ಮೌರಿಸ್ ಮೇಟರ್ಲಿಂಕ್

(೧೮೬೨-೧೯೪೯)

ಮೌರಿಸ್ ಮೇಟರ್ಲಿಂಕ್

ಜನನ: (೧೮೬೨-೦೮-೨೯)೨೯ ಆಗಸ್ಟ್ ೧೮೬೨
ಜನನ ಸ್ಥಳ: ಘೆಂಟ್, ಬೆಲ್ಜಿಯಂ
ನಿಧನ:6 May 1949(1949-05-06) (aged 86)
ನೀಸ್, ಫ್ರಾನ್ಸ್
ವೃತ್ತಿ: ನಾಟಕಕಾರ · ಕವಿ · Essayist
ರಾಷ್ಟ್ರೀಯತೆ:ಬೆಲ್ಜಿಯಂ
ಸಾಹಿತ್ಯ ಶೈಲಿ:Symbolism
ಪ್ರಮುಖ ರಚನೆಗಳು:Intruder (1890)
The Blind (1890)
Interior (1895)
The Blue Bird (1908)
ಬಾಳ ಸಂಗಾತಿ:ರೆನೇ ದಹೊನ್
ಪ್ರಭಾವಿತರು:ಕಾಂನ್ಸ್ಟಾಂಟಿನ್ ಸ್ಟಾನಿಸ್ಲಾವ್ಸ್ಕಿ · ವ್ಸೆವೊಲೊಡ್ ಮೆಯರ್ಹೊಲ್ಡ್
ಪ್ರಶಸ್ತಿಗಳು:ಸಾಹಿತ್ಯದ ನೊಬೆಲ್ ಪ್ರಶಸ್ತಿ (೧೯೧೧)

ಬೆಲ್ಜಿಯಂ ದೇಶದ ನಾಟಕಕಾರ, ಮೌರಿಸ್ ಮೇಟರ್ಲಿಂಕ್, ೧೯೧೧ ರಲ್ಲಿ 'ನೋಬೆಲ್ ಸಾಹಿತ್ಯ ಪ್ರಶಸ್ತಿ ವಿಜೇತ,' ರಾದರು. ಕವಿ, ' ಮೌರಿಸ್ ಮೇಟರ್ಲಿಂಕ್,' ತಮ್ಮ ಮಾತೃಭಾಷೆ ಫ್ರೆಂಚ್ ನಲ್ಲೇ ಸಾಹಿತ್ಯ ಕೃಷಿ ಆರಂಭಿಸಿದರು. ' ಅವರ ಮುಖ್ಯ ಕೊಡುಗೆ, 'ಸಂಕೇತವಾದಿ' [Symbolist] ಸಾಹಿತ್ಯ ಪಂಥಕ್ಕೆ ಸಂದಿದೆ.

