ಮಾವಳ್ಳಿ ಟಿಫಿನ್ ರೂಮ್ಸ್

ಆಹಾರ ಸಂಸ್ಥೆ

'M.T.R, Bengaluru' ಶುದ್ಧ ಶಾಕಾಹಾರಿ, ಫಲಾಹಾರಮಂದಿರ "ಮಾವಳ್ಳಿ ಟಿಫಿನ್ ರೂಮ್". ದಿನಗಳಲ್ಲೇ ತಮ್ಮ ಓರಿಗೆಯವರಿಗಿಂತ ಬೇರೆಯಾಗಿಯೇ ತಮ್ಮ ಹೋಟೆಲ್ ನ ಹೆಸರನ್ನು ಬದಲಾಯಿಸಿ, 'ಟಿಫಿನ್ ರೂಮ್ ,' ಸಮಯ ಬದಲಾದಂತೆ, ಹಳೆಯ ಹೆಸರುಗಳು, ಕಾಣೆಯಾಗಿವೆ. 'ರೆಸ್ಟೊರಾಂಟ್,' 'ಹೋಟೆಲ್,' 'ಟಿಫಿನ್ ರೂಮ್,' ಇತ್ಯಾದಿಗಳು ಅವುಗಳ ಜಾಗವನ್ನು ಆಕ್ರಮಿಸಿಕೊಂಡವು. ಆದರೆ, ಹಳೆಯ, ಹಾಗೂ ಹೊಸದರ ಸಂಗಮವೇ, ಎಲ್ಲರ ಬಾಯಿನಲ್ಲೂ ಕೇಳಿಬರುವ, ನಮ್ಮೆಲ್ಲರ ಮೆಚ್ಚಿನ, ಹೋಟೆಲ್, 'ಎಮ್.ಟಿ.ಆರ್.' ೮೪ ವರ್ಷಗಳ ಹಿಂದೆ, ಮಾವಳ್ಳಿ ಟಿಫಿನ್ ರೂಮ್, ಎಂದು ಹೆಸರುವಾಸಿಯಾಗಿದ್ದ, ಚಿಕ್ಕ-ಚೊಕ್ಕ, ರುಚಿಕರವಾದ ಖಾದ್ಯಗಳ ಭಂಡಾರ, ಶುಚಿ, ರುಚಿಗಳಿಗೆ ಪ್ರಧಾನವಾಗಿರುವ ಮತ್ತೊಂದು ಉಡುಪಿಹೋಟೆಲ್, ಭಾರತದ ಬೆಂಗಳೂರಿನಲ್ಲಿ ಉದಯಿಸಿ, ಹೆಸರುವಾಸಿಯಾಯಿತು. " ಶುಚಿ-ರುಚಿ, ಬೇಕಾದರೆ 'ಲಾಲ್ಬಾಗ್,' ಸಮೀಪದಲ್ಲಿರುವ ಉಡುಪಿ ಹೋಟೆಲ್, ಎಮ್. ಟಿ. ಆರ್, ಗೆ ಹೋಗಿ, ಸ್ವಲ್ಪ ಹೊತ್ತು ಕಾಯಬೇಕು ಅಷ್ಟೆ, ಅಡ್ಡಿಯಿಲ್ಲ". ಎನ್ನುವ ಮಾತುಗಳು ಕೇಳಿಬರುತ್ತಿದ್ದವು. ಕೇವಲ 'ಎಮ್.ಟಿ.ಆರ್,' ಎನ್ನುವ ಹೆಸರೇ ಅದರ ವಿಶೇಷ ಟ್ರೇಡ್ ಮಾರ್ಕ್ ಆಗಿದೆ. 'ಗ್ಲೋಬಲೈಸೇಶನ್,' ಸಮಯದಲ್ಲಿ ಟ್ರೇಡ್ ಮಾರ್ಕ್ ಗಳ ಅನಿವಾರ್ಯತೆ ಹೆಚ್ಚಾಗಿದೆ. ಈಗಂತೂ ಎಮ್.ಟಿ.ಆರ್. ಬ್ರಾಂಡ್ ಹೆಸರಿನಲ್ಲಿ, ಬೇಕಾದಷ್ಟು ತಿಂಡಿ ತಿನಸುಗಳು, ಸ್ವೀಟ್ಸ್ ಗಳು, ವ್ಯವಸ್ಥಿತವಾಗಿ ಪ್ಯಾಕ್ ಮಾಡಿದ ಆಕರ್ಶಕ ಪಾಲಿಥೀನ್ ಚೀಲಗಳಲ್ಲಿ, ಮಾರುಕಟ್ಟೆಯಲ್ಲಿ ಬಂದಿವೆ. ದಕ್ಷಿಣ ಭಾರತದ, ಪ್ರಿಯವಾದ ರವೆ ಇಡ್ಲಿ, ಈಗ ನಾಜೂಕಾಗಿ ಪ್ಯಾಕ್ ಮಾಡಿದ ಪೊಟ್ಟಣಗಳಲ್ಲಿ ಲಭ್ಯವಿದೆ. ಇದನ್ನು ಲಘು-ಉಪಹಾರವಾಗಿ ಉಪಯೋಗಿಸಬಹುದು.

