ಮುಖಾಮುಖಿ (ಕಿರುತೆರೆ ಕಾರ್ಯಕ್ರಮ)

ಇದು ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿದ್ದ ಮುಖಾಮುಖಿ ಚರ್ಚೆಯ ಕಾರ್ಯಕ್ರಮದ ಮಾಹಿತಿ ಪುಟ. ಟಿ.ಎನ್.ಸೀತಾರಾಂ ನಿರ್ದೇಶನದ ಇದೇ ಹೆಸರಿನ ಕಿರುತೆರೆ ಧಾರಾವಾಹಿ ಕುರಿತು ಮಾಹಿತಿಗೆ ಈ ಲೇಖನ ನೋಡಿ.

ಮುಖಾಮುಖಿ : ಉದಯ ಟಿವಿಯಲ್ಲಿ ಪ್ರಸಾರವಾದ ಮೊಟ್ಟ ಮೊದಲ ಸಂದರ್ಶನ/ಚರ್ಚೆ ಕಾರ್ಯಕ್ರಮ ಸರಣಿ. ಸಾಮಾನ್ಯವಾಗಿ ರಾಜಕಾರಣಿಗಳನ್ನೇ ಸಂದರ್ಶಿಸಲಾಗುತ್ತಿದ್ದ ಈ ಕಾರ್ಯಕ್ರಮದಲ್ಲಿ ಸಂದರ್ಶನಕಾರರು ನೇರ ಹಾಗು ಕಟು ಪ್ರಶ್ನೆಗಳನ್ನೆಸೆಯುತ್ತಿದ್ದರು.