ಮಸಾಲಾ ಬಾಂಡ್
ಮಸಾಲಾ ಬಾಂಡ್‌ಗಳು ಭಾರತದ ಹೊರಗೆ ನೀಡಲಾದ ಬಾಂಡ್‌ಗಳಾಗಿವೆ. ಇದನ್ನು ಭಾರತೀಯ ರೂಪಾಯಿಗಳಲ್ಲಿ ಗುರುತಿಸಲಾಗುತ್ತದೆ. ಮಸಾಲಾ ಎಂದರೆ ಮಸಾಲೆಗಳು ಎಂದರ್ಥ.[೧] ಈ ಪದವನ್ನು ಮೊದಲು ಭಾರತದ ಸಂಸ್ಕೃತಿ ಮತ್ತು ಪಾಕಪದ್ಧತಿಯಲ್ಲಿ ಪ್ರಚೋದಿಸಲಾಯಿತು ನಂತರ, ಇದನ್ನು ಇಂಟರ್ನ್ಯಾಷನಲ್ ಫೈನಾನ್ಸ್ ಕಾರ್ಪೊರೇಷನ್ ಬಳಸಿದೆ.[೨]
ಮಸಾಲಾ ಬಾಂಡ್‌ಗಳು
ಬದಲಾಯಿಸಿ- ಮೊದಲ ಮಸಾಲಾ ಬಾಂಡ್ ಅನ್ನು ವಿಶ್ವ ಬ್ಯಾಂಕ್ ಬೆಂಬಲಿತ ಇಂಟರ್ನ್ಯಾಷನಲ್ ಫೈನಾನ್ಸ್ ಕಾರ್ಪೊರೇಷನ್ ನವೆಂಬರ್ ೨೦೧೪ ರಲ್ಲಿ ಬಿಡುಗಡೆ ಮಾಡಿತು. ಇದು ಭಾರತದಲ್ಲಿ ಮೂಲಸೌಕರ್ಯ ಯೋಜನೆಗಳಿಗೆ ಧನಸಹಾಯ ಮಾಡಲು ₹೧೦ ಶತಕೋಟಿ ಬಾಂಡ್‌ಗಳನ್ನು ಸಂಗ್ರಹಿಸಿತು.
- ಆಗಸ್ಟ್ ೨೦೧೫ರಲ್ಲಿ, ಇಂಟರ್ನ್ಯಾಷನಲ್ ಫೈನಾನ್ಸ್ ಕಾರ್ಪೊರೇಷನ್ ಮೊದಲ ಬಾರಿಗೆ ಹಸಿರು ಮಸಾಲಾ ಬಾಂಡ್‌ಗಳನ್ನು ಬಿಡುಗಡೆ ಮಾಡಿತು ಮತ್ತು ಭಾರತದಲ್ಲಿ ಹವಾಮಾನ ಬದಲಾವಣೆಯನ್ನು ಪರಿಹರಿಸಲು ಖಾಸಗಿ ವಲಯದ ಹೂಡಿಕೆಗಳಿಗೆ ಬಳಸಲು ₹೩.೧೫ ಶತಕೋಟಿ ಸಂಗ್ರಹಿಸಿತು.
- ಜುಲೈ ೨೦೧೬ ರಲ್ಲಿ ವಸತಿ ಅಭಿವೃದ್ಧಿ ಹಣಕಾಸು ನಿಗಮ ಮಸಾಲಾ ಬಾಂಡ್‌ಗಳಿಂದ ₹೩೦ ಶತಕೋಟಿ ಸಂಗ್ರಹಿಸಿ ನಂತರ ಕಂಪನಿಯು ಮಸಾಲಾ ಬಾಂಡ್‌ಗಳನ್ನು ವಿತರಿಸುವ ಪ್ರಾರಂಭಿಸಿತು.[೩]
- ಆಗಸ್ಟ್ ೨೦೧೬ರಲ್ಲಿ, ಸಾರ್ವಜನಿಕ ವಲಯದ ಉದ್ಯಮವಾದ ಎನ್‍ಟಿಪಿಸಿ, ₹೨೦ ಶತಕೋಟಿ ಮೌಲ್ಯದ ಕಾರ್ಪೊರೇಟ್ ಹಸಿರು ಮಸಾಲಾ ಬಾಂಡ್‌ಗಳನ್ನು ಬಿಡುಗಡೆ ಮಾಡಿತು.[೪]
ಸಹ ನೋಡಿ
ಬದಲಾಯಿಸಿಉಲ್ಲೇಖಗಳು
ಬದಲಾಯಿಸಿ- ↑ V, NARAYANAN (2020-10-07). "Masala bonds gain currency after a pause". www.thehindubusinessline.com (in ಇಂಗ್ಲಿಷ್). Retrieved 2022-09-14.
- ↑ https://economictimes.indiatimes.com/wealth/invest/masala-bonds-5-things-to-know/articleshow/107376702.cms?from=mdr
- ↑ Roy, Anup (15 July 2016). "HDFC raises Rs 3,000 cr via India's first masala bonds". Business Standard India.
- ↑ Das, Saikat. "NTPC raises Rs 2,000 crore via green masala bonds". The Economic Times.
- ↑ https://gfmag.com/economics-policy-regulation/the-eurobond-returns/
- ↑ https://gfmag.com/capital-raising-corporate-finance/hong-kong-dim-sum-bonds/