ಮ್ಯಾಕ್ಸ್ ಫಾನ್ ಲವೆ
ಮ್ಯಾಕ್ಸ್ ಫಾನ್ ಲವೆ (1879-1960) ಜರ್ಮನಿಯ ಒಬ್ಬ ಭೌತವಿಜ್ಞಾನಿ. ಎಂಟ್ರೊಪಿ ಪರಿಕಲ್ಪನೆಯನ್ನು ದ್ಯುತಿವಿಜ್ಞಾನಕ್ಕೆ (ಆಪ್ಟಿಕ್ಸ್) ಅನ್ವಯಿಸಿದ. ಹರಿವ ನೀರಿನಲ್ಲಿ ಬೆಳಕಿನ ವೇಗ ಕುರಿತ ಸೂತ್ರ ಐನ್‌ಸ್ಟೈನ್ ತಮ್ಮ ವಿಶೇಷ ಸಾಪೇಕ್ಷತಾ ಸಿದ್ಧಾಂತದಲ್ಲಿ (1905) ಪ್ರತಿಪಾದಿಸಿದ ಪ್ರಕಾರವೇ ಇದೆಯೆಂದು ರುಜುವಾತಿಸಿದ. ಸ್ಫಟಿಕಗಳಲ್ಲಿರುವ ಪರಮಾಣುಗಳು ಹೇಗೆ ಎಕ್ಸ್-ಕಿರಣಗಳನ್ನು ವಿವರ್ತಿಸುತ್ತವೆ ಎಂಬ ವಿದ್ಯಮಾನವನ್ನು ಆವಿಷ್ಕರಿಸಿದ (1912).[೧] ಈ ಆವಿಷ್ಕಾರ ಈತನಿಗೆ ನೊಬೆಲ್ ಪಾರಿತೋಷಿಕ ತಂದುಕೊಟ್ಟಿತು (1914). ಜ಼್ಯೂರಿಕ್ (1912), ಫ್ರ‍್ಯಾಂಕ್‌ಫರ್ಟ್ (1914) ಮತ್ತು ಬರ್ಲಿನ್ (1919) ನಗರಗಳ ವಿಶ್ವವಿದ್ಯಾಲಯಗಳಲ್ಲಿ ಸೇವೆಸಲ್ಲಿಸಿದ್ದ. ಬರ್ಲಿನ್-ಡಲ್‌ಹೆಲ್ಮ್‌ನಲ್ಲಿದ್ದ (ತತ್ಪೂರ್ವದ) ಕೈಸರ್ ವಿಲ್‌ಹೆಲ್ಮ್ ಇನ್‌ಸ್ಟಿಟ್ಯೂಟ್ ಫಾರ್ ಫಿಸಿಕ್ಸ್‌ನ ನಿರ್ದೇಶಕನಾಗಿ 71ನೆಯ ವಯಸ್ಸಿನಲ್ಲಿ ನೇಮಕಗೊಂಡ.
ಉಲ್ಲೇಖಗಳು
ಬದಲಾಯಿಸಿ- ↑ Stoddart, Charlotte (1 March 2022). "Structural biology: How proteins got their close-up". Knowable Magazine. doi:10.1146/knowable-022822-1. Retrieved 25 March 2022.
ಹೊರಗಿನ ಕೊಂಡಿಗಳು
ಬದಲಾಯಿಸಿ- Max von Laue Biography – Deutsches Historisches Museum Berlin (in German)
- Max von Laue Biography ವೇಬ್ಯಾಕ್ ಮೆಷಿನ್ ನಲ್ಲಿ (archived 3 February 1999) – University of Frankfurt on Main (in German)
- ಮ್ಯಾಕ್ಸ್ ಫಾನ್ ಲವೆ on Nobelprize.org including the Nobel Lecture, 3 June 1920 Concerning the Detection of X-ray Interferences
- Nobel Presentation Address – An account of Laue's work is by Professor G. Granqvist, Chairman of the Nobel Committee for Physics
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: