ಮೇರಿ ಇವಾನ್ಸ್ ವಾಡಿಯ
ಮೇರಿ ಆನ್ ಇವಾನ್ಸ್, ಮೇರಿ ಇವಾನ್ಸ್ ವಾಡಿಯಾ ಮತ್ತು ಅವಳ ವೇದಿಕೆಯ ಹೆಸರು ಫಿಯರ್ಲೆಸ್ ನಾಡಿಯಾ (8 ಜನವರಿ 1908 - 9 ಜನವರಿ 1996) ಒಬ್ಬ ನಟಿ ಮತ್ತು ಸ್ಟಂಟ್ ವುಮನ್ ಆಗಿದ್ದರು, ಹಂಟರ್ವಾಲಿಯಲ್ಲಿನ ಮುಖವಾಡ, ಗಡಿಯಾರದ ಸಾಹಸಕ್ಕಾಗಿ ಪರಿಚಿತರು. ಚಾವಟಿ) 1935 ರಲ್ಲಿ ಬಿಡುಗಡೆಯಾಯಿತು, ಇದು ಮೊದಲ ಮಹಿಳಾ ಪ್ರಧಾನ ಚಲನಚಿತ್ರಗಳಲ್ಲಿ ಒಂದಾಗಿದೆ.[೧]
ಫಿಯರ್‍ಲೆಸ್ ನಾಡಿಯಾ | |
---|---|
Born | ಮೇರಿ ಇವಾನ್ಸ್ ೮ ಜನವರಿ ೧೯೦೮ |
Died | January 9, 1996 ಮುಂಬಯಿ ಭಾರತ | (aged 88)
Occupation | ನಟಿ ಮತ್ತು ಸ್ಟಂಟ್ ಕಲಾವಿದೆ |
Years active | 1933–70 |
ಬಾಲ್ಯ ಮತ್ತು ಜೀವನ
ಬದಲಾಯಿಸಿಜನವರಿ ೭, ೧೯೦೯ ರಂದು ಆಸ್ಟ್ರೇಲಿಯದ ಪರ್ತ್ ನಲ್ಲಿ ಜನಿಸಿದರು
ಚಿತ್ರ ನಟಿ,ನಾಡಿಯರವರ ಜೀವನ ವೃತ್ತಾಂತ
ಬದಲಾಯಿಸಿನಾಡಿಯ ರವರು, ಇಂಗ್ಲೀಷ್ ತಂದೆ, ಗ್ರೀಕ್ ತಾಯಿಗೆ ಮಗಳಾಗಿ ಆಸ್ಟ್ರೇಲಿಯದ ಪರ್ತ್ ನಲ್ಲಿ ಜನಿಸಿದರು. ಅವರ ಬಾಲ್ಯದ ಹೆಸರು, ಮೇರಿ ಎವಾನ್ಸ್ ; ತಮ್ಮ ೫ ನೆಯ ವಯಸ್ಸಿನಲ್ಲೇ ತಂದೆಯವರ ಜೊತೆ ಮುಂಬಯಿಗೆ ಬಂದರು. ಭಾರತದ ವಾಯವ್ಯ ಪ್ರದೇಶದಲ್ಲಿ ವಾಸ್ತ್ಯವ್ಯ ಹೂಡಿದ್ದಾಗಲೇ ಕುದುರೆ ಸವಾರಿಯನ್ನು ಕಲಿತುಕೊಂಡರು. ಮುಂಬಯಿಗೆ ಬಂದಮೇಲೆ 'ಬ್ಯಾಲೆ ನೃತ್ಯ' ವನ್ನು ಮೆಡಾಮ್, ಆಸ್ತ್ರೋ ರವರಿಂದ ಕಲಿತರು. ೧೯೨೦ ರ ದಶಕದಲ್ಲಿ, ತಮ್ಮ ಥಿಯೇಟರ್ ಗ್ರೂಪ್ ಜೊತೆ ಭಾರದಾದ್ಯಂತ ತಿರುಗಾಡಿದರು. ೧೯೩೦ ರಲ್ಲಿ 'ದ ಝರ್ಕೊ ಸರ್ಕಸ್' ನಲ್ಲಿ ಕೆಲಸಮಾಡಿದರು. ಭವಿಷ್ಯವಾಣಿ ನುಡಿಯುವವರ ಸಲಹೆಯಂತೆ, ನಾಡಿಯಾ ಎಂದು ತಮ್ಮ ಹೆಸರನ್ನು ಬದಲಾಯಿಸಿಕೊಂಡರು.
