ಯತಿ
ಐತಿಹಾಸಿಕವಾಗಿ ಜೈನ ಧರ್ಮದಲ್ಲಿ ಸನ್ಯಾಸಿ ಅಥವಾ ಮಠಾಧೀಶರಿಗೆ ಯತಿ ಎನ್ನಲಾಗುತ್ತದೆ.[೧]
ಜೈನ ಧರ್ಮ
ಬದಲಾಯಿಸಿಮಧ್ಯಕಾಲೀನ ಅವಧಿಯ ಕೊನೆಯಲ್ಲಿ, ಯತಿಗಳು ಜೈನ ಸನ್ಯಾಸಿಗಳಂತೆ ಅಲೆದಾಡುವ ಬದಲು ಒಂದೇ ಸ್ಥಳದಲ್ಲಿ ವಾಸಿಸುವ ಸ್ಥಾಯಿ ಸನ್ಯಾಸಿಗಳಾದರು.[೨]ಈ ಪದವು ಶ್ವೇತಾಂಬರ ಸನ್ಯಾಸಿಗಳಿಗೆ ಹೆಚ್ಚು ಸೂಕ್ತವಾಗಿದೆ, ಆದರೆ ಇದನ್ನು ದಿಗಂಬರರು ಸಹ ಬಳಸಿದರು. ಈ ಪದವು ಸಾಂದರ್ಭಿಕವಾಗಿ ಇತರ ಸಂಪ್ರದಾಯಗಳ ತಪಸ್ವಿಗಳಿಗೆ ಕೂಡ ಬಳಸಲಾಗುತ್ತದೆ.[೩]
ಕೆಲವು ವಿದ್ವಾಂಸರು ವಿವಾಹವಾದರು ಮತ್ತು ಅವರು ಸಂಸಾರಿ ಯತಿ [೪] ಅಥವಾ ಮಹಾತ್ಮರು ಎಂದು ಕರೆಯಲ್ಪಟ್ಟರು.[೫][೬]
ರಾಜಸ್ಥಾನದ ಕೆಲವು ಆಡಳಿತ ರಾಜವಂಶಗಳು ಯತಿಗಳೊಂದಿಗೆ ನಿಕಟ ಸಂಬಂಧವನ್ನು ಹೊಂದಿದ್ದವು.[೭] ಅಬುಲ್-ಫಜಲ್ ಇಬ್ನ್ ಮುಬಾರಕ್ ರವರು ಯತಿಗಳನ್ನು ಧರ್ಮಗಳ ಚರ್ಚೆಯಲ್ಲಿ ಭಾಗವಹಿಸಲು ಆಹ್ವಾನಿಸಲಾಗಿತ್ತು ಎಂದು ಹೇಳಿದ್ದಾರೆ.[೮]
ಸ್ಥಾಯಿ ಯತಿಗಳು ಸಾಮಾನ್ಯವಾಗಿ ಸಂಸ್ಥೆಗಳನ್ನು ಮತ್ತು ಆಸ್ತಿಗಳನ್ನು ನಿರ್ವಹಿಸುತ್ತಿರುತ್ತಾರೆ. ಅವರ ಕೆಲವು ನಿವಾಸಗಳನ್ನು ಅವರ ನೆನಪಿಗಾಗಿ ಜಾತಿಜಿ ಎಂದು ಕರೆಯಲಾಗುತ್ತದೆ.[೯]
೧೯ನೇ ಶತಮಾನದ ಉತ್ತರಾರ್ಧ ಮತ್ತು ೨೦ನೇ ಶತಮಾನದ ಆರಂಭದಿಂದಲೂ ಅಲೆದಾಡುವ (ಸಂವೇಗಿ) ಸನ್ಯಾಸಿಗಳ ಮರು-ಸ್ಥಾಪನೆಯೊಂದಿಗೆ, ಯತಿಗಳ ಸಂಖ್ಯೆ ಗಣನೀಯವಾಗಿ ಇಳಿಮುಖವಾಗಿದೆ.[೧೦][೧೧]
ಶ್ರೀಪೂಜ್ಯ
ಬದಲಾಯಿಸಿದಿಗಂಬರ ಸಂಸ್ಥೆಗಳ ಮುಖ್ಯಸ್ಥರಾದ ಭಟ್ಟಾರಕರಂತೆಯೇ, ಶ್ವೇತಾಂಬರ ಯತಿಗಳ ಸಂಸ್ಥೆಗಳ ಮುಖ್ಯಸ್ಥರನ್ನು ಸಾಮಾನ್ಯವಾಗಿ ಶ್ರೀಪೂಜ್ಯ ಎಂದು ಕರೆಯಲಾಗುತ್ತಿತ್ತು. [೧೨] ಬ್ರಹ್ಮಚಾರಿ ಯತಿಗಳು ಮಾತ್ರ ಶ್ರೀಪೂಜ್ಯನಾಗಬಲ್ಲ ಅರ್ಹತೆಗಳನ್ನು ಹೊಂದಿರುತ್ತಾರೆ. ಈಗ ಅವರ ಸ್ಥಾನಕ್ಕೆ ಅಲೆದಾಡುತ್ತಿರುವ ಸನ್ಯಾಸಿಗಳ ಮುಖ್ಯಸ್ಥರಾಗಿರುವ ಆಚಾರ್ಯರು ಬಂದಿದ್ದಾರೆ.
