ಮಹಿಳೆಯರಿಗಾಗಿ ವಿಶ್ವಸಂಸ್ಥೆಯ ಅಭಿವೃದ್ಧಿ ನಿಧಿ
ಮಹಿಳೆಯರಿಗಾಗಿ ವಿಶ್ವಸಂಸ್ಥೆಯ ಅಭಿವೃದ್ಧಿ [೧] ನಿಧಿಯನ್ನು ಡಿಸೆಂಬರ್ ೧೯೭೬ರಲ್ಲಿ ಅಂತರರಾಷ್ಟ್ರೀಯ ಮಹಿಳಾ ವರ್ಷದಲ್ಲಿ ಮಹಿಳೆಯರಿಗಾಗಿ ವಿಶ್ವಸಂಸ್ಥೆಯ ದಶಕದ ನಿಧಿಯಾಗಿ ಸ್ವಯಂಪ್ರೇರಿತವಾಗಿ ಸ್ಥಾಪಿಸಲಾಯಿತು. ಇದರ ಮೊದಲ ನಿರ್ದೇಶಕಿ ಮಾರ್ಗರೆಟ್ ಸಿ. ಸ್ನೈಡರ್. ಮಹಿಳೆಯರ ಮಾನವ ಹಕ್ಕುಗಳು, ರಾಜಕೀಯ ಭಾಗವಹಿಸುವಿಕೆ ಮತ್ತು ಆರ್ಥಿಕ ಭದ್ರತೆಯನ್ನು ಉತ್ತೇಜಿಸುವ ನವೀನ ಕಾರ್ಯಕ್ರಮಗಳು ಮತ್ತು ಕಾರ್ಯತಂತ್ರಗಳಿಗೆ ಯುನಿಫ಼ೆಮ್ ಆರ್ಥಿಕ ಮತ್ತು ತಾಂತ್ರಿಕ ನೆರವು ನೀಡಿತು. ೧೯೭೬ ರಿಂದ ಇದು ಮಹಿಳಾ ಸಬಲೀಕರಣ ಮತ್ತು ಲಿಂಗ ಸಮಾನತೆಯನ್ನು ತನ್ನ ಕಾರ್ಯಕ್ರಮದ ಕಛೇರಿಗಳ ಮೂಲಕ ಮತ್ತು ವಿಶ್ವದ ಪ್ರಮುಖ ಪ್ರದೇಶಗಳಲ್ಲಿನ ಮಹಿಳಾ ಸಂಸ್ಥೆಗಳೊಂದಿಗೆ ಲಿಂಕ್‌ಗಳ ಮೂಲಕ ಬೆಂಬಲಿಸುತ್ತದೆ. ಲಿಂಗ ಪ್ರತಿಕ್ರಿಯಾಶೀಲ ಬಜೆಟ್‌ಗಳ ಮೇಲಿನ ಅದರ ಕೆಲಸವು ದಕ್ಷಿಣ ಆಫ್ರಿಕಾದಲ್ಲಿ ೧೯೯೬ ರಲ್ಲಿ ಪ್ರಾರಂಭವಾಯಿತು ಮತ್ತು ಪೂರ್ವ ಆಫ್ರಿಕಾ, ಆಗ್ನೇಯ ಏಷ್ಯಾ, ದಕ್ಷಿಣ ಏಷ್ಯಾ, ಮಧ್ಯ ಅಮೇರಿಕಾ ಮತ್ತು ಆಂಡಿಯನ್ ಪ್ರದೇಶಗಳನ್ನು ಸೇರಿಸಲು ವಿಸ್ತರಿಸಿತು. ಎಲ್ಲಾ ದೇಶಗಳಲ್ಲಿ ಆರ್ಥಿಕ ಆಡಳಿತವನ್ನು ಬಲಪಡಿಸುವ ಸಾಧನವಾಗಿ ಲಿಂಗ ಪ್ರತಿಕ್ರಿಯಾಶೀಲ ಬಜೆಟ್‌ಗಳ ಯುಎನ್ ವ್ಯವಸ್ಥೆಯಾದ್ಯಂತ ಜಾಗೃತಿಯನ್ನು ಹೆಚ್ಚಿಸಲು ಇದು ಕೆಲಸ ಮಾಡಿದೆ.