ಹಿಂದಿ ಚಿತ್ರರಂಗಕ್ಕೆ ಪಾದಾರ್ಪಣೆ
ಬದಲಾಯಿಸಿ೧೯೩೪ ರಲ್ಲಿ ಮುಂಬಯಿನ ಹಿಂದಿ ಚಿತ್ರರಂಗಕ್ಕೆ ಪ್ರಪ್ರಥಮವಾಗಿ ಪದಾರ್ಪಣೆಮಾಡಿದರು. ಒಂದೇ ವರ್ಷದಲ್ಲಿ 'ದೇಶ್ ದೀಪಕ್' ಹಾಗೂ 'ನೂರ್-ಎ-ಯಮನ್' ಎಂಬ ಎರಡು ಚಲನಚಿತ್ರಗಳಲ್ಲಿ ನಟಿಸಿದರು. ನೀಲಿಕಣ್ಣಿನ, ಆಕರ್ಷಕ ಬಂಗಾರದ ಮೈಕಟ್ಟಿನ, ಬ್ಲಾಂಡ್ ಚೆಲುವೆ, ನಾಡಿಯರವರ ಅಪರಿಮಿತ ಸೌಂದರ್ಯ,ಹಾಗೂ ನಟನ ಕೌಶಲ್ಯಗಳಿಗೆ, ಮುಂಬಯಿನ ಚಿತ್ರರಸಿಕರು ಮಾರುಹೋಗಿದ್ದರು. ನಾಡಿಯರ ನಟನೆಯನ್ನು ಜನ ಬಹಳವಾಗಿ ಮೆಚ್ಚಿಕೊಂಡಿದ್ದರು. 'ಹಂಟರ್ ವಾಲಿ,' ಚಿತ್ರದಲ್ಲಿ ಮಾಡಿದ ಹೃದಯಂಗಮ ಅಭಿನಯದಿಂದಾಗಿ, ಸಾಮಾಜಿಕ ಸಮಾರಂಭಗಳಲ್ಲಿ ಕಾಣಿಸಿಕೊಂಡಾಗ, ಪ್ರೇಕ್ಷಕರು ಅವರನ್ನು ಹಂಟರ್ ವಾಲಿ, ಯೆಂದೇ ಗುರುತಿಸುತ್ತಿದ್ದರು.
೧೯೪೩ ರಲ್ಲಿ ಹೋಮಿವಾಡಿಯಾ ರವರ ಚಿತ್ರ, ಹಂಟರ್ ವಾಲಿಯಯ ಪುತ್ರಿ ಯ ರೋಲ್, ಅವರಿಗೆ ಅತಿ ಜನಪ್ರಿಯತೆಯನ್ನು ತಂದುಕೊಟ್ಟಿತು. ಇದರ ತರುವಾಯ, ನಾಡಿಯರವರು, ಹಲವಾರು ಚಿತ್ರಗಳಲ್ಲಿ ತಮ್ಮ ನಟನಚಾತುರ್ಯವನ್ನು ಪ್ರದರ್ಶಿಸಿದ್ದಾರೆ.
