ಶ್ಯಾವಿಗೆ ದಕ್ಷಿಣ ಭಾರತದಲ್ಲಿ, ವಿಶೇಷವಾಗಿ ತಮಿಳುನಾಡು ಮತ್ತು ಕರ್ನಾಟಕದಲ್ಲಿ ಜನಪ್ರಿಯವಿರುವ ಒಂದು ಬಗೆಯ ಅಕ್ಕಿಯಿಂದ ತಯಾರಿಸಿದ ಖಾದ್ಯ. ಶ್ಯಾವಿಗೆಯನ್ನು ಗೋಧಿ, ರಾಗಿ ಇತ್ಯಾದಿಗಳಂತಹ ಇತರ ಆಹಾರ ಧಾನ್ಯಗಳಿಂದಲೂ ತಯಾರಿಸಬಹುದು. ಇವು ಕೂಡ ಜನಪ್ರಿಯವಾಗಿವೆ.

Sevai plain320.jpg

ಶ್ಯಾವಿಗೆಯು ತಿಂಡಿ ಅಥವಾ ರಾತ್ರಿ ಊಟದ ಆಹಾರವಾಗಿ ಜನಪ್ರಿಯವಾಗಿದೆ ಮತ್ತು ಇದನ್ನು ಕಡಿಮೆ ಅಥವಾ ಸ್ವಲ್ಪವೂ ಎಣ್ಣೆ ಬಳಸದೇ ತಯಾರಿಸಬಹುದಾದ್ದರಿಂದ ಸುಲಭವಾಗಿ ಜೀರ್ಣವಾಗುತ್ತದೆ. ಇದನ್ನು ಉಗಿಯಲ್ಲಿ ಬೇಯಿಸಲಾಗುತ್ತದೆ.

ಮನೆಯಲ್ಲಿ ತಯಾರಿಸಿದ ಶ್ಯಾವಿಗೆಯು ಹಲವುವೇಳೆ (ನೀರು ಮತ್ತು ಉಪ್ಪಿನ ಜೊತೆಗೆ) ಶೇಕಡ ೧೦೦ ರಷ್ಟು ಅಕ್ಕಿಯನ್ನು ಹೊಂದಿರುತ್ತದೆ. ಅಂಗಡಿಯಲ್ಲಿ ಖರೀದಿಸಿದ ಒಣ ಅಕ್ಕಿ ಶ್ಯಾವಿಗೆಯು ಹಲವುವೇಳೆ ಮರಗೆಣಸು, ಮೆಕ್ಕೆಜೋಳದ ಹಿಟ್ಟು, ಇತ್ಯಾದಿಗಳಂತಹ ಕೆಲವು ಸಂಯೋಜಕಗಳನ್ನು ಹೊಂದಿರಬಹುದು. ಧಿಡೀರ್ ಅಕ್ಕಿ ನೂಡಲ್ಸ್ ಗೋಧಿ ಗ್ಲೂಟನ್, ಚವಳಿಕಾಯಿ ಅಂಟು, ತಿನ್ನಲರ್ಹ ಪಿಷ್ಟ, ಇತ್ಯಾದಿಯಂತಹ ಇತರ ಸಂಯೋಜಕಗಳನ್ನು ಹೊಂದಿರುತ್ತವೆ. ಕರ್ನಾಟಕದ ದಕ್ಷಿಣ ಭಾಗಗಳಲ್ಲಿ, ಶ್ಯಾವಿಗೆಯನ್ನು ಭಿನ್ನ ಸ್ಥಿರತೆಗಳ ವಿಭಿನ್ನ ಧಾನ್ಯಗಳಿಂದ ತಯಾರಿಸಲಾಗುತ್ತದೆ. ರಾಗಿ ಅಥವಾ ಕಿರುಧಾನ್ಯದಿಂದ ತಯಾರಿಸಲಾದಾಗ ಶ್ಯಾವಿಗೆಯು ಹೆಚ್ಚು ದಪ್ಪವಿರುತ್ತದೆ, ಅಕ್ಕಿ ಅಥವಾ ಗೋಧಿಯಿಂದ ತಯಾರಿಸಲಾದಾಗ ಶ್ಯಾವಿಗೆ ಎಳೆಗಳು ಹೆಚ್ಚು ತೆಳ್ಳಗಿರುತ್ತವೆ.

