ಮಾಯಾ ರಾವ್
(೧೯೨೮ ಮೇ, ೨,- ಸೆಪ್ಟೆಂಬರ್, ೧,೨೦೧೪) 'ಮಾಯಾರಾವ್' ಒಬ್ಬ ಪ್ರಸಿದ್ಧ ಕಥಕ್ ನೃತ್ಯಾಂಗನೆ. [೧] ಒಡಿಷಾದ ಕಥಕ್ ನೃತ್ಯ ಪ್ರಕಾರವನ್ನು ಕರ್ನಾಟಕಕ್ಕೆ ಪರಿಚಯಿಸಿ ಅದನ್ನು ಜನಪ್ರಿಯತೆಯತ್ತ ಕೊಂಡೊಯ್ದ ಶ್ರೇಯಸ್ಸು ಗಳಿಸಿದರು.
ಡಾ. ಮಾಯಾ ರಾವ್ | |
---|---|
Born | ಮಾಯ ೧೯೨೮ರಲ್ಲಿ ತಂದೆ ಹಟ್ಟಂಗಡಿ ಸಂಜೀವರಾವ್, ಕಟ್ಟಡ ನಿರ್ಮಾಪಕ, ತಾಯಿ ಸುಭದ್ರಾಬಾಯಿ, ಪತಿ ಎಂ.ಎಸ್.ನಟರಾಜ್, ಒಳ್ಳೆಯ ಸಂಗೀತ ಕಲಾವಿದರು. ಮಗಳು,'ಮಧು ನಟರಾಜ್. ಬೆಂಗಳೂರಿನಲ್ಲಿ ಕೊಂಕಣಿ ಸಾರಸ್ವತ ಬ್ರಾಹ್ಮಣ ಪರಿವಾರದಲ್ಲಿ ಜನನ. |
Died | ೧, ಸೆಪ್ಟೆಂಬರ್, ೨೦೧೪ ರಂದು ಮಧ್ಯರಾತ್ರಿ. ಬೆಂಗಳೂರಿನಲ್ಲಿ, ಹೃದಯಾಘಾತದಿಂದ ನಿಧನ. |
Occupation(s) | ಮಹಾರಾಣಿ ಕಾಲೇಜಿನಲ್ಲಿ ಬಿ.ಎ.ಪದವಿ ಗಳಿಸಿದರು. ಬೆಂಗಳೂರಿನ ಸೆಂಟ್ರೆಲ್ ಕಾಲೇಜಿನಲ್ಲಿ ಇಂಗ್ಲೀಷಿನಲ್ಲಿ ಸ್ನಾತಕೋತ್ತರ ಪದವಿ. ಭರತನಾಟ್ಯ, ಮಣಿಪುರಿ, ರಷಿಯಾದ ಬ್ಯಾಲೆ ಹಾಗೂ ಶ್ರೀಲಂಕಾದ ಕ್ಯಾಂಡನ್ ನೃತ್ಯಗಳಲ್ಲಿ ಪ್ರವೀಣೆ. |
Years active | ಗುರು ಸೋಹನ್ ಲಾಲ್ ರವರಿಂದ 'ಜೈಪುರ ಘರಾನದ ಕಥಕ್ ನೃತ್ಯ' ಕಲಿತರು. ೧೯೮೭ರಲ್ಲಿ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಅಧ್ಯಕ್ಷರಾಗಿದ್ದರು. 'ಬೆಂಗಳೂರು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪದವಿ,'
|
Known for | 'ನಾಟ್ಯ ಸರಸ್ವತಿ ನೃತ್ಯಶಾಲೆ' ಸ್ಥಾಪಿಸಿದರು. ಕುವೆಂಪುರವರ ರಾಮಾಯಣ ದರ್ಶನಿಂದ ಆಯ್ದ ಭಾಗಗಳನ್ನು ನಾಟ್ಯರೂಪದಲ್ಲಿ ಪ್ರದರ್ಶಿಸಿದ್ದಾರೆ. ಶಾಕುಂತಲ ಅತ್ಯಂತ ಜನಪ್ರಿಯ ರೂಪಕ. |
