'ಆಸ್ಕರ್ ಪ್ರಶಸ್ತಿವಿಜೇತ'ರ ಸಾಲಿನಲ್ಲಿ 'ಟೈವಾನ್ ದೇಶದ ಚಲನಚಿತ್ರ ನಿರ್ದೇಶಕ','ಆಂಗ್ ಲೀ,' ಎದ್ದು ನಿಲ್ಲುವ, ಕಣ್ಣು ಕುಕ್ಕುವ ಪ್ರತಿಭೆಯಾಗಿ ಗೋಚರಿಸಿದ್ದಾರೆ. ಇದಲ್ಲದೆ ಅವರ ಜೊತೆ ಭಾರತೀಯ ತಂತ್ರಜ್ಞರೂ ಕೈಜೋಡಿಸಿ ಕೆಲಸಮಾಡಿ, ಚಲನಚಿತ್ರದ ಯಶಸ್ಸಿಗೆ ಕಾರಣಕರ್ತರಾಗಿದ್ದಾರೆ. ಆಂಗ್ ಲೀ'ರವರು, ಕೆಲವು ಕನ್ನಡ ಭಾಷೆಯ ಮತ್ತು ಭಾರತೀಯ ತಂತ್ರಜ್ಞರ ಪ್ರತಿಭೆಗಳಿಗೆ ಸಾಣೆಹಿಡಿದು ತಮ್ಮತೆಕ್ಕೆಯಲ್ಲಿ ಹಿಡಿದಿಟ್ಟುಕೊಂಡಿದ್ದಾರೆ. ಇವರೆಲ್ಲರ ಒಟ್ಟಾರೆ ಸೃಜನ ಶೀಲ ಪ್ರತಿಭೆಗೆ ಚಲನಚಿತ್ರ, ಸಾಕ್ಷಿಯಾಗಿದೆ. 'ಸ್ಟೀವನ್ ಸ್ಪಿಲ್ ಬರ್ಗ್', 'ಡೇವಿಡ್ ರಸೆಲ್', 'ರಿಚರ್ಡ್ ಅಟೆನ್ ಬರೋ', 'ಬೆನ್ ಜೆಟ್ಲಿನ್',ಮೊದಲಾದ ದಿಗ್ಗಜರ ಸಮ್ಮುಖದಲ್ಲಿ ಜಗತ್ತಿನ ಅತಿ ಮಹತ್ವಗಳ ತತ್ವಗಳ ಮೇಲೆ ಆಧಾರಿತ ಚಲನಚಿತ್ರಗಳನ್ನು ನಿರ್ಮಿಸಿ ಅಚ್ಚರಿ ಮೂಡಿಸಿದ ಕತೆ, ತಂತ್ರಜ್ಞಾನ, ಮತ್ತು ಅತ್ಯುತ್ತಮ ಪ್ರದರ್ಶನಗಳಿಗೆ ಒಂದು ನಿದರ್ಶನ. ಜಾಗತಿಕ ಸಿನಿಮಾ ವಲಯದಲ್ಲಿ 'ಆಸ್ಕರ್' ಗೆ ಸಿಕ್ಕುವ ವರ್ಚಸು ವಿಪರೀತದ್ದು. ಇದಕ್ಕೆ ಪಾಶ್ಚಾತ್ಯರಾದಿಯಾಗಿ ಎಲ್ಲರೂ ಬಹಳ ಮಾನ್ಯತೆ ಕೊಡುತ್ತಾರೆ. ವಿಶ್ವದ ಅತಿ ಉತ್ತಮ ಚಿತ್ರಗಳ ನಿರ್ಮಾಣದಲ್ಲಿ ಏನಾದರೂ ಅತಿವಿಶೇಷ ಗುಣಗಳುಳ್ಳ ಚಿತ್ರಗಳೇ ಇಲ್ಲಿ ಆರಿಸಲ್ಪಡುವುದು. ಗುಣಕ್ಕೆ ಪ್ರಧಾನತೆಯಿದೆ.

