ಮೈಂಡ್‌‌ಟ್ರೀ ಲಿಮಿಟೆಡ್‌ (ಬಿಎಸ್‌ಇ: 532819)ಎಂಬುದು ಒಂದು IT ಪರಿಹಾರೋಪಾಯಗಳ ಜಾಗತಿಕ ಕಂಪನಿಯಾಗಿದ್ದು, IT ಸೇವೆಗಳು, ಮೂಲಭೂತಸೌಕರ್ಯ ನಿರ್ವಹಣೆ ಮತ್ತು ತಾಂತ್ರಿಕ ಬೆಂಬಲ (ಇನ್‌‌ಫ್ರಾಸ್ಟ್ರಕ್ಚರ್‌‌ ಮ್ಯಾನೇಜ್‌ಮೆಂಟ್‌ ಅಂಡ್‌ ಟೆಕ್ನಿಕಲ್‌‌ ಸಪೋರ್ಟ್‌-IMTS), ಸ್ವತಂತ್ರ ಪರೀಕ್ಷೆ, ಜ್ಞಾನಾಧಾರಿತ ಸೇವೆಗಳು, ಮತ್ತು R&D ಸೇವೆಗಳು, ತಂತ್ರಾಂಶ ಉತ್ಪನ್ನ ಎಂಜಿನಿಯರಿಂಗ್‌‌ ಹಾಗೂ ನೆಕ್ಸ್ಟ್‌ ಇನ್‌ ವೈರ್‌ಲೆಸ್‌ (NIW) ಇವುಗಳನ್ನು ಒಳಗೊಂಡಿರುವ ಉತ್ಪನ್ನ ಎಂಜಿನಿಯರಿಂಗ್ ವಲಯಗಳಲ್ಲಿ ಪರಿಣತಿಯನ್ನು ಪಡೆದಿದೆ. ಕೇಂಬ್ರಿಜ್‌ ಟೆಕ್ನಾಲಜಿ ಪಾರ್ಟ್‌ನರ್ಸ್‌‌, ಲ್ಯೂಸೆಂಟ್‌ ಟೆಕ್ನಾಲಜೀಸ್‌ ಮತ್ತು ವಿಪ್ರೋ ಮೊದಲಾದ ಕಂಪನಿಗಳಿಂದ ಬಂದ ಉದ್ಯಮದ 10 ವೃತ್ತಿಪ್ರವೀಣರಿಂದ 1999ರಲ್ಲಿ ಮೈಂಡ್‌‌ಟ್ರೀ ಕಂಪನಿಯು ಪ್ರಾರಂಭಿಸಲ್ಪಟ್ಟಿತು. ಪ್ರಸಕ್ತವಾಗಿ, ನ್ಯೂಜರ್ಸಿಯ ವಾರೆನ್‌‌‌ನಲ್ಲಿ ಮತ್ತು ಭಾರತಬೆಂಗಳೂರಿನಲ್ಲಿ ಸಹ-ಕೇಂದ್ರಕಾರ್ಯಾಲಯಗಳನ್ನು ಹೊಂದಿರುವ ಮೈಂಡ್‌ಟ್ರೀ, ಭಾರತದಲ್ಲಿ 3 ಅಭಿವೃದ್ಧಿ ಕೇಂದ್ರಗಳನ್ನು ಮತ್ತು ಏಷ್ಯಾ, ಯುರೋಪ್‌‌ ಹಾಗೂ ಅಮೆರಿಕಾ ಸಂಯುಕ್ತ ಸಂಸ್ಥಾನಗಳಾದ್ಯಂತ ಹಬ್ಬಿರುವ 15 ಕಚೇರಿಗಳನ್ನು ಹೊಂದಿದೆ. ಸಂಸ್ಥಾಪಕ ತಂಡದ ನೇತೃತ್ವವನ್ನು ಅಶೋಕ್‌ ಸೂಟಾ ವಹಿಸಿದ್ದ; ಈತ ಆ ಸಮಯದಲ್ಲಿ ಭಾರತದ ಅತಿದೊಡ್ಡ ತಂತ್ರಾಂಶ ಕಂಪನಿಗಳಲ್ಲಿ ಒಂದಾದ ವಿಪ್ರೋದ ಉಪ ಸಭಾಪತಿ ಮತ್ತು ಅಧ್ಯಕ್ಷನಾಗಿದ್ದ.

Mindtree Ltd.
ಸಂಸ್ಥೆಯ ಪ್ರಕಾರPublic
ಸ್ಥಾಪನೆ18 August 1999
ಮುಖ್ಯ ಕಾರ್ಯಾಲಯBangalore, India
ಪ್ರಮುಖ ವ್ಯಕ್ತಿ(ಗಳು)Subroto Bagchi(Chairman)
Krishnakumar Natarajan(CEO)
Rostow Ravanan(CFO)
ಉದ್ಯಮIT, PES (Product Engineering Services)
ಆದಾಯIncrease$ 501.5 million USD (2014)[೧]
ಆದಾಯ(ಕರ/ತೆರಿಗೆಗೆ ಮುನ್ನ)Increase$ 101 million USD (2014)[೨]
ಒಟ್ಟು ಆಸ್ತಿIncrease$ 341.06 million USD (2014)[೩]
ಉದ್ಯೋಗಿಗಳು13,323 (Dec 2014)[೪]
ಜಾಲತಾಣwww.mindtree.com

2006ರ[೫] ಏಪ್ರಿಲ್‌ನಲ್ಲಿ, ಮೈಂಡ್‌‌ಟ್ರೀ ಕಂಪನಿಯ ಆದಾಯ ಗಳಿಕೆಯು 100 ದಶಲಕ್ಷ USDಯನ್ನು ದಾಟಿದೆ. ಬ್ಲೂಟೂತ್‌‌ ತಂತ್ರಜ್ಞಾನ[೬] ದ ಸೃಷ್ಟಿಯಲ್ಲಿ ಪಾಲ್ಗೊಂಡಿದ್ದ ಮೈಂಡ್‌‌ಟ್ರೀ, ಬ್ಲೂಟೂತ್‌‌ ಸ್ಪೆಷಲ್‌ ಇಂಟರೆಸ್ಟ್‌ ಗ್ರೂಪ್‌‌‌ನ ಓರ್ವ ಸಹ-ಸದಸ್ಯನಾಗಿದೆ.[೭] ಇದರ ಬ್ಲೂಟೂತ್‌‌ ವಿಧ್ಯುಕ್ತ ನಿರೂಪಣೆಯ ಮಾಹಿತಿ ಸಂಗ್ರಹಣಾ ಸಜ್ಜಿಕೆಯ ಪರವಾನಗಿಯನ್ನು NECಗೆ ನೀಡಲಾಗಿದೆ.[೮]