ಕರ್ನಾಟಕದಲ್ಲಿ ಶ್ಯಾವಿಗೆಯಿಂದ ಬೆಳಿಗ್ಗೆಯ ತಿಂಡಿ ಆಹಾರವನ್ನು ತಯಾರಿಸಲಾಗುತ್ತದೆ. ಇದಕ್ಕೆ ತರಕಾರಿಗಳನ್ನು ಹಾಕಿ ಬೇಯಿಸಲಾಗುತ್ತದೆ. ಸಂಬಾರ ಪದಾರ್ಥಗಳ ಒಗ್ಗರಣೆಯನ್ನು ಕೊಡಲಾಗುತ್ತದೆ, ಜೊತೆಗೆ ಮೇಲೆ ನಿಂಬೆರಸವನ್ನು ಹಿಂಡಲಾಗುತ್ತದೆ. ಶ್ಯಾವಿಗೆಯಿಂದ ಸಿಹಿ ಖಾದ್ಯವಾದ ಪಾಯಸವನ್ನು ತಯಾರಿಸಬಹುದು. ಶ್ಯಾವಿಗೆಯನ್ನು ಹಾಲಿನಲ್ಲಿ ಬೇಯಿಸಿ, ಏಲಕ್ಕಿ ಅಥವಾ ಇತರ ಆಯ್ದ ಸಂಬಾರ ಪದಾರ್ಥಗಳು ಮತ್ತು ಸಕ್ಕರೆಯನ್ನು ಸೇರಿಸಲಾಗುತ್ತದೆ. ಕರ್ನಾಟಕದ ಮಲೆನಾಡು ಪ್ರದೇಶದಲ್ಲಿ, ಅಕ್ಕಿ ಶ್ಯಾವಿಗೆಯನ್ನು ಕೋಳಿಮಾಂಸದ ಕರಿಯೊಂದಿಗೆ ಬಡಿಸಬಹುದು. ರಾಗಿ ಅಥವಾ ಜೋಳದಿಂದ ತಯಾರಿಸಿದ ಶ್ಯಾವಿಗೆಯ ಇತರ ರೂಪಗಳನ್ನು ಸಾದಾ ಆಗಿ ಬಡಿಸಲಾಗುತ್ತದೆ, ಜೊತೆಗೆ ಸಿಹಿ ತೆಂಗಿನ ಹಾಲು ಹಾಗೂ ವಿವಿಧ ತಿನ್ನಲರ್ಹ ಪುಡಿಗಳಂತಹ ಪಕ್ಕ ಮೇಲೋಗರಗಳನ್ನು ನೀಡಲಾಗುತ್ತದೆ. ತಮಿಳುನಾಡಿನಲ್ಲಿ ಅಕ್ಕಿ ಶ್ಯಾವಿಗೆಗೆ ನಿಂಬೆರಸ, ಹುಣಸೆ, ಟೊಮೇಟೊ, ಕೊಬ್ಬರಿ, ಮೊಸರು ಇತ್ಯಾದಿಗಳನ್ನು ಹಲವುವೇಳೆ ಸೇರಿಸಲಾಗುತ್ತದೆ ಮತ್ತು ಸಾಮಾನ್ಯವಾಗಿ ಬಿಸಿ ಇದ್ದಾಗಲೇ ತಿನ್ನಲಾಗುತ್ತದೆ. ಸಾದಾ ಶ್ಯಾವಿಗೆಗೆ ಜನಪ್ರಿಯ ಪಕ್ಕ ಮೇಲೋಗರಗಳೆಂದರೆ ಸಿಹಿ ತೆಂಗಿನ ಹಾಲು, ಬಾಳೆಹಣ್ಣು, ಸಕ್ಕರೆ, ತುಪ್ಪ, ಮೋರ್-ಕುಳಂಬು, ಹಲವಾರು ತರಕಾರಿ ಕೋರ್ಮಾಗಳು ಮತ್ತು ಮಟನ್, ಕೋಳಿಮಾಂಸ, ಅಥವಾ ಮೀನಿನ ಕೋರ್ಮಾ.