ಲೈಫ್ ಆಫ್ ಪೈ
ಚಿತ್ರ:Life of Pi 2012 Poster.jpg
Theatrical release poster
Directed byಆಂಗ್ ಲೀ
Screenplay byಡೇವಿಡ್ ಮಾಗೀ
Produced byGil Netter
Ang Lee
David Womark
Starringಸುರಾಜ್ ಶರ್ಮ
ಇರ್ಫಾನ್ ಖಾನ್
ತಬು
ಅದಿಲ್ ಹುಸ್ಸೇನ್
Rafe Spall
Gérard Depardieu
Cinematographyಕ್ಲಾಡಿಯೋ ಮಿರಾಂಡ
Edited byTim Squyres
Music byMychael Danna
Production
company
Distributed by20th Century Fox
Running time
127 minutes[]
CountryUnited States[]
LanguagesEnglish
Hindi
French
Budget$120 million[]
Box office$609,016,565[]

'ಆಂಗ್ ಲೀ ಪರಿಚಯ'

ಬದಲಾಯಿಸಿ

'ಆಂಗ್ ಲೀ' 'ತೈವಾನ್' ನಲ್ಲಿ ಹುಟ್ಟಿ ಬೆಳೆದವರು. ಅವರ ತಂದೆಯವರು, ಮಗನನ್ನು 'ಪ್ರೊಫೆಸರ್' ಆಗಿ ಕಾಣುವ ಆಸೆಯನ್ನು ಹೊಂದಿದ್ದರು. 'ಆಂಗ್ ಲೀ' ಅಮೇರಿಕಾಕ್ಕೆ ಹೋಗಿ ಅಲ್ಲಿ ರಂಗ ಭೂಮಿಯ ನಿರ್ವಹಣೆಯ ಬಗ್ಗೆ ತರಪೇತಿಗಳಿಸಿದರು. ತಮ್ಮ ಓದಿನ ದಿನಗಳಲ್ಲೇ ಕಿರುಚಿತ್ರಗಳ ನಿರ್ಮಾಪಕನಾಗಿ ಹೆಸರುಗಳಿಸಿದ್ದರು. 'ಲೈಫ್ ಆಫ್ ಪೈ' ಆಂಗ್ ಲೀರವರ ೧೩ ನೆಯ ಚಿತ್ರ. ಸನ್. ೨೦೦೫ ರಲ್ಲಿ 'ಬ್ರೋಕ್ ಬ್ಯಾಂಕ್ ಮೌಂಟೇನ್' ಎಂಬ ಚಿತ್ರವನ್ನು ನಿರ್ದೇಶಿಸಿದ್ದರು. ಈಗ ಅವರು, 'ಆಸ್ಕರ್ ಪ್ರಶಸ್ತಿ ಮುಡಿಗೆರಿಸಿದ ಪ್ರಥಮ ಏಷ್ಯನ್' ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಜಾಗತಿಕ ವಲಯದ ಮಹಾನ್ ಚಿತ್ರ ನಿರ್ಮಾಪಕ, 'ಸ್ಪೀಡೆಲ್ ಬರ್ಗ್' ರಂತಹ ಮುತ್ಸದ್ಧಿಗಳ ಜೊತೆ ಸ್ಪರ್ಧಿಸಿ ಈ ಪ್ರಶಸ್ತಿಗಳಿಸಿದ್ದಾರೆ. ಅತಿಸರಳ ವ್ಯಕ್ತಿತ್ವದ 'ಲೀ' ಚೈನಾ ದೇಶದ ಸಂಜಾತರು. ಲೀ ತಂದೆಯವರು 'ತೈವಾನ್' ನಲ್ಲಿ ಹೋಗಿ ನೆಲೆಸಿದರು. ಅಲ್ಲಿ ವಿದೇಶಿಗಳ ತರಹ,ಅಮೇರಿಕ ಮತ್ತು ಬೇರೆದೇಶಗಳಲ್ಲೂ ವಿದೇಶಿಯರ ತರಹ ಗುರುತಿಸಲ್ಪಟ್ಟಿದ್ದಾರೆ. ಅಮೆರಿಕದಿಂದ ಒಲಸೆ ಬಂದ ವಿದೇಶಿಯರು, ಎಂದು ಪರಿಚಿತರಾದೆವು" ಎನ್ನುತ್ತಾರವರು. 'ಆಸ್ಕರ್ ಪದವಿ ಪ್ರದಾನ ಸಮಾರಂಭ'ದಲ್ಲಿ 'ಪರದೇಶಿತನ'ವನ್ನು ಪ್ರತಿಬಿಂಬಿಸುವ ಪ್ರಯತ್ನ ಕಾಣಿಸಿತು.[]

ಬಹಳ ಸ್ಪರ್ಧಾತ್ಮಕ

ಬದಲಾಯಿಸಿ

'ಸನ್ ೨೦೧೩ ರ ಆಸ್ಕರ್ ಪ್ರಶಸ್ತಿ ಗಳಿಸಿದ ಹಾಲಿವುಡ್ ಚಲನಚಿತ್ರ', 'ಲೈಫ್ ಆಫ್ ಪೈ', ಚಿತ್ರಕ್ಕೆ ೪ ಆಸ್ಕರ್ ಪ್ರಶಸ್ತಿಗಳು ಲಭಿಸಿವೆ. ಅತ್ಯದ್ಭುತ ಫೋಟೋಗ್ರಫಿ, ಭವ್ಯಸಂಗೀತ, ಹಾಗೂ 'ಸುಂದರ ವಿಶುವಲ್ ಪರಿಣಾಮಗಳನ್ನು ಹೊರಸೂಸುವ ಚಲನಚಿತ್ರದ ತೈವಾನ್ ದೇಶದ ನಿರ್ದೇಶಕ 'ಅಂಗ ಲೀ' ನಿರ್ದೇಶನದಲ್ಲಿ ಪ್ರಶಸ್ತಿ ಗೆದ್ದುಕೊಂಡಿದೆ. ಒಟ್ಟು ೧೧ ವಿಭಾಗಗಳಲ್ಲಿ ಈ ಸಿನಿಮಾ, ಪ್ರಶಸ್ತಿಗೆ ನಾಮಕರಣಗೊಂಡಿತ್ತು. ಕೇವಲ ೪ ಪ್ರಶಸ್ತಿಗಳನ್ನು ಮಾತ್ರಗಳಿಸಿದೆಯೆಂದರೆ, ಸ್ಪರ್ಧೆಯ ತೀವ್ರತೆಯನ್ನು ಊಹಿಸಬಹುದಾಗಿದೆ. ವಿದೇಶೀ ವಿಭಾಗದಲ್ಲಿ ಪ್ರಶಸ್ತಿ ಗಿಟ್ಟಿಸಿದ

ಮೊದಲಾದ ಹಲವಾರು ಅತ್ಯುತ್ತಮ ಚಲನಚಿತ್ರಗಳು ಕಣದಲ್ಲಿದ್ದವು. ಇವೆಲ್ಲವನ್ನೂ ಹಿಂದಕ್ಕೆ ಸರಿಸಿ, 'ಲೈಫ್ ಆಫ್ ಪೈ' ಅತಿಹೆಚ್ಚು ಅಂದರೆ, ೪ ಪ್ರಶಸ್ತಿಗಳನ್ನು ತನ್ನ ಜೋಳಿಗೆಗೆ ಸೇರಿಸಿದ್ದು ಒಂದು ಮಹತ್ತರ ಸಾಧನೆ, ಎನ್ನುವ ಮಾತುಗಳು ವಿಶ್ವದ ಸಿನಿಜಗತ್ತಿನಲ್ಲಿ ಸ್ಪಷ್ಟವಾಗಿ ಕೇಳಿಬರುತ್ತಿವೆ.