ಸಂಕ್ಷಿಪ್ತ ಹೆಸರು | ಯುನಿಫೆಮ್ |
---|---|
ಪೋಷಕ ಸಂಸ್ಥೆz | ಸಂಯುಕ್ತ ರಾಷ್ಟ್ರ ಸಂಸ್ಥೆ |
ಬಗ್ಗೆ
ಬದಲಾಯಿಸಿಯುನಿಫೆಮ್ ಒಂದು ಸ್ವಾಯತ್ತ ಸಂಸ್ಥೆಯಾಗಿದ್ದು ಯುಎನ್ ಡೆವಲಪ್‌ಮೆಂಟ್ ಪ್ರೋಗ್ರಾಂ (ಯುಎನ್‌ಡಿಪಿ) ನೊಂದಿಗೆ ನಿಕಟವಾಗಿ ಕಾರ್ಯನಿರ್ವಹಿಸುತ್ತಿದೆ. ಆದರೂ ನಿಧಿಯ ಸಂಪನ್ಮೂಲಗಳು ಇತರ ಯುನೈಟೆಡ್ ನೇಷನ್ಸ್ ಡೆವಲಪ್‌ಮೆಂಟ್ ಸಹಕಾರ ಏಜೆನ್ಸಿಗಳ ಜವಾಬ್ದಾರಿಗಳಿಗೆ ಪರ್ಯಾಯವಾಗಿರದೆ ಪೂರಕವಾಗಿರಬೇಕು ಎಂದು ನಿರ್ಣಯವು ಸೂಚಿಸಿದೆ. ಯುನಿಫೆಮ್ ಮಹಿಳೆಯರು ಮತ್ತು ಅವರ ಕುಟುಂಬಗಳಿಗೆ ನೆರವು ನೀಡುವ ಯೋಜನೆಗಳಿಗೆ ಧನಸಹಾಯ ನೀಡಿತು. ಯುನಿಫೆಮ್ ಮಹಿಳೆಯರ ವಿರುದ್ಧದ ಎಲ್ಲಾ ರೀತಿಯ ತಾರತಮ್ಯಗಳ ನಿರ್ಮೂಲನದ ಸಮಾವೇಶದಿಂದ ಅಭಿವೃದ್ಧಿಪಡಿಸಿದ ಮಾರ್ಗಸೂಚಿಗಳನ್ನು ಯುಎನ್ ಕಾರ್ಯಕ್ರಮಗಳು ಅನುಸರಿಸುವುದನ್ನು ಖಚಿತಪಡಿಸಿಕೊಳ್ಳಲು ಸಹಾಯ ಮಾಡುವ ತಂತ್ರವನ್ನು ಅಭಿವೃದ್ಧಿಪಡಿಸಿತು. ಮಹಿಳೆಯರ ಹಕ್ಕುಗಳನ್ನು ಮಾನವ ಹಕ್ಕುಗಳೆಂದು ಗುರುತಿಸುವಲ್ಲಿ ಯುನಿಫೆಮ್ ಸಹ ತೊಡಗಿಸಿಕೊಂಡಿದೆ. ಇದು ಪ್ರಪಂಚದಾದ್ಯಂತ ಲಿಂಗ ಸಮಾನತೆಯನ್ನು ಪ್ರತಿಪಾದಿಸಿತು. ಯುನಿಫೆಮ್ ಮಹಿಳೆಯರ ಹಕ್ಕುಗಳನ್ನು ಶಾಂತಿ ಮತ್ತು ಭದ್ರತೆಯ ಸಮಸ್ಯೆಯಾಗಿ ನೋಡಿದೆ [೨].
ಯುನಿಫೆಮ್ ಸಂಸ್ಥೆ ಸ್ವಯಂಪ್ರೇರಿತ ಕೊಡುಗೆಗಳ ಬಜೆಟ್‌ನಲ್ಲಿ ಕಾರ್ಯನಿರ್ವಹಿಸುತ್ತದೆ. ಸಂಸ್ಥೆಯು ನ್ಯೂಯಾರ್ಕ್ ನಗರದಲ್ಲಿ ನೆಲೆಸಿತ್ತು [೩]. ಯುನಿಫೆಮ್‌ನಲ್ಲಿ ವಿವಿಧ ದೇಶಗಳು ಮತ್ತು ಪ್ರದೇಶಗಳು ತಮ್ಮದೇ ಆದ ಸಮಿತಿಗಳನ್ನು ಹೊಂದಿದ್ದವು [೪]. ಕೆನಡಾದ ರಾಜಕಾರಣಿ ಸ್ಟೀಫನ್ ಲೆವಿಸ್ ಪ್ರಕಾರ ಯುನಿಫೆಮ್‌ಯು ಯುಎನ್‌ನಲ್ಲಿನ ಚಿಕ್ಕ ಏಜೆನ್ಸಿಗಳಲ್ಲಿ ಒಂದಾಗಿತ್ತು.