ಆಧಾರ್ ಎಂದು ಕರೆಯಲ್ಪಡುವ, ಭಾರತ ಸರ್ಕಾರದ ರಾಷ್ಟ್ರ-ವ್ಯಾಪಿ ಅನನ್ಯ ಗುರುತಿಸುವಿಕೆಯ (ಯುನಿಕ್‌ ಐಡೆಂಟಿಫಿಕೇಷನ್‌-UID) ಯೋಜನೆಯು, 2010-11ರ ಹಣಕಾಸು ವರ್ಷದ ಮೊದಲನೇ ತ್ರೈಮಾಸಿಕ ಅವಧಿಯಲ್ಲಿ (Q1) ಕಂಪನಿಯು ಸಾಧಿಸಿದ ಗಮನಾರ್ಹವಾದ ಗೆಲುವುಗಳಲ್ಲಿ ಒಂದೆನಿಸಿದೆ. ಅನ್ವಯ ಅಭಿವೃದ್ಧಿ, ನಿರ್ವಹಣೆ ಮತ್ತು ಬೆಂಬಲ ಸೇವೆಗಳನ್ನು ಮೈಂಡ್‌‌ಟ್ರೀ ಒದಗಿಸುತ್ತದೆ.[೯]

ಇತಿಹಾಸ ಬದಲಾಯಿಸಿ

IT ವಲಯದಲ್ಲಿರುವ 7 ಮಂದಿ ಭಾರತೀಯ ವಾಣಿಜ್ಯೋದ್ಯಮಿಗಳಿಂದ ಮೈಂಡ್‌‌ಟ್ರೀ ಕಂಪನಿಯು ಪ್ರಾರಂಭಿಸಲ್ಪಟ್ಟಿತು. ಅವರುಗಳೆಂದರೆ: ಅಶೋಕ್‌ ಸೂಟಾ, ಸುಬ್ರೊತೊ ಬಗ್ಚಿ, ಕೃಷ್ಣಕುಮಾರ್‌ ನಟರಾಜನ್‌, S. ಜಾನಕಿರಾಮನ್‌‌, N.S. ಪಾರ್ಥಸಾರಥಿ, ಕಲ್ಯಾಣ್‌ ಬ್ಯಾನರ್ಜಿ ಮತ್ತು ರೋಸ್ಟೋವ್‌ ರಾವನಾನ್‌; ಮತ್ತು ಅಮೆರಿಕಾದ IT ವ್ಯವಹಾರದಲ್ಲಿನ 3 ಮಂದಿ ಅಗ್ರಗಣ್ಯರು ಇದಕ್ಕೆ ಕೈಜೋಡಿಸಿದರು, ಅವರುಗಳೆಂದರೆ: - ಅಂಜಾನ್‌ ಲಾಹಿರಿ, ಸ್ಕಾಟ್‌ ಸ್ಟೇಪಲ್ಸ್‌‌ ಮತ್ತು ಕಮ್ರಾನ್‌ ಒಜೈರ್‌. ಸ್ಕಾಟ್‌ ಸ್ಟೇಪಲ್ಸ್‌‌ ಈಗ USನಲ್ಲಿನ ಮೈಂಡ್‌‌ಟ್ರೀ ಕಂಪನಿಯ ಕಾರ್ಯಾಚರಣೆಗಳ ನೇತೃತ್ವವನ್ನು ವಹಿಸಿದ್ದಾನೆ. ವಾಲ್ಡನ್‌ ಇಂಟರ್‌ನ್ಯಾಷನಲ್‌‌ ಮತ್ತು ಸಿವನ್‌ ಸೆಕ್ಯುರಿಟೀಸ್ ಎಂಬ ಹೆಸರಿನ ಎರಡು ಸಾಹಸೋದ್ಯಮ ಬಂಡವಾಳ ಸಂಸ್ಥೆಗಳಿಂದ ಪಡೆದ 9.1 ದಶಲಕ್ಷ ಡಾಲರುಗಳಷ್ಟು ಬಂಡವಾಳದೊಂದಿಗೆ ಅವರು ತಮ್ಮ ಸಾಹಸವನ್ನು ಪ್ರಾರಂಭಿಸಿದರು.[೧೦] ಆರಂಭದಲ್ಲಿ ಒಂದು ಅಪ್ಪಟ-ಅಂತರ್ಜಾಲ ಆಧರಿತ, ಇ-ವ್ಯವಹಾರ ಸಮಾಲೋಚನಾ ಮತ್ತು ತಂತ್ರಜ್ಞಾನ ಕಂಪನಿಯಾಗಿ ಶುರುವಾದ ಮೈಂಡ್‌‌ಟ್ರೀ, ಸೆಪ್ಟೆಂಬರ್‌‌ 11ರ ದುರ್ಘಟನೆಯನ್ನು ಅನುಸರಿಸಿಕೊಂಡು ಬಂದ ಕುಸಿತದ ಸಂದರ್ಭದಲ್ಲಿ, IT ಮತ್ತು R&D ಸೇವೆಗಳನ್ನು ತನ್ನ ವ್ಯಾಪ್ತಿಯಲ್ಲಿ ಸೇರಿಸಿಕೊಳ್ಳುವುದಕ್ಕಾಗಿ ತನ್ನ ಸೇವಾ-ಕೊಡುಗೆಗಳನ್ನು ವಿಸ್ತರಿಸಬೇಕಾಗಿಬಂತು. ಆರಂಭದಲ್ಲಿ ಸಾಹಸೋದ್ಯಮ ಬಂಡವಾಳ ಸಂಸ್ಥೆಗಳಿಂದ (VCಗಳಿಂದ) ಪಡೆದ ಬಂಡವಾಳವನ್ನು ಹೊರತುಪಡಿಸಿ, ಕ್ಯಾಪಿಟಲ್‌ ಗ್ರೂಪ್‌‌ ಮತ್ತು ಫ್ರಾಂಕ್ಲಿನ್‌ ಟೆಂಪಲ್‌ಟನ್‌‌ ಎಂಬೆರಡು ಹಣಕಾಸು ಸಂಸ್ಥೆಗಳಿಂದ 2001ರ ಆಗಸ್ಟ್‌‌ನಲ್ಲಿ 14.1 ದಶಲಕ್ಷ ಡಾಲರುಗಳಷ್ಟು ಮೊತ್ತದ ಒಂದು ಎರಡನೇ ಸುತ್ತಿನ ಬಂಡವಾಳವನ್ನು ಕಂಪನಿಯು ಗಳಿಸಿತು.