ಪ್ರಮುಖ ಜೈನ ಯತಿಗಳು
ಬದಲಾಯಿಸಿ- ಯತಿವೃಷಭ, ೫೦೦-೫೭೦
- ರಾಜೇಂದ್ರಸೂರಿಯವರು ಯತಿಯಾಗಿ ದೀಕ್ಷೆ ಪಡೆದ ನಂತರ ೧೮೮೦ ರಲ್ಲಿ ಶ್ವೇತಾಂಬರ ಮೂರ್ತಿಪೂಜಕ ಸಂಪ್ರದಾಯವನ್ನು ಪರಿವರ್ತಿಸಲು ಸಹಾಯ ಮಾಡಿದರು.
- ಯತಿ ಲಾವಾಜಿ, ಸುಮಾರು ೧೬೫೩ರಲ್ಲಿ ಸ್ಥಾನಕವಾಸಿ ಪಂಥದ ಸಂಸ್ಥಾಪಕರಾದರು.
- ಯತಿ ಯತನ್ಲಾಲ್, (೧೮೯೪-೧೯೬೭) ಸ್ವಾತಂತ್ರ್ಯ ಹೋರಾಟಗಾರ ಮತ್ತು ಅವರ ಹೆಸರಿನಲ್ಲಿ ಒಂದು ಪ್ರಶಸ್ತಿ ಕೂಡ ಇದೆ.[೧೩]
ಉಲ್ಲೇಖಗಳು
ಬದಲಾಯಿಸಿ- ↑ Mãrg, Volume 35, Issues 1-2. Marg Publications. 1983. p. 68.
In sharp contrast there is also a painting in Hampi of a yati or a pontiff being taken in a procession in a palanquin.
- ↑ Jain Yati Parampara, Agarchand Nahta, Kesarimalji Surana Abhinandan Granth, 1982, p. 71-78
- ↑ http://dictionary.buddhistdoor.com/en/word/91233/yati Archived 2014-04-07 ವೇಬ್ಯಾಕ್ ಮೆಷಿನ್ ನಲ್ಲಿ. Buddhist Dictionary
- ↑ The A to Z of Jainism Kristi L. Wiley, Scarecrow Press, Jul 16, 2009, p. 240
- ↑ "Ramayana - Pages 21 and 22" Archived 2022-10-05 ವೇಬ್ಯಾಕ್ ಮೆಷಿನ್ ನಲ್ಲಿ.. The colophon in red states that the text was written by the Mahatma Hirananda.
- ↑ The Dabistán: Or, School of Manners: The Religious Beliefs, Observances, Philosophic Opinions and Social Customs of the Nations of the East, Fānī Muḣsin, translated by David Shea, Anthony Troyer, M. Walter Dunne, 1901, p. 275-276
- ↑ पुरालेखा स्रोत, राहुल तनेगारिया, कतिपय जैन यति भी राज परिवारों की वंशावलियां रखते थे। खरतरगच्छ के जैन यति मारवाड़ राजवंश के कुलगुरु माने जाते थे।
- ↑ ,अकबर और तत्कालीन भारत, Ed. Irfan Habib, Rajkamal Prakashan Pvt Ltd, 2009 p. 104
- ↑ भाग्योदय संस्कार शिविर व रक्षाबंधन पर्व आयोजित, August - 2 - 2012, रोहतक, 2 अगस्त (हप्र)। झज्जर रोड पर स्थित जैन जतीजी में जैनाचार्य गुप्तिनन्दी जी गुरुदेव ने रक्षाबंधन के पर्व पर 15 वर्ष से ऊपर की आयु के सैकड़ों गुरुभक्तों को भाग्योदय के संस्कारों से संस्कारित किया
- ↑ The Penguin Handbook of the World's Living Religions, Penguin UK, Mar 25, 2010
- ↑ People of India: Rajasthan, K. S. Singh, Popular Prakashan, Jan 1, 1998 p. 991-994
- ↑ Gazetteer of the Bombay Presidency, Volume 9, Part 1, Bombay (India: State), Government Central Press, 1901, p. 109
- ↑ "महासमुंद में बनने लगा जयपुर कृत्रिम हाथ,, Matrix News, Aug 05, 2013, मुख्य अतिथि श्री मालू ने कहा के यति यतनलाल समाज सेवी होने के साथ साथ एक स'चे देशभक्त थे. बचपन से समाज सेवा, देश सेवा में रूचि रखने वाले यति जी ने १७ जुलाई १९७६ में श्री विवेकवर्धन सेवा आश्रम की स्थापना कर आश्रम परिसर में सर्व सुविधायुक्त निशुल्क अस्पताल का शुभारंभ किया". Archived from the original on ಏಪ್ರಿಲ್ 7, 2014. Retrieved ನವೆಂಬರ್ 22, 2024.