ಇತಿಹಾಸ
ಬದಲಾಯಿಸಿ೧೯೭೫ ರಲ್ಲಿ ಮಹಿಳೆಯರ ಮೇಲಿನ ಮೊದಲ ವಿಶ್ವ ಸಮ್ಮೇಳನವು ಯುನಿಫೆಮ್ ರಚನೆಯ ಮೇಲೆ ಪ್ರಭಾವ ಬೀರಿತು. [೫] ಮೊದಲ ಸಮ್ಮೇಳನದ ನಂತರ ಮಹಿಳಾ ಸಮಸ್ಯೆಗಳನ್ನು ನಿಭಾಯಿಸಲು ಸಂಪನ್ಮೂಲಗಳನ್ನು ಹಾಕುವ ಅಗತ್ಯವನ್ನು ವಿಶ್ವ ಸರ್ಕಾರಗಳು ಕಂಡವು. [೬] ವಿಶ್ವಸಂಸ್ಥೆಯ ಮಹಿಳೆಯರ ದಶಕದ ಸ್ವಯಂಪ್ರೇರಿತ ನಿಧಿ (ಯುಎನ್‍ವಿಎಫ್‍ಡಿಡಬ್ಲೂ) ಅನ್ನು ೧೯೭೬ ರ ಡಿಸೆಂಬರ್‌ನಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು ಸಮ್ಮೇಳನದ ನಂತರ ಸ್ಥಾಪಿಸಿತು. ೧೯೭೮ರಲ್ಲಿ ಮಾರ್ಗರೆಟ್ ಸ್ನೈಡರ್ ಸಂಸ್ಥೆಯ ನಾಯಕಿಯಾಗಿ ಕೆಲಸ ಮಾಡಲು ಪ್ರಾರಂಭಿಸಿದರು.
೧೯೮೦ ರ ದಶಕ
ಬದಲಾಯಿಸಿಫೆಬ್ರವರಿ ೧೯೮೫ ರಲ್ಲಿ ಜನರಲ್ ಅಸೆಂಬ್ಲಿಯಿಂದ ಯುಎನ್‍ವಿಎಫ್ಡಿಡಬ್ಲ್ಯೂಗೆ ಮಹಿಳೆಯರಿಗಾಗಿ ವಿಶ್ವಸಂಸ್ಥೆಯ ಅಭಿವೃದ್ಧಿ ನಿಧಿ (ಯುನಿಫೆಮ್)ಜಾರಿಗೊಳಿಸುವಂತೆ ವಿಸ್ತೃತ ಆದೇಶವನ್ನು ನೀಡಲಾಯಿತು [೭]. ರೆಸಲ್ಯೂಶನ್ ೩೯/೧೨೫ರ ಅಡಿಯಲ್ಲಿ ಅಭಿವೃದ್ಧಿಶೀಲ ಪ್ರಪಂಚದ ಮಹಿಳೆಯರಿಗೆ ಧ್ವನಿ ಮತ್ತು ಗೋಚರತೆಯನ್ನು ನೀಡುವ ನವೀನ ಮತ್ತು ವೇಗವರ್ಧಕ ಚಟುವಟಿಕೆಗಳನ್ನು ಬೆಂಬಲಿಸಲು ಮತ್ತು ಸಮರ್ಥಿಸಲು ಹೊಸ ನಿಧಿಯನ್ನು ಕರೆಯಲಾಯಿತು.