2006ರ ಡಿಸೆಂಬರ್‌ನಲ್ಲಿ ಸಾರ್ವಜನಿಕ ಷೇರು ನೀಡಿಕೆಗೆ ಮೈಂಡ್‌‌ಟ್ರೀ ಪಾದಾರ್ಪಣ ಮಾಡಿತು. 365 ರೂ.ಗಳಿಂದ 425 ರೂ.ಗಳವರೆಗಿರುವ IPO ಬೆಲೆಪಟ್ಟಿಯನ್ನು ಮೈಂಡ್‌‌ಟ್ರೀ ನಿಗದಿಗೊಳಿಸಿತ್ತು. 600 ರೂ.ಗಿಂತಲೂ ಹೆಚ್ಚಿನ ಬೆಲೆಯಲ್ಲಿ, BSEನಲ್ಲಿ ಮಾರ್ಚ್‌ 7ರಂದು ಮೈಂಡ್‌‌ಟ್ರೀ ಕಂಪನಿಯು ಪಟ್ಟೀಕರಣಕ್ಕೆ ಒಳಗಾಯಿತು ಮತ್ತು ಪಟ್ಟೀಕರಣಕ್ಕೊಳಗಾದ ಕೆಲವೇ ದಿನಗಳೊಳಗಾಗಿ ಈ ಮಟ್ಟವು 1000 ರೂ.ಗಳನ್ನು ದಾಟಿತು. 100 ಪಟ್ಟು ಪ್ರಮಾಣಕ್ಕಿಂತಲೂ ಹೆಚ್ಚು ಪ್ರಮಾಣದಲ್ಲಿ ಮೈಂಡ್‌‌ಟ್ರೀಗೆ ಅತಿಯಾದ ಬಂಡವಾಳವು ಸಂಗ್ರಹವಾಯಿತು. ಆದಾಗ್ಯೂ, 2008ರಲ್ಲಿ USನಲ್ಲಿ ಕಂಡುಬಂದ ಹಿನ್‌ಸರಿತದಿಂದಾಗಿ IT ಷೇರುಗಳು ಕುಸಿಯಲು ತೊಡಗಿದವು ಮತ್ತು ಇದು ಮೈಂಡ್‌‌ಟ್ರೀ ಕಂಪನಿಯ ಮೇಲೂ ವ್ಯತಿರಿಕ್ತ ಪರಿಣಾಮವನ್ನುಂಟುಮಾಡಿತು.

1999ರಲ್ಲಿ ಆರಂಭವಾದಾಗಿನಿಂದ ಮೈಂಡ್‌‌ಟ್ರೀ ಕಂಪನಿಯು ಅನೇಕ ಕಂಪನಿಗಳನ್ನು ಸ್ವಾಧೀನಪಡಿಸಿಕೊಂಡಿದೆ. ಸಾರ್ವಜನಿಕ ನೀಡಿಕೆಯ ಪಟ್ಟೀಕೃತ ಸ್ಥಾನಮಾನವನ್ನು ಪಡೆದುಕೊಂಡ ನಂತರ ಇದು ಕೈಗೊಂಡ ಸ್ವಾಧೀನಗಳಲ್ಲಿ ಪ್ರಮುಖವಾದವುಗಳೆಂದರೆ, 90 ದಶಲಕ್ಷ USDನಷ್ಟಿರುವ ಒಂದು ಇಕ್ವಿಟಿ ಮೌಲ್ಯನಿರ್ಣಯದಲ್ಲಿ 2008ರಲ್ಲಿ ಮಾಡಿಕೊಳ್ಳಲಾದ ಅಜ್‌ಟೆಕ್‌ಸಾಫ್ಟ್‌‌ ಕಂಪನಿಯ ಸ್ವಾಧೀನ ಮತ್ತು 6.55 ದಶಲಕ್ಷ USD ಮೊತ್ತಕ್ಕೆ 2007ರಲ್ಲಿ ಮಾಡಿಕೊಂಡ TES-ಪರ್ಪಲ್‌ ವಿಷನ್‌‌ ಕಂಪನಿಯ ಸ್ವಾಧೀನ.[೧೧] 2009ರ ಸೆಪ್ಟೆಂಬರ್‌ನಲ್ಲಿ, ಕ್ಯೋಸೆರಾ ವೈರ್‌ಲೆಸ್ ಕಂಪನಿಯ ಭಾರತೀಯ ಅಂಗವಾದ ಕ್ಯೋಸೆರಾ ವೈರ್‌ಲೆಸ್‌‌ ಇಂಡಿಯಾ ಪ್ರೈವೇಟ್‌ ಲಿಮಿಟೆಡ್‌ ಎಂಬ ಕಂಪನಿಯನ್ನು 6 ದಶಲಕ್ಷ USDಯಷ್ಟು ಮೊತ್ತದ ಮುಂಗಡ-ಪಾವತಿಯನ್ನು ನೀಡುವ ಮೂಲಕ ಮೈಂಡ್‌‌ಟ್ರೀ ಸ್ವಾಧೀನಪಡಿಸಿಕೊಂಡಿತು.[೧೨] ದೂರದ ಮೂಲಭೂತಸೌಕರ್ಯ ನಿರ್ವಹಣಾ ಸೇವೆಗಳ ಪೂರೈಕೆದಾರ ಕಂಪನಿಯಾದ 7ಸ್ಟ್ರಾಟಾವನ್ನು, 7.2 ಕೋಟಿ ರೂ.ಗಳಷ್ಟು ಮೊತ್ತದ ನಗದು ವ್ಯವಹಾರದ ಮೂಲಕ 2010ರಲ್ಲಿ ಮೈಂಡ್‌‌ಟ್ರೀ ಸ್ವಾಧೀನಪಡಿಸಿಕೊಂಡಿತು.[೧೩]

ತಾನು ಪಾದಾರ್ಪಣ ಮಾಡಿದ್ದ ವಲಯದಲ್ಲಿನ ಒಂದು ಅತ್ಯಂತ ಪ್ರಮುಖ ಮೈಲಿಗಲ್ಲು ಎನಿಸಿದ್ದ 10 ವರ್ಷಗಳ ಪ್ರಯಾಣವನ್ನು ಸಂಪೂರ್ಣಗೊಳಿಸಿದ ನಂತರ, 2009ರ ಆಗಸ್ಟ್‌‌ 18ರಂದು ಮೈಂಡ್‌‌ಟ್ರೀ ಕಂಪನಿಯು ತನ್ನ 10ನೇ ವಾರ್ಷಿಕೋತ್ಸವವನ್ನು ಆಚರಿಸಿಕೊಂಡಿತು. 2014ರ ವೇಳೆಗೆ, 1 ಶತಕೋಟಿ USDನಷ್ಟು ಮೊತ್ತವನ್ನು ತಲುಪುವ, ದೃಢವಾದ ಆತ್ಮವಿಶ್ವಾಸದ ಗುರಿಯನ್ನು ಮೈಂಡ್‌‌ಟ್ರೀ ನಿಗದಿಪಡಿಸಿದೆ. 2010ರ ವರ್ಷದಲ್ಲಿ 272 ದಶಲಕ್ಷ USDಯಷ್ಟು ಮೊತ್ತದ ಆದಾಯಗಳನ್ನು ಮೈಂಡ್‌‌ಟ್ರೀ ದಾಖಲಿಸಿದೆ.