ಚಲನಚಿತ್ರದ ವೈಶಿಷ್ಟ್ಯತೆ

ಬದಲಾಯಿಸಿ

ಮಗುವಾಗಿದ್ದಾಗ ಭಾರತೀಯ ಹುಡುಗನೊಬ್ಬನು, ಹಿಂದೂ ಸಂಪ್ರದಾಯದಲ್ಲಿ ಹುಟ್ಟಿದವನು. ನಂತರ ಕ್ರಿಶ್ಚಿಯನ್ ಆಗಿ ಮತಾಂತರ ಹೊಂದಿರುತ್ತಾನೆ. ಹುಡುಗ ತನ್ನ ತಂದೆ ನಡೆಸಿಕೊಂಡು ಬರುತ್ತಿರುವ ಮೃಗಾಲಯದಲ್ಲಿ ತಾನೂ ಒಬ್ಬ ಸಹವಾಸಿಯಾಗಿ ಪ್ರಾಣಿಗಳ ಜೊತೆ-ಜೊತೆಗೆ ಬೆಳೆಯುತ್ತಾನೆ. ಹೀಗೆ ಅವನು ತನ್ನ ಹದಿ ಹರೆಯದಲ್ಲೂ ಇದೆ ತರಹ,ಪ್ರಾಣಿಗಳ ಸಮುದಾಯಗಳ ಜೊತೆಗೇ ಸಂಚಾರಮಾಡುತ್ತಿರುತ್ತಾನೆ. ಒಮ್ಮೆ ಸಮುದ್ರಯಾನ ಮಾಡುತ್ತಿದ್ದಾಗ ಅವನು ತೇಲುತ್ತಿದ್ದ ಹಡಗು ಚಂಡಮಾರುತ, ಭಾರಿ ಸಮುದ್ರದ ಅಲೆಗಳ ಅಬ್ಬರ ಹಾಗೂ ಸೆಳೆತಕ್ಕೆ ಸಿಲುಕಿ, ಮುಳುಗಿ ಎಲ್ಲಾ ಸದಸ್ಯರ ಸಮೇತ ನೀರುಪಾಲಾಗುವರು. ೧೬ ವಯಸ್ಸಿನ ಬಾಲಕ, ಹೇಗೋ ಅದೃಷ್ಟವಶಾತ್ 'ಲೈಫ್ ಬೊಟ್' ನಲ್ಲಿ ತನ್ನ ಪ್ರಾಣವನ್ನು ಕಾಯ್ದುಕೊಳ್ಳುತ್ತಾನೆ. ಅವನ ಜೊತೆಯಲ್ಲಿ ಒಂದು ಹುಲಿಯೂ ಇದ್ದು, ಸಮುದ್ರದ ನೀರಿನ ಅಲೆಗಳ ಮೇಲೆ ಈಜುತ್ತಾ ಬದುಕುಳಿದು ವಾಪಸ್ ಬರುವ ಕಥೆಯೇ 'ಲೈಫ್ ಆಫ್ ಪೈ' ಕಥೆ. ಈ ಕಥೆಯ ಕೊನೆಯಲ್ಲಿ ಜೀವವಿಮಾ ಏಜೆಂಟರು ಕಾನೂನು ರೀತ್ಯ, ಅವರಿಗೆ ಸಲ್ಲಬೇಕಾಗಿದ್ದ ಹಣ ಪಾವತಿಮಾಡಲು ಬರುವಾಗ ಇಡೀ ಕಥೆಯನ್ನು ನಿರ್ದೇಶಕ, ತತ್ವಶಾಸ್ತ್ರದ ಮಟ್ಟಕ್ಕೆ ಕರೆದೊಯ್ಯುತ್ತಾನೆ. ಸೂರಜ್ ಹೇಳಿದ ಕಥೆ ಒಂದು ಸತ್ಯ ಘಟನೆಯಾದರೂ ಅದರ ವಿಚಿತ್ರ ತಿರುವುಗಳಿಂದಾಗಿ ಜೀವ ವಿಮಾ ಏಜೆಂಟರು ಅವನ ಮಾತುಗಳನ್ನು ನಂಬುವುದಿಲ್ಲ. ಇದೇ ಕಥೆಯನ್ನು ಮನುಷ್ಯ ಸ್ವಭಾವಕ್ಕೆ ಅನುಗುಣವಾಗಿ ಹೇಳಿ ನಂಬಿಕೆ ಹುಟ್ಟಿಸಿದಾಗ, ಎಲ್ಲರೂ ಒಪ್ಪುತ್ತಾರೆ. ಮನುಷ್ಯ ಪ್ರಾಣಿಯ ಸ್ವಾರ್ಥ, ಲಾಲಸೆ ಅಸ್ತಿತ್ವದ ಸವಾಲಿನ ಜೊತೆ ಜೋಡಿಸುವ ನಿರ್ದೇಶಕ ಕಥೆಯನ್ನೆಲ್ಲಾ 'ತ್ರೀ ಡಿ'ರೂಪದಲ್ಲಿ ನಿರೂಪಿಸುವ ರೀತಿ, ಮೈರೋಮಾಂಚಗೊಳಿಸುವಂತಹದು. ಈ ಸನ್ನಿವೇಶಗಳನ್ನು ನಮೂದಿಸಿರುವ ವಿಶುವಲ್ ಗಳು ಅದ್ಭುತವಾಗಿ ಮೂಡಿಬಂದಿವೆ. ಸಿನಿಮಾ ಮೂಲ್ಯಾಂಕನಮಾಡಲು ಬಂದ ತೀರ್ಪುಗಾರರು ಇವನ್ನೆಲ್ಲಾ ನೋಡಿ ದಂಗುಬಡಿದು ಸ್ಥಬ್ಧರಾಗಿರಬಹುದು. ವಿಶುಯಲ್ ಗಾಗಿಯೇ ಪ್ರಶಸ್ತಿಯ ಬಹುಪಾಲು ಸಮರ್ಪಿತ ಎನ್ನುವುದು ಅತಿಶಯೋಕ್ತಿಯಂತಿದೆ.

