ಸೂರಜ್ ಶರ್ಮ
'ಸೂರಜ್ ಶರ್ಮ' (ಜ. ಮಾರ್ಚ್ ೨೧, ೧೯೯೩) ಭಾರತೀಯ ಸಂಜಾತ; ಅತಿ ಪ್ರತಿಭಾನ್ವಿತ ಅಭಿನೇತನೆಂದು ಪರಿಗಣಿಸಲ್ಪಟ್ಟಿದ್ದಾನೆ. ಹೊಸದೆಹಲಿಯ ಈ ಹದಿಹರೆಯದ ಯುವಕ, ಸನ್. ೨೦೧೨ ರಲ್ಲಿ ನಿರ್ಮಿಸಲ್ಪಟ್ಟ, 'ಲೈಫ್ ಆಫ್ ಪೈ' ಎಂಬ ಹಾಲಿವುಡ್ ಚಲನಚಿತ್ರದಲ್ಲಿ ಮೊಟ್ಟಮೊದಲು ನಾಯಕನಾಗಿ ಆರಿಸಲ್ಪಟ್ಟು, ಅತ್ಯುತ್ತಮವಾಗಿ ಅಭಿನಯಿಸಿ ವಿಶ್ವದ ಸಿನಿಮಾ ಪ್ರಿಯರ ಮನಸ್ಸನ್ನು ಗೆದ್ದಿದ್ದಾನೆ. ಟೈವಾನ್ ದೇಶದ 'ಆಂಗ್ ಲೀ'ರವರ ಸಮರ್ಥ ನಿರ್ದೇಶನದ, 'ಲೈಫ್ ಆಫ್ ಪೈ ಎಂಬ ಹೆಸರಿನ ಅತಿ ಸುಪ್ರಸಿದ್ಧ ಪುಸ್ತಕದ ಆಧಾರದ ಮೇಲೆ, ಈ ಚಿತ್ರವನ್ನು ಹಾಲಿವುಡ್ ನ ಪ್ರತಿಷ್ಠಿತ ಸ್ಟುಡಿಯೋಗಳಲ್ಲೊಂದಾದ ಟ್ವೆಂಟಿಯತ್ ಸೆಂಚ್ಯುರಿ ಫಾಕ್ಸ್ ಲಾಂಛನದಡಿಯಲ್ಲಿ ನಿರ್ಮಿಸಲಾಯಿತು. ಚಿತ್ರೀಕರಣ ಟೈವಾನ್, ಪಾಂಡಿಚೆರಿ,ಮೊದಲಾದ ಊರುಗಳಲ್ಲಿ ಹಾಗೂ, ವಿಶೇಷ ವಿನ್ಯಾಸಗಳನ್ನು (Special Visuals), ಬೆಂಗಳೂರು ಮತ್ತು ಹೈದರಾಬಾದಿನ ಸ್ಟುಡಿಯೋಗಳಲ್ಲಿ ಅಳವಡಿಸಲಾಯಿತು.
ಸೂರಜ್ ಶರ್ಮ | |
---|---|
ಜನನ | March 21, 1993[೧] (19 years) |
ರಾಷ್ಟ್ರೀಯತೆ | ಭಾರತೀಯn |
ವೃತ್ತಿ(ಗಳು) | ನಟ, ವಿದ್ಯಾರ್ಥಿ |
ಗಮನಾರ್ಹ ಕೆಲಸಗಳು | ನಾಯಕ ನಟ, ಲೈಫ್ ಆಫ್ ಪೈ ಚಿತ್ರದಲ್ಲಿ |
ಪರಿವಾರ ಹಾಗೂ ಬಾಲ್ಯ
ಬದಲಾಯಿಸಿಹೊಸದೆಹಲಿಯ ನಿವಾಸಿ,'ಸೂರಜ್ ಶರ್ಮ', ಒಂದು ಮಲೆಯಾಳಿ ಕುಟುಂಬದಲ್ಲಿ ಜನಿಸಿದವನು. ತಂದೆ, ಕೇರಳದ 'ಥಲಸ್ಸೇರಿ'ಯಿಂದ ಬಂದು ನೆಲೆಸಿದ 'ಸಾಫ್ಟ್ ವೇರ್ ಇಂಜಿನಿಯರ್'; ತಾಯಿ, 'ಪಾಲಕ್ಕಾಡ್' ನಿಂದ ಬಂದ 'ಎಕೊನಾಮಿಕ್ಸ್' ವಿಶಯದಲ್ಲಿ ಪದವಿಗಳಿಸಿದವರು.'