ಪ್ರಶಸ್ತಿಗಳು ಬದಲಾಯಿಸಿ

  • ಟೆಕ್ಸಾಸ್‌ ಇನ್‌ಸ್ಟ್ರುಮೆಂಟ್ಸ್‌ (TI) 2008ರ ಪೂರೈಕೆದಾರ ಉತ್ಕೃಷ್ಟತಾ ಪ್ರಶಸ್ತಿ - ಮೈಂಡ್‌ಟ್ರೀ ಈ ಪ್ರಶಸ್ತಿಯನ್ನು ಗೆಲ್ಲುವಲ್ಲಿನ ಮೊದಲ ಭಾರತೀಯ ಕಂಪನಿಯಾಗಿದೆ.[೧೪]
  • 2008ರ ಸಾಂಸ್ಥಿಕ ಆಡಳಿತದಲ್ಲಿನ ಉತ್ಕೃಷ್ಟತೆಗಾಗಿ ದೊರಕಿದ ICSI ರಾಷ್ಟ್ರೀಯ ಪ್ರಶಸ್ತಿ.[೧೫]
  • ಏಷ್ಯಾ ಪೆಸಿಫಿಕ್ ವಲಯದಲ್ಲಿನ ‌‌ಮಾರಾಟ ಮತ್ತು ವಿತರಣಾ ಕ್ಷೇತ್ರಗಳಲ್ಲಿ ದಾಖಲಿಸಿದ ಸರ್ವಾಂಗೀಣ ತಾಂತ್ರಿಕ ಉತ್ಕೃಷ್ಟತೆಗಾಗಿ, 2008ರ IBM ಬೀಕನ್‌‌ ಪ್ರಶಸ್ತಿ.[೧೬]
  • ಜ್ಞಾನಾಧಾರಿತ ನಿರ್ವಹಣೆಗೆ (ನಾಲೆಜ್‌ ಮ್ಯಾನೇಜ್‌ಮೆಂಟ್‌-KM) ಸಂಬಂಧಿಸಿದಂತೆ ನಾಸ್‌ಕಾಮ್‌ ವತಿಯಿಂದ 2007ರಲ್ಲಿ ನೀಡಲ್ಪಟ್ಟ ನಾಸ್‌ಕಾಮ್‌ ಹೊಸಮಾರ್ಪಾಟು ಪ್ರಶಸ್ತಿ.[೧೭]
  • ಟೆಲಿಯೋಸ್‌ ಮತ್ತು ನೊ ನೆಟ್‌ವರ್ಕ್‌ (Know Network) ವತಿಯಿಂದ ನಿರ್ವಹಿಸಲ್ಪಡುತ್ತಿರುವ ಒಂದು ವಾರ್ಷಿಕ ಅಧ್ಯಯನವನ್ನು ಆಧರಿಸಿ, ಭಾರತದಲ್ಲಿರುವ ಅತ್ಯಂತ ಮೆಚ್ಚುಗೆ ಪಡೆದ ಜ್ಞಾನಾಧಾರಿತ ಉದ್ಯಮಗಳ (ಮೋಸ್ಟ್‌ ಅಡ್ಮೈರ್ಡ್‌ ನಾಲೆಜ್‌ ಎಂಟರ್‌‌ಪ್ರೈಸ್‌-MAKE) ಪೈಕಿ ಮೈಂಡ್‌‌ಟ್ರೀ ಕಂಪನಿಗೆ 1ನೇ ಸ್ಥಾನವು ದೊರಕಿದೆ.[೧೮]
  • ಬಿಸಿನೆಸ್‌ ಟುಡೆ-ಮರ್ಸೆರ್‌‌-TNS ಅಧ್ಯಯನದಲ್ಲಿ ಕಂಡುಬಂದಿರುವಂತೆ, "ಕೆಲಸ ಮಾಡಲು ಉತ್ತಮ ಅವಕಾಶವನ್ನು ನೀಡುವ 2005ರಲ್ಲಿನ ಅತ್ಯುತ್ತಮ ಕಂಪನಿಗಳ" ಪಟ್ಟಿಯಲ್ಲಿ ಮೈಂಡ್‌ಟ್ರೀ ಸ್ಥಾನವನ್ನು ಗಳಿಸಿಕೊಂಡಿದೆ.
  • ಗ್ರೋ ಟ್ಯಾಲೆಂಟ್‌ ಕಂಪನಿ ಮತ್ತು ಬಿಸಿನೆಸ್‌ ವರ್ಲ್ಡ್‌ ವತಿಯಿಂದ ನಿರ್ವಹಿಸಲ್ಪಟ್ಟ ಒಂದು ಅಧ್ಯಯನದಲ್ಲಿ, "ಕೆಲಸ ಮಾಡುವುದಕ್ಕಾಗಿರುವ ಮಹೋನ್ನತ ಸ್ಥಳಗಳು" ಎಂಬ ವರ್ಗದಲ್ಲಿ 2005ರಲ್ಲಿ ಮೈಂಡ್‌ಟ್ರೀ ಸ್ಥಾನವನ್ನು ಗಳಿಸಿದ್ದು, ತನ್ಮೂಲಕ ಎರಡನೇ ಅನುಕ್ರಮದ ವರ್ಷದಲ್ಲಿ ಅದು ಈ ಗೌರವಕ್ಕೆ ಪಾತ್ರವಾದಂತಾಗಿದೆ.
  • ಹೆವಿಟ್‌ ಅಸೋಸಿಯೇಟ್ಸ್‌ ವತಿಯಿಂದ ನಡೆಸಲಾದ ಅಧ್ಯಯನದ ಅನುಸಾರ, "ಭಾರತದಲ್ಲಿನ ಅತ್ಯುತ್ತಮ ಉದ್ಯೋಗದಾತ ಕಂಪನಿಗಳು" ಎಂಬ ವರ್ಗದಲ್ಲಿ ಒಂದೆನಿಸಿಕೊಳ್ಳುವ ಮೂಲಕ, ಮೈಂಡ್‌ಟ್ರೀ ಕಂಪನಿಯು 2004ರಲ್ಲಿ ಎರಡನೇ ಅನುಕ್ರಮದ ವರ್ಷದ ಗೌರವವನ್ನು ಸ್ವೀಕರಿಸಿದೆ.
  • CRMMನ 5ನೇ ಮಟ್ಟದ ಪ್ರಮಾಣೀಕರಣವನ್ನು ಗಳಿಸುವಲ್ಲಿನ ಅತ್ಯಂತ ಕಿರಿಯ ಕಂಪನಿ ಎಂಬ ಕೀರ್ತಿಗೆ ಮೈಂಡ್‌ಟ್ರೀ ಪಾತ್ರವಾಗಿದೆ.
  • ಬಿಸಿನೆಸ್‌ ಟುಡೆ—ಮರ್ಸೆರ್‌‌ ವತಿಯಿಂದ ಕೈಗೊಳ್ಳಲಾದ ಅಧ್ಯಯನ-ಸಮೀಕ್ಷೆಯಲ್ಲಿ, "ಭಾರತದಲ್ಲಿ ಕಾರ್ಯನಿರ್ವಹಿಸುವುದಕ್ಕೆ ಸಂಬಂಧಿಸಿದಂತಿರುವ ಅತ್ಯುತ್ತಮ ಕಂಪನಿಗಳು" ಎಂಬ ವರ್ಗದಲ್ಲಿ ಎರಡನೇ ಸ್ಥಾನವನ್ನು ಗಳಿಸುವ ಮೂಲಕ, 2007ರಲ್ಲಿ ಎರಡನೇ ಅನುಕ್ರಮದ ವರ್ಷಕ್ಕಾಗಿ ಈ ಗೌರವಕ್ಕೆ ಮೈಂಡ್‌ಟ್ರೀ ಪಾತ್ರವಾಗಿದೆ.[೧೯]
  • "100 ಜಾಗತಿಕ ಸೇವೆಗಳು" ಪಟ್ಟಿಯಲ್ಲಿ ಮಾನವ ಸಂಪನ್ಮೂಲ ಅಭಿವೃದ್ಧಿಗೆ ಸಂಬಂಧಿಸಿದಂತೆ ಅಗ್ರಗಣ್ಯ ಪಟ್ಟವು ಮೈಂಡ್‌ಟ್ರೀಗೆ ದೊರಕಿದೆ - ಮೂಲ CMP-ಸೈಬರ್‌ ಮೀಡಿಯಾ.
  • 2009ರ MAKE ಪ್ರಶಸ್ತಿ [೧] Archived 2013-01-04 at Archive.is
  • CEOWORLD ನಿಯತಕಾಲಿಕದ "2010ರ ಜಾಗತಿಕ ಹೊರಗುತ್ತಿಗೆಯ 100 ಅಗ್ರಗಣ್ಯ ಕಂಪನಿಗಳು" ಎಂಬ ಪಟ್ಟಿಯಲ್ಲಿ ಮೈಂಡ್‌ಟ್ರೀ ಸ್ಥಾನವನ್ನು ಗಳಿಸಿಕೊಂಡಿದೆ. ಈ ಪಟ್ಟಿಯು ಒಳಗೊಂಡಿರುವ ಇತರ ಪ್ರಮುಖ ಕಂಪನಿಗಳೆಂದರೆ: ಅಸೆಂಚರ್‌‌, ಇನ್ಫೊಸಿಸ್‌‌, ಸೊಡೆಕ್ಸೊ, ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್‌, ಕನ್ವರ್ಜಿಸ್‌, ವಿಪ್ರೋ ಮತ್ತು IBM.[೨೦]