೧೯೯೦ ರ ದಶಕ
ಬದಲಾಯಿಸಿ೧೯೯೦ ರ ದಶಕದಲ್ಲಿ ಯುನಿಫೆಮ್ ತನ್ನ ವ್ಯಾಪ್ತಿಯನ್ನು ವಿಸ್ತರಿಸುವಲ್ಲಿ ತೊಡಗಿಸಿಕೊಂಡಿತು. ಸಂಸ್ಥೆಯು "ಮಹಿಳಾ ಹಕ್ಕುಗಳನ್ನು ಮಾನವ ಹಕ್ಕುಗಳು" ಎಂದು ವ್ಯಾಖ್ಯಾನಿಸಲು ಒಂದು ಅಭಿಯಾನವನ್ನು ಪ್ರಾರಂಭಿಸಿತು ಮತ್ತು ಮಹಿಳೆಯರ ಮೇಲಿನ ದೌರ್ಜನ್ಯವು ಆರ್ಥಿಕ ಅಭಿವೃದ್ಧಿಯ ವಿಷಯವಾಯಿತು. ಯುನಿಫೆಮ್ ಮಹಿಳೆಯರ ಮೇಲಿನ ದೌರ್ಜನ್ಯವು ಆರ್ಥಿಕ ಅವಕಾಶಗಳಿಗೆ ಮಹಿಳೆಯರ ಪ್ರವೇಶದ ಕೊರತೆಯೊಂದಿಗೆ ಹೇಗೆ ಸಂಬಂಧಿಸಿದೆ ಎಂಬುದನ್ನು ಪ್ರದರ್ಶಿಸಲು ರೊಕ್ಸಾನಾ ಕ್ಯಾರಿಲ್ಲೊ ಅವರಂತಹ ಸಂಶೋಧಕರನ್ನು ನೇಮಿಸಿಕೊಂಡಿತು. "ಮಹಿಳಾ ಹಕ್ಕುಗಳು ಮಾನವ ಹಕ್ಕುಗಳು" ಎಂಬ ಅಭಿಯಾನವು ವಿಶೇಷವಾಗಿ ಪರಿಣಾಮಕಾರಿಯಾಗಿತ್ತು. ಯುನಿಫೆಮ್ ಲಿಂಗ ಆಧಾರಿತ ಹಿಂಸೆಯನ್ನು ಕಡಿಮೆ ಮಾಡಲು ಮತ್ತು ಸಮಸ್ಯೆಯ ಅರಿವು ಮೂಡಿಸಲು ಯೋಜನೆಗಳಲ್ಲಿ ಕೆಲಸ ಮಾಡಲು ಪ್ರಾರಂಭಿಸಿತು.
ಎಎಫ್‍ಡಬ್ಲೂಐಸಿ ತಮ್ಮ ದೇಶಗಳಲ್ಲಿ ಹಿಂಸಾಚಾರ ಅಥವಾ ತುರ್ತು ಪರಿಸ್ಥಿತಿಗಳಿಂದ ಸ್ಥಳಾಂತರಗೊಂಡ ಮಹಿಳೆಯರಿಗೆ ಸಹಾಯ ಮಾಡಿತು. ಯುನಿಫೆಮ್ ನ ಕೆಲಸವು ೧೯೯೫ ರಲ್ಲಿ ಮಹಿಳೆಯರ ಮೇಲಿನ ನಾಲ್ಕನೇ ವಿಶ್ವ ಸಮ್ಮೇಳನದಲ್ಲಿ ತಿಳಿಸಲಾದ ಸಮಸ್ಯೆಗಳನ್ನು ರೂಪಿಸಲು ಸಹಾಯ ಮಾಡಿತು. ಸಮ್ಮೇಳನದಲ್ಲಿ ಮಹಿಳೆಯರು ಸಾರ್ವಜನಿಕ ನೀತಿಯನ್ನು ನೇರವಾಗಿ ರೂಪಿಸಲು ಔಪಚಾರಿಕ ಅಧಿಕಾರವನ್ನು ಪಡೆದುಕೊಳ್ಳುವುದು ಮುಖ್ಯ ಎಂದು ನಿರ್ಧರಿಸಿದರು. ಲಿಂಗ-ಆಧಾರಿತ ಹಿಂಸಾಚಾರ ಮತ್ತು ಮಹಿಳೆಯರ ವಿರುದ್ಧದ ಅಪರಾಧಗಳನ್ನು ಎದುರಿಸಲು ಇಪ್ಪತ್ತಮೂರು ಯೋಜನೆಗಳನ್ನು ಬೆಂಬಲಿಸಲು ಯುನಿಫೆಮ್ ಟ್ರಸ್ಟ್ ನಿಧಿಯನ್ನು ರಚಿಸಿದೆ. ೧೯೯೭ ರಲ್ಲಿ ನಿಧಿ ಯೋಜನೆಗಳನ್ನು ಪ್ರಾರಂಭಿಸಿತು.