ವಿದ್ಯಾಭ್ಯಾಸ ಬದಲಾಯಿಸಿ

ಮೊದಲು ’ಮೌರಿಸ್ ಮೇಟರ್ಲಿಂಕ್,’ ರವರು ತಮ್ಮ ವಿದ್ಯಾಭ್ಯಾಸವನ್ನು 'ಜೆಸ್ಸುಯಿಟರು' ನಡೆಸುತ್ತಿದ್ದ ಕಾಲೇಜ್ ಒಂದರಲ್ಲಿ ಆರಂಭಿಸಿದರು. ಆ ಕಾಲೇಜ್ ನ ಗ್ರಂಥಾಲಯದಲ್ಲಿ ಕೇವಲ ಧಾರ್ಮಿಕ ಗ್ರಂಥಗಳನ್ನು ಮಾತ್ರ ಇಟ್ಟಿದ್ದರು. ಉತ್ಕೃಷ್ಟ ಫ್ರೆಂಚ್ ಸಾಹಿತ್ಯವನ್ನು ನಿಷೇದಿಸಿ, ಬದಿಯಲ್ಲಿಟ್ಟಿದ್ದರು. ಈ ಎಲ್ಲಾ ವಿದ್ಯಮಾನಗಳು ಅವರಿಗೆ ಚರ್ಚ್ ಬಗ್ಗೆ ಪೂರ್ವಾಗ್ರವನ್ನು ಬೆಳೆಸಿಕೊಳ್ಳಲು ಪ್ರೇರೇಪಿಸಿತು. ಮುಂದೆ ' ಮೌರಿಸ್ ಮೇಟರ್ಲಿಂಕ್ ' ರವರು 'ಘೆಂಟ್ ವಿಶ್ವವಿದ್ಯಾಲಯ,' ದಲ್ಲಿ ಕಾನೂನು ಶಿಕ್ಷಣದ ನಂತರ, 'ಕಾನೂನು ಪದವಿ' ಪಡೆದರು. ಕೆಲವು ಸಮಯ ಫ್ರಾನ್ಸ್ ನಲ್ಲಿ ವಾಸ್ತವ್ಯ ಹೂಡಿದ್ದರು. ಆಗ ಅಲ್ಲಿನ ’ಸಂಕೇತವಾದಿ ಲೇಖಕರ ಸಮಾಗಮ,’ ದಿಂದ ಪ್ರಭಾವಿತರಾದರು. ಅದೇ ಮಾದರಿಯ ಕವಿತೆಗಳನ್ನು ರಚಿಸಿದರು.

ಕೃತಿ ರಚನೆಗಳು ಬದಲಾಯಿಸಿ

ಮೊಟ್ಟಮೊದಲು ಮೌರಿಸ್ ಮೇಟರ್ಲಿಂಕ್ ರಚಿಸಿದ ನಾಟಕ 'ಪ್ರಿನ್ಸೆಸ್ ಮಲೀನ್,' ದಿಢೀರನೆ ಎಲ್ಲರ ಮೆಚ್ಚುಗೆಗಳಿಸಿ ಹೆಸರುವಾಸಿಯಾಯಿತು. [೧೮೯೦] ಅದೇ ವರ್ಷದಲ್ಲಿ 'ಇಂಟ್ರೂಡರ್' ಮತ್ತು ' ದ ಬ್ಲೈಂಡ್' ನಾಟಕಗಳೂ ಪ್ರಸಿದ್ಧಿಪಡೆದವು. ಪ್ಯಾರಿಸ್ ನಲ್ಲಿ 'ಜಾರ್ಜೆಟ್ ಲೆಬ್ಲಾಂಕ್,' ಎಂಬ ವಿವಾಹಿತ ನಟಿಯೊಡನೆ ವಾಸಿಸುತ್ತಿದ್ದರು. ಅವರ ತಂದೆ, ತಾಯಿ, ಮತ್ತು ಚರ್ಚ್ ಬಹಳವಾಗಿ ವಿರೋಧಿಸಿದರು. ಈ ಸಂಬಂಧಕ್ಕೆ ಒಪ್ಪಿಗೆ ನೀಡಲಿಲ್ಲ. ಬಹಳ ವರ್ಷಗಳ ಕಾಲ ಆಕೆಯಜೊತೆ ವಾಸಿಸಿದರು, ಹಾಗೂ ಬೇರೆ ನಗರಗಳಲ್ಲೂ ಹೋಗಿ ಆಕೆಯೊಡನೆ ಸಂಬಂಧ ವಿಟ್ಟುಕೊಂಡಿದ್ದರು. ಇದಲ್ಲದೆ ಒಬ್ಬ ಸಣ್ಣ ಪ್ರಾಯದ ನಟಿಯೊಡನೆಯೂ ಪ್ರೇಮ-ಸಂಬಂಧವಿತ್ತು. ಕೊನೆಗೆ ೧೯೧೯ ನಲ್ಲಿ ಮದುವೆ ಮಾಡಿಕೊಂಡರು.