ಎಮ್.ಟಿ.ಆರ್ ಸ್ಥಾಪಕರು, 'ಪರಂಪಲ್ಲಿ ಯಜ್ಞನಾರಾಯಣ ಮಯ್ಯ,' ಹಾಗೂ ಅವರ ಸೋದರರು

ಬದಲಾಯಿಸಿ

ಪರಂಪಲ್ಲಿ ಯಜ್ಞನಾರಾಯಣಮಯ್ಯ ಮತ್ತು ಸೋದರರು ಸೇರಿ ೧೯೨೪ ರಲ್ಲಿ, 'ಮಾವಳ್ಳಿ ಟಿಫಿನ್ ರೂಮ್', ಸ್ಥಾಪನೆಮಾಡಿದರು. ಸುಮಾರು ೭೦ ರ ದಶಕದ ಮಧ್ಯದಲ್ಲಿ, ಭಾರತದಲ್ಲಿ ತುರ್ತು ಪರಿಸ್ಥಿತಿಯನ್ನು ಆಗಿನ ಪ್ರಧಾನಿಯವರಾಗಿದ್ದ, 'ಇಂದಿರಾಜಿ' ಯವರು ಘೋಷಿಸಿದಾಗ, ಒಂದು " ಫುಡ್ ಕಂಟ್ರೋಲ್ ಆಕ್ಟ್" ನ್ನು ಖಡ್ಡಾಯವಾಗಿ, ಆಹಾರ ಮಾರಾಟಗಾರರ ಮೇಲೆ ಲಾಗುಮಾಡಲಾಯಿತು. ತಿನ್ನುವ ಆಹಾರಗಳನ್ನು ಕಡಿಮೆ ದರದಲ್ಲಿ ಗ್ರಾಹಕರಿಗೆ, ಮಾರಾಟ ಮಾಡಬೆಕೆನ್ನುವ ಸುಗ್ರೀವಾಜ್ಞೆಯನ್ನು ಆಗಿನ ಸರಕಾರಹೊರಡಿಸಿತು. 'ಎಮ್.ಟಿ. ಆರ್' ಹೋಟೆಲ್, ತನ್ನ ಆಹಾರಸಾಮಗ್ರಿಗಳ ಉತ್ಪಾದನೆಯ ಗುಣಮಟ್ಟವನ್ನುಉಳಿಸಿಕೊಂಡು, ಸರಕಾರ ಹೇಳಿದ ಸೋವಿ ದರದಲ್ಲಿ ಮಾರುವ ಸಾಹಸ ಮಾಡಬೇಕಾಯಿತು. ಈ ವ್ಯವಸ್ಥೆ ಹೆಚ್ಚು ದಿನ ನಡೆಯಲಿಲ್ಲ. ಯಜ್ಞನಾರಾಯಣ ಮಯ್ಯನವರು ತಮ್ಮ ವ್ಯಾಪಾರದಲ್ಲಿ ಸ್ವಲ್ಪ ಮಾರ್ಪಾಡುಗಳನ್ನು ಮಾಡಿಕೊಂಡರು. 'ರೆಡಿಮೇಡ್ ವಸ್ತುಗಳನ್ನು ಪ್ಯಾಕೆಟ್ ಗಳಲ್ಲಿ ಶೇಖರಿಸಿ ಮಾರುವ' ಹೊಸ ವಿಧಾನವನ್ನು ಅವರು ಎಚ್ಚರಿಕೆಯಿಂದ ಗಮನಿಸಿದರು. ಮಾರುಕಟ್ಟೆಯಲ್ಲಿ ಆಗ ಕೆಲವು ಕಂಪೆನಿಗಳು ಇದನ್ನು ಯಶಸ್ವಿಯಾಗಿ ಶುರುಮಾಡಿದ್ದರು. ಅದೇ ರೀತಿ, ಮಯ್ಯರವರೂ ತಯಾರಿಸಿ ಪ್ಯಾಕ್ ಮಾಡಿದ ಭಕ್ಷಗಳ ಪ್ಯಾಕೇಟ್ ಗಳ, ಮಾರಾಟ ಮಾಡಲು ಪ್ರಾರಂಭಿಸಿದರು. ಅವುಗಳಲ್ಲಿ ಪ್ರಮುಖವಾದವುಗಳೆಂದರೆ, ಚಟ್ನಿ, ಮತ್ತು ರಸಮ್ ಮತ್ತಿತರೆ ಸಾಂಬಾರ ಪದಾರ್ಥಗಳು, 'ಎಮ್.ಟಿ.ಆರ್,' ನ ಕೌಂಟರ್ ಗಳಲ್ಲಿ ಸಿಗುತ್ತಿದ್ದವು. ತಿಂಡಿಗಳಲ್ಲಿ ಎರಡು ಅತಿ ಮುಖ್ಯ ಬ್ರಾಂಡ್ ಗಳಿವೆ.ಅವು:

ಇದರ ಬಗ್ಗೆ ಎಲ್ಲಾ ವಿವರಗಳನ್ನೂ ಜಾಹಿರಾತುಗಳಲ್ಲಿ ಮತ್ತು ವಿಶ್ವಪರ್ಯಟಕರ ದಿನಚರಿಯ ಪಟ್ಟಿಗಳಲ್ಲಿ ಸೇರಿಸಲಾಯಿತು. ವಾಯುಯಾನ ಮತ್ತು ರೈಲು ಪ್ರಯಾಣ, ಬಸ್ಸು ಪ್ರಯಾಣಿಕರ, 'ಗ್ಲೋಬ್ ಟ್ರೆಕ್ಕರ್ ಬುಕ್ ಲೆಟ್ ,' ಗಳಲ್ಲಿ, ಆಕರ್ಷಕವಾದ ಚಿತ್ರಗಳಿಂದ ಪ್ರಕಟವಾಗುವ 'ಆಡ್' ಗಳ ಮುಖಾಂತರ, 'ಮುಖಪತ್ರ,' ಗಳಲ್ಲಿ ಭಾರತೀಯ ಮನೆಯಲ್ಲಿ ಮಾಡಿದ ತಾಜಾ-ಖಾದ್ಯಗಳ ಪರಿಚಯ, ಹಾಗೂ ತಿಳಿಸಿದ ವಸ್ತುಗಳ ಲಭ್ಯತೆಯ ಬಗ್ಗೆ ವಿವರಗಳು, ಸಮರ್ಪಕವಾಗಿ ವಿವರಿಸಲಾಗಿತ್ತು. ಗುಣಮಟ್ಟವನ್ನು ಮಾತ್ರ, ಅತ್ಯಂತ ಎಚ್ಚರಿಕೆಯಿಂದ ಕಾದಿರಿಸಿದ್ದರು. 'ಎಮ್.ಟಿ.ಆರ್,' ಹೋಟೆಲ್ ನಲ್ಲಿ, " ಮಸಾಲ ದೋಸೆ," ತಿನ್ನಲು 'ಕ್ಯೂ' ನಲ್ಲಿ ನಿಂತು ಪಡೆಯುವ ಸಂದರ್ಭಗಳೇ ಹೆಚ್ಚು. ಒಮ್ಮೆ ಚೀಫ್ ಮಿನಿಸ್ಟರ್ ಕೂಡ , ಲೈನ್ ನಲ್ಲಿ ನಿಂತಿದ್ದು ತಮ್ಮ ಸರದಿಬಂದಾಗ ಪಡೆದರು.

