ಮಾಧವೇಂದ್ರ ಬ್ಯಾನರ್ಜಿ
ಮಾಧವೇಂದ್ರ ಬ್ಯಾನರ್ಜಿ (೪ ಜನವರಿ ೧೯೩೪ - ೧೭ ನವೆಂಬರ್ ೨೦೧೯) ಅವರು ಭಾರತೀಯ ವಾಯುಪಡೆಯ ಮಾಜಿ ಅಧಿಕಾರಿ. ಇವರು ಭಾರತದ ಎರಡನೇ ಅತ್ಯುನ್ನತ ಪ್ರಶಸ್ತಿಯಾದ ಶೌರ್ಯ ಪ್ರಶಸ್ತಿ ಮತ್ತು ವಾಯು ಸೇನಾ ಪದಕ ಪಡೆದಿದ್ದಾರೆ.
ಮಾಜಿ ಏರ್ ಮಾರ್ಷಲ್ ಮಾಧವೇಂದ್ರ ಬ್ಯಾನರ್ಜಿ ಮಹಾವೀರ ಚಕ್ರ, ವಾಯು ಸೇನ ಪದಕ | |
---|---|
ಜನನ | ೪ ಜನವರಿ ೧೯೩೪ ಕಲ್ಕತ್ತಾ, ಭಾರತ |
ಮರಣ | ೧೭ ನವೆಂಬರ್ ೨೦೧೯ (ವಯಸ್ಸು ೮೫) |
ವ್ಯಾಪ್ತಿಪ್ರದೇಶ | India |
ಶಾಖೆ | Indian Air Force |
ಶ್ರೇಣಿ(ದರ್ಜೆ) | ಏರ್ ವೈಸ್-ಮಾರ್ಶಲ್ |
ಘಟಕ | ಸ್ಕ್ವಡ್ರನ್ ಸಂಖ್ಯೆ ೯ ಐಎಫ಼್ ಸ್ಕ್ವಡ್ರನ್ ಸಂಖ್ಯೆ ೧೦೧ ಐಎಫ಼್ |
ಅಧೀನ ಕಮಾಂಡ್ | ಸ್ಕ್ವಡ್ರನ್ ಸಂಖ್ಯೆ ೯ ಐಎಫ಼್ ೧೬ ವಿಂಗ್ |
ಭಾಗವಹಿಸಿದ ಯುದ್ಧ(ಗಳು) |
|
ಪ್ರಶಸ್ತಿ(ಗಳು) | ಮಹವೀರ ಚಕ್ರ[೧] ವಾಯು ಸೇನ ಪದಕ |
ಆರಂಭಿಕ ಜೀವನ
ಬದಲಾಯಿಸಿಮಾಧವೇಂದ್ರ ಬ್ಯಾನರ್ಜಿಯವರು ೧೯೩೪ ರ ಜನವರಿ ೪ ರಂದು ಕೊಲ್ಕತ್ತಾದಲ್ಲಿ ಶ್ರೀ ಟಿ. ಕೆ. ಬ್ಯಾನರ್ಜಿಯವರ ಮಗನಾಗಿ ಜನಿಸಿದರು.
