ಮೋಗುಬಾಯಿ ಕುರ್ಡಿಕರ್

ಮೋಗುಬಾಯಿ ಕುರ್ಡೀಕರ್ (೧೫ ಜುಲೈ ೧೯೦೪ – ೧೦ ಫ಼ೆಬ್ರವರಿ ೨೦೦೧) ಇವರು ಜೈಪುರ್-ಅತ್ರೌಲಿ ಘರಾಣೆಯ ಸುಪ್ರಸಿದ್ಧ ಗಾಯಕಿ. ಇವರು ಗಾಯನಾಚಾರ್ಯ ಉಸ್ತಾದ್ ಅಲ್ಲಾದಿಯಾ ಖಾನ್ ಸಾಹೇಬರ ಶಿಷ್ಯೆ.

ಸಂಗೀತ ಸೇವೆ ಬದಲಾಯಿಸಿ

೧೯೪೦ರಿಂದ ಮೋಗುಬಾಯಿಯವರು ಭಾರತದ ಎಲ್ಲೆಡೆ ತಮ್ಮ ಗಾಯನವನ್ನು ಪ್ರಸ್ತುತ ಪಡಿಸಿದರು. ಆರಂಭಿಕ ದಿನಗಳಲ್ಲಿ ಅವರು ಸಂಗೀತ ಕಚೇರಿ ಸಂಘಟಕರಿಂದ ಸಾಕಷ್ಟು ಅಪಮಾನಗಳನ್ನು ಎದುರಿಸಿದರು, ಆ ದಿನಗಳಲ್ಲಿ ಮಹಿಳೆಯರಿಗೆ ಗಾಯನ ಸಂಗೀತದಲ್ಲಿ ಹೆಚ್ಚಿನ ಪ್ರಾಶಸ್ತ್ಯವಿರದ ಕಾರಣ ಹೆಚ್ಚಿನ ಸಂಭಾವನೆಯೂ ಸಿಗುತ್ತಿರಲಿಲ್ಲ. ಅವರ ಗಾಯನದ ಉನ್ನತ ಅಭ್ಯಾಸ, ಅವರ ಶಿಸ್ತು, ತಮ್ಮ ಗುರುಗಳ ಘರಾಣೆಯ ಮೂಲಭೂತ ತತ್ವಗಳಿಗೆ ಎಂದೂ ತಿಲಾಂಜಲಿ ನೀಡದೆ ಅಗ್ರಪಂಕ್ತಿಯ ಗಾಯಕಿಯಾಗಿ ತಮ್ಮದೇ ಆದ ಛಾಪನ್ನು ಮೂಡಿಸಿದರು. ಅವರು ತಮ್ಮ ಗಾಯನ ಕಚೇರಿಗಳಲ್ಲಿ ಠುಮ್ರಿ ಮತ್ತು ನಾಟ್ಯ ಸಂಗೀತವನ್ನು ಹಾಡಲಿಲ್ಲ.

ಶಿಷ್ಯ ಬಳಗ ಬದಲಾಯಿಸಿ

ಮೋಗುಬಾಯಿಯವರು ತಮ್ಮ ಶಿಷ್ಯರೆಲ್ಲರಿಗೂ ಮಾಯಿ ಎಂದೆ ಪರಿಚಿತರಾಗಿದ್ದರು. ಅವರು ತಮ್ಮ ಸಂಗೀತ ಜ್ಞಾನವನ್ನು ತಮ್ಮ ಮಗಳಾದ ಕಿಶೋರಿ ಅಮೋನ್‍ಕರ್ ಅಲ್ಲದೇ ಇನ್ನೂ ಅನೇಕ ಶಿಷ್ಯರಿಗೆ ಹಂಚಿದ್ದಾರೆ. ಮೋಗುಬಾಯಿಯವರ ಇತರ ಪ್ರಮುಖ ಶಿಷ್ಯರೆಂದರೆ ಕೌಶಲ್ಯಾ ಮಂಜೇಶ್ವರ್, ಪದ್ಮಾ ತಳವಳಕರ್, ಕಮಲ್ ತಾಂಬೆ, ಬಬನ್ ರಾವ್ ಹಲ್ದನಕರ್, ಸುಹಾಸಿನಿ ಮೂಲ್ಗಾಂವಕರ್ ಮತ್ತು ಅರುಣ್ ದ್ರಾವಿಡ್.

ಪ್ರಶಸ್ತಿ ಮತ್ತು ಬಿರುದುಗಳು ಬದಲಾಯಿಸಿ

ಪ್ರತಿವರ್ಷ ಗೋವಾ ರಾಜ್ಯದ ಮಡಗಾಂವ್ ನಗರದಲ್ಲಿ ಸ್ವರಮಂಚ್ ಸಂಸ್ಥೆಯು ಗಾನತಪಸ್ವಿನಿ ಮೋಗುಬಾಯಿ ಕುರ್ಡೀಕರ್ ಸ್ಮೃತಿ ಸಂಗೀತ ಸಮ್ಮೇಳನವನ್ನು ನಡೆಸುತ್ತದೆ.