'ಮಾವಳ್ಳಿ ಟಿಫಿನ್ ರೂಮ್,' ಪುಟ್ಟ ಅಚ್ಚುಕಟ್ಟಾದ ಎರಡಂತಸ್ತಿನ ಕಟ್ಟಡ :

ಬದಲಾಯಿಸಿ

ಮೊದಲನೆಯ ಫ್ಲೋರ್ ನಲ್ಲಿ  :

ಬದಲಾಯಿಸಿ

ಟೇಬಲ್ ಕುರ್ಚಿ ಹಾಕಿ ಊಟ ಬಡಿಸುತ್ತಾರೆ. ಸ್ಥಳವನ್ನು ಮೊದಲೇ ಕಾದಿರಿಸುವುದು ಉತ್ತಮ. ಇಲ್ಲದೆ ಹೋದರೆ, 'ವೈಟಿಂಗ್ ರೂಮ್' ನಲ್ಲಿ ಬಹಳmಹೊತ್ತು ಕಾಯಬೇಕಾಗುತ್ತದೆ. ಉಡುಪಿ ಪದ್ದತಿಯ ಉಪ್ಪಿನಕಾಯಿ, ಹಪ್ಪಳ, ಪಲ್ಯ, ರಾಯತ, ಸಾರು, ಹುಳಿ, ಮಜ್ಜಿಗೆಹುಳಿ, ಬಾಳಕದ ಮೆಣಸಿನಕಾಯಿ, ಶುದ್ಧ ತುಪ್ಪ, ಊಟದ ತಟ್ಟೆಯಲ್ಲಿ (ಥಾಲಿ) ದೊರೆಯುತ್ತವೆ. ದಕ್ಷಿಣ ಭಾರತದ ಉಡುಪಿ ಬ್ರಾಹ್ಮಣರ ಮನೆಯ ತರಹದ ಊಟ. ಮುಖ್ಯವಾಗಿ ಶುಚಿತ್ವಕ್ಕೆ, ರುಚಿಗೆ, ಆದ್ಯತೆ ಹೆಚ್ಚು. ಹೊರಗಿನ ಆಕರ್ಷಣೆಗೆ ಹೆಚ್ಚು ಗಮನವನ್ನು ಕೊಡುವುದಿಲ್ಲ. ಎಮ್.ಟಿ.ಆರ್ ನಲ್ಲಿ ಶುಚಿತ್ವವನ್ನು ಮೊಟ್ಟಮೊದಲಿಗೆ ಸಾರ್ವಜನಿಕರಿಗೆ ಕಣ್ಣಾರೆ ನೋಡಿ ಖಚಿತ ಪಡಿಸಿಕೊಳ್ಳುವ ಅವಕಾಶವನ್ನು ಮಯ್ಯಾರವರು ಒದಗಿಸಿಕೊಟ್ಟರು. ಮೊದಲಿನಿಂದಲೂ ಕಾಣಬರುವ ಪ್ರವೇಶ, ಕಿಚನ್ ಕಡೆಯಿಂದ ಇತ್ತು. ಏಕೆಂದರೆ,ಊಟಕ್ಕೆ ಮೊದಲು ಅಲ್ಲಿ ಕಾಣಿಸುವ ಸ್ವಚ್ಛತೆಗೆ ಕೊಡುವ ಆದ್ಯತೆಯನ್ನು ಕಣ್ಣಾರೆ ಕಂಡು ನಿರ್ಧರಿಸಲು, ಗ್ರಾಹಕರಿಗೆ ಸದವಕಾಶವಿದೆ. ಕೆಲವು ಹೋಟೆಲ್ ಗಳಲ್ಲಿ ದೋಸೆಮಾಡುವ ಕಾವಲಿಗಳು ಶುಚಿಯಾಗಿರುತ್ತಿರಲಿಲ್ಲ. ಮತ್ತು ಅಲ್ಲಿ ತಯಾರಿಸುವ ಭಟ್ಟರು ಶುಚಿತ್ವದ ಬಗ್ಗೆ ಹೆಚ್ಚಿನ ನಿಗಾವಹಿಸದೆ ಇರುವ ಸನ್ನಿವೇಷಗಳು ಹಲವರ ಗಮನಕ್ಕೆ ಬಂದಿದ್ದು, ಕೆಲವು ಗ್ರಾಹಕರು, ಹೋಟೆಲ್ ಗಳ ಬಗ್ಗೆ ಅಷ್ಟು ಒಳ್ಳೆಯ ಅಭಿಪ್ರಾಯವನ್ನು ಹೊಂದಿರಲಿಲ್ಲ. ಎರಡನೇ ವಿಶ್ವ ಯುದ್ಧ ನಡೆದ ಸಂದರ್ಭದಲ್ಲಿ, 'ಅಕ್ಕಿ,' ಸಿಗುವುದು ಬಹಳ ಕಷ್ಟವಾಗಿತ್ತು. ಇದರಿಂದಾಗಿ ಇಡ್ಲಿ, ತಯಾರಿಸಲು ಬೇರೆ ಪದ್ಧತಿಯನ್ನು ಹುಡುಕಿಕೊಳ್ಳಬೇಕಾಯಿತು. ಆಗ ಎಮ್.ಟಿ.ಆರ್, ಸಣ್ಣಗೆ ಒಡೆದ ಗೋಧಿಯ ರವೆ, (ಲ್ಯಾಪ್ಸಿ) ಯಿಂದ ಇಡ್ಲಿ ಮಾಡಿ ಬಡಿಸುತ್ತಿದ್ದರು. ರವೆಯಿಂದ ಮಾಡಿದ್ದ ಇಡ್ಲಿಗಳು ಹೇಗೋ ಜನರಿಗೆ ಅತಿ ಪ್ರಿಯವಾದವು. ರವೆ-ಇಡ್ಲಿ, ಅದರ ಮೇಲೆ ಸವರಿದ ತುಪ್ಪ, ಮತ್ತು ಚಟ್ಣಿ, ಸಾಗು, ದಿಢೀರನೆ ಪ್ರಸಿದ್ಧಿಯಾಯಿತು. ಕರ್ನಾಟಕದಲ್ಲಿ ಪ್ರಥಮ ಫಾಸ್ಟ್ ಫುಡ್ ರೆಸ್ಟೋರೆಂಟ್, ಎಂದು ಹೆಸರು ಪಡೆಯಲು, ಎಮ್.