ಮೈಸೂರು ಅಗರಬತ್ತಿಗಳು
ಮೈಸೂರು ಅಗರಬತ್ತಿ ಎಂಬುದು ಸ್ಥಳೀಯವಾಗಿ ಬೆಳೆದ ಪದಾರ್ಥಗಳನ್ನು ಬಳಸಿಕೊಂಡು ಮೈಸೂರಿನಲ್ಲಿ ತಯಾರಿಸಲಾದ ವಿವಿಧ ಬಗೆಯ ಧೂಪದ್ರವ್ಯವಾಗಿದೆ. ಕರ್ನಾಟಕ ರಾಜ್ಯದಲ್ಲಿ ದೊರಕುವ ವಸ್ತುಗಳನ್ನ ಮಾತ್ರ ಬಳಸಿಕೊಂಡು ಮೊದಲು ಅರಂಭಗೊಂಡಿತು. ಈ ಧೂಪದ್ರವ್ಯವನ್ನು ತಯಾರಿಸಲು ಬಳಸಿದ ವಸ್ತುಗಳ ವಿರಳ ಲಭ್ಯತೆ ಮತ್ತು ಐತಿಹಾಸಿಕ ಹಿನ್ನೆಲೆಯ ಕಾರಣಕ್ಕಾಗಿ ೨೦೦೫ ರಲ್ಲಿ ಭಾರತ ಸರ್ಕಾರದಿಂದ ಭೌಗೋಳಿಕ ಸೂಚಕ ಹಿರಿಮೆಯ ಪುರಸ್ಕಾರವನ್ನು ಪಡೆದುಕೊಂಡಿದೆ. [೧] [೨] ಮೈಸೂರು ಎಂಬುದು ವಿಶ್ವದ ಅತಿದೊಡ್ಡ ಅಗರಬತ್ತಿ ತಯಾರಿಕ ನಗರವಾಗಿದೆ. ಎನ್. ರಂಗರಾವ್ ಮತ್ತು ಸನ್ಸ್ ಎಂಬ ಅಗರಬತ್ತಿ ತಯಾರಿಕ ಘಟಕವು ಸೈಕಲ್ ಪ್ಯೂರ್ ಅಗರಬತ್ತಿಗಳಿಗೆ ಜನಪ್ರಿಯವಾಗಿದೆ.
ಇತಿಹಾಸ
ಬದಲಾಯಿಸಿಹಿಂದಿಯಲ್ಲಿ 'ಅಗರಬತ್ತಿ' ಎಂದೂ ಕರೆಯಲ್ಪಡುವ ಧೂಪದ್ರವ್ಯದ ಕಡ್ಡಿಗಳ ತಯಾರಿಕೆಯು ೧೯೦೦ರ ದಶಕದಲ್ಲಿ ಬೆಂಗಳೂರಿನಲ್ಲಿ ಸಂಘಟಿತ ಉದ್ಯಮವಾಯಿತು ಮತ್ತು ಸ್ಥಳೀಯವಾಗಿ ಊದುಬತ್ತಿಗಳು (ಸುಗಂಧ ಹಬ್ಬುವವು) ಎಂದು ಕರೆಯಲಾಯಿತು. ಅಗರಬತ್ತಿಗಳ ಕಡ್ಡಿಗಳ ತಯಾರಿಕೆ ತುಂಬಾ ಸರಳವಾಗಿದೆ. ಏಕೆಂದರೆ ಇದು ಬೇಗ ಇದ್ದಿಲು ಮತ್ತು ಜಿಜಿತ್‌ನೊಂದಿಗೆ ಬೆರೆಸಿದ ನೈಸರ್ಗಿಕ ಪದಾರ್ಥಗಳ ಪೇಸ್ಟ್ ಮತ್ತು ಬಿದಿರಿನ ತುಂಡುಗಳಿಗೆ ಸುತ್ತಿಕೊಳ್ಳುತ್ತದೆ. ಇಲ್ಲಿ ಮಿಶ್ರಣದ ಪ್ರಮಾಣವು ಅತಿ ಪ್ರಾಮುಖ್ಯತೆಯನ್ನು ಹೊಂದಿದೆ. ಮೈಸೂರು ಮಹಾರಾಜರು ಅಗರಬತ್ತಿಗಳ ಉತ್ಪಾದನೆಯನ್ನು ಪೋಷಿಸಿದರು. [೩] ಶಿವಮೊಗ್ಗದ ತಿರ್ಥಹಳ್ಳಿಯ ಶ್ರೀ ಟಿ.ಎಲ್. ಉಪಾಧ್ಯಾಯ ಮತ್ತು ತಂಜಾವೂರಿನ ಅತ್ತರ್ ಖಾಸಿಂ ಸಾಹಿಬ್ ಅವರು 1885 ರಲ್ಲಿ ಮೈಸೂರಿನಲ್ಲಿ ಧೂಪದ್ರವ್ಯ ಉದ್ಯಮವನ್ನು ಪ್ರಾರಂಭಿಸಿದರು. ಆ ಉದ್ಯಮ ಲಂಡನ್‌ನ ವೆಂಬ್ಲಿಯ ಪ್ರದರ್ಶನದಲ್ಲಿ ಅರ್ಹತೆಯ ಪ್ರಮಾಣಪತ್ರವನ್ನು ಪಡೆಯಿತು. ಈ ಹೆಗ್ಗಳಿಕೆಯ ಕಾರಣಕ್ಕೆ ಮೈಸೂರು ಸ್ಥಳೀಯ ಸರ್ಕಾರವು ಇತರ ದೇಶಗಳಿಂದ ಬರುವ ಪ್ರವಾಸಿಗರಿಗೆ ಮತ್ತು ಅತಿಥಿಗಳಿಗೆ ಉಡುಗೊರೆಯಾಗಿ ಧೂಪದ್ರವ್ಯವನ್ನು ನಿಡುತ್ತಿಧ್ದರು. ಅಂದಿನಿಂದ ವಿವಿಧ ಕೈಗಾರಿಕೋದ್ಯಮಿಗಳೊಂದಿಗೆ ಸ್ಥಳೀಯ ಉದ್ಯಮವನ್ನು ಇತರ ದೇಶಗಳಿಗೆ ರಫ್ತು ಮಾಡುವ ಮೂಲಕ ಬೆಳೆಯಿತು. [೪]
ತಯಾರಿಕೆಯ ವಿಧಾನ
ಬದಲಾಯಿಸಿಗಿಡಮೂಲಿಕೆಗಳು, ಹೂವುಗಳು, ಸಾರಭೂತ ತೈಲ, ತೊಗಟೆಗಳು, ಬೇರುಗಳು, ಇದ್ದಿಲುಗಳನ್ನು ನಯವಾದ ಪೇಸ್ಟ್ ಆಗಿ ನುಣ್ಣಗೆ ಪುಡಿಮಾಡಿ ನಂತರ ಬಿದಿರಿನ ಕಡ್ಡಿಗೆ ಸುತ್ತಿ ನಂತರ ಸೂರ್ಯನ ಕೆಳಗೆ ಒಣಗಿಸಲಾಗುತ್ತದೆ. ಶ್ರೀಗಂಧದಂತಹ ವಿಶೇಷ ಮರ, ಹಲ್ಮಾಡಿ ನೀಡುವ ಐಲಾಂತಸ್ ಮಲಬರಿಕಮ್ ಮತ್ತು ಇತರ ನೈಸರ್ಗಿಕ ಪದಾರ್ಥಗಳು ಕರ್ನಾಟಕದಲ್ಲಿ ಮಾತ್ರ ಲಭ್ಯವಿವೆ. ಇದು ಕರ್ನಾಟಕದ ವಿಶೇಷ ಭೌಗೋಳಿಕತೆಯನ್ನು ಹೊಂದಿರುವುದನ್ನು ಸೂಚಿಸುತ್ತದೆ.