ಸೂರಜ್,' 'ಸರದಾರ್ ಪಟೇಲ್ ವಿದ್ಯಾಲಯದ ಶಾಲೆ'ಯಲ್ಲಿ ಕಲಿಯುತ್ತಿರುವಾಗ, ಅವನಿಗೆ 'ಆಡಿಶನ್' ಕರೆ ಬಂತು. ಶಾಲೆಯಲ್ಲಿ ಒಳ್ಳೆಯ ವಿದ್ಯಾರ್ಥಿಯೆಂಬ ಹೆಸರುಗಳಿಸಿದ ಸೂರಜ್, ಗೆ 'ಲೈಫ್ ಆಫ್ ಪೈ' ಚಲನಚಿತ್ರಕ್ಕೆ, ಆಡಿಶನ್ ಗೆ ಕರೆ ಬಂದಾಗ ನಟನೆಗೆ ಸಂಬಂಧಪಟ್ಟ ಯಾವ ಅನುಭವವೂ ಅವನಿಗಿರಲಿಲ್ಲ. ಅವನ ತಮ್ಮ, 'ಶ್ರೀ ಹರ್ಶ್ ಶರ್ಮ' ಮೊದಲು ಚುನಾಯಿತನಾಗಿದ್ದ. ಆದರೆ ಅವನ ವಯಸ್ಸು ಬಹಳ ಚಿಕ್ಕದು. ತಮ್ಮನನ್ನು ಜೊತೆಯಲ್ಲಿ ಕರೆತರುತ್ತಿದ್ದ, ೧೬ ವರ್ಷ ವಯಸ್ಸಿನ ಸೂರಜ್ ಶರ್ಮನನ್ನು ನೋಡಿದ 'ಆಂಗ್ ಲೀ' ಅವನ ವ್ಯಕ್ತಿತ್ವಕ್ಕೆ ಬೆರಗಾದರು. ಚಿಕ್ಕಮೈಕಟ್ಟಿನ ದಿಟ್ಟ ಹಾಗೂ, ಧೃಡಮನಸ್ಸಿನ ಯುವಕನ ಆವಶ್ಯಕತೆ ಇತ್ತು. ಸುಮಾರು ೩ ಸಾವಿರ ಜನ ಅಭ್ಯರ್ಥಿಗಳ ಜೊತೆಗೆ ಸ್ಪರ್ಧಿಸಿ ಸೂರಜ್ ಆಯ್ಕೆಯಾದನು.
ಪಾತ್ರಪರಿಚಯ
ಬದಲಾಯಿಸಿಚಲನಚಿತ್ರದಲ್ಲಿ ಬರುವ ನಾಯಕನ ಹೆಸರು,'ಪಿಸೀನ್ ಮಾಲೆಟೋರ್ ಪಟೇಲ್ ಪೈ' ಎಂದು. ಫ್ರಾನ್ಸಿನ ಸ್ವಚ್ಛ ನೀರಿನ ಈಜುಕೊಳದಿಂದಾಗಿ ಬಂದ ಹೆಸರು ಅವನದ್ದು. 'ಪಿಸಿನ್ ಮಾಲೆಟೋರ್ ಪಟೇಲ್'. ಉಳಿಯೋದು ಪೈ. ಆ ಪಾತ್ರಮಾಡಲು ಹಲವು ಬಾರಿ ಕರೆದ ಪ್ರಕ್ರಿಯೆಯಲ್ಲಿ ಸಮರ್ಥವಾಗಿ ಉತ್ತರಕೊಟ್ಟು, ಸೂರಜ್ ಶರ್ಮ, 'ಪೈ ಪಾತ್ರ'ಕ್ಕೆ ಆಯ್ಕೆಯಾದನು. ಅವನ ಕಣ್ಣಿನ ಕಾಂತಿ, ದಿಟ್ಟ, ಮತ್ತು ಮುಘ್ದ ಮುಖಭಾವ, ಪೈ ಪಾತ್ರಕ್ಕೆ ಸರಿಹೊಂದ ಬಹುದಾದ ಭಾವಗಳನ್ನು 'ಆಂಗ್ ಲೀ' ಗುರುತಿಸಿದರು. ಅಭಿನಯದ ಗಂಧವೇ ಇಲ್ಲದ ಯುವಕನಿಗೆ, ಈಜು ಕಲಿಸುವುದರಿಂದ ಮೊದಲುಗೊಂಡು ನಟನೆಯ ಎಲ್ಲಾ ಮಜಲುಗಳನ್ನೂ ಪರಿಚಯಿಸಿ, ಅವನಿಂದ ತಕ್ಕ ಪ್ರತಿಕ್ರಿಯೆ ಪಡೆಯಲು 'ಆಂಗ್ ಲೀ' ಬಹಳ ಶ್ರಮಪಟ್ಟರು. ಅಭಿನಯದ ಅವಧಿ ಮುಗಿದ ಮೇಲೆ, ಸೂರಜ್ ಶರ್ಮ, ಹೊಸ ದೆಹಲಿಯ ಸೇಂಟ್ ಸ್ಟೀಫೆನ್ ಕಾಲೇಜ್ ನ ಫಿಲೋಸೋಫಿ ವಿಭಾಗದಲ್ಲಿ ಕಲಿಯಲು ಬಂದನು. ಮುಂದೆಯೂ ಚಿತ್ರ ನಿರ್ಮಾಣ ಇಲ್ಲವೇ ಅದಕ್ಕೆ ಸಂಬಂಧಪಟ್ಟ ಕೆಲಸಗಳಲ್ಲಿ ತನ್ನನ್ನು ತೊಡಗಿಸಿಕೊಳ್ಳಲು ಇಚ್ಛಿಸುತ್ತಾನೆ. 'ಲೈಫ್ ಆಫ್ ಪೈ' ಚಿತ್ರ ಅವನ ಜೀವನದಲ್ಲಿ ಬಹಳ ಮಹತ್ವದ ಅವಕಾಶವನ್ನು ಒದಗಿಸಿಕೊಟ್ಟಿತು. ಅವನ ಆತ್ಮವಿಶ್ವಾಸವನ್ನು ಬೆಳಗಿಸಿತು.