ಟಿ.ಆರ್ ನ ಮಾಲಿಕ, ಮಯ್ಯಾರವರು, ಕಾರಣಕರ್ತರು. ೭ ಗಂಟೆಗಳಲ್ಲಿ ೨೧,೦೦೦ ಸಾವಿರ ಇಡ್ಲಿ ಗಳನ್ನು ಮಾಡಿ ಗಿರಾಕಿಗಳಿಗೆ ಬಡಿಸಿದ್ದರು. ಈಗಿನ ಈ ಟಿಫಿನ್ ರೂಮ್ ನ ನಿರ್ವಾಹಕಿ, ಹೇಮಾಮಾಲಿನಿ ಮಯ್ಯ,ಮಯ್ಯಾರವರ ಮೊಮ್ಮಗಳು. ಎಮ್.ಟಿ.ಆರ್ ನಲ್ಲಿಕಾಫಿಯನ್ನು, ಬೆಳ್ಳಿಲೋಟಗಳಲ್ಲಿ ಕುಡಿಯಲು ಕೊಡುತ್ತಾರೆ. ಇದು ಇಲ್ಲಿಯ ವಿಶೇಷತೆ. ೭೦ ರ ದಶಕದಲ್ಲಿ ಎಮರ್ಜೆನ್ಸಿ ಸಮಯದಲ್ಲಿ ಎಮ್.ಟಿ.ಆರ್ ನ್ನು ಮುಚ್ಚುವ ಸಂದರ್ಭ ಬಂದಿತ್ತು. ೧೯೮೪ ರಲ್ಲಿ ಮತ್ತೆ ಆರಂಭವಾಯಿತು. ಎಮ್.ಟಿ.ಆರ್ ನ ಫುಡ್ಸ್ ವಿಭಾಗವನ್ನು ಶ್ರೀ. ಸದಾನಂದ ಮಾಯ್ಯಾ, ಸೀನಿಯರ್ ಮಯ್ಯಾರವರ ಮಗ ನೋಡಿಕೊಳ್ಳುತ್ತಿದ್ದಾರೆ. 'ನಾರ್ವೇಜಿಯನ್ ಕಂ', 'ಓರ್ ಕ್ಲ' ಇದನ್ನು ೮೦ ಮಿಲಿಯನ್ ಅಮೆರಿಕನ್ ಡಾಲರ್ ಬೆಲೆಗೆ, ಮಾರ್ಚ್ ೨೦೦೭, ರಲ್ಲಿಖರೀದಿಸಿತು. ಈ ಸಂಸ್ಥೆ ಪ್ಯಾಕ್ ಮಾಡಿದ ಆಹಾರಗಳನ್ನು ಮಾರಾಟ ಮಾಡುತ್ತದೆ.