ವಿಶುವಲ್ ಪರಿಣಾಮಗಳು ಅದ್ಭುತವಾಗಿವೆ

ಬದಲಾಯಿಸಿ

'ರಿದಂ ಅಂಡ್ ಹ್ಯೂಂ' ವಿಶುವಲ್ ಎಫೆಕ್ಟ್ಸ್ ನಿರೂಪಿಸಿರುವುದು, ಅಮೇರಿಕಾದ ಕ್ಯಾಲಿಫೋರ್ನಿಯದ್ದು. ಮತ್ತು 'ಎಂಪಿಸಿ ಕಂಪೆನಿ' ಜೊತೆಗೂಡಿ. ಭಾರತದ ಹೈದರಾಬಾದಿನಲ್ಲಿ ಇದರ ಶಾಖೆಯಿದೆ. ಲಂಡನ್ ಮೂಲದ ಶಾಖೆ ಬೆಂಗಳೂರಿನಲ್ಲಿದೆ.ಬೆಂಗಳೂರಿನ ಎಂಪಿಸಿ ಕಚೇರಿಯಲ್ಲಿ ಈ ಚಿತ್ರದ ನೂರಕ್ಕು ಹೆಚ್ಚು ಪ್ರಮುಖ ಶಾಟ್ ಗಳನ್ನೂ ಸಂಯೋಜಿಸಲಾಯಿತು. ಕಡಲಿನಲ್ಲಿ ಹಡಗು ದಿಕ್ಕುಗೆಟ್ಟು ತಾರಾಡುವ ದೃಶ್ಯ ಬೆಂಗಳೂರಿನಲ್ಲೇ ನಡೆಯಿತು. ಇತರ ಹುಲಿಯ ಗರ್ಜನೆ ಮತ್ತು ಆಕ್ರಮಣಕಾರಿ ಚಟುವಟಿಕೆಗಳು, ಹಾಗೂ ಮೀರ್ಕತ್ ದ್ವೀಪದ ದೃಶ್ಯಗಳು, ಹೈದರಾಬಾದ್ ಸಂಸ್ಥೆಯಲ್ಲಿ ಚಿತ್ರೀಕರಣಗೊಂಡವು. ಇಲ್ಲಿ ಅನೇಕ ಮಂದಿ ಕನ್ನಡಿಗರು ತಂತ್ರಜ್ಞರಾಗಿ ಒಳ್ಳೆಯ ಕೆಲಸಮಾಡಿ ಚಲನಚಿತ್ರಕ್ಕೆ ಪೋಷಕ ಸಹಾಯಮಾಡಿದ್ದಾರೆ.

