ಮಸಾಲಾ ಪೂರಿ, ಅಥವಾ ಮಸಾಲ್ ಪೂರಿ , ಇದು ದಕ್ಷಿಣ ಕರ್ನಾಟಕ ರಾಜ್ಯದಲ್ಲಿ ವಿಶೇಷವಾಗಿ ಜನಪ್ರಿಯವಾಗಿರುವ ಭಾರತೀಯ ತಿಂಡಿಯಾಗಿದೆ. ಚಾಟ್‌ನ ಒಂದು ರೂಪವಾದ ಈ ತಿಂಡಿಯು ಭಾರತದ ಮೈಸೂರು ರಾಜ್ಯದಲ್ಲಿ ಹುಟ್ಟಿಕೊಂಡಿದ್ದು, ಈಗ ಭಾರತ ದೇಶಾದ್ಯಾಂತ ಪ್ರಸಿದ್ಧವಾಗಿದೆ.[] ಸಾಮಾನ್ಯವಾಗಿ ಖಾರವಾದ ಈ ಖಾದ್ಯವನ್ನು ಅವಶ್ಯಕತೆ ಇದ್ದರೆ ಖಾರದ ಜೊತೆಗೆ ಸಿಹಿಯಾಗಿಯೂ ತಯಾರಿಸಬಹುದು.[]

ಮಸಾಲಾ ಪೂರಿ
ಮಸಾಲಾ ಪೂರಿ
ಮೂಲಭಾರತ
ಪ್ರದೇಶ ಅಥವಾ ರಾಜ್ಯಮೈಸೂರು
ಮುಖ್ಯ ಸಲಕರಣೆಪೂರಿ, ಸೇವ್, ಈರುಳ್ಳಿ, ಟೊಮೆಟೊ, ಮೆಣಸಿನ ಪುಡಿ, ಹಸಿರು ಬಟಾಣಿ ಮತ್ತು ಕೊತ್ತಂಬರಿ ಸೊಪ್ಪು
ಇದರ ವಿಧದ ಆಹಾರಗಳುದಹಿ-ಮಸಾಲಾ ಪೂರಿ

ತಯಾರಿಕೆ

ಬದಲಾಯಿಸಿ
 
ಮಾರಾಟಗಾರರಿಂದ ಎರಡು ಪ್ಲೇಟ್ ಮಸಾಲಾ ಪೂರಿ ತಯಾರಿಸಲಾಗುತ್ತಿದೆ. ಒಣ ಪದಾರ್ಥಗಳ ಮೇಲೆ ಗ್ರೇವಿಯನ್ನು ಸುರಿಯಲಾಗುತ್ತಿದೆ.

ಪುಡಿ ಮಾಡಿದ ಪೂರಿಗಳನ್ನು ಬಿಸಿ ಮಸಾಲಾ ಗ್ರೇವಿಯಲ್ಲಿ ನೆನೆಸಲಾಗುತ್ತದೆ. ಈ ಗ್ರೇವಿಯನ್ನು ಪಫ್ಡ್ ರೈಸ್ (ಮಂಡಕ್ಕಿ), ಹಸಿರು ಬಟಾಣಿ,ಆಲೂಗಡ್ಡೆ, ಮೆಣಸಿನ ಪುಡಿ, ಗರಂ ಮಸಾಲಾ, ಚಾಟ್ ಮಸಾಲಾ, ಕೊತ್ತಂಬರಿ ಪುಡಿ ಮತ್ತು ಇತರ ಮಸಾಲೆಗಳ ಬಳಸಿ ತಯಾರಿಸಲ್ಪಡುತ್ತದೆ. ಇದಕ್ಕೆ ಮೇಲೆ ಸಣ್ಣ ತುಂಡು ಈರುಳ್ಳಿ, ಟೊಮೇಟೊ, ಕೊತ್ತಂಬರಿ ಸೊಪ್ಪು ಮತ್ತು ಸೇವ್ ಸೇರಿಸಿ ಸವಿಯಲು ಸಿದ್ಧಪಡಿಸಲಾಗುತ್ತದೆ.[]

ಸಂಬಂಧಿತ ವಿಷಯಗಳು

ಬದಲಾಯಿಸಿ

ಉಲ್ಲೇಖಗಳು

ಬದಲಾಯಿಸಿ
  1. GR, Prajna (4 April 2015). "With some spice and nostalgia". Deccan Herald. Retrieved 18 September 2015.
  2. Natarajan, Deepa (11 December 2009). "Time to go chaating". Deccan Herald. Retrieved 18 September 2015.
  3. Shrikumar, A. (31 May 2013). "CHAATing up!". The Hindu. Retrieved 18 September 2015.