ಅಲ್ಲಾದಿಯಾ ಖಾನ್
ಉಸ್ತಾದ್ ಅಲ್ಲಾದಿಯಾ ಖಾನ್(೧೮೫೫-೧೯೪೬) ಇವರು ಪ್ರಸಿದ್ಧ ಹಿಂದುಸ್ತಾನಿ ಶೈಲಿಯ ಗಾಯಕರಾಗಿದ್ದರು. ಇವರಿಗೆ ಗಾನ ಸಾಮ್ರಾಟನೆಂಬ ಬಿರುದಿತ್ತು. ಇವರು ತಮ್ಮದೇ ವಿಶಿಷ್ಟ ಶೈಲಿಯನ್ನು ಪ್ರಾರಂಭಿಸಿದರು, ಅದಕ್ಕೆ ಜೈಪುರ್-ಅತ್ರೌಲಿ ಘರಾಣೆಯೆಂದು ಕರೆಯುತ್ತಾರೆ. ಇದು ಆಗ್ರಾ ಘರಾಣೆಯ ಪಾಯಾದ ಮೇಲೆ ಕಟ್ಟಲ್ಪಟ್ಟಿದೆ. ಇವರು ಅನೇಕ ಹಳೆಯ ರಾಗಗಳನ್ನು ಪುನರುಜ್ಜೀವನಗೊಳಿಸಿದರು ಮತ್ತು ಅನೇಕ ಹೊಸ ರಾಗಗಳನ್ನು ಮತ್ತು ಚೀಜ್ ಗಳನ್ನು ರಚಿಸಿದರು.