ಬೆಂಗಳೂರು, ಹೈದರಾಬಾದ್ ಮತ್ತು ಟೈವಾನ್ ಗಳ ಕೊಡುಗೆ

ಬದಲಾಯಿಸಿ

'ಬೆಂಗಳೂರಿನ ಎಂಪಿಸಿ ಕಂಪೆನಿ', ಈ ಹಿಂದೆ 'ಹ್ಯಾರಿ ಪಾಟರ್' ಸರಣಿಯ 'ಡೆತ್ಲೀ ಹ್ಯಾಲೋಸ್ ಭಾಗ-೨' ಮತ್ತು 'ಭಾಗ-೩' ರ ವಿಶುವಲ್ ಕೆಲಸಗಳನ್ನು ನಿರ್ವಹಿಸಿ, ಈಗಾಗಲೇ ಆಸ್ಕರ್ ಪ್ರಶಸ್ತಿಯನ್ನು ತನ್ನ ಮುಡಿಗೇರಿಸಿತ್ತು. ಹಾಲಿವುಡ್ ನ ಹಲವು ಚಿತ್ರಗಳ ಈ ತರಹದ 'ವಿಶುವಲ್ ಎಫೆಕ್ಟ್ಸ' ಗಳನ್ನೂ ಬೆಂಗಳೂರು ಮತ್ತು ಹೈದರಾಬಾದ್ ಶಾಖೆಗಳು ಯಶಸ್ವಿಯಾಗಿ ನಿರ್ವಹಿಸಿವೆ. ಚಿತ್ರದ ಪ್ರಮುಖನಟ, ೧೬ ವರ್ಷದ ಸೂರಜ್ ಶರ್ಮನ ಅಭಿನಯಕ್ಕೆ ನಿರ್ದೇಶಕರು, ಮಾರುಹೋಗಿದ್ದರು. ಸಂದರ್ಶನಗಳಲ್ಲೂ ಮತ್ತೆ ಮತ್ತೆ ಈ ಮಾತನ್ನು ಅವರು ದೊಹರಾಯಿಸಿದ್ದಾರೆ. ಭಾರತೀಯ ತಂತ್ರಜ್ಞರನ್ನು ಮನಸಾರೆ ಅಭಿನಂದಿಸಿದ್ದಾರೆ. ಚಲನಚಿತ್ರದಲ್ಲಿ ಪಾಲ್ಗೊಂಡ ಭಾರತೀಯ ಪೋಶಕ ನಟ-ನಟಿಯರ ಹೆಸರುಗಳು ಹೀಗಿವೆ :

