ಮೋವ ಎಂಬುದು ನ್ಯೂಜ಼ೀಲೆಂಡಿನಲ್ಲಿ ವಾಸಿಸುತ್ತಿದ್ದು ಸುಮಾರು 600 ವರ್ಷಗಳ ಹಿಂದೆ ಗತವಂಶಿಯಾದ ಹಾರಲಾರದ ಹಕ್ಕಿ.[][] ಇದನ್ನು ಪೇಲಿಯೊಗ್ನಾತೀ ಅಥವಾ ರಟೈಟೀ ಗುಂಪಿನ ಡೈನಾರ್ನಿತಿಫಾರ್ಮಿಸ್ ಗಣದ ಡೈನಾರ್ನಿತಿಡೀ ಕುಟುಂಬಕ್ಕೆ ಸೇರಿಸಲಾಗಿದೆ. ಇದರಲ್ಲಿ ಸುಮಾರು 22 ಪ್ರಭೇದಗಳಿದ್ದುವೆನ್ನಲಾಗಿದ್ದು ಎಲ್ಲವೂ ಅಳಿದುಳಿದ ಮೂಳೆ ಇಲ್ಲವೆ ಗರಿಗಳ ರೂಪದಲ್ಲಿ ಮಾತ್ರ ಪತ್ತೆಯಾಗಿವೆ. ಹಾರಲಾರದ ಪಕ್ಷಿಗಳಲ್ಲಿ ಇವು ಅತಿ ದೊಡ್ಡ ಗಾತ್ರವಾಗಿದ್ದವು. ಇವುಗಳ ಪೈಕಿ ಡೈನಾರ್ನಿಸ್ ಮ್ಯಾಕ್ಸಿಮಸ್ ಎಂಬ ಬಗೆಯದು ಸುಮಾರು 4 ಮೀ. ಎತ್ತರವಾಗಿತ್ತೆಂದೂ ಕಿರಿ ಗಾತ್ರದ್ದೆನಿಸಿದ್ದು ಇಂದಿನ ಟರ್ಕಿ ಕೋಳಿಯ ಗಾತ್ರದಾಗಿತ್ತೆಂದೂ ಹೇಳಲಾಗಿದೆ.[]

ಮೋವ
Temporal range: MioceneHolocene, 17–0.0006 Ma
ಉತ್ತರ ದ್ವೀಪದ ದೈತ್ಯ ಮೋವದ ಅಸ್ಥಿಪಂಜರ
Scientific classification e
ಕ್ಷೇತ್ರ: Eukaryota
ಸಾಮ್ರಾಜ್ಯ: Animalia
ವಿಭಾಗ: ಕಾರ್ಡೇಟಾ
ವರ್ಗ: ಏವೀಸ್
ಕೆಳವರ್ಗ: ಪ್ಯಾಲೆಯೋನ್ಯಾಥೇ
ಏಕಮೂಲ ವರ್ಗ: ನೋಟೋಪ್ಯಾಲೆಯೋನ್ಯಾಥೇ
ಗಣ: ಡೈನಾರ್ನಿತಿಫ಼ಾರ್ಮೀಸ್
Bonaparte, 1853[]
Type species
ಡೈನಾರ್ನಿಸ್ ನೋವೀಜ಼ೀಲಂಡಿಯೀ
Owen, 1843
Diversity[]
6 ಜಾತಿಗಳು, 9 ಪ್ರಭೇದಗಳು
Synonyms[]
  • ಡೈನಾರ್ನಿತೀಸ್ Gadow, 1893
  • ಇಮಾನೀಸ್ Newton, 1884

ಇವುಗಳಲ್ಲಿ ರೆಕ್ಕೆಗಳೇ ಇರಲಿಲ್ಲ. ಸ್ಟರ್ನಮ್, ಕೊರಕಾಯಿಡ್, ಸ್ಕ್ಯಾಪುಲ ಮತ್ತು ರೆಕ್ಕೆಯ ಮೂಳೆಗಳು ಚಿಕ್ಕವಾಗಿದ್ದವು. ಇಲ್ಲವೆ ಸಂಪೂರ್ಣವಾಗಿ ನಶಿಸಿ ಹೋಗಿದ್ದವು. ಕ್ಲಾವಿಕಲ್ ಮತ್ತು ಪೈಗೋಸ್ಟೈಲ್‌ಗಳ ಕೊರತೆ ಇತ್ತು. ಇವುಗಳ ಮೊಟ್ಟೆಗಳು ಸುಮಾರು 22 ಸೆಂಮೀ ಅಗಲ ಮತ್ತು 30 ಸೆಂಮೀ ಉದ್ದ ಇದ್ದವು. ಮೋವಗಳ ನಾಶಕ್ಕೆ ಖಚಿತ ಕಾರಣ ಗೊತ್ತಿಲ್ಲವಾದರೂ ನ್ಯೂಜ಼ೀಲೆಂಡಿಗೆ ಮಾವೋರಿ ಜನಗಳು ವಲಸೆ ಬಂದ ಮೇಲೆ ಬಹುಶಃ ಅವರ ಬೇಟೆಗೆ ತುತ್ತಾಗಿ ನಶಿಸಿಹೋಗಿರಬೇಕು. ಈ ಬಗ್ಗೆ ಸಾಕಷ್ಟು ದಾಖಲೆಗಳಿವೆ.

ಉಲ್ಲೇಖಗಳು

ಬದಲಾಯಿಸಿ
  1. Brands, S. (2008)
  2. Stephenson, Brent (2009)
  3. Brodkob, Pierce (1963). "Catalogue of fossil birds 1. Archaeopterygiformes through Ardeiformes". Biological Sciences, Bulletin of the Florida State Museum. 7 (4): 180–293. Retrieved 30 December 2015.
  4. OSNZ (2009)
  5. Perry, George L.W.; Wheeler, Andrew B.; Wood, Jamie R.; Wilmshurst, Janet M. (1 December 2014). "A high-precision chronology for the rapid extinction of New Zealand moa (Aves, Dinornithiformes)". Quaternary Science Reviews. 105: 126–135. Bibcode:2014QSRv..105..126P. doi:10.1016/j.quascirev.2014.09.025. Retrieved 22 December 2014.
  6. "Little bush moa | New Zealand Birds Online". nzbirdsonline.org.nz. Retrieved 24 July 2020.
 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ಮೋವ&oldid=1198840" ಇಂದ ಪಡೆಯಲ್ಪಟ್ಟಿದೆ