ಮಿರ್ಚಿ ಕಾ ಸಾಲನ್[] ಹೈದರಾಬಾದ್‍ನ ಒಂದು ಜನಪ್ರಿಯ ಮೆಣಸಿನಕಾಯಿ ಮತ್ತು ಕಡಲೇಕಾಯಿಮೇಲೋಗರ. ಇದನ್ನು ಹೈದರಾಬಾದಿ ಬಿರಿಯಾನಿ ಜೊತೆಗೆ ಬಡಿಸಲಾಗುತ್ತದೆ.[] ಈ ಖಾದ್ಯವು ಹಸಿರು ಮೆಣಸಿನಕಾಯಿ, ಕಡಲೇಕಾಯಿ, ಎಳ್ಳು, ಒಣ ಕೊಬ್ಬರಿ, ಜೀರಿಗೆ, ಶುಂಠಿ ಹಾಗೂ ಬೆಳ್ಳುಳ್ಳಿ ಪೇಸ್ಟ್, ಅರಿಸಿನ ಪುಡಿ, ಪಲಾವ್ ಎಲೆ ಮತ್ತು ಗಟ್ಟಿ ಹುಣಸೆ ರಸವನ್ನು ಹೊಂದಿರುತ್ತದೆ.

ಮಿರ್ಚಿ ಕಾ ಸಾಲನ್
ಹೈದರಾಬಾದಿ ಹರಿ ಮಿರ್ಚ್ಞೊ ಕಾ ಸಾಲನ್
ಮೂಲ
ಮೂಲ ಸ್ಥಳಭಾರತ
ಪ್ರಾಂತ್ಯ ಅಥವಾ ರಾಜ್ಯಹೈದರಾಬಾದ್, ತೆಲಂಗಾಣ
ವಿವರಗಳು
ಮುಖ್ಯ ಘಟಕಾಂಶ(ಗಳು)ಹಸಿರು ಮೆಣಸಿನಕಾಯಿ, ಕಡಲೇಕಾಯಿ, ಜೀರಿಗೆ, ಸಂಬಾರ ಪದಾರ್ಥಗಳು

ಮಿರ್ಚಿ ಕಾ ಸಾಲನ್[] ಮದುವೆಗಳು ಮತ್ತು ವಿಶೇಷ ಸಮಾರಂಭಗಳಲ್ಲಿ ತಯಾರಿಸಲಾದ ಒಂದು ಸಾಂಪ್ರದಾಯಿಕ ಹೈದರಾಬಾದಿ ಖಾದ್ಯ. ಇದು ಅನ್ನ ಅಥವಾ ಚಪಾತಿಯೊಂದಿಗೆ ಬಡಿಸಲಾದ ಒಂದು ಖಾರದ ಭಕ್ಷ್ಯ. ಮೆಣಸಿನಕಾಯಿಯನ್ನು ಸಂಬಾರ ಪದಾರ್ಥಗಳಲ್ಲಿ ಬೇಯಿಸಲಾಗುತ್ತದೆ, ಮತ್ತು ಕಡಲೇಕಾಯಿಯು ಈ ಖಾದ್ಯಕ್ಕೆ ತರಿತರಿಯಾದ ರೂಪವನ್ನು ನೀಡುತ್ತದೆ. ಮೂಲತಃ ಇದನ್ನು ಭಾರತದಲ್ಲಿ ಲಭ್ಯವಾದ ಉದ್ದನೆಯ ಖಾರದ ಮೆಣಸಿನಕಾಯಿಗಳಿಂದ ತಯಾರಿಸಲಾಗುತ್ತದೆ.

ಉಲ್ಲೇಖಗಳು

ಬದಲಾಯಿಸಿ
  1. Hyderabadi mirchi ka salan Archived 2018-04-05 ವೇಬ್ಯಾಕ್ ಮೆಷಿನ್ ನಲ್ಲಿ. Saffron Streaks, 2011-03-110
  2. "Hyderabadi Dishes: Mirchi Ka Salan". Nag's Cooking. Retrieved 2007-11-04.
  3. Bhave, Deepti. "Mirchi Ka Salan". Deepti Bhave. Retrieved 11 September 2012.


ಬಾಹ್ಯ ಕೊಂಡಿಗಳು

ಬದಲಾಯಿಸಿ