ಮಾಧವಿ ಭಂಡಾರಿಯವರು ಜನಿಸಿದ್ದು ಉತ್ತರ ಕನ್ನಡ ಜಿಲ್ಲೆಯ ಧಾರೇಶ್ವರದಲ್ಲಿ. ಇವರ ತಂದೆ ರಾಮಗಣಪ ಭಂಡಾರಿ ಮತ್ತು ತಾಯಿ ಮಂಕಾಳಿ.

ಶಿಕ್ಷಣ ಬದಲಾಯಿಸಿ

ಪ್ರಾಥಮಿಕ ಶಿಕ್ಷಣವನ್ನು ಧಾರೇಶ್ವರದಲ್ಲಿ ಮುಗಿಸಿದರು. ನಂತರ ಇವರ ಗುರು ಗೌರಿ ಅಡಿಗರ ಮಾರ್ಗದರ್ಶನದಂತೆ, ಬೊಂಬಾಯಿಯಲ್ಲಿ ಶಿಕ್ಷಣವನ್ನು ಮುಂದುವರೆಸಿದರು. ಗಿಲ್ಡರ್ ಲೇನ್ ಮುನ್ಸಿಫಲ್ ಸ್ಕೂಲಿನಲ್ಲಿ ೮ ರಿಂದ ೧೧ನೇ ತರಗತಿವರೆಗೆ ಕಲಿತರು , ಮುಂದಿನ ಒಂದು ವರ್ಷ ಪರೇಲ್ ನಲ್ಲಿ ವಿದ್ಯಾಭ್ಯಾಸವನ್ನು ಮುಗಿಸಿದರು.[೧] ಡಾ. ಎ. ವಿ. ಬಾಳಿಗಾ ಕಾಲೇಜಿನಲ್ಲಿ ಬಿ.ಎ. ಪದವಿಯನ್ನು ಮುಗಿಸಿದರು. ಕರ್ನಾಟಕ ವಿಶ್ವವಿದ್ಯಾನಿಲಯದಿಂದ ಹಿಂದಿ ಸ್ನಾತಕೋತ್ತರ ಪದವಿಯನ್ನು ಪಡೆದರು.

ವೃತ್ತಿ ಜೀವನ ಬದಲಾಯಿಸಿ

ಮಾಧವಿಯವರ ವೃತ್ತಿ ಬದುಕು ಆರಂಬಗೊಂಡದ್ದು, ಉಡುಪಿಯ ಪೂರ್ಣಪ್ರಜ್ಣಾ ಕಾಲೇಜಿನಲ್ಲಿ. ೧೯೭೯ರಿಂದ ೨೦೧೫ವರೆಗೆ ಕರ್ತವ್ಯವನ್ನು ನಿರ್ವಹಿಸಿ, ಪ್ರಾಂಶುಪಾಲರಾಗಿಯೂ ಸೇವೆಸಲ್ಲಿಸಿದ್ದಾರೆ.[೨]

ರಂಗಭೂಮಿ ಬದಲಾಯಿಸಿ

ಇವರು ರಂಗಭೂಮಿ ಕಲಾವಿದರಾಗಿದ್ದಾರೆ. 'ಸ್ನಾನ' ನಾಟಕದಲ್ಲಿ ಸರಸ್ವತಿ ಪಾತ್ರ, 'ಸಂಧ್ಯಾ-ಛಾಯಾ' ನಾಟಕದಲ್ಲಿ ನಾನಿ ಪಾತ್ರ, 'ನಾಗಮಂಡಲ' ನಾಟಕದಲ್ಲಿ ಕುರುಡವ್ವನ ಪಾತ್ರಗಳನ್ನು ಮಾಡಿದ್ದಾರೆ. ಇದರೊಂದಿಗೆ ಗುಡ್ದದ ಭೂತ Archived 2019-07-30 ವೇಬ್ಯಾಕ್ ಮೆಷಿನ್ ನಲ್ಲಿ., ಓ ನನ್ನ ಬೆಳಕೆ ಮತ್ತು ಅಬೋಲಿನಾ ಧಾರವಾಹಿಗಳಲ್ಲಿ ನಟಿಸಿದ್ದಾರೆ.

ಪ್ರಕಟಿತ ಕೃತಿಗಳು ಬದಲಾಯಿಸಿ

ಕವನ ಸಂಕಲನ ಬದಲಾಯಿಸಿ

  • ಉತ್ಸವದಿಂದ ಉತ್ಸಾಕ್ಕೆ.
  • ಕಟ್ಟುವುದು ಬಲು ಕಷ್ಟ.
  • ಕನ್ನಡಿಯೊಳಗಿನ ಪ್ರತಿಬಿಂಬ.

ಕಥಾ ಸಂಕಲನ ಬದಲಾಯಿಸಿ

  • ಗಾಯ.

ವೈಚಾರಿಕ ಬರಹ ಬದಲಾಯಿಸಿ

ಸಂಶೋಧನಾ ಪ್ರಬಂಧ ಬದಲಾಯಿಸಿ

  • ರಾಜೇಂದ್ರಯಾದವ ಕಥಾ ಸಾಹಿತ್ಯದ ವಿವಿಧ ಆಯಾಮಗಳು.

