ದಹಿ ಪೂರಿ
ದಹಿ ಪೂರಿ[೧] ವಿಶೇಷವಾಗಿ ಮಹಾರಾಷ್ಟ್ರ ರಾಜ್ಯದಲ್ಲಿ ಜನಪ್ರಿಯವಾಗಿರುವ ಒಂದು ಖಾದ್ಯ. ಈ ಖಾದ್ಯವು ಚಾಟ್‍ನ ಒಂದು ರೂಪವಾಗಿದೆ ಮತ್ತು ಮುಂಬಯಿ ನಗರದಿಂದ ಹುಟ್ಟಿಕೊಂಡಿದೆ.[೨] ಇದನ್ನು ಹೆಚ್ಚು ಜನಪ್ರಿಯವಾಗಿ ಪಾನಿ ಪೂರಿ ಖಾದ್ಯದಿಂದ ಗುರುತಿಸಲಾದ ಸಣ್ಣ ಪೂರಿಗಳೊಂದಿಗೆ (ಗೋಲ್‍ಗಪ್ಪಾ) ಬಡಿಸಲಾಗುತ್ತದೆ. ದಹಿ ಪೂರಿ ಮತ್ತು ಪಾನಿ ಪೂರಿ ಚಾಟ್‍ಗಳನ್ನು ಹಲವುವೇಳೆ ಒಬ್ಬನೇ ಮಾರಾಟಗಾರನು ಮಾರುತ್ತಾನೆ.
ಮೂಲ | |
---|---|
ಮೂಲ ಸ್ಥಳ | ಭಾರತ |
ಪ್ರಾಂತ್ಯ ಅಥವಾ ರಾಜ್ಯ | ಮಹಾರಾಷ್ಟ್ರ ನೇಪಾಳ ಭೂತಾನ್ |
ವಿವರಗಳು | |
ಮುಖ್ಯ ಘಟಕಾಂಶ(ಗಳು) | ಸೇವ್, ಪೂರಿ, ಈರುಳ್ಳಿ, ಖಾರದ ಪುಡಿ, ಹೆಸರು ಬೇಳೆ, ಮೊಸರು ಮತ್ತು ಕೊತ್ತಂಬರಿ |
ಪ್ರಭೇದಗಳು | ಸೇವ್ ದಹಿ ಬಟಾಟಾ ಪೂರಿ |
ತಯಾರಿಕೆ
ಬದಲಾಯಿಸಿಮೊದಲು ದುಂಡನೆಯ, ಗಟ್ಟಿ, ಊದುಕೊಂಡಿರುವ ಪೂರಿಯನ್ನು ಮೇಲೆ ಮುರಿದು ಹಿಸುಕಿದ ಆಲೂಗಡ್ಡೆ ಅಥವಾ ಕಡಲೆಯ ಮುಖ್ಯ ಹೂರಣದಿಂದ ಭಾಗಶಃ ತುಂಬಿಸಲಾಗುತ್ತದೆ. ಸಣ್ಣ ಪ್ರಮಾಣದ ಅರಿಶಿನ ಪುಡಿ ಅಥವಾ ಖಾರದ ಪುಡಿ, ಅಥವಾ ಎರಡನ್ನೂ, ಜೊತೆಗೆ ಸ್ವಲ್ಪ ಉಪ್ಪನ್ನು ರುಚಿಗಾಗಿ ಸೇರಿಸಬಹುದು. ನಂತರ ಸಿಹಿ ಹುಣಸೆ ಚಟ್ನಿ ಮತ್ತು ಖಾರದ ಹಸಿರು ಚಟ್ನಿಯನ್ನು ಪೂರಿಯ ರಂಧ್ರದಲ್ಲಿ ಹೂರಣದ ಮೇಲೆ ಸುರಿಯಲಾಗುತ್ತದೆ. ಅಂತಿಮವಾಗಿ, ಸಿಹಿ ಕಡೆದ ಮೊಸರನ್ನು ಪೂರಿಯ ಮೇಲೆ ಧಾರಾಳವಾಗಿ ಸುರಿಯಲಾಗುತ್ತದೆ, ಮತ್ತು ತಯಾರಾದ ಉತ್ಪನ್ನವನ್ನು ಪುಡಿಮಾಡಿದ ಸೇವ್, ಹೆಸರು ಬೇಳೆ, ದಾಳಿಂಬೆ ಮತ್ತು ನುಣ್ಣಗೆ ಕತ್ತರಿಸಿದ ಕೊತ್ತಂಬರಿ ಎಲೆಗಳ ಸಿಂಪಡಣೆಯಿಂದ ಅಲಂಕರಿಸಲಾಗುತ್ತದೆ.
ದಹಿ ಪೂರಿಯ ಪ್ರತಿ ಪ್ಲೇಟ್‍ನಲ್ಲಿ ಸಾಮಾನ್ಯವಾಗಿ ೫ ಅಥವಾ ೬ ದಹಿ ಪೂರಿಗಳು ಇರುತ್ತವೆ. ಪಾನಿ ಪೂರಿಯನ್ನು ಸಾಮಾನ್ಯವಾಗಿ ಒಮ್ಮೆ ಒಂದು ಪೂರಿಯಂತೆ ಬಡಿಸಲಾಗುತ್ತದಾದರೂ, ಅನೇಕ ದಹಿ ಪೂರಿಗಳಿರುವ ಪ್ಲೇಟ್‍ನ್ನು ಹಲವುವೇಳೆ ಒಟ್ಟಿಗೆ ಬಡಿಸಲಾಗುತ್ತದೆ. ಪಾನಿ ಪೂರಿಯಂತೆ, ಪ್ರತಿ ದಹಿ ಪೂರಿಯನ್ನು ಇಡಿಯಾಗಿ ತಿನ್ನಬೇಕೆಂದು ಉದ್ದೇಶಿಸಲಾಗಿರುತ್ತದೆ. ಹೀಗೆ ತಿನ್ನುವುದರಿಂದ ಒಳಗಿರುವ ಪರಿಮಳಗಳು ಮತ್ತು ರಚನೆಗಳ ವ್ಯಾಪ್ತಿಯನ್ನು ಒಟ್ಟಾಗಿ ರುಚಿ ನೋಡಬಹುದು.
-
ಮನೆಯಲ್ಲಿ ತಯಾರಿಸಿದ ದಹಿ ಪೂರಿ
-
ದಹಿ ಪೂರಿಯ ಸಾಮಾನ್ಯ ಪ್ರಮಾಣ
-
ಬಡಿಸುವ ಪ್ರಮಾಣದ ಮತ್ತೊಂದು ಶೈಲಿ
ಉಲ್ಲೇಖಗಳು
ಬದಲಾಯಿಸಿ- ↑ Forum. "Dahi Puri Recipe". Retrieved 2 September 2015.
- ↑ "Article on snacks of India". Archived from the original on 2004-03-15. Retrieved 2017-12-27.