೨೦೦೦ ರ ದಶಕ
ಬದಲಾಯಿಸಿ೨೦೦೦ರಲ್ಲಿ ಯುಎನ್‍ಡಿಪಿಯಿಂದ ಯುನಿಫೆಮ್‍ಗೆ "ಕಾರ್ಯನಿರ್ವಾಹಕ ಸಂಸ್ಥೆ"ಯ ಸ್ಥಾನಮಾನ ನೀಡಲಾಯಿತು. ಇದು ಮಹಿಳೆಯರ ಹಕ್ಕುಗಳು ಮತ್ತು ಲಿಂಗ ಸಮಾನತೆಗೆ ಸಂಬಂಧಿಸಿದ ಯುಎನ್‍ಡಿಪಿ ಯೋಜನೆಗಳನ್ನು ಪೂರ್ಣಗೊಳಿಸಲು ಮತ್ತು ಕೆಲಸ ಮಾಡಲು ಸಂಸ್ಥೆಗೆ ಅವಕಾಶ ಮಾಡಿಕೊಟ್ಟಿತು. ಯುನಿಫೆಮ್ ೨೦೦೧ರಲ್ಲಿ ಪ್ರಪಂಚದ ಮಹಿಳೆಯರ ಪ್ರಗತಿ ಎಂಬ ಹೊಸ ದ್ವೈವಾರ್ಷಿಕ ವರದಿಯನ್ನು ಬಿಡುಗಡೆ ಮಾಡಿತು. ಅದರಲ್ಲಿ ಹಿಂದಿನ ದಶಕಗಳಲ್ಲಿ ಯುನಿಫೆಮ್ ಏನನ್ನು ಸಾಧಿಸಿದೆ ಎಂಬುದರ ವರದಿಯನ್ನು ವಿವರಿಸಿದೆ. ೨೦೦೧ ರಲ್ಲಿ ಅಂತಾರಾಷ್ಟ್ರೀಯ ಅಲರ್ಟ್ ಜೊತೆಯಲ್ಲಿ ಯುನಿಫೆಮ್ ಮಹಿಳೆಯರಿಗಾಗಿ ಮಿಲೇನಿಯಮ್ ಶಾಂತಿ ಪ್ರಶಸ್ತಿಯನ್ನು ಪ್ರಾರಂಭಿಸಿತು.
ಯುನಿಫೆಮ್‌ನ ಮುಖ್ಯಸ್ಥರಾದ ನೋಲೀನ್ ಹೇಜರ್ ಮಹಿಳೆಯರ ಮೇಲಿನ ದೌರ್ಜನ್ಯದ ಕುರಿತು ಅಂತರಾಷ್ಟ್ರೀಯ ಆಯೋಗವನ್ನು ರಚಿಸುವಂತೆ ಕೇಳಿಕೊಂಡರು. ೨೦೦೬ರ ಜನವರಿ ೨೬ ರಂದು ಯುನಿಫೆಮ್ ನಿಕೋಲ್ ಕಿಡ್‌ಮನ್ ಅವರನ್ನು ತನ್ನ ಸದ್ಭಾವನಾ ರಾಯಭಾರಿಯಾಗಿ ನಾಮನಿರ್ದೇಶನ ಮಾಡಿತು. ಯುನಿಫೆಮ್‌ನ ಕೊನೆಯ ಕಾರ್ಯನಿರ್ವಾಹಕ ನಿರ್ದೇಶಕ ಇನೆಸ್ ಅಲ್ಬರ್ಡಿ.