  • 'ತಾಬೂ', ಚಿತ್ರದಲ್ಲಿ ಪೈ ಪಟೇಲ್ ನ ತಾಯಿ, 'ಗೀತಾ ಪಟೇಲ್' ಪಾತ್ರದಲ್ಲಿ,
  • 'ಆದಿಲ್ ಹುಸೇನ್' ಚಿತ್ರದಲ್ಲಿ ಪೈ ಪಟೇಲ್ ತಂದೆ,'ಸಂತೋಷ್ ಪಟೇಲ್' ಪಾತ್ರದಲ್ಲಿ
  • 'ಇರ್ಫಾನ್ ಖಾನ್,' 'ಮಧ್ಯವಯಸ್ಸಿನ ಪೈ' ಹಾಗೂ ಚಲನಚಿತ್ರದ ಪ್ರಮುಖ ಕಥಾನಿರೂಪಕನಾಗಿ,
  • 'ಅಯಾನ್ ಖಾನ್, ಚಿತ್ರದಲ್ಲಿ 'ರವಿ ಪಟೇಲ್' ಎನ್ನುವ ಹೆಸರಿನ ೭ ವರ್ಷದ ಬಾಲಕನ ಪಾತ್ರ, ಅವನು ಪೈಪಟೇಲ್ ಅಣ್ಣ.
  • 'ಮೊಹಮ್ಮದ್ ಅಬ್ಬಾಸ್ ಖಲೀಲಿ,'ರವಿ ಪಟೇಲ್' ಎನ್ನುವ ಹೆಸರಿನ ೧೩ ವರ್ಷದ ಬಾಲಕನ ಪಾತ್ರದಲ್ಲಿ.
  • 'ವಿಬೀಶ್ ಸಿವಕುಮಾರ್,' 'ರವಿ ಪಟೇಲ್' ಎನ್ನುವ ೧೯ ವರ್ಷದ ಬಾಲಕನ ಪಾತ್ರದಲ್ಲಿ.
  • ೬ ವರ್ಷದ ಬೆಂಗಳೂರಿನ 'ಗೌತಮ್ ಬೇಲೂರು' ಎಂಬ, ಬೆಂಗಳೂರಿನ 'ಕೆನ್ ಫ್ರೀ' ಶಾಲೆಯಲ್ಲಿ ಎರಡನೇ ಇಯತ್ತೆಯಲ್ಲಿ ಕಲಿಯುತ್ತಿದ್ದ ಬಾಲಕ, ಚಿಕ್ಕವಯಸ್ಸಿನ 'ಸೂರಜ್' ನ ಪಾತ್ರದಲ್ಲಿ.
  • ೧೩ ವರ್ಷವಯಸ್ಸಿನ ಆಯುಷ್ ಟಂಡನ್,ಮತ್ತೊಬ್ಬ ಬಾಲನಟ. 'ಗೌತಮ್ ಬೇಲೂರ್', ಭಾಗವಹಿಸಿದ ಕೆಲವು ದೃಶ್ಯಗಳನ್ನು ತಮಿಳುನಾಡಿನ 'ಪುದುಚೆರಿ' ಮತ್ತು 'ಟೈವಾನ್' ನಲ್ಲಿ ಚಿತ್ರೀಕರಣ ಮಾಡಲಾಗಿದೆ. 'ವಿದ್ಯಾಬೇಲೂರು', ಮಗನ ಜೊತೆ, ಚಿತ್ರ ಮುಗಿಯುವವರೆಗೂ ಇದ್ದು, ಧೈರ್ಯ ತುಂಬಿ ಚಿತ್ರದ ಯಶಸ್ಸಿಗೆ ಕಾರಣರಾದರು. ನಂತರ, ಪೈಗೆ ಜೋಗುಳ ಹಾಡಿದ ಹಿನ್ನೆಲೆ ಗಾಯನಕ್ಕೆ 'ಬಾಂಬೆ ಜಯಶ್ರೀ,ಯವರು ಆಯ್ಕೆಯಾಗಿದ್ದರು. ಆದರೆ ಅವರಿಗೆ ಪ್ರಶಸ್ತಿ ಸಿಗಲಿಲ್ಲ.
  • 'ಶ್ರವಂತಿ ಸಾಯಿನಾಧ್', ಚಿತ್ರದಲ್ಲಿ 'ಆನಂದಿ'ಯ ಪಾತ್ರದಲ್ಲಿ,
  • 'ಪದ್ಮಿನಿ ರಾಮಚಂದ್ರನ್,' ಚಿತ್ರದಲ್ಲಿ 'ನೃತ್ಯಗುರು'

ಬದುಕುಳಿದ ಪೈ ಪಟೇಲನ ಟೊರಾಂಟೋ-ಪರಿವಾರ

ಬದಲಾಯಿಸಿ
  • 'ಮೈಥಿಲಿ ಪ್ರಕಾಶ್,' ಚಿತ್ರದಲ್ಲಿ, ಮೀನಾ ಪಟೇಲ್, ಪೈ ಹೆಂಡತಿಯಾಗಿ. ಟೊರಾಂಟೋನಲ್ಲಿ ವಾಸ್ತವ್ಯ.
  • 'ರಾಜ್ ಪಟೇಲ್,' ಚಿತ್ರದಲ್ಲಿ, ನಿಖಿಲ್ ಪಟೇಲ್, (ನಿಕ್), ಪೈ ಮಗನಾಗಿ. ಒಳ್ಳೆಯ ಬೇಸ್ ಬಾಲ್ ಆಟಗಾರ.
  • 'ಹದಿಕಾ ಹಮೀದ್', ಚಿತ್ರದಲ್ಲಿ,ಉಷಾ ಪಟೇಲ್, ತಂದೆಯ ಅತಿ ಮುದ್ದಿನ ಕೊನೆಯ ಮಗಳು.

ಉಲ್ಲೇಖಗಳು

ಬದಲಾಯಿಸಿ
  1. "Life of Pi". AFI. Retrieved December 15, 2013.
  2. "Life of Pi - The Hollywood Reporter". Hollywood Reporter. Retrieved December 15, 2013.
  3. "LIFE OF PI (PG)". British Board of Film Classification. November 9, 2012. Retrieved November 23, 2012.
  4. ೪.೦ ೪.೧ ಉಲ್ಲೇಖ ದೋಷ: Invalid <ref> tag; no text was provided for refs named bom
  5. 'ಲೈಫ್ ಆಫ್ ಪೈ ೨೦೧೨'