Website | www |
ಕಥಕ್ ನಲ್ಲಿ ಸಾಧನೆ
ಬದಲಾಯಿಸಿತಮ್ಮ ಇಳಿ ವಯಸ್ಸಿನಲ್ಲೂ 'ಕಥಕ್ ತ್ರೂ ದ ಏಜಸ್' ('Kathak through the ages') ಮೂಲಕ ಗೆಜ್ಜೆ ಕಟ್ಟಿ, ಅಚ್ಚರಿ ಮೂಡಿಸಿದ್ದರು. ಶತಮಾನಗಳ ಪರಂಪರೆಯ ಕಟ್ಟಿಕೊಡುವ ಕಥಕ್ ಗತವೈಭವವನ್ನು ಕಟ್ಟಿಕೊಡುವ ಇಂತಹ ಪ್ರಯತ್ನ, ಇದೇ ಮೊದಲೆಂಬ ಹೆಗ್ಗಳಿಕೆಗೆ ಪಾತ್ರರಾದರು. ಬೆಂಗಳೂರಿನ ಮಲ್ಲೇಶ್ವರದಲ್ಲಿರುವ 'ಇನ್ಸ್ಟಿಟ್ಯೂಟ್ ಆಫ್ ಕಥಕ್ ಅಂಡ್ ಕೊರಿಯಾಗ್ರಫಿ,' ಶನಿವಾರ, ಆಗಸ್ಟ್ ೩೦, ರಂದು ನೃತ್ಯ ತರಗತಿಯನ್ನು ನಡೆಸಿದ್ದರು. ನೃತ್ಯ ಅವರ ಜೀವನಾಡಿಯಾಗಿತ್ತು. ಅದರ ಹೆಸರು ಕೇಳಿದಾಗ, ಅವರು ಜಿಂಕೆಯಾಗುತ್ತಿದ್ದರು. ಕೆಲ ಸಮಯದಿಂದ ಭುಜದ ನೋವಿನಿಂದ ಬಳಲುತ್ತಿದ್ದರೂ ಕುಣಿತದಲ್ಲಿ ಆ ನೋವನ್ನು ಮರೆಯುತ್ತಿದ್ದರು.
ಹಿನ್ನೆಲೆ
ಬದಲಾಯಿಸಿಮಾಯಾ ರಾವ್ ಇವರು ೧೯೨೮ರಲ್ಲಿ ಬೆಂಗಳೂರಿನಲ್ಲಿ ಕೊಂಕಣಿ ಸಾರಸ್ವತ ಬ್ರಾಹ್ಮಣ ಪರಿವಾರದಲ್ಲಿ ಜನಿಸಿದರು. ತಂದೆ ಹಟ್ಟಂಗಡಿ ಸಂಜೀವರಾವ್, ಕಟ್ಟಡ ನಿರ್ಮಾಣದಲ್ಲಿ ಪ್ರಸಿದ್ಧರು. ಇವರ ತಾಯಿ ಸುಭದ್ರಾ ಬಾಯಿ; ಮಾಯಾರವರಿಗೆ, ಮೂವರು ಸೋದರರು ಮತ್ತು ಮೂವರು ಸೋದರಿಯರು. ಮಾಯಾ ತಮ್ಮ, ೬ ನೇ ವಯಸ್ಸಿನಲಿ ಪಂಡಿತ್ ರಾಮರಾವ್ ಹೊನ್ನಾವರ, ಬಳಿ ಹಿಂದೂಸ್ತಾನಿ ಸಂಗೀತ ಶಿಕ್ಷಣ ಪಡೆದರು. ಮಹಾರಾಣಿ ಕಾಲೇಜಿನಲ್ಲಿ ಬಿ.ಎ.ಪದವಿ ಗಳಿಸಿದರು. ಬೆಂಗಳೂರಿನ ಸೆಂಟ್ರೆಲ್ ಕಾಲೇಜಿನಲ್ಲಿ ಇಂಗ್ಲೀಷಿನಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಭರತನಾಟ್ಯ, ಮಣಿಪುರಿ, ರಶಿಯಾದ ಬ್ಯಾಲೆ ಹಾಗು ಶ್ರೀಲಂಕಾದ ಕ್ಯಾಂಡನ್ ನೃತ್ಯಗಳಲ್ಲಿ ಸಹ ಪರಿಣಿತಿ ಪಡೆದಿದ್ದಾರೆ.
