾದುವು.[]

ಲಾಂಛನದ ವೈಶಿಷ್ಟ್ಯ

ಬದಲಾಯಿಸಿ

ಯುವರಾಜ ಕಾಲೇಜಿಗೆ ತನ್ನದೇ ಆದ ಪ್ರತ್ಯೇಕ ಸುಂದರ ಲಾಂಛನವಿದೆ. ಈ ಲಾಂಛನವು ನಮ್ಮ ದೇಶದ ರಾಷ್ಟ್ರಧ್ವಜ ಮತ್ತು ಮೈಸೂರು ವಿಶ್ವವಿದ್ಯಾನಿಲಯದ ಲಾಂಛನದಲ್ಲಿರುವ ಒಂದೊಂದು ಸೂಕ್ಷ್ಮ ಪ್ರಮುಖ ಅಂಶಗಳನ್ನು ತನ್ನ ಲಾಂಛನದೊಳಗೆ ಉಳಿಸಿಕೊಂಡು ಅರ್ಥವಂತಿಕೆಯಲ್ಲಿ ತನ್ನದೇ ಆದ ವಿಶಿಷ್ಟ್ಯತೆಯನ್ನು ಮೆರೆದಿದೆ. ಈ ಲಾಂಛನದ ಧ್ಯೇಯವಾಕ್ಯ "ಸತ್ಯ ಧರ್ಮ ಪ್ರತಿಷ್ಠಿತಃ" ಎಂಬ ಸಂಸ್ಕೃತ ಪದದ ಸಾಲು. ಅಂದರೆ ಸತ್ಯ ಧರ್ಮದಲ್ಲೂ; ಧರ್ಮ ಸತ್ಯದಲ್ಲೂ ಮಿಳಿತಗೊಂಡಿರ ಬೇಕೆಂಬ ಆಶಯವನ್ನು ಹೊಂದಿರುವಂತಹುದು. ಲಾಂಛನದ ನಡುವೆ ಬೆಳಗುತ್ತಿರುವ ನಂದಾದೀಪ ಪರಿಪೂರ್ಣ ಜ್ಞಾನಜ್ಯೋತಿಯಂತೆ ಪ್ರಜ್ವಲಿಸುತ್ತಿದೆ. ಆಶೋಕ ಚಕ್ರವು ಕೇಂದ್ರಸ್ಥಾನದಲ್ಲಿದ್ದು, ೨೪ ಅರವನ್ನು ಹೊಂದಿದೆ. ಅಧ್ಯಾಪಕರು-ವಿದ್ಯಾರ್ಥಿಗಳು ದಿನದ ಇಪ್ಪತ್ನಾಲ್ಕು ತಾಸುಗಳು ಜಾಗೃತವಾಗಿದ್ದು ತಮ್ಮ ತಮ್ಮ ಕೆಲಸದಲ್ಲಿ ಕಾರ್ಯತತ್ಪರರಾಗಿದ್ದುಕೊಂಡು, ಕರ್ತವ್ಯ ನಿರ್ವಹಿಸ ಬೇಕೆಂಬುದನ್ನು, ಸರ್ವ ಧರ್ಮ ಸಮನ್ವಯತೆಯನ್ನು ಸಾರುವಂತಿದೆ.

ಪರಾಮರ್ಶನ ಕೃತಿ

ಬದಲಾಯಿಸಿ
  • ಯುವಚಿಂತನ ವಾರ್ಷಿಕ ಸಂಚಿಕೆ-೨೦೧೨-೧೩ನೇ ಸಾಲು
  • ಮಾಹಿತಿ ಪುಸ್ತಕ - ೨೦೧೪-೧೫ನೇ ಸಾಲು

ಉಲ್ಲೇಖ

ಬದಲಾಯಿಸಿ

ಬಾಹ್ಯಕೊಂಡಿಗಳು

ಬದಲಾಯಿಸಿ
  1. "ಆರ್ಕೈವ್ ನಕಲು". Archived from the original on 2014-09-26. Retrieved 2015-06-11.
  2. http://mapyourinfo.com/wiki/kn.wikipedia.org/%E0%B2%AF%E0%B3%81%E0%B2%B5%E0%B2%B0%E0%B2%BE%E0%B2%9C%20%E0%B2%95%E0%B2%BE%E0%B2%B2%E0%B3%87%E0%B2%9C%E0%B3%81%20%E0%B2%AE%E0%B3%88%E0%B2%B8%E0%B3%82%E0%B2%B0%E0%B3%81/[ಶಾಶ್ವತವಾಗಿ ಮಡಿದ ಕೊಂಡಿ]
  3. "ಆರ್ಕೈವ್ ನಕಲು". Archived from the original on 2015-03-23. Retrieved 2015-06-11.
  4. http://vijaykarnataka.indiatimes.com/district/mysuru/-/articleshow/46372756.cms