ಭೌಗೋಳಿಕ ಕುರುಹು
ಭೌಗೋಳಿಕ ಕುರುಹು (GI)ಎಂಬುದು ಒಂದು ವಸ್ತುವಿನ ಅಥವ ಸಾಮಗ್ರಿಯ ಮೂಲವನ್ನು ನಿರ್ದಿಷ್ಟವಾಗಿ ಒಂದು ಭೌಗೋಳಿಕ ಸ್ಥಳಕ್ಕೆ(ಕ್ಷೇತ್ರ, ಜಾಗ, ಊರು, ದೇಶ) ಗುರುತಿಸುವ ವಿಧಾನ (ಸೂಚಿ ). ಈ ಬಗೆಯಲ್ಲಿ ವಸ್ತುಗಳನ್ನು ಭೌಗೋಳಿಕ ಕುರುಹಿನಿಂದ ಸೂಚಿಸುವುದು ಆ ವಸ್ತುನಿನ ವಿಶೇಷತೆಯ ಬಗೆಗಿನ ನೊಂದಣಿ ಅಂತರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಹಾಗು ವ್ಯಾಪಾರಗಳಲ್ಲಿ ಆ ವಸ್ತುವಿನ ವಿಶೇಷತೆಯ ಹಕ್ಕನು ನಿಗಧಿಗೊಳಿಸುವ ಒಂದು ಮಾರ್ಗವಾಗಿದಿ. ವಸ್ತು ವಿಶೇಷತೆ ನಿರ್ದಿಷ್ಟ ಮೂಲಗುಣಗಳನ್ನು ಗುರುತಿಸುವಂತಹುದ್ದಾಗಿರಬೇಕು. ಮೂಲಗಣಗಳೆಂದರೆ ತಯಾರಿಸುವ (ಉತ್ಪಾದಿಸುವ) ವಿಧಾನ, ಶೈಲಿ, ಖ್ಯಾತಿ, ರುಚಿ, ಪರಿಮಳ, ರಚನೆ, ವಿನ್ಯಾಸ ಗುಣಗಳಾಗಿದ್ದು ,ಅವು ಆ ವಸ್ತು ಮತ್ತು ಕ್ಷೇತ್ರಗಳನ್ನು ಐತಿಹಾಸಿಕವಾಗಿ ಬೆಸೆದಿರಬೇಕು . ಉದಾ:
No. | ಕರ್ನಾಟಕದ ಕೆಲ ಭೌಗೋಳಿಕ ಕುರುಹುಗಳು | ವಸ್ತು | ರಾಜ್ಯ |
---|---|---|---|
೧ | ಮೈಸೂರು ರೇಶ್ಮೆ | ಕರಕುಶಲತೆ | ಕರ್ನಾಟಕ |
೨ | ಮೈಸೂರು ಅಗರಬತ್ತಿ | ಉತ್ಪಾದನೆ | ಕರ್ನಾಟಕ |
೩ | ಚನ್ನಪಟ್ಟನದ ಬೊಂಬೆಗಳು | ಕರಕುಶಲತೆ | ಕರ್ನಾಟಕ |
೪ | ಮೈಸೂರು ರೋಸ್ ವುಡ್ ಒಳಕ್ರಿಯೆ | ಕರಕುಶಲತೆ | ಕರ್ನಾಟಕ |
೫ | ಮೈಸೂರು ಗಂಧದ ಎಣ್ಣೆ | ಉತ್ಪಾದನೆ | ಕರ್ನಾಟಕ |
೬ | ಮೈಸೂರು ಗಂಧದ ಸಾಬು | ಉತ್ಪಾದನೆ | ಕರ್ನಾಟಕ |
೭ | ಕಸ್ತೂರಿ ನೂಲಿನ ಕಲೆ | ಕರಕುಶಲತೆ | ಕರ್ನಾಟಕ |
೮ | ಮೈಸೂರು ಕುಂಚಕಲೆ | ಕರಕುಶಲತೆ | ಕರ್ನಾಟಕ |
೯ | ಮೈಸೂರು ವಿಳ್ಯದ ಎಲೆ | ಕೃಷಿ | ಕರ್ನಾಟಕ |
೧೦ | ನಂಜನಗೂಡು ಬಾಳೆಹಣ್ಣು | ಕೃಷಿ | ಕರ್ನಾಟಕ |
೧೧ | Mysore Jasmine | ಕೃಷಿ | ಕರ್ನಾಟಕ |
೧೨ | Udupi Jasmine | ಕೃಷಿ | ಕರ್ನಾಟಕ |
೧೩ | Hadagali Jasmine | ಕೃಷಿ | ಕರ್ನಾಟಕ |
೧೪ | ಇಲ್ಕಲ್ ಸೀರೇಗಳು | ಕರಕುಶಲತೆ | ಕರ್ನಾಟಕ |
೧೫ | ಮೈಸೂರು ಪಾಕ್[೧] | ಸಿಹಿ ತಿನಿಸು | ಕರ್ನಾಟಕ |
೧೬ | ಕೊಡಗಿನ ಕಿತ್ತಳೆ | ಕೃಷಿ | ಕರ್ನಾಟಕ |
ಉಲ್ಲೇಖಗಳು
ಬದಲಾಯಿಸಿ- ↑ "Tamil Nadu celebrates Mysore Pak day today". 20 September 2013. Archived from the original on 28 ಜನವರಿ 2016. Retrieved 22 January 2016.