ಹಿಂದಿ ಚಿತ್ರಗಳು
ಬದಲಾಯಿಸಿ- ಟೈಗ್ರೆಸ್
- ಸ್ಟಂಟ್ ಕ್ವೀನ್
- ಮಿಸ್ ಫ್ರಾಂಟೈರ್ ಮೇಲ್
- ಡೈಮಂಡ್ ಕ್ವೀನ್
- ಜಂಗಲ್ ಪ್ರಿನ್ಸೆಸ್
- ಬಾಗ್ ದಾದ್ ಕ ಜಾದು
- ಖಿಲಾರಿ ಅಂಡ್ ಲೇಡಿ ರಾಬಿನ್ ಹುಡ್
- ಮೌಜ್
ವೈಯಕ್ತಿಕ ಜೀವನ
ಬದಲಾಯಿಸಿ೨೭ ವರ್ಷಗಳ ಸಿನಿಮಾ ವೃತ್ತಿ ಜೀವನದಲ್ಲಿ ೫೫ ಕ್ಕಿಂತ ಹೆಚ್ಚು ಮೂವಿಗಳಲ್ಲಿ ಅಭಿನಯಿಸಿದ್ದರು. ಅವುಗಳಲ್ಲಿ ೩೫ ಆಗಿನಕಾಲದ ಅತಿ ಬಲಿಷ್ಠ ನಟನೆಂದು ಹೆಸರುಮಾಡಿದ್ದ, 'ಜಾನ್ ಕವಾಸ್' ರವರ ಜೊತೆ ನಟಿಸಿದ್ದರು. ೧೯೬೧ ರಲ್ಲೆ ತಮ್ಮ ಚಲನಚಿತ್ರ ಜೀವನದಿಂದ ನಿವೃತ್ತರಾದರು. ದೀರ್ಘಕಾಲದಿಂದ ಒಡನಾಟದಲ್ಲಿದ್ದ, ನಿರ್ದೇಶಕ, ಹೋಮಿವಾಡಿಯ ರೊಡನೆ ವಿವಾಹವಾದರು. ನಂತರ ಕುದುರೆಗಳನ್ನು ಸಾಕುವುದರಲ್ಲಿ ಹೊಸ ಹೊಸ ತಳಿಗಳನ್ನು ಸೃಷ್ಟಿಸುವಲ್ಲಿ ಆಸಕ್ತರಾದರು. ಅವರು ಸಾಕಿದ, "ನಿಜಿನ್ ಸ್ಕಿ" 'ಭಾರತದ ಟರ್ಫ್' ವಲಯದಲ್ಲಿ ಒಂದು ಅತ್ಯುತ್ತಮವಾದ ಕುದುರೆಯೆಂದು ಆಗಿನ ಕಾಲದಲ್ಲಿ ಹೆಸರುಗಳಿಸಿತ್ತು. ೧೯೯೩, ರಲ್ಲಿ ನಾಡಿಯರವರ ಮೊಮ್ಮೊಗ, ರಿಯದ್ ವಿಂಚಿ ವಾಡಿಯ ಆಕೆಯ ಜೀವನವನ್ನು ಕುರಿತಾದ 'ಡಾಕ್ಯುಮೆಂಟರಿ ಚಿತ್ರ , 'Fearless- The Hunterwali' ಕಥೆ ಯನ್ನು ನಿರ್ಮಿಸಿದರು.
ನಿಧನ
ಬದಲಾಯಿಸಿಶ್ರೀಮತಿ ವಾಡಿಯರವರು, ಮುಂಬಯಿನ ಕಂಬಾಲ ಹಿಲ್ ನ ಆಸ್ಪತ್ರೆಯೊಂದರಲ್ಲಿ ಜನವರಿ ೮, ೧೯೯೬ ರಂದು ನಿಧನರಾದರು.
ಬಾಹ್ಯ ಸಂಪರ್ಕಗಳು
ಬದಲಾಯಿಸಿ- ಮೇರಿ ಇವಾನ್ಸ್ ವಾಡಿಯ ಐ ಎಮ್ ಡಿ ಬಿನಲ್ಲಿ
- Hunterwali images Archived 2013-10-06 ವೇಬ್ಯಾಕ್ ಮೆಷಿನ್ ನಲ್ಲಿ.
ಉಲ್ಲೇಖಗಳು
ಬದಲಾಯಿಸಿ- ↑ "The Incredible Story Of Fearless Nadia, The Alleged 'Inspiration' Behind Rangoon". m.huffingtonpost.in. Retrieved 7 January 2018.