೨೦೧೦ ರ ದಶಕ
ಬದಲಾಯಿಸಿ೨೦೧೧ರ ಜನವರಿಯಲ್ಲಿ ಯುನಿಫೆಮ್ ಅನ್ನು ಲಿಂಗ ಸಮಾನತೆ ಮತ್ತು ಮಹಿಳೆಯರ ಸಬಲೀಕರಣಕ್ಕಾಗಿ ಸಂಯುಕ್ತ ರಾಷ್ಟ್ರ ಸಂಸ್ಥೆಯಲ್ಲಿ ವಿಲೀನಗೊಳಿಸಲಾಯಿತು. ಇದು ಸಂಯುಕ್ತ ರಾಷ್ಟ್ರ ಸಂಸ್ಥೆಯ ಒಂದು ಸಂಯೋಜಿತ ಘಟಕವಾಗಿದ್ದು ಮಹಿಳೆಯರ ಪ್ರಗತಿಗಾಗಿ ಅಂತರಾಷ್ಟ್ರೀಯ ಸಂಶೋಧನೆ ಮತ್ತು ತರಬೇತಿ ಸಂಸ್ಥೆ (ಐಎನ್ಎಸ್‍ಟಿಆರ‍್‍ಎಡಬ್ಲೂ), ಲಿಂಗ ಸಮಸ್ಯೆಗಳ ವಿಶೇಷ ಸಲಹೆಗಾರರ ಕಚೇರಿ (ಒಎಸ್ಎಜಿಐ) ಮತ್ತು ಮಹಿಳೆಯರ ಪ್ರಗತಿಗಾಗಿ ವಿಭಾಗ (ಡಿಎಡಬ್ಲೂ)ವನ್ನು ಹೊಂದಿದೆ.
ಕಾರ್ಯನಿರ್ವಾಹಕ ನಿರ್ದೇಶಕರು
ಬದಲಾಯಿಸಿಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕರು :
ಕ್ರ.ಸಂ | ನಿರ್ದೇಶಕ | ದೇಶ | ಅವಧಿ |
---|---|---|---|
೪. | ಇನೆಸ್ ಅಲ್ಬರ್ಡಿ | Spain | ೨೦೦೭-೨೦೧೪ |
೩. | ನೋಲೀನ್ ಹೇಜರ್ | ಸಿಂಗಾಪುರ | ೧೯೯೪-೨೦೦೭ |
೨. | ಶರೋನ್ ಕ್ಯಾಪೆಲಿಂಗ್-ಅಲಕಿಜಾ | ಕೆನಡಾ | ೧೯೮೯-೧೯೯೪ |
೧. | ಮಾರ್ಗರೇಟ್ ಸಿ. ಸ್ನೈಡರ್ | ಅಮೇರಿಕ ಸಂಯುಕ್ತ ಸಂಸ್ಥಾನ | ೧೯೭೮-೧೯೮೯ |
ಉಲ್ಲೇಖಗಳು
ಬದಲಾಯಿಸಿ- ↑ http://search.ebscohost.com/login.aspx?direct=true&db=n5h&AN=44755825&site=ehost-live
- ↑ https://books.google.com/books?id=bOkPjFQoBj8C&q=unifem&pg=PA1496
- ↑ https://archive.org/details/developingpowerh0000unse/page/n5/mode/2up?q=unifem
- ↑ http://search.ebscohost.com/login.aspx?direct=true&db=f6h&AN=934530&site=ehost-live
- ↑ Stange, Mary Zeiss; Oyster, Carol K.; Sloan, Jane E. (2011-02-23). Encyclopedia of Women in Today's World (in ಇಂಗ್ಲಿಷ್). SAGE. p. 1496. ISBN 978-1-4129-7685-5.Stange, Mary Zeiss; Oyster, Carol K.; Sloan, Jane E. (2011-02-23). Encyclopedia of Women in Today's World. SAGE. p. 1496. ISBN.
- ↑ Shahani, Leticia Ramos (2004). "The UN, Women, and Development: The World Conferences on Women". In Fraser, Arvonne S.; Tinker, Irene (eds.). Developing Power: How Women Transformed International Development. New York: The Feminist Press. pp. 30–31. ISBN 1-55861-485-0. OCLC 56214177 – via Internet Archive.
{{cite book}}
: CS1 maint: date and year (link)Shahani, Leticia Ramos (2004). "The UN, Women, and Development: The World Conferences on Women". In Fraser, Arvonne S.; Tinker, Irene (eds.). Developing Power: How Women Transformed International Development. New York: The Feminist Press. pp. 30–31. ISBN 56214177 – via Internet Archive.{{cite book}}
: CS1 maint: date and year (link) - ↑ http://search.ebscohost.com/login.aspx?direct=true&db=f6h&AN=934530&site=ehost-live