ಮೂತ್ರವ್ಯಾಧಿಯು ಅತಿಯಾದ ಮೂತ್ರ ವಿಸರ್ಜನೆ ಅಥವಾ ಅನೌಪಚಾರಿಕ ಪುನರಾವರ್ತಿತ ಮೂತ್ರ ವಿಸರ್ಜನೆಯನ್ನು ನಿಯಂತ್ರಿಸುವ ಅಸಾಮರ್ಥ್ಯವಾಗಿದೆ. ಇದನ್ನು ಎನೂರ್ಸಿಸ್ ಎಂದು ಹೇಳುತ್ತಾರೆ. ಅನೌಪಚಾರಿಕ ಮೂತ್ರ ವಿಸರ್ಜನೆಯನ್ನು ಮೂತ್ರದ ಅಸಂಯಮ ಎಂದು ಕರೆಯಲಾಗುತ್ತದೆ. ಸಾಮಾನ್ಯವಾಗಿ ಇದು ಮಕ್ಕಳಲ್ಲಿ ಕಂಡುಬರುವ ರೋಗ.

ಹಾಸಿಗೆಯಲ್ಲಿ ಮೂತ್ರ ವಿಸರ್ಜನೆ

ವಿಧಗಳು

ಬದಲಾಯಿಸಿ

ಈ ರೋಗದಲ್ಲಿ ಹಗಲಿನ ಮೂತ್ರವ್ಯಾಧಿ(ಡೈಯುರ್ನಲ್ ಎನೂರ್ಸಿಸ್) ಮತ್ತು ರಾತ್ರಿ ಸಮಯದ ಮೂತ್ರವ್ಯಾಧಿ(ನಾಕ್ಟರ್ನಲ್ ಎನೂರ್ಸಿಸ್) ಎಂಬ ಪ್ರಮುಖ ವಿಧಗಳಿವೆ. ಪ್ರಾಥಮಿಕ ವ್ಯಾಧಿಯನ್ನು ಗುಣಪಡಿಸಬಹುದು. ದ್ವಿತೀಯ ಹಂತದ ವ್ಯಾಧಿಯನ್ನು ಗುಣಪಡಿಸುವುದು ಕಷ್ಟ ಮತ್ತು ಅದು ಪುನರಾವರ್ತನೆಗೊಳ್ಳುವ ಸಂಭವವಿದೆ.[]

ಲಕ್ಷಣಗಳು

ಬದಲಾಯಿಸಿ

ರಾತ್ರಿಯ ಎನೂರ್ಸಿಸ್ ಸಾಮಾನ್ಯವಾಗಿ ಮಗು ನಿದ್ರೆಯ ಸಮಯದಲ್ಲಿ ಸಾಕಷ್ಟು ಮೂತ್ರವನ್ನು ವಿಸರ್ಜಿಸುವುದರಿಂದ ಎಚ್ಚರವಾಗುವುದು ಕಷ್ಟವಾಗುತ್ತದೆ. ಇದರಿಂದಾಗಿ ಮೂತ್ರ ಕೋಶಗಳಲ್ಲಿ ಸೋಂಕು ಕಾಣಿಸಿಕೊಳ್ಳುತ್ತವೆ. ಮೂತ್ರದ ಅಸಂಯಮ ಎಂದೂ ಕರೆಯಲ್ಪಡುವ ಹಗಲಿನ ಸಮಯದ ಮೂತ್ರವ್ಯಾಧಿ ಸಹ ಮೂತ್ರಕೋಶದ ಸೋಂಕಿನಿಂದ ಉಂಟಾಗುತ್ತದೆ.[]