ಅನುವಾದ ಬದಲಾಯಿಸಿ

  • ಅಂತ್ಯಜ ( ವೈದೇಹಿಯವರ 'ಅಸ್ಪೃಶ್ಯರು' ಕಾದಂಬರಿಯ ಹಿಂದಿ ಅನುವಾದ ).
  • ಡಾ. ನಾರಾಯಣ ರಾಯರ 'ವಿಶಿಷ್ಟ ದಾಂಪತ್ಯ ವಿಚಿತ್ರ ಕಾಯಿಲೆಯ' ಅನುವಾದ.
  • ಭಗವಂತನ ಕಂದಮ್ಮಗಳು Archived 2019-07-30 ವೇಬ್ಯಾಕ್ ಮೆಷಿನ್ ನಲ್ಲಿ. ( ಹಿಂದಿ ದೇವಶಿಶು ಕಾದಂಬರಿಯ ಅನುವಾದ ).
  • ಕಮಲಾದೇವಿ ಯಾದೊಂಕ ಸಿಲ್ಸಿಲಾ (ವೈದೇಹಿಯವರ ಕಮಲಾಬಾಯಿ ಏಕವ್ಯಕ್ತಿ ಪ್ರದರ್ಶನದ ಅನುವಾದ ).
  • ರಾಮದಾಸರ 'ದಾಸ ಭಾರತ'ವನ್ನು ಹಿಂದಿಗೆ ಅನುವಾದಿಸಿದ್ದಾರೆ.
  • ನನಗೆ ನಾನೆ ಶಿಲ್ಪಿ.

ಪ್ರಶಸ್ತಿಗಳು ಬದಲಾಯಿಸಿ

  • ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ.
  • ಇವರ 'ಗಾಯ' ಕೃತಿಗೆ ಸಾಹಿತ್ಯ ಪರಿಷತ್ತಿನ ಶ್ರೀಮತಿ ಶಾರದಾ ರಾಮಲಿಂಗಪ್ಪ ಪ್ರಶಸ್ತಿ.
  • ಉಡುಪಿ ತಾಲೂಕು ಸಮ್ಮೀಳನದ ಸರ್ವಾಧ್ಯಕ್ಷತೆಯ ಗೌರವವನ್ನು ೨೦೧೭ರಲ್ಲಿ ಪಡೆದಿದ್ದಾರೆ.[೩]
  • 'ನನಗೆ ನಾನೇ ಶಿಲ್ಪಿ ' ಕೃತಿಗೆ 'ಗೋಪಿರಾಮ್ ಗೋಯೆಂಕಾ ಪ್ರಶಸ್ತಿ' ದೊರೆತಿದೆ.
  • ಸಿಂಡಿಕೇಟ್ ಬ್ಯಾಂಕ್ ನಿಂದ ಭಾಷಾ ಪ್ರಚಾರಕ ಸನ್ಮಾನ.
  • ಉತ್ತರ ಪ್ರದೇಶದ ಹಿಂದಿ ಸಂಸ್ಥಾನ ಕನ್ನಡ - ಹಿಂದಿ ಸೌಹಾರ್ದ ಸನ್ಮಾನವನ್ನು ಸ್ವೀಕರಿಸಿದ್ದಾರೆ.
  • ಸಾಹಿತ್ಯ ಸಾಧನೆಗಾಗಿ ಲಯನ್ಸ್ ಕ್ಲಬ್, ದಕ್ಷಿಣ ವಲಯ ಇವರನ್ನು ಸನ್ಮಾನಿಸಿದೆ.
  • ರಂಗ ಭೂಮಿಯ ಸ್ಪರ್ಧೆಗಳಲ್ಲಿ ಮೂರು ಬಾರಿ ಶ್ರೇಷ್ಟ ನಟಿ ಪ್ರಶಸ್ತಿ ಲಭಿಸಿದೆ.

ಉಲ್ಲೇಖ ಬದಲಾಯಿಸಿ

  1. ಮೊದಲ ಹೆಜ್ಜೆ, ಶ್ರೀಮತಿ ಸೌಮ್ಯಲತಾ ಪಿ, ಕನ್ನಡ ವಿಭಾಗ ಡಾ. ಜಿ. ಶಂಕರ್ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೆಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ಅಜ್ಜರಕಾಡು, ಉಡುಪಿ ಪ್ರಕಾಶನ,ಮೊದಲನೇ ಮುದ್ರಣ ೨೦೧೮, ಪುಟ ಸಂಖ್ಯೆ ೨೨
  2. https://timesofindia.indiatimes.com/Madhavi-Bhandary-head-of-the-department-of-Hindi-at-Poornaprajna-Collegehas-taken-over-as-principal-of-the-Poornaprajna-Evening-College-Udupi-/articleshow/13841453.cms
  3. https://www.daijiworld.com/news/newsDisplay.aspx?newsID=431366