ಲಾಂಛನ ಬದಲಾಯಿಸಿ

ಮೈಂಡ್‌‌ಟ್ರೀ ಕಂಪನಿಯ ಲಾಂಛನವನ್ನು ಓರ್ವ ವಿದ್ಯಾರ್ಥಿಯು ಸೃಷ್ಟಿಸಿದ; ಈತ ಮಸ್ತಿಷ್ಕದ ಪಾರ್ಶ್ವವಾಯುವಿನ ಸಮಸ್ಯೆಯಿಂದ ಬಳಲುತ್ತಿದ್ದ. ಮಸ್ತಿಷ್ಕದ ಪಾರ್ಶ್ವವಾಯುವಿನ ಸಮಸ್ಯೆಯೊಂದಿಗೆ ಬಳಲುತ್ತಿರುವ ಮತ್ತು ಅಂಥವರಲ್ಲಿ ಗಾಲಿ ಕುರ್ಚಿಗಳಲ್ಲಿ ತಮ್ಮ ಕಾಲವನ್ನು ಮಕ್ಕಳಿಗಾಗಿ ಒಂದು ಶಾಲೆಯನ್ನು ನಡೆಸುತ್ತಿರುವ, ಕರ್ನಾಟಕದ ಸ್ಪ್ಯಾಸ್ಟಿಕ್ಸ್‌ ಸೊಸೈಟಿಯಲ್ಲಿನ ಹತ್ತು ವಿದ್ಯಾರ್ಥಿಗಳ ಒಂದು ಗುಂಪಿನೊಂದಿಗೆ ಮೈಂಡ್‌‌ಟ್ರೀ ತಂಡವು ಪರಸ್ಪರ ಸಂವಹನೆಯನ್ನು ನಡೆಸಿತು; ಹಾಗೂ ಮೈಂಡ್‌‌ಟ್ರೀ ಕಂಪನಿಯ ಧ್ಯೇಯ, ದೃಷ್ಟಿಕೋನ, ಮತ್ತು ಮುಖ್ಯ ಮೌಲ್ಯಗಳನ್ನು ಅವರಿಗೆ ವಿವರಿಸಿತು. ತರುವಾಯದಲ್ಲಿ, ಹಲವಾರು ಸಮಾಲೋಚನಾ ಸಭೆಗಳ ನಂತರ, ಗ್ರಾಫಿಕ್‌ ವಿನ್ಯಾಸದ ಹಿಂದಿರುವ ಕೆಲವೊಂದು ಮೂಲಭೂತ ಪರಿಕಲ್ಪನೆಗಳನ್ನು ತಂಡವು ಅವರಿಗೆ ವಿವರಿಸಿತು ಮತ್ತು ಚಿರಪರಿಚಿತವಾಗಿರುವ ಹಲವಾರು ಅಂತರರಾಷ್ಟ್ರೀಯ ಲಾಂಛನಗಳ ಅರ್ಥವಿವರಿಸುವಂತೆ ಅವರನ್ನು ಕೇಳಿತು. ಎಲ್ಲಾ ಹತ್ತೂ ವಿದ್ಯಾರ್ಥಿಗಳು ಮೈಂಡ್‌‌ಟ್ರೀಯ ಲಾಂಛನದ ಕುರಿತಾದ ತಮ್ಮ ವಿವರಣೆಯನ್ನು ಸಲ್ಲಿಸಿದರು. ಚೇತನ್‌‌ K.S. ಎಂಬಾತನ ವಿವರಣೆಯನ್ನು ಸ್ವೀಕರಿಸಿ ಬಳಸಿಕೊಳ್ಳಲು ಮೈಂಡ್‌‌ಟ್ರೀ ನಿರ್ಧರಿಸಿತು; ಈ ವಿದ್ಯಾರ್ಥಿಯು ಚಲಿಸಲು ಮತ್ತು ಮಾತನಾಡಲು ಅಸಮರ್ಥನಾಗಿದ್ದ. ಊರ್ಧ್ವಗಾಮಿಯಾಗಿರುವ, ನಿಖರವಾದ ನೀಲಿ ಕುಂಚದ ನಿಪುಣರೇಖೆಯು ಚೇತನ್‌ನ ಸಂವಹನಾ ಕಲ್ಪನೆಯ ಒಂದು ವಿಧಾನವಾಗಿದೆ. ಕೈಗೊಳ್ಳಬೇಕಿರುವ ಚಟುವಟಿಕೆಯುಕ್ತ ಕ್ರಮವನ್ನು ಕೆಂಪು ಬಣ್ಣವು ಪ್ರತಿನಿಧಿಸುತ್ತದೆ. ಅಂತಿಮವಾಗಿ, ಉಜ್ಜ್ವಲ ಹಳದಿ ಗುಳ್ಳೆಗಳು ಸಂತೋಷವನ್ನು ಪ್ರತಿನಿಧಿಸುತ್ತವೆ.