ಮೂತ್ರಕೋಶದ ತೊಂದರೆಗಳ ಸಾಮಾನ್ಯ ಲಕ್ಷಣ

ಬದಲಾಯಿಸಿ
  1. ಅಸಂಯಮ ಕೋರಿಕೆ(ಅರ್ಜ್ ಇನ್ಕೋನ್ಟಿನೆನ್ಸ್)
  2. ಮೂತ್ರ ವಿಸರ್ಜನೆಯ ಮುಂದೂಡಿಕೆ
  3. ಅಸಂಯಮ ಒತ್ತಡ(ಸ್ಟ್ರೆಸ್ ಇನ್ಕೋನ್ಟಿನೆನ್ಸ್)[][]

ಕಾರಣಗಳು ಮತ್ತು ರೋಗನಿರ್ಣಯ

ಬದಲಾಯಿಸಿ

ಅತಿಯಾದ ಮೂತ್ರ ವಿಸರ್ಜನೆಗೆ ಸರಿಯಾದ ಶೌಚಾಲಯ ನಿರ್ವಹಣೆಯ ಅರಿವು ಇಲ್ಲದಿರುವುದು ಒಂದು ಕಾರಣ. ಅನುವಂಶಿಕ ಪರಿಣಾಮಗಳು, ಮೂತ್ರ ಕೋಶದ ಸೋಂಕು ಹಾಗೂ ಅತಿಯಾದ ಒತ್ತಡ ಕಾರಣವಾಗಿರುತ್ತವೆ. ರೋಗ ನಿರ್ಣಯದ ಡಿಎಸ್ಎಮ್- ಐವಿ- ಟಿಆರ್ ಮಾನದಂಡಗಳು:[]

  1. ಮೂತ್ರವನ್ನು ಹಾಸಿಗೆ ಅಥವಾ ಬಟ್ಟೆಯಲ್ಲಿ ವಿಸರ್ಜಿಸುವುದು (ಅನೈಚ್ಛಿಕ ಅಥವಾ ಉದ್ದೇಶಪೂರ್ವಕವಾಗಿ)
  2. ಕನಿಷ್ಠ ಸತತ ಮೂರು ತಿಂಗಳುಗಳವರೆಗೆ ವಾರದ ಎರಡು ಬಾರಿ ಆವರ್ತನದಿಂದ ಅಥವಾ ಸಾಮಾಜಿಕ, ಶೈಕ್ಷಣಿಕ (ಔದ್ಯೋಗಿಕ), ಅಥವಾ ಕಾರ್ಯನಿರ್ವಹಣೆಯ ಇತರ ಪ್ರಮುಖ ಕ್ಷೇತ್ರಗಳಲ್ಲಿ ಪ್ರಾಯೋಗಿಕವಾಗಿ ಗಮನಾರ್ಹವಾದ ಯಾತನೆ ಅಥವಾ ದುರ್ಬಲತೆಯಿಂದ ಕೂಡಿರುವುದು.
  3. ಕಾಲಾನುಕ್ರಮದ ವಯಸ್ಸು ಕನಿಷ್ಟ 5 ವರ್ಷವಿರಬೇಕು
  4. ಸಾಮಾನ್ಯ ವೈದ್ಯಕೀಯ ಸ್ಥಿತಿಯಿಂದ ಉಂಟಾಗಿರಬಾರದು[]

ಚಿಕಿತ್ಸೆ

ಬದಲಾಯಿಸಿ

ಆರ್ದ್ರತೆಯ ಎಚ್ಚರಿಕೆಗಳು, ಔಷಧಗಳು, ಶೌಚಾಲಯದ ಅರಿವು, ಇಮಿಪ್ರಮೈನ್ ಮತ್ತು ಡೆಸ್ಮೋಪ್ರೆಸ್ಸಿನ್ ಔಷಧಗಳಿಂದ ಪ್ರಾಥಮಿಕ ಮೂತ್ರವ್ಯಾಧಿಯನ್ನು ನಿಯಂತ್ರಣಕ್ಕೆ ತರಬಹುದು.[]

ಉಲ್ಲೇಖ

ಬದಲಾಯಿಸಿ