ಮಿಲಿಟರಿ ವೃತ್ತಿಜೀವನ
ಬದಲಾಯಿಸಿ೧೯೫೫ ರ ಏಪ್ರಿಲ್ ೧೬ ರಂದು ಬ್ಯಾನರ್ಜಿ ಭಾರತೀಯ ವಾಯುಪಡೆಗೆ ಸೇರ್ಪಡೆಯಾದರು. ಅವರು ೧೯೬೫ ಮತ್ತು ೧೯೭೧ ರ ಭಾರತ-ಪಾಕಿಸ್ತಾನ ಯುದ್ಧದಲ್ಲಿ ಕಾರ್ಯಪ್ರವೃತ್ತರಾಗಿದ್ದರು. ೧೯೭೧ರ ಯುದ್ಧದ ಸಮಯದಲ್ಲಿ, ಸುಖೋಯ್ ಸು-೩ ವಿಮಾನಗಳನ್ನು ಹೊಂದಿದ ಫೈಟರ್ ಬಾಂಬರ್ ಸ್ಕ್ವಾಡ್ರನ್, ೧೦೧ ನೇ ಸ್ಕ್ವಾಡ್ರನ್ನಲ್ಲಿ ಸ್ಕ್ವಾಡ್ರನ್ನ ನಾಯಕ ಮತ್ತು ಹಿರಿಯ ಪೈಲಟ್ ಆಗಿ, ಅವರು ಶತ್ರುಗಳ ವಿರುದ್ಧ ಹಲವಾರು ಕಾರ್ಯಾಚರಣೆಗಳನ್ನು ಮುನ್ನಡೆಸಿದರು. ಅವುಗಳಲ್ಲಿ ಹೆಚ್ಚಿನವು ಛಾಂಬ್ ಯುದ್ಧಗಳಲ್ಲಿ ಸೇನಾ ಕಾರ್ಯಾಚರಣೆಗಳನ್ನು ಬೆಂಬಲಿಸಿದವು. ಈ ಕಾರ್ಯಾಚರಣೆಗಳ ಸಂದರ್ಭದಲ್ಲಿ, ಶತ್ರುಗಳ ಟ್ಯಾಂಕರ್ ಹಾಗೂ ಬಂದೂಕುಗಳನ್ನು ನಾಶಪಡಿಸಿದರು. ಅವರು ಶತ್ರುಗಳ ಮೇಲಿನ ದಾಳಿಗೆ ವೈಯಕ್ತಿಕವಾಗಿ ಜವಬ್ದಾರಿವಹಿಸಿದರು ಮತ್ತು ದಾಳಿಯ ಸಂದರ್ಭದಲ್ಲಿ ಪದೇ ಪದೇ ಯುದ್ಧಕ್ಕೆ ಮರಳುವ ಮೂಲಕ ಶೌರ್ಯ ಮತ್ತು ಕೌಶಲ್ಯವನ್ನು ತೋರಿಸಿದರು. ಇದು ಭಾರತೀಯ ನೆಲದ ಪಡೆಗಳ ಮೇಲೆ ಒತ್ತಡವನ್ನು ನಿವಾರಿಸಿತು ಮತ್ತು ಅವರ ಕಾರ್ಯಾಚರಣೆಗಳನ್ನು ಮುಂದುವರಿಸಲು ಅನುವು ಮಾಡಿಕೊಟ್ಟಿತು. ಯುದ್ಧ ಕಾರ್ಯಾಚರಣೆಗಳಲ್ಲಿ ಪ್ರದರ್ಶಿಸಿದ ಶೌರ್ಯ ಮತ್ತು ನಾಯಕತ್ವಕ್ಕಾಗಿ, ಮಾಧವೇಂದ್ರ ಬ್ಯಾನರ್ಜಿ ಅವರಿಗೆ ಮಹಾವೀರ ಚಕ್ರ ನೀಡಲಾಯಿತು.[೨][೩]
ನಂತರ ಅವರು ನಿವೃತ್ತರಾಗುವ ಮೊದಲು ಏರ್ ವೈಸ್ ಮಾರ್ಷಲ್ ಹುದ್ದೆಗೆ ಏರಿದರು. ಅವರು ತಮ್ಮ ೮೫ ನೇ ವಯಸ್ಸಿನಲ್ಲಿ ೨೦೧೯ ರ ನವೆಂಬರ್ ೧೭ ರಂದು ನಿಧನರಾದರು.
ಉಲ್ಲೇಖಗಳು
ಬದಲಾಯಿಸಿ- ↑ "SQUADRON LEADER MADHAVENDRA BANERJI". Indian Army, Govt of India official website.
- ↑ "Air Vice Marshal Madhavendra Banerji". Bharat Rakshak.
- ↑ "AVM Madhavendra Banerji, MVC, VM (retd)". The War Decorated India & Trust.