ಆಧುನಿಕ ಪದ್ಧತಿಯಲ್ಲಿ ತಯಾರಿಸಿ,ಸಿದ್ಧಪಡಿಸಿ,ಪ್ಯಾಕ್ ಮಾಡಿದ, ಆಹಾರ ವಸ್ತುಗಳನ್ನು, ಅಪಾಯವಿಲ್ಲದಂತೆ, ಶೇಖರಿಸಿಡುವ ತಂತ್ರಜ್ಞಾನವನ್ನು ಮೈಸೂರಿನ," ಡಿ.ಎಫ್.ಆರ್.ಎಲ್," ನಿಂದ ಖರೀದಿಸಲಾಯಿತು

ಬದಲಾಯಿಸಿ

ಮೈಸೂರ್ ನಗರದ "ಡಿಫೆನ್ಸ್ ಫುಡ್ ರಿಸರ್ಚ್ ಲ್ಯಾಬೊರೇಟೊರಿ",(DFRL) ಯಿಂದ 'ಫುಡ್ ಪ್ಯಾಕೇಜ್ ಟೆಕ್ನೋಲಜಿ,' ಯನ್ನು ಖರೀದಿಸಿತು. ಪ್ಯಾಕ್ ಮಾಡುವಾಗ 'ಪ್ರಿಸರ್ವೇಟರ್'ಗಳನ್ನು ಸೇರಿಸುವುದಿಲ್ಲ. ಭಾರತದ ಪ್ರಥಮ 'ಪ್ರಮಾಣಿತ, ಪ್ರೋಸೆಸ್ಡ್ ಫುಡ್ ಕಂಪೆನಿ,' ಎಂಬ ಹೆಗ್ಗಳಿಕೆಗೆ ಎಮ್.ಟಿ.ಆರ್ ಪಾತ್ರವಾಗಿದೆ. ಉಪಯೋಗಿಸಿದ ಸಾಮಗ್ರಿಗಳಲ್ಲಿ ಏನಾದರೂ ಆಪತ್ತು ಜನಕ ವಸ್ತುಗಳಿದ್ದರೆ ಅದನ್ನು ವಿಶ್ಲೇಶಿಸಿ ಊಟದ ನಂತರ ಆಗುವ ಅನಾಹುತಗಳನ್ನು ತಡೆಯಲು (Hazard Analysis Critical Central Point) ಸರ್ಟಿಫಿಕೇಟ್ ಪಡೆಯುವ ಪ್ರಕ್ರಿಯೆ ಇದೆ. ಅತಿ ಮುಖ್ಯವಾದ ಗುಣನಿರ್ಧಾರಣಾ ಪರೀಕ್ಷೆ ವ್ಯವಸ್ಥೆ (rigorous standard of food safety and hygiene) ಸಹಿತ ಇದೆ. "ಪ್ರಾಡಕ್ ಟ್ಸ್ ಪ್ರಮೋಶನ್ ಅಭಿಯಾನ" ದಲ್ಲಿ ಮ್ಯಾಜಿಕ್ ಶೋ ಗಳನ್ನು ಆಯೋಜಿಸಲಾಗುತ್ತಿದೆ. ಥಿಯೇಟರ್ ಗಳಲ್ಲಿ ಆ ತಂತ್ರವನ್ನು ಬಳಸಿಕೊಂಡು, ನಮ್ಮೆದುರಿಗೇ, ಆಡುಗೆಮಾಡಿ ತೋರಿಸುತ್ತಿದ್ದಾರೆ. ಅವರ ಉತ್ಪಾದನೆಗಳ, 'ಸ್ಯಾಂಪಲ್ 'ಗಳನ್ನು 'ಮುಫತ್' ಆಗಿ ಅಲ್ಲಿ ನೆರೆದವರಿಗೆ ರುಚಿನೋಡಲು ಹಂಚುತ್ತಾರೆ. 'ಫ್ರೋಝನ್ ದೋಸ', ಎಂಬ ಐಟಮ್ ನ್ನು, ಪ್ರಪ್ರಥಮವಾಗಿ ಮಾಡಿ, ' ಡೆಮಾನ್ ಸ್ಟ್ರೇಟ್,' ಮಾಡಿದ್ದಾರೆ. 'ಫ್ರೋಝನ್ ದೋಸೆ' ಯನ್ನು ಸ್ವಲ್ಪ 'ಗರಮ್,' ಮಾಡಿ ಕೂಡಲೇ ಮೆಲ್ಲಬಹುದು. 'ಎಮ್.ಟಿ.ಆರ್', ಬ್ರಾಂಡ್ ನ ಆಹಾರಗಳ ಉತ್ಪಾದನೆಗಳನ್ನು, 'ಅಮೆರಿಕ ಸಂಯುಕ್ತ ಸಂಸ್ಥಾನ,' 'ಪರ್ಶಿಯನ್ ಗಲ್ಫ್, 'ಯುನೈಟೆಡ್ ಕಿಂಗ್ ಡಮ್', ಗಳಿಗೆ ರಫ್ತು ಮಾಡುತ್ತಿದ್ದಾರೆ. [೧] Archived 2009-05-01 ವೇಬ್ಯಾಕ್ ಮೆಷಿನ್ ನಲ್ಲಿ.