ಮ್ಯಾನ್ ಬೂಕರ್ ಪ್ರಶಸ್ತಿ ವಿಜೇತ, ಯಾನ್ ಮಾರ್ಟೆಲ್,'(ಜ.ಜೂನ್, ೨೫,೧೯೬೩), ಕೆನಡಾವಾಸಿ, 'ಲೈಫ್ ಆಫ್ ಪೈ' ಕಾದಂಬರಿಯ ಕರ್ತೃ. ಅವರ ತಾಯಿ ನುಡಿ ಫ್ರೆಂಚ್ ಆದರೂ, ಇಂಗ್ಲೀಷ್ ಭಾಷೆಯಲ್ಲೂ ಅಷ್ಟೇ ಸರಾಗವಾಗಿ ಬರೆಯಬಲ್ಲರು. ಫ್ರೆಂಚ್ ಭಾಷೆ ಸಹಜವಾಗಿಯೇ ಅವರ ಹೃದಯಕ್ಕೆ ಹತ್ತಿರವಾದದ್ದು. ಆದರೆ ಇಂಗ್ಲೀಷ್ ನಲ್ಲೂ ಸಾಹಿತ್ಯ ಕೃಷಿ ಮಾಡುತ್ತಿದ್ದಾರೆ. ಹಲವು ಸೂಕ್ಷ್ಮಾತಿಸೂಕ್ಷ್ಮ ವಿಶಯಗಳನ್ನೂ ಸಮರ್ಥವಾಗಿ ವಿವರಿಸಿ ಹೇಳುವ ಶಕ್ತಿ ಪಡೆದಿದ್ದಾರೆ.

ಯಾನ್ ಮಾರ್ಟೆಲ್
Martel giving a presentation at Amazon.com, October 25, 2007
ಜನನ (1963-06-25) ಜೂನ್ ೨೫, ೧೯೬೩ (ವಯಸ್ಸು ೬೧)
Salamanca, Spain
ವೃತ್ತಿNovelist
ರಾಷ್ಟ್ರೀಯತೆCanadian
ಅಭ್ಯಾಸ ಮಾಡಿದ ವಿದ್ಯಾ ಸಂಸ್ಥೆTrent University
ಕಾಲ1993-present
ಪ್ರಮುಖ ಕೆಲಸ(ಗಳು)Life of Pi

ಜನನ ಮತ್ತು ಸಾಹಿತ್ಯ ಕೃಷಿ

ಬದಲಾಯಿಸಿ

ತಂದೆ,ನಿಕೊಲ್ ಪೆರಾನ್ ಮತ್ತು ಎಮಿಲಿ ಮಾರ್ಟೆಲ್ ದಂಪತಿಗಳ ಮಗನಾಗಿ ಸನ್.೧೯೬೩ ರಲ್ಲಿ ಸ್ಪೇನ್ ದೇಶದ 'ಸಲಮೆಂಕ' ಎಂಬ ಊರಿನಲ್ಲಿ ಜನಿಸಿದರು. ಮಾರ್ಟೆಲ್ ಜನಿಸಿದ ಸಮಯದಲ್ಲಿ ಫ್ರೆಂಚ್-ಕೆನೆಡಿಯನ್ ಆಗಿ ಕೆನಡಾದಲ್ಲಿ ವಾಸಿಸುತ್ತಿದ್ದರು. ಕೆನಡ ಸರಕಾರದಲ್ಲಿ ಅವರು 'ಡಿಪ್ಲೊಮೇಟ್' ಆಗಿ ತಮ್ಮ ವೃತ್ತಿಜೀವನ ಆರಂಭಿಸಿದರು. ಮುಂದೆ ತಂದೆಯವರಿಗೆ ವರ್ಗಾವಣೆಯಾದಾಗ, ಕೋಸ್ಟರಿಕ, ಫ್ರಾನ್ಸ್, ಮಿಕ್ಸಿಕೋ, ಮತ್ತು ಕೆನಡಾದಲ್ಲಿ ವಾಸ್ತವ್ಯಮಾಡಬೇಕಾಗಿ ಬಂತು. ಆಂಟೇರಿಯೊ ರಾಜ್ಯದ 'ಪೋರ್ಟ್ ಹಾಪ್' ಎಂಬಲ್ಲಿ' ಟ್ರಿನಿಟಿ ಕಾಲೇಜ್ ಸ್ಕೂಲ್ ನಲ್ಲಿ ಹೈಸ್ಕೂಲ್ ವಿದ್ಯಾಭ್ಯಾಸ ಮಾಡಬೇಕಾಯಿತು. ಮುಂದೆ ಇರಾನ್, ಟರ್ಕಿ, ಮತ್ತು ಇಂಡಿಯದಲ್ಲಿಯೂ ಬಂದಿದ್ದನು. ಆಂಟೇರಿಯೊ ರಾಜ್ಯದ ಪೀಟರ್ ಬಾರೋ ನ ಟ್ರೆಂಟ್ ವಿಶ್ವವಿದ್ಯಾಲಯದಲ್ಲಿ ತತ್ವಶಾಸ್ತ್ರವನ್ನು ಅಭ್ಯಾಸಮಾಡಿದನು. ವಿಶ್ವವಿದ್ಯಾಲಯದಿಂದ ಟ್ರೀ ಪ್ಲಾಂಟರ್, ಡಿಶ್ ವಾಷರ್, ಮತ್ತು ಸೆಕ್ಯುರಿಟಿ ಗಾರ್ಡ್, ಆಗಿ ದುಡಿದರು. ಸುಮಾರು ೨೭ ನೆಯ ವಯಸ್ಸಿನಿಂದ ಅವರು, ಬರೆಯಲು ಆರಂಭಿಸಿದರು. ಮಾರ್ಟೆಲ್ ಸುಮಾರು ೧೩ ತಿಂಗಳು ಭಾರತದಲ್ಲಿ ಕಳೆದರು. ಅಲ್ಲಿ ಮಸೀದಿಗಳು, ಚರ್ಚುಗಳು, ಮತ್ತು ದೇವಾಲಯಗಳನ್ನು ಪ್ರಾಣಿ ಸಂಗ್ರಹಾಲಯಗಳನ್ನು ಹೋಗಿ ಕಂಡು, ೨ ವರ್ಷ ಶಾಸ್ತ್ರಗಳನ್ನು ಅಭ್ಯಾಸಮಾಡಿ, ದೇವಿ-ದೇವತೆಗಳ ಕಥೆಗಳನ್ನು ಓದಿ ತಿಳಿದುಕೊಂಡರು. ಇಂದಿನ ದಿನಗಳಲ್ಲಿ ಅವರು ಕೆನಡಾದ 'ಸಸ್ಕಟೂನ್' ನಲ್ಲ್ಲಿ ವಾಸವಾಗಿದ್ದಾರೆ. ಅವರು ಬರೆದ ಕಥೆಯ ಪುಸ್ತಕ, 'ಸೆವೆನ್ ಸ್ಟೋರೀಸ್' ೧೯೯೩ ರಲ್ಲಿ ಪ್ರಕಟವಾಯಿತು. ಕೆನಡಾದ ಮಾಂಟ್ರಿಯಾಲ್ ನಲ್ಲಿ ವಾಸ್ತವ್ಯ. ಯೋಗ, ಬರವಣಿಗೆ ಮತ್ತು 'ಕೇರ್ ಯುನಿಟ್' ನಲ್ಲಿ ಹೋಗಿ ಸೇವೆ ಮಾಡುತ್ತಾರೆ.