ಸಮಗ್ರತಾ ಕಾರ್ಯನೀತಿ ಬದಲಾಯಿಸಿ

ಮೈಂಡ್‌‌ಟ್ರೀ ಕಂಪನಿಯು ಒಂದು ಸಮಗ್ರತಾ ಕಾರ್ಯನೀತಿಯನ್ನು ಪ್ರಕಟಿಸಿದೆ; ಸಮಗ್ರತಾ ಕಾರ್ಯನೀತಿಯು ಎಲ್ಲಾ ಮಧ್ಯಸ್ಥಗಾರರಿಗೂ ಅನ್ವಯಿಸುತ್ತದೆ ಮತ್ತು ಇದನ್ನು ಉಲ್ಲಂಘಿಸಿದರೆ ಅವರೊಂದಿಗಿನ ಸಂಬಂಧವು ಅಂತ್ಯಗೊಳ್ಳುತ್ತದೆ.[೨೧]

ಕಚೇರಿಗಳು ಮತ್ತು ತಾಣಗಳು ಬದಲಾಯಿಸಿ

ಮೈಂಡ್‌‌ಟ್ರೀ ಕಂಪನಿಯ ಪ್ರಾದೇಶಿಕ ಕೇಂದ್ರಕಾರ್ಯಾಲಯಗಳು ಬೆಂಗಳೂರು, ಲಂಡನ್‌‌, ಮತ್ತು ವಾರೆನ್‌‌ನಲ್ಲಿ (ನ್ಯೂಜರ್ಸಿ) ನೆಲೆಗೊಂಡಿವೆ.

ಮೈಂಡ್‌‌ಟ್ರೀ ಕಂಪನಿಯ ಅರ್ಜಿಯ ಅನುಸಾರ, ಒರಿಸ್ಸಾದ ಕೈಗಾರಿಕಾ ಅಭಿವೃದ್ಧಿ ನಿಗಮದ ವತಿಯಿಂದ ಅದಕ್ಕೆ 20 ಎಕರೆಗಳಷ್ಟು ಜಮೀನು ಮಂಜೂರಾಗಿದ್ದು, ಅಲ್ಲಿನ ಭುವನೇಶ್ವರ್‌‌ನಲ್ಲಿ ಪ್ರಾರಂಭಿಸಲು ಉದ್ದೇಶಿಸಿದ್ದ ಯೋಜನೆಯು ಸದ್ಯಕ್ಕೆ ವಿಳಂಬಗೊಂಡಿದೆ; ಸದರಿ ಜಮೀನಿನ ಪೈಕಿ ಸುಮಾರು 4.8 ಎಕರೆಗಳಷ್ಟು ಭಾಗವು ಖಾಸಗಿಯವರ ಸ್ವಾಮ್ಯದಲ್ಲಿರುವುದರಿಂದ, ಸದರಿ ನಿವೇಶನವನ್ನು ಮತ್ತಷ್ಟು ಅಭಿವೃದ್ಧಿಪಡಿಸದಂತೆ ಒರಿಸ್ಸಾದ ಉಚ್ಚ ನ್ಯಾಯಾಲಯದ ವತಿಯಿಂದ ನೀಡಲ್ಪಟ್ಟಿರುವ ಒಂದು ತಡೆಯಾಜ್ಞೆಯ (28.8.2006ರ ದಿನಾಂಕದ 2006ರ ಆದೇಶ ಸಂ. 9988) ಕಾರಣದಿಂದ ಈ ವಿಳಂಬವಾಗಿದೆ.

ಏಷ್ಯಾ ಪೆಸಿಫಿಕ್ ಬದಲಾಯಿಸಿ

ಉತ್ತರ ಅಮೆರಿಕಾ ಬದಲಾಯಿಸಿ

  • USA: ಬೆಲ್ಲೆವ್ಯೂ (WA), ವಾರೆನ್‌‌ (NJ), ಸ್ಕೌಂಬರ್ಗ್‌ (IL), ಸ್ಯಾನ್‌ ಜೋಸ್‌(CA), ಪ್ಲಾನೋ (TX)

ಯುರೋಪ್‌‌ ಮಧ್ಯಪ್ರಾಚ್ಯ ಬದಲಾಯಿಸಿ

  • ಸ್ವೀಡನ್‌‌: ಗೊಟೆಬರ್ಗ್‌
  • UK: ಲಂಡನ್‌‌
  • ಜರ್ಮನಿ: ಕಲೋನ್‌‌
  • ಫ್ರಾನ್ಸ್‌‌: ಪ್ಯಾರಿಸ್‌
  • ಸ್ವಿಜರ್‌ಲೆಂಡ್‌: ಲೀಸ್ಟಲ್‌
  • UAE: ದುಬೈ

ಮೈಂಡ್‌‌ಟ್ರೀ ಕಚೇರಿ ಆವರಣದ ಬಿಂಬಗಳು ಬದಲಾಯಿಸಿ

ಲಾಭಕರ ಕೇಂದ್ರಗಳು ಬದಲಾಯಿಸಿ

IT ಸೇವೆಗಳು
- ಆಯಕಟ್ಟಿನ ಉದ್ಯಮಗಳು -

  • ಪ್ರಯಾಣ ಮತ್ತು ಸಾರಿಗೆ
  • ತಯಾರಿಕಾ ವಲಯ (ಬಳಕೆದಾರರ ಸರಕುಗಳು, ಮೋಟಾರು ವಾಹನಗಳು ಮತ್ತು ಔಷಧ ವಸ್ತುಗಳು)
  • ಬ್ಯಾಂಕ್‌ ವ್ಯವಹಾರ ಮತ್ತು ಹಣಕಾಸಿನ ಸೇವೆಗಳು
  • ಬಂಡವಾಳ ಮಾರುಕಟ್ಟೆಗಳು
  • ಉನ್ನತ ತಂತ್ರಜ್ಞಾನ
  • ವಿಮೆ
  • ಬಹು ಮಾರುಕಟ್ಟೆಗಳು (ಚಿಲ್ಲರೆ ವ್ಯಾಪಾರ, ಮಾಧ್ಯಮಗಳು)

ಉತ್ಪನ್ನ ಎಂಜಿನಿಯರಿಂಗ್‌‌ ಸೇವೆಗಳು

R&D ಸೇವೆಗಳು
-ಮಾರುಕಟ್ಟೆಗಳು -

  • ಮೋಟಾರು ವಾಹನಗಳು
  • ಸಂವಹನಾ ವ್ಯವಸ್ಥೆಗಳು
  • ಬಳಕೆದಾರ ಉಪಕರಣಗಳು ಮತ್ತು ಕಂಪ್ಯೂಟರ್‌‌ ಬಾಹ್ಯ ಅಳವಡಿಕೆಗಳು
  • ಔದ್ಯಮಿಕ ವ್ಯವಸ್ಥೆಗಳು
  • ವೈದ್ಯಕೀಯ ವಿದ್ಯುನ್ಮಾನ ವ್ಯವಸ್ಥೆಗಳು
  • ದಾಖಲೆ ಸಂಗ್ರಹಣಾ ಮತ್ತು ಕಂಪ್ಯೂಟರ್‌ ಬಳಕೆಯ ವ್ಯವಸ್ಥೆಗಳು
  • ಬಹು ಮಾರುಕಟ್ಟೆಗಳು (ಏವಿಯಾನಿಕ್ಸ್‌‌: ವಾಯುಯಾನದಲ್ಲಿ ವಿದ್ಯುತ್‌ ಹಾಗೂ ವಿದ್ಯುನ್ಮಾನ ಉಪಕರಣಗಳನ್ನು ಬಳಸುವ ತಂತ್ರಜ್ಞಾನ)