ಪ್ರಶಸ್ತಿಗಳು ಹಾಗೂ ನಾಮಿನೇಶನ್ ಗಳು
ಬದಲಾಯಿಸಿವರ್ಷ | ಚಿತ್ರ | ಪ್ರಶಸ್ತಿ | ಫಲಿತಾಂಶ |
---|---|---|---|
೨೦೧೨ | ಲೈಫ್ ಆಫ್ ಪೈ | BAFTA Rising Star Award[೨] | ನಾಮನಿರ್ದೇಶನ |
೨೦೧೨ | ಲೈಫ್ ಆಫ್ ಪೈ | Critics’ Choice Movie Awards for Best Young Actor/Actress[೩] | ನಾಮನಿರ್ದೇಶನ |
೨೦೧೨ | ಲೈಫ್ ಆಫ್ ಪೈ | NAACP Image Awards: Actor in a Motion Picture[೪] | ನಾಮನಿರ್ದೇಶನ |
೨೦೧೨ | ಲೈಫ್ ಆಫ್ ಪೈ | Las Vegas Film Critics Society Awards: Youth in Film[೫] | ಗೆಲುವು |
ಉಲ್ಲೇಖಗಳು
ಬದಲಾಯಿಸಿ- ↑ Sullivan, Michael. (2012-09-13) Suraj Sharma: 'Pi' player – Entertainment News, Youth Impact Report, Media. Variety. Retrieved on 2012-12-03.
- ↑ "Suraj Sharma nominated for BAFTA rising star award | NDTV Movies.com". Movies.ndtv.com. 2013-01-07. Retrieved 2013-02-10.[ಶಾಶ್ವತವಾಗಿ ಮಡಿದ ಕೊಂಡಿ]
- ↑ "Critics' Choice Awards 2013: Complete List of Nominations". E! Online. 2012-12-11. Retrieved 2013-02-10.
- ↑ Sandell, Scott (2012-12-11). "NAACP Image Awards: The complete nominations list". Los Angeles Times. Retrieved 2013-02-10.
- ↑ http://www.imdb.com/name/nm4139037/awards