ಪುಸ್ತಕಗಳು

ಬದಲಾಯಿಸಿ
  • ಸನ್. ೧೯೯೩ ರಲ್ಲಿ ಮೊಟ್ಟ ಮೊದಲ ಪುಸ್ತಕ ಪ್ರಕಟವಾಯಿತು. a collection of short stories titled The Facts Behind the Helsinki Roccamatios,
  • ಕಾಯಿಲೆ,
  • ಕಥೆ ಹೇಳುವಿಕೆ,
  • ೨೦ನೆಯ ಶತಮಾನದ ಯುದ್ಧದ ಇತಿಹಾಸ.
  • ಸಂಗೀತ,
  • ಎಳೆ ವಯಸ್ಸಿನಲ್ಲೇ ಹೇಗೆ ಸಾಯುತ್ತೇವೆ,
  • ವ್ಯಥೆ-ಪ್ರಾಪಂಚಿಕ ಸುಖಗಳನ್ನು ಕಳೆದುಕೊಂಡಾಗಿನ ಮಾನಸಿಕ ಸ್ಥಿತಿ.
  • Self, was published in 1996.

ಈ ಕಾದಂಬರಿಯ ಬಗ್ಗೆ 'ದ ಮಾಂಟ್ರಿಯಲ್ ಗೆಝೆಟ್' ಬರೆಯುತ್ತಾ, superb psychological acute observation on love, attraction and belonging', ಎಂದು ಹೊಗಳಿದ್ದಾರೆ.

  • ಸನ್. ೨೦೦೨ ರಲ್ಲಿ ತಮ್ಮ ೨ ನೆಯ ಕಾದಂಬರಿ,'ಲೈಫ್ ಆಫ್ ಪೈ'ಗೆ, 'ಮ್ಯಾನ್ ಬೂಕರ್ ಪ್ರಶಸ್ತಿ'ಗಳಿಸಿದರು. ಸುಮಾರು ೪೦ ದೇಶಗಳಲ್ಲಿ, ೩೦ ಭಾಷೆಗಳಲ್ಲಿ ಈ ಕಾದಂಬರಿ, ಪ್ರಕಟಿಸಲ್ಪಟ್ಟಿದೆ.
  • We Ate the Children Last (2004)
  • Beatrice and Virgil (2010).

ಪ್ರಶಸ್ತಿ ಸನ್ಮಾನಗಳು

ಬದಲಾಯಿಸಿ
  • Booker Prize 2002 (Life of Pi)
  • Hugh MacLennan Prize for Fiction 2001 (Life of Pi)
  • Shortlisted for the 2001 Governor General's Literary Award for Fiction (Life of Pi)
  • Shortlisted for Chapters/Books in Canada First Novel Award (Self)
  • the Journey Prize (Facts Behind the Helsinki Roccamatios)
  • ಈ ಬರವಣಿಗೆ (ಆಂಗ್ಲಭಾಷಾ) ೦೭/೧೯/೨೦೧೧ ರಲ್ಲಿ ಪರಿಷ್ಕರಿಸಲ್ಪಟ್ಟಿತು.

ಉಲ್ಲೇಖಗಳು

ಬದಲಾಯಿಸಿ
  1. Sielke, Sabine (2003). "The Empathetic Imagination - An Interview with Yann Martel" (PDF). Canadian Literature. University of British Columbia Press (177). Retrieved 2011-02-03.
  2. "Exclusive Interview - Life of Yann Martel". AbeBooks. Archived from the original on 2020-09-18. Retrieved 2011-02-03.
  3. Sandall, Simon (January 10, 2009). "Yann Martel author of Life of Pi". readersvoice.com. Retrieved 2011-02-03.