ಭೌಗೋಳಿಕ ಸೂಚನೆ
ಬದಲಾಯಿಸಿಅಖಿಲ ಭಾರತ ಅಗರಬತ್ತಿ ಸಂಘವು ಮೈಸೂರು ಅಗರಬತ್ತಿಯನ್ನು ಸರಕುಗಳ ಭೌಗೋಳಿಕ ಸೂಚನೆಗಳ ಕಾಯಿದೆ, ೧೯೯೯ ರ ಅಡಿಯಲ್ಲಿ ನೋಂದಣಿ ಮಾಡುವಂತೆ ಪೇಟೆಂಟ್‌ಗಳು, ವಿನ್ಯಾಸಗಳು ಮತ್ತು ಟ್ರೇಡ್‌ಮಾರ್ಕ್‌ಗಳ ನಿಯಂತ್ರಕ-ಜನರಲ್, ಚೆನ್ನೈನ ಕಛೇರಿಗೆ ಪ್ರಸ್ತಾಪಿಸಿತು. ಮೈಸೂರು ಎಂಬ ಹೆಸರನ್ನು ಬಳಸಿಕೊಳ್ಳಲು ಸ್ಥಳೀಯವಾಗಿ ಲಭ್ಯವಿರುವ ನೈಸರ್ಗಿಕ ಪದಾರ್ಥಗಳನ್ನು ಮಾತ್ರ ಬಳಸಿಕೊಳ್ಳುವಂತೆ ತಿಳಿಸಿ [೫] ಮೂರು ವರ್ಷಗಳ ನಂತರ, 2005 ರಲ್ಲಿ ಭೌಗೋಳಿಕ ಸೂಚಕ ಸ್ಥಾನಮಾನವನ್ನು ನೀಡಲಾಯಿತು.
ಉಲ್ಲೇಖಗಳು
ಬದಲಾಯಿಸಿ- ↑ "Geographical Indications Journal No. 4 Application Number 18" (PDF). Geographical Indications Journal (in ಇಂಗ್ಲಿಷ್) (4). Government of India. 2005. Archived from the original (PDF) on 2009-04-10.
- ↑ "CM asks Centre to reconsider decision on IIT in Dharwad". Deccan Herald. 2015.
- ↑ DODDAMANI, CHANDRASHEKHAR. "CLUSTER DEVELOPMENT PROGRAMME, INDIA DIAGNOSTIC STUDY ARTISAN AGARBATHI (INCENSE STICK) CLUSTER MYSORE (KARNATAKA)" (PDF) (in ಇಂಗ್ಲಿಷ್). NEw Delhi: UNIDO. p. 3. Archived from the original (PDF) on 9 January 2014.
- ↑ "Geographical Indications Journal No. 4 Application Number 18" (PDF). Geographical Indications Journal (in ಇಂಗ್ಲಿಷ್) (4). Government of India. 2005. Archived from the original (PDF) on 2009-04-10."Geographical Indications Journal No. 4 Application Number 18" (PDF). Geographical Indications Journal. Government of India (4). 2005. Archived from the original (PDF) on 10 April 2009.
- ↑ "Geographical Indications Journal No. 4 Application Number 18" (PDF). Geographical Indications Journal (in ಇಂಗ್ಲಿಷ್) (4). Government of India. 2005. Archived from the original (PDF) on 2009-04-10."Geographical Indications Journal No. 4 Application Number 18" (PDF). Geographical Indications Journal. Government of India (4). 2005. Archived from the original (PDF) on 10 April 2009.