ಆಕಸ್ಮಿಕ ಕಥಕ್ ನಂಟು
ಬದಲಾಯಿಸಿ'ಕಥಕ್ ನೃತ್ಯ ಪಟು ಸೋಹನ್ ಲಾಲ್' ಬೆಂಗಳೂರಿಗೆ ಬಂದಾಗ ಮಾಯಾರಾವ್ ರವರ ಮನೆಯಲ್ಲೇ ಇಳಿದುಕೊಳ್ಳುತ್ತಿದ್ದರು. ಇವರ ಸೋದರಿಯರು ನೃತ್ಯ ಕಲಿಕೆ ಆರಂಭಿಸಿದಾಗ, ತಂಗಿಯರ ಜೊತೆ ಗುರು ಸೋಹನ್ ಲಾಲ್ ರವರಿಂದ 'ಜೈಪುರ ಘರಾನದ ಕಥಕ್ ನೃತ್ಯ' ಕಲಿತರು. ಪತಿ ಎಂ.ಎಸ್.ನಟರಾಜ್ ಒಳ್ಳೆಯ ಸಂಗೀತ ಕಲಾವಿದರು. ೧೯೫೦ರಲ್ಲಿ ಬೆಂಗಳೂರಿನಲ್ಲಿ 'ನಾಟ್ಯ ಸರಸ್ವತಿ ನೃತ್ಯಶಾಲೆ'ಯನ್ನು ತೆರೆದು ಅನೇಕ ಶಿಷ್ಯರನ್ನು ತರಬೇತು ಗೊಳಿಸಿದ್ದಾರೆ. 'ಪಂಡಿತ್ ಸತ್ಯನಾರಾಯಣ ಚರ್ಕ' ಇವರ ಖ್ಯಾತ ಶಿಷ್ಯರೊಲ್ಲಬ್ಬರು.[೨] ದೇವರ ನಾಮ, ಗೀತಗೋವಿಂದ, ರವೀಂದ್ರರ ಕೃತಿಗಳನ್ನು, ಕುವೆಂಪುರವರ ರಾಮಾಯಣ ದರ್ಶನಂದ ಆಯ್ದ ಭಾಗಗಳನ್ನು ಇವರು ನಾಟ್ಯರೂಪದಲ್ಲಿ ಪ್ರದರ್ಶಿಸಿದ್ದಾರೆ. ಶಾಕುಂತಲ ಇವರ ಅತ್ಯಂತ ಜನಪ್ರಿಯ ರೂಪಕ.
ಪ್ರಶಸ್ತಿಗಳು, ಗೌರವ, ಪುರಸ್ಕಾರಗಳು
ಬದಲಾಯಿಸಿ- ನವದೆಹಲಿ 'ರಾಜ್ಯ ಸಾಹಿತ್ಯ ಕಲಾ ಪರಿಷತ್ ಪ್ರಶಸ್ತಿ',
- ಬೆಂಗಳೂರು ಗಾಯನ ಸಮಾಜದಿಂದ-'ನಾಟ್ಯ ಕಲಾರತ್ನ ಪ್ರಶಸ್ತಿ',
- ಸಾಹಿತ್ಯ ಕಲಾ ಪ್ರಶಸ್ತಿ
- ೧೯೮೬ ರಲ್ಲಿ, 'ಕರ್ನಾಟಕ ರಾಜ್ಯೋದಯ ಪ್ರಶಸ್ತಿ',
- ೧೯೬೮ ರಲ್ಲಿ, 'ಕರ್ನಾಟಕ ರಾಜ್ಯ ಸಂಗೀತ ನೃತ್ಯ ಅಕಾಡೆಮಿ ಪ್ರಶಸ್ತಿ',
- 'ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ',
- ೨೦೦೦ ರಲ್ಲಿ, 'ಕರ್ನಾಟಕ ಸರಕಾರದ ಪ್ರತಿಷ್ಠಿತ ಶಾಂತಲಾ ಪ್ರಶಸ್ತಿ',
- ಫಿನ್ಲೆಂಡಿನಲ್ಲಿ ನಡೆದ,'ಕಲೆ ಮತ್ತು ವಿಶ್ವಶಾಂತಿ ಕುರಿತ ಸಮ್ಮೇಳನದಲ್ಲಿ ಸ್ವರ್ಣಪದಕ' ದೊರೆತಿವೆ
- ೧೯೮೭ರಲ್ಲಿ ಇವರು ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಅಧ್ಯಕ್ಷರಾಗಿದ್ದರು.