- ಪರವಾನಗಿ ಕೊಡಬಹುದಾದ IP ಕೊಡುಗೆಗಳು -

  • ಬ್ಲೂಟೂತ್‌‌ (ತಂತ್ರಾಂಶ ಮಾಹಿತಿ ಸಂಗ್ರಹಣಾ ಸಜ್ಜಿಕೆ ಮತ್ತು ಬೇಸ್‌ಬ್ಯಾಂಡ್‌)
  • SBC (ಬ್ಲೂಟೂತ್‌‌ ಕಡಿಮೆ-ಸಂಕೀರ್ಣತೆಯ ಸಬ್‌-ಬ್ಯಾಂಡ್‌ ಕೋಡೆಕ್‌‌)

ತಂತ್ರಾಂಶ ಉತ್ಪನ್ನದ ಎಂಜಿನಿಯರಿಂಗ್‌‌

  • ವ್ಯವಹಾರ ಅನ್ವಯಿಕ ಉತ್ಪನ್ನಗಳು
  • ತಂತ್ರಾಂಶ ಸಾಧನಗಳು ಮತ್ತು ವೇದಿಕೆಗಳು
  • ಸಮುದಾಯದ ಮತ್ತು ಸಾಮಾಜಿಕ ಜಾಲಬಂಧದ ವೆಬ್‌ತಾಣಗಳು
  • ಮಾಹಿತಿ ಮತ್ತು ವ್ಯವಹಾರ ನಿರ್ವಹಣೆಯ ವೆಬ್‌ತಾಣಗಳು

ಸ್ವತಂತ್ರ ಪರೀಕ್ಷೆ

ಮೂಲಭೂತಸೌಕರ್ಯ ನಿರ್ವಹಣೆ ಮತ್ತು ತಂತ್ರಜ್ಞಾನದ ಬೆಂಬಲ

ಜ್ಞಾನಾಧಾರಿತ ಸೇವೆ (ನಾಲೆಜ್‌ ಸರ್ವೀಸ್‌-KPO)

ನಿಸ್ತಂತು ಉತ್ಪನ್ನಗಳು

  • ಬ್ರಾಂಡ್‌ ಮಾಡಲು ಸಿದ್ಧವಿರುವ ಮೊಬೈಲ್‌‌ ಹ್ಯಾಂಡ್‌ಸೆಟ್‌ ಮತ್ತು ಅಭಿಗಮನದ ಉಪಕರಣಗಳು
  • ನಿಸ್ತಂತು ಮೂಲಭೂತಸೌಕರ್ಯ ಬೌದ್ಧಿಕ ಸ್ವತ್ತು (ಇಂಟಲೆಕ್ಚುಯಲ್‌ ಪ್ರಾಪರ್ಟಿ-IP), ಉಪವ್ಯವಸ್ಥೆಗಳು ಮತ್ತು ಕಾರ್ಯಾಚರಣಾ ಕೇಂದ್ರಗಳು

ಸ್ವಾಧೀನಕಾರ್ಯಗಳು ಬದಲಾಯಿಸಿ

1) NOIDA ಮೂಲದ ASAP ಸಲ್ಯೂಷನ್ಸ್‌‌ ಕಂಪನಿಯನ್ನು ಸಂಪೂರ್ಣ ನಗದು ವ್ಯವಹಾರದ ಆಧಾರದ ಮೇಲೆ 2004ರಲ್ಲಿ ಸ್ವಾಧೀನಪಡಿಸಿಕೊಂಡಿತು
2) ಬೆಂಗಳೂರು ಮೂಲದ ಲಿಂಕ್‌ ಸಾಫ್ಟ್‌‌ವೇರ್‌ ಸರ್ವೀಸಸ್‌ ಪ್ರೈವೇಟ್‌ ಲಿಮಿಟೆಡ್ ಕಂಪನಿಯನ್ನು, ಸ್ಟಾಕ್‌‌ ಮತ್ತು ನಗದು ವ್ಯವಹಾರದ ಆಧಾರದ ಮೇಲೆ 2005ರಲ್ಲಿ ಸ್ವಾಧೀನಪಡಿಸಿಕೊಂಡಿತು
3) ಕೋಸಿಸ್ಟಮ್ಸ್‌‌ ಕಂಪನಿಯ ಭಾರತೀಯ ವಿಭಾಗವನ್ನು, ಸಂಪೂರ್ಣ ನಗದು ವ್ಯವಹಾರದ ಆಧಾರದ ಮೇಲೆ ಸ್ವಾಧೀನಪಡಿಸಿಕೊಂಡಿತು
4) TES-ಪರ್ಪಲ್‌ ವಿಷನ್‌ ಕಂಪನಿಯನ್ನು 2007ರ ಡಿಸೆಂಬರ್‌ನಲ್ಲಿ ಸ್ವಾಧೀನಪಡಿಸಿಕೊಂಡಿತು
5) ಅಜ್‌ಟೆಕ್‌ಸಾಫ್ಟ್‌‌[೨೨] ಕಂಪನಿಯಲ್ಲಿನ ಬಹುಪಾಲು ಇಕ್ವಿಟಿ ಹಿತಾಸಕ್ತಿಯನ್ನು ಮೈಂಡ್‌‌ಟ್ರೀ ಸ್ವಾಧೀನಪಡಿಸಿಕೊಂಡಿದೆ
6) ಪುಣೆ ಮೂಲದ ಅಲೆರಿಯಾನ್‌ ಕಂಪನಿಯನ್ನು 2008ರಲ್ಲಿ ಸ್ವಾಧೀನಪಡಿಸಿಕೊಂಡಿತು[ಸೂಕ್ತ ಉಲ್ಲೇಖನ ಬೇಕು]
7) ಬೆಂಗಳೂರು ಮೂಲದ ಕ್ಯೋಸೆರಾ ಇಂಡಿಯಾ ಪ್ರೈವೇಟ್‌ ಲಿಮಿಟೆಡ್ ಕಂಪನಿಯನ್ನು ಸ್ವಾಧೀನಪಡಿಸಿಕೊಂಡಿತು.
8) ಚೆನ್ನೈ ಮೂಲದ 7ಸ್ಟ್ರಾಟಾ ಎಂಬ, ದೂರದ IT ಮೂಲಭೂತಸೌಕರ್ಯ ನಿರ್ವಹಣಾ ಸೇವೆಗಳನ್ನು ಒದಗಿಸುವ ಕಂಪನಿಯನ್ನು ಸ್ವಾಧೀನಪಡಿಸಿಕೊಂಡಿತು