'ಕೃತಿ ಚರ್ಯೆಯ ಅಪವಾದ' ಅವರಿಗೆ ಅಂಟಿಕೊಂಡಿತ್ತು ಬದಲಾಯಿಸಿ

ನೋಬೆಲ್ ಪ್ರಶಸ್ತಿ ದೊರೆತನಂತರ, ಮೌರಿಸ್ ಮೇಟರ್ಲಿಂಕ್ ರಅವರು ರಚಿಸುತ್ತಿದ್ದ ನಾಟಕಗಳು ಅಷ್ಟೇನೂ ಯಶಸ್ವಿಯಾಗಲಿಲ್ಲ. ಅಮೆರಿಕದಲ್ಲಿ ಅವರು ಬರೆದ ಕಥಾವಸ್ತುವನ್ನು ಇಟ್ಟುಕೊಂಡು ಚಲನಚಿತ್ರವನ್ನು ತಯಾರಿಸುವ ಉತ್ಸಾಹತೋರಿಸಿದ ಒಬ್ಬರು, ನಂತರ ಕೆಲವು ಕಾರಣಗಳಿಂದ ಆ ಯೋಜನೆಯನ್ನೇ ಕೈಬಿಟ್ಟರು. ಕೃತಿಚೌರ್ಯದ ಅಪಾದನೆಯೊಂದು ಮೌರಿಸ್ ಮೇಟರ್ಲಿಂಕ್ ರವರಿಗೆ ಅಂಟಿಕೊಂಡಿತು. ದಕ್ಷಿಣ ಆಫ್ರಿಕದ ವಿಜ್ಞಾನಿ-ಕವಿ, ಯೂಜೀನ್ ಮರಾಯಿಸ್ ಬರೆದ ' ದ ಸೋಲ್ ಆಫ್ ದ ವೈಟ್ ಆಯಾಂಟ್, ' ಎಂಬುದನ್ನು ಆಧಾರವಾಗಿಟ್ಟುಕೊಂಡು ಮೌರಿಸ್ ಮೇಟರ್ಲಿಂಕ್ ' ದ ಲೈಫ್ ಆಫ್ ದ ಟರ್ಮೈಟ್' ಎಂಬ ಕೃತಿರಚನೆಮಾಡಿ ಪ್ರಕಟಿಸಿದರು. ೧೯೨೬ ರಲ್ಲಿ ಇದು ಕೃತಿಚೌರ್ಯವೆಂದು ಕೆಲವರು ನಿಂದಿಸಿ, ತೀವ್ರ ನಿಂದೆ, ಟೀಕೆಗಳನ್ನು ಅವರು ಮತ್ತೆ ಎದುರಿಸಬೇಕಾಗಿ ಬಂತು.

'ಮೌರಿಸ್ ಮೇಟರ್ಲಿಂಕ್,' ತಾಯ್ನಾಡಿನಲ್ಲಿ ಮರಣಿಸಿದರು ಬದಲಾಯಿಸಿ

೧೯೩೨ ರಲ್ಲಿ, ಬೆಲ್ಜಿಯಮ್ ನ ದೊರೆ, ಮೌರಿಸ್ ಮೇಟರ್ಲಿಂಕ್ ರವರಿಗೆ 'ಕೌಂಟ್ ಪದವಿ,' ನೀಡಿ ಗೌರವಿಸಿದರು. ಎರಡನೆಯ ವಿಶ್ವ ಮಹಾಯುದ್ಧದಸಮಯದಲ್ಲಿ ರವರು ಅಮೆರಿಕದ ಆಶ್ರಯದಲ್ಲಿದ್ದರು. ೧೯೪೭ ರಲ್ಲಿ ವಾಪಸ್ ಬಂದು ಫ್ರಾನ್ಸ್ ನಲ್ಲಿಯೇ ತೀರಿಕೊಂಡರು. 'ಫ್ರೆಂಚ್ ಸಾಹಿತ್ಯ ಆಕ್ಯಾಡಮಿ' ಯ ವತಿಯಿಂದ ಮೌರಿಸ್ ಮೇಟರ್ಲಿಂಕ್ ರಿಗೆ, ' ಫ್ರೆಂಚ್ ಭಾಷಾ ಪದಕಪ್ರಶಸ್ತಿ,' ಯನ್ನಿತ್ತು ಗೌರವ ಸಲ್ಲಿಸಿತ್ತು.