- 'ಬೆಂಗಳೂರು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪದವಿ,'
- ಪ್ರತಿಷ್ಠಿತ ಮಣಿಪಾಲ್ 'ಟಿ.ಎಮ್.ಎ ಪೈ ಪ್ರತಿಷ್ಠಾನದ ಕೊಂಕಣಿ ಪ್ರಶಸ್ತಿ',
- ಅಮೆರಿಕದ ಕನ್ನಡ ಕೂಟದಿಂದಾ, ಪ್ರತಿಷ್ಠಿತ ಗುರು ಪ್ರಶಸ್ತಿ,
- ಮುಂಬೈನ 'ಸುರ ಸಿಂಗಾರ್ ಸಂಸದ್' ನಿಂದ,ನೃತ್ಯ ವಿಲಾಸ್ ಪ್ರಶಸ್ತಿ,
- ೧೯೯೯ ರಲ್ಲಿ ಭಾರತ ಸರ್ಕಾರದ ಸಂಪನ್ಮೂಲ ಖಾತೆಯ, ನೃತ್ಯದಲ್ಲಿ ಮಾಡಿದ ಮಹತ್ತರ ಸಾಧನೆಗಾಗಿ, 'ಎಮಿರಿಟಸ್ ಫೆಲೋಷಿಪ್' ಪ್ರದಾನ ಮಾಡಲಾಯಿತು.
ನಿಧನ
ಬದಲಾಯಿಸಿಕಥಕ್ ಗುರು, ನೃತ್ಯಸಂಯೋಜಕಿ,(೮೭) 'ಮಾಯಾರಾವ್, ಬೆಂಗಳೂರಿನಲ್ಲಿ ಸೋಮವಾರ, ೧, ಸೆಪ್ಟೆಂಬರ್, ೨೦೧೪ ರಂದು ಮಧ್ಯರಾತ್ರಿ ಹೃದಯಾಘಾತದಿಂದ ನರಳುತ್ತಿದ್ದು ನಿಧನರಾದರು. [೩] ತೀವ್ರವಾದ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದು ಎಂ.ಎಸ್. ರಾಮಯ್ಯ ಆಸ್ಪತ್ರೆಗೆ ಸೇರಿಸಲ್ಪಟ್ಟಿದ್ದರು. 'ಮಾಯಾರಾವ್, ತಮ್ಮ ಪುತ್ರಿ 'ಮಧು ನಟರಾಜ್' ಅಗಲಿ ತೆರಳಿದ್ದಾರೆ.[೪]
ಉಲ್ಲೇಖಗಳು
ಬದಲಾಯಿಸಿ- ↑ "'Natya Institute of Kathak and Choreography' Out Director Maya rao'". Archived from the original on 2014-07-24. Retrieved 2014-09-02.
- ↑ Satya_Narayana_Charka
- ↑ Hindu, September 2, 2014, Renowned Kathak dancer Maya Rao dead'
- ↑ Narthaki, Kathak Guru Dr. Maya Rao turns 86 today, May 2, 2014
ಬಾಹ್ಯ ಸಂಪರ್ಕಗಳು
ಬದಲಾಯಿಸಿ- TOI, Apr 27, 2014, Relative Value Madhu Natraj (43) and Dr Maya Rao (85)-mudras in their veins
- Indian Express, Published: 02nd September 2014, 'Maya Rao Brought Kathak to City' Archived 2014-09-05 ವೇಬ್ಯಾಕ್ ಮೆಷಿನ್ ನಲ್ಲಿ.
- TOI, Aug 25, 2014, Maya Rao took forbidden dance to a new level
- ವಿಜಯ ಕರ್ನಾಟಕ ಪತ್ರಿಕೆ,'ಬಾಳ ನೃತ್ಯ ಮುಗಿಸಿದ ಮಾಯಾ ರಾವ್' Sep 1, 2014,
- 'ಕಥಕ್ ಹೆಜ್ಜೆ ಗುರುತು', 'ಉಮಾ ಅನಂತ್, ಸುಧಾ ಪತ್ರಿಕೆ, ಬೆಂಗಳೂರು, ಸೆಪ್ಟೆಂಬರ್, ೧೮, ೨೦೧೪, ಪುಟ. ೪೦ Archived 2014-09-25 ವೇಬ್ಯಾಕ್ ಮೆಷಿನ್ ನಲ್ಲಿ.
- 'ನಂದಾ ದೀಪ', ಮಯೂರ, ಅಕ್ಟೋಬರ್, ೧, ಪು.೮೬, 'ನೃತ್ಯ ಕ್ಷೇತ್ರದ ಮಹಾ ಮಾಯೆ,' ನಿರೂಪಣೆ-ಸುಚೇತನ ನಾಯ್ಕ, Archived 2013-11-22 ವೇಬ್ಯಾಕ್ ಮೆಷಿನ್ ನಲ್ಲಿ.