IPO ವಿವರಗಳು ಬದಲಾಯಿಸಿ

2006ರ ಡಿಸೆಂಬರ್‌ 12ರಂದು ನಡೆಯಲಿದ್ದ ತನ್ನ ಆರಂಭಿಕ ಸಾರ್ವಜನಿಕ ನೀಡಿಕೆಗೆ (IPO) ಸಂಬಂಧಿಸಿದಂತೆ ಸೆಕ್ಯುರಿಟೀಸ್‌ ಅಂಡ್‌ ಎಕ್ಸ್‌ಚೇಂಜ್‌ ಬೋರ್ಡ್‌ ಆಫ್‌ ಇಂಡಿಯಾಗೆ (Sebi), ತನ್ನ ಯಾವ ವರ್ಗಕ್ಕೂ ಸೇರಿಸಲಾಗದ ವಿವರಣ ಪತ್ರದ ಕರಡನ್ನು ಮೈಂಡ್‌‌ಟ್ರೀ ಕನ್ಸಲ್ಟಿಂಗ್‌ ಸಲ್ಲಿಸಿತ್ತು. ಇದು ತಲಾ 10 ರೂ.ಗಳ ಮುಖಬೆಲೆಯ 5,593,300 ಇಕ್ವಿಟಿ ಷೇರುಗಳ ಒಂದು ನೀಡಿಕೆಯಾಗಿತ್ತು.[೨೩]

2007ರ ಫೆಬ್ರುವರಿ 9ರಂದು IPOನ್ನು ಪ್ರಾರಂಭಿಸಿದ ಮೈಂಡ್‌‌ಟ್ರೀ, 2007ರ ಫೆಬ್ರುವರಿ 14ರಂದು ಇದನ್ನು ಮುಕ್ತಾಯಗೊಳಿಸಿತು. ನಿಗದಿಗೊಳಿಸಲ್ಪಟ್ಟಿದ್ದ ಬೆಲೆಪಟ್ಟಿಯು 365 ರೂ.ಗಳಿಂದ 425 ರೂ.ಗಳವರೆಗಿತ್ತು.[೨೪] ಸದರಿ IPOಗೆ ಸಂಬಂಧಿಸಿದಂತೆ, ಇದ್ದುದಕ್ಕಿಂತಲೂ 100 ಪಟ್ಟು ಹೆಚ್ಚಿನ ಅತಿಯಾದ ಬಂಡವಾಳವು ಸಂಗ್ರಹವಾಯಿತು.[೨೫]

2007-03-07ರಂದು 600 ರೂ.ಗಿಂತ ಹೆಚ್ಚಿನ ಬೆಲೆಯಲ್ಲಿ ಮೈಂಡ್‌‌ಟ್ರೀ ಕಂಪನಿಯು ಪಟ್ಟೀಕೃತವಾಯಿತು [೨೬]

ಉಲ್ಲೇಖಗಳು ಬದಲಾಯಿಸಿ

  1. "mindtree revenue".
  2. "Operating Income". Archived from the original on 2014-12-09. Retrieved 2015-03-26.
  3. "Mindtree Total Assets and Asset Turnover Ratio Financial Graphs". moneycontrol.com.
  4. "No Of Employees".
  5. "MindTree posts $102-m revenue". Business Line. ದಿ ಹಿಂದೂ. 2006-04-03. Retrieved 2006-07-05.
  6. Roy, Shubhrangshu (2004-12-03). "MindTree's R&D reaches new heights". The Economic Times. Retrieved 2006-07-05.
  7. "Bluetooth SIG Associate Members". 2006. Retrieved 2006-07-05.
  8. Ribeiro, John (2005-12-14). "NEC licenses Bluetooth from Indian company". InfoWorld. Retrieved 2006-07-05.
  9. "MindTree News".
  10. Saxena, Neeraj (2002-04-28). "Soota reflects infotech sector at CII". ಟೈಮ್ಸ್ ಆಫ್ ಇಂಡಿಯ. Archived from the original on 2008-04-09. Retrieved 2006-07-05.
  11. "MindTree acquires TES-Purple Vision". Archived from the original on 2012-12-21. Retrieved 2010-08-19.
  12. "ಮೈಂಡ್‌‌ಟ್ರೀ ಬೈಸ್‌ ಕ್ಯೋಸೆರಾ ವೈರ್‌ಲೆಸ್‌‌ ಇಂಡಿಯಾ". Archived from the original on 2010-01-13. Retrieved 2010-08-19.
  13. "MindTree to acquire 7Strata for Rs7.2 cr".
  14. "TI Award for MindTree". Archived from the original on 2012-02-10. Retrieved 2010-08-19.
  15. "The Hindu : Business / Briefly : Award for MindTree". Archived from the original on 2011-06-29. Retrieved 2010-08-19.
  16. "IBM Beacon 2008 Awards".
  17. "MindTree clinches Nasscom Innovation Award 2007". Archived from the original on 2008-04-07. Retrieved 2010-08-19.
  18. "India's Most Admired Knowledge Enterprises". Teleos. 2007-11-15. Archived from the original on 2007-12-23. Retrieved 2007-11-15.
  19. "Indian Companies Emerge at the Top of the Business Today -- Mercer Human Resource Consulting Best Companies to Work For In India Rankings consecutively for 2006 and 2007". IndiaPRwire. 2006-11-09. Archived from the original on 2007-09-26. Retrieved 2006-11-16.
  20. "CEOWORLD ನಿಯತಕಾಲಿಕ: ಆಗಸ್ಟ್‌‌ 09, 2010-ಜಾಗತಿಕ ಹೊರಗುತ್ತಿಗೆಯ 100 ಅಗ್ರಗಣ್ಯ ಕಂಪನಿಗಳು, 2010". Archived from the original on 2010-08-15. Retrieved 2010-08-19.
  21. "ಆರ್ಕೈವ್ ನಕಲು" (PDF). Archived from the original (PDF) on 2010-01-02. Retrieved 2010-08-19.
  22. "MindTree to Acquire Majority Equity Interest in Aztecsoft"..
  23. "MindTree files for IPO, Soota's stake to fall". Times News Network. 2006-12-12. Retrieved 2006-12-12.
  24. "MindTree sets IPO price band of 365-425 rupees". 2007-02-01. Archived from the original on 2007-02-16. Retrieved 2006-02-01.
  25. "MindTree IPO oversubscribed 103.28 times". Moneycontrol. 2007-02-14. Retrieved 2006-02-14.
  26. "MindTree Consulting debuts with 47.5% premium". 2007-03-07. Archived from the original on 2007-03-10. Retrieved 2006-03-07..

ಬಾಹ್ಯ ಕೊಂಡಿಗಳು